• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Yogi Rosy Movie: ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಹುಡುಗಿ ಹೆಸರಿಟ್ಟಿದ್ಯಾಕೆ? ಡೈರಕ್ಟರ್ ಶೂನ್ಯ ಹೇಳಿದ್ದೇನು?

Yogi Rosy Movie: ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಹುಡುಗಿ ಹೆಸರಿಟ್ಟಿದ್ಯಾಕೆ? ಡೈರಕ್ಟರ್ ಶೂನ್ಯ ಹೇಳಿದ್ದೇನು?

ರೋಜಿ ಎಂಬ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಸಿನಿಮಾ

ರೋಜಿ ಎಂಬ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಸಿನಿಮಾ

ನಾನು ಲೂಸ್ ಮಾದ ಯೋಗಿ ಅಪ್ಪಟ ಅಭಿಮಾನಿ. ಆರಂಭದಿಂದಲೂ ಅವರ ಸಿನಿಮಾ ನೋಡಿದ್ದೇನೆ. ಮೊದಲು ಒಳ್ಳೆ ಸಿನಿಮಾ ಬಂದವು. ಆ ಮೇಲೆ ಯೋಗಿ ನಿರಾಸೆ ಮಾಡಿದರು. ಆದರೆ ನಾನು ಅವರಿಗಾಗಿ ಒಂದು ಕಥೆ ಮಾಡಿದ್ದೇನೆ. -ರೋಜಿ ಡೈರೆಕ್ಟರ್ ಶೂನ್ಯ

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:
 • published by :

ಸ್ಯಾಂಡಲ್‌ವುಡ್‌ನ ಲೂಸ್ ಮಾದ ಯೋಗಿ (Loose Maada Yogi Movie) ಅಂದ್ರೆ ನನಗೆ ಬಹು ಇಷ್ಟ. ನಾನು ಇವರ ಅಪ್ಪಟ ಅಭಿಮಾನಿ ಆಗಿದ್ದೇನೆ. ಆದರೆ ಸಿನಿಮಾ ಜೀವನದಲ್ಲಿ ಯೋಗಿ, ಆರಂಭದಲ್ಲಿ ಒಳ್ಳೆ ಸಿನಿಮಾ ಕೊಟ್ಟರು. ಅಂಬಾರಿ ನನಗೆ ಇಷ್ಟವಾದ ಸಿನಿಮಾ. ಈ ಚಿತ್ರದ ಆದ್ಮೇಲೆ ಅದ್ಯಾಕೋ ಲೂಸ್ ಮಾದ ಯೋಗಿ ನಮ್ಮ (Rosy Movie Updates) ನಿರೀಕ್ಷೆಯನ್ನ ಸುಳ್ಳು ಮಾಡಿದರು. ಆದರೆ ನಾನು ಈಗ ಅವರಿಗಾಗಿ ಒಂದು ಕಥೆ ಬರೆದಿದ್ದೇನೆ. ಈ ಕಥೆಯಲ್ಲಿ ಹೊಸತನ ಇದೆ. ಚಿತ್ರ ಕಥೆಯಲ್ಲೂ ಒಂದು ಹೊಸ ಗೇಮ್ ಇದೆ. ಹೀಗೆ ಹೆಡ್ ಬುಷ್ (Rosy Film New Updtes) ಡೈರೆಕ್ಟರ್ ಶೂನ್ಯ, ನ್ಯೂಸ್-18 ಕನ್ನಡ ಡಿಜಿಟಲ್​​ ಜೊತೆಗೆ ಮಾತನಾಡ್ತಾ ಹೋದ್ರು.


ಅವರ ಮಾತಿನಲ್ಲಿ ಇನ್ನೂ ಒಂದಷ್ಟು ಸ್ಪೆಷಲ್ ವಿಚಾರಗಳೂ ಹೊರ (Loose Maada Yogi Movie) ಹೊಮ್ಮಿದವು. ಆ ಮಾತಿನ ಚಿತ್ರಣ ಇಲ್ಲಿದೆ ಓದಿ.


Kannada Actor Loose Maada Yogi New Movie Rosy Film Secrets Reveal by Director Shoonya
ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಹುಡುಗಿ ಹೆಸರಿಟ್ಟಿದ್ಯಾಕೆ?


ಯೋಗಿ 50ನೇ ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ಡೈರೆಕ್ಟರ್ ಶೂನ್ಯ


ಲೂಸ್ ಮಾದ ಯೋಗಿ ಇಲ್ಲಿವರೆಗೂ 49 ಸಿನಿಮಾಗಳನ್ನ ಮಾಡಿದ್ದಾರೆ. ಚಿತ್ರ ಜೀವನದಲ್ಲಿ ಅವರ ಸಿನಿಮಾಗಳಲ್ಲಿ ಎಲ್ಲವೂ ಅಭಿಮಾನಿಗಳನ್ನ ಖುಷಿಪಡಿಸಲಿಲ್ಲ. ಆರಂಭದ ಸಿನಿಮಾಗಳಿಂದ ಅಭಿಮಾನಿಗಳು ಹುಟ್ಟಿಕೊಂಡರು. ಸಿನಿಮಾಗಳನ್ನ ನೋಡಿ ಇಷ್ಟಪಟ್ಟರು. ಆದರೆ ಮುಂದೆ ಬಂದ ಸಿನಿಮಾಗಳು ನಿರೀಕ್ಷೆ ಸುಳ್ಳು ಮಾಡಿದವು.
ಹೌದು, ಹೆಡ್ ಬುಷ್ ಡೈರೆಕ್ಟರ್ ಶೂನ್ಯ ಹೇಳಿದ್ದ ಈ ಮಾತು ಅಕ್ಷರಶ ನಿಜ, ಶೂನ್ಯ ಒಬ್ಬ ಡೈರೆಕ್ಟರ್ ಆಗಿರೋದು ನಿಜವೇ. ಆದರೆ ಇದೀಗ ಒಬ್ಬ ಡೈರೆಕ್ಟರ್ ಆಗಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗಾಗಿಯೇ ಒಂದು ಕಥೆ ಬರೆದುಕೊಂಡಿದ್ದಾರೆ.


ರೋಜಿ ಎಂಬ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಸಿನಿಮಾ


ಈ ಕಥೆ ಈಗ ಸಿನಿಮಾ ಆಗುತ್ತಿದೆ. ಕಾಲ್ಪನಿಕ ಕಥೆಯನ್ನ ಈ ಚಿತ್ರಕ್ಕೆ ರೋಜಿ ಅಂತ ಶೂನ್ಯ ಹೆಸರಿಟ್ಟಿದ್ದಾರೆ. ನೆಚ್ಚಿನ ನಾಯಕನ ಈ ಚಿತ್ರಕ್ಕೆ ಡೈರೆಕ್ಟರ್ ಶೂನ್ಯ, ಡಾಲಿ ಧನಂಜಯ್ ಕರೆಸಿ ಕ್ಲಾಪ್ ಕೂಡ ಮಾಡಿಸಿದ್ದಾರೆ.


ಇದೇ ಖುಷಿಯಲ್ಲಿಯೇ ಡೈರೆಕ್ಟರ್ ಶೂನ್ಯ, ನಮ್ಮೊಟ್ಟಿಗೆ ಚಿತ್ರದ ಒಂದಷ್ಟು ವಿಶೇಷತೆಗಳನ್ನ ಕೂಡ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈ ಚಿತ್ರಕ್ಕೆ ರೋಜಿ ಅಂತ ಹೆಸರಿಡಲು ಕಾರಣ ಇದೆ. ಆ ಕಾರಣ ಏನು ಅಂದ್ರೆ, ಲೂಸ್ ಮಾದ ಯೋಗಿ ನಿರ್ವಹಿಸಿದ ಪಾತ್ರಕ್ಕೆ ರೋಜಿ ಅನ್ನೊದು ತುಂಬಾನೇ ಸೂಟ್‌ ಆಗುತ್ತದೆ. ಹಾಗಾಗಿಯೇ ಈ ಹೆಸರು ಇಲ್ಲಿ ಇಡಲಾಗಿದೆ.


ಲೂಸ್ ಮಾದ ಯೋಗಿ ಚಿತ್ರಕ್ಕೆ ರೋಜಿ ಅಂತ ಶೀರ್ಷಿಕೆ ಇಟ್ಟಿದ್ಯಾಕೆ?


ರೋಜಿ ಅನ್ನೋದು ಹುಡುಗಿಯ ಹೆಸರೇ ಆಗಿದೆ. ಆದರೂ ಅದೇ ಹೆಸರನ್ನ ಲೂಸ್ ಮಾದ ಯೋಗಿ ಪಾತ್ರಕ್ಕೆ ಇಡಲಾಗಿದೆ ಅನ್ನೋದೇ ಶೂನ್ಯ ಹೇಳುವ ಇಂಟ್ರಸ್ಟಿಂಗ್ ಮಾತಾಗಿದೆ. ನೆಚ್ಚಿನ ನಾಯಕನಿಗಾಗಿಯೇ ಡೈರೆಕ್ಟರ್ ಶೂನ್ಯ, ಒಳ್ಳೆ ಕಥೆ ಮಾಡಿಕೊಡಿದ್ದಾರೆ. ಸ್ಕ್ರಿಪ್ಟ್ ವರ್ಕ್ ಕೂಡ ಪೂರ್ಣಗೊಂಡಿದೆ.


ಹಾಗೇನೆ ಕಥೆ ಕೂಡ ಚೆನ್ನಾಗಿಯೇ ಬಂದಿದ್ದು ಚಿತ್ರಕಥೆಯಲ್ಲಿ ಒಂದು ಗೇಮ್ ಇದೆ. ಈ ಗೇಮ್ ಸ್ಪೆಷಲ್ ಆಗಿಯೇ ಇದೆ ಅಂತಲೇ ಡೈರೆಕ್ಟರ್ ಶೂನ್ಯ ಚಿತ್ರದ ಇತರ ವಿವರ ಕೊಡ್ತಾರೆ ನೋಡಿ.


Kannada Actor Loose Maada Yogi New Movie Rosy Film Secrets Reveal by Director Shoonya
ಯೋಗಿ 50ನೇ ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ಡೈರೆಕ್ಟರ್ ಶೂನ್ಯ


ಲೂಸ್ ಮಾದ ಯೋಗಿಗಾಗಿಯೇ ನಾಯಕಿ ಹುಡುಕ್ತಿದ್ದಾರೆ ಶೂನ್ಯ


ಶೂನ್ಯ ತಮ್ಮ ಈ ಚಿತ್ರ ಮುಹೂರ್ತವನ್ನ ಈಗ ಮುಗಿಸಿಕೊಂಡಿದ್ದಾರೆ. ಚಿತ್ರದ ನಾಯಕಿಯ ಹುಡುಕಾಟವನ್ನ ಕೂಡ ಆರಂಭಿಸಿದ್ದಾರೆ. ಈ ಒಂದು ಹುಡುಕಾಟದಲ್ಲಿ ಇಬ್ಬರು ತಮ್ಮ ಚಿತ್ರಕ್ಕೆ ಸೂಟ್ ಆಗ್ತಾರೆ ಅನಿಸಿದೆ. ಆದರೆ ಅವರಲ್ಲಿ ಒಬ್ಬರನ್ನ ಫೈನಲ್ ಮಾಡಬೇಕು ಅಂತಲೇ ಶೂನ್ಯ ಹೇಳುತ್ತಾರೆ.


ಇದನ್ನೂ ಓದಿ: Kannada Movie: ಸದ್ದಿಲ್ಲದೇ ಮಕ್ಕಳ ಚಿತ್ರ ಡೈರೆಕ್ಟ್ ಮಾಡಿದ ಬರಗೂರು ಮೇಷ್ಟ್ರು! ಇಲ್ಲಿದೆ ಮಾಹಿತಿ


ಶೂನ್ಯ ನಿರ್ದೇಶನದ ರೋಜಿ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರು ಆಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಈ ಚಿತ್ರದ ಮೂಲಕ ಲೂಸ್ ಮಾದ ಯೋಗಿ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಆಗಿ ಬರ್ತಿದ್ದಾರೆ.

top videos
  First published: