ಕಡೆಗೂ ಈಡೇರಿದ ಆಸೆ: ಹೆಣ್ಣು ಮಗುವಿನ ಅಪ್ಪನಾದ ಲೂಸ್​ ಮಾದ..!

ಸ್ಯಾಂಡಲ್​ವುಡ್​ನಲ್ಲಿ ಲೂಸ್​ ಮಾದ ಎಂದೇ ಖ್ಯಾತಿ ಪಡೆದಿರುವ ಲೂಸ್​ ಮಾದ ಯೋಗಿ ಅಪ್ಪನಾಗಿದ್ದಾರೆ. ಬಯಸಿದಂತೆ ಹೆಣ್ಣು ಮಗುವಿನ ತಂದೆಯಾಗಿರುವ ಯೋಗಿ, ಮಗಳ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮನೆಗೆ ಹೊಸ ಅತಿಥಿಯ ಆಗಮನದ ಸಂಭ್ರಮದಲ್ಲಿ ಲೂಸ್​ ಮಾದ ಯೋಗಿ ಹಾಗೂ ಸಾಹಿತ್ಯಾ ಅರಸ್​

ಮನೆಗೆ ಹೊಸ ಅತಿಥಿಯ ಆಗಮನದ ಸಂಭ್ರಮದಲ್ಲಿ ಲೂಸ್​ ಮಾದ ಯೋಗಿ ಹಾಗೂ ಸಾಹಿತ್ಯಾ ಅರಸ್​

  • News18
  • Last Updated :
  • Share this:
- ಅನಿತಾ ಈ, 

ಸ್ಯಾಂಡಲ್​ವುಡ್​ನ ಲೂಸ್​ ಮಾದ ಎಂದೇ ಖ್ಯಾತಿ ಪಡೆದಿರುವ ಯೋಗಿ ಅಪ್ಪ ಆಗಿದ್ದಾರೆ. ಸಾಹಿತ್ಯಾ ಅರಸ್​ ಹಾಗೂ ಯೋಗಿ ದಂಪತಿಗೆ ಹೆಣ್ಣು ಮಗುವಾಗಿದೆ. ಯೋಗಿ ಮೊದಲೇ ತನಗೆ ಹೆಣ್ಣು ಮಗು ಬೇಕೆಂದು ಆಸೆ ಪಟ್ಟಿದ್ದರಂತೆ. ಅದರಂತೆ ಈಗ ಅವರ ಮನೆಗೆ ಲಕ್ಷ್ಮಿ ಕಾಲಿಟ್ಟಿದ್ದಾಳೆ.

ಶುಕ್ರವಾರ ಬೆಳಿಗ್ಗೆ ಸಾಹಿತ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಈಗ ಯೋಗಿ ತಮ್ಮ ಮುದ್ದು ಮಗಳು ಮಿನಿಯ ಫೋಟೊವನ್ನು ಇನ್ಸ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಂಬಿಯ ಹುಟ್ಟುಹಬ್ಬದ ಜತೆಗೆ ಅಭಿಷೇಕ್​ರ ಚೊಚ್ಚಲ ಚಿತ್ರಕ್ಕೂ ಶುಭ ಕೋರಿದ ನಿಖಿಲ್​ ಕುಮಾರಸ್ವಾಮಿ

  
View this post on Instagram
 

I asked for a mini you and you didn’t disappoint me!! ❤️🥰🥰


A post shared by Yogi (@loosemada_yogi) on


ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯಾರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರು ಬಹಳ ಸಮಯದಿಂದ ಪ್ರೀತಿಸುತ್ತಿದ್ದು, ನಂತರ ಎರಡೂ ಕಡೆಯ ಮನಯವರನ್ನು ಒಪ್ಪಿಸಿ 2017ರ ನವೆಂಬರ್​ 2ರಂದು ವಿವಾಹವಾಗಿದ್ದರು.

PHOTOS: ಗೌನ್​ನಲ್ಲಿ ಮಿಂಚುತ್ತಿರುವ ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ..!

First published: