• Home
  • »
  • News
  • »
  • entertainment
  • »
  • Villain Loki-Kantara: ರಿಷಬ್ ಶೆಟ್ಟಿಯ ಆ ಕಟ್ಟೆ ಕಡೆಯ 2 ನಿಮಿಷದ ದೃಶ್ಯ ಇನ್ನೂ ಕಾಡುತ್ತಿದೆ ಎಂದ ಭಜರಂಗಿ ಲೋಕಿ

Villain Loki-Kantara: ರಿಷಬ್ ಶೆಟ್ಟಿಯ ಆ ಕಟ್ಟೆ ಕಡೆಯ 2 ನಿಮಿಷದ ದೃಶ್ಯ ಇನ್ನೂ ಕಾಡುತ್ತಿದೆ ಎಂದ ಭಜರಂಗಿ ಲೋಕಿ

ಅಂದ್ಹಾಗೆ ಲೋಕಿ ಹೇಳಿದ ಆ ದೃಶ್ಯ ಯಾವುದು ಗೊತ್ತೇ ?

ಅಂದ್ಹಾಗೆ ಲೋಕಿ ಹೇಳಿದ ಆ ದೃಶ್ಯ ಯಾವುದು ಗೊತ್ತೇ ?

ಕಾಂತಾರ ಚಿತ್ರದಲ್ಲಿ ಎಲ್ಲವೂ ಅದ್ಭುತವಾಗಿಯೇ ಇದೆ. ಆದರೆ ಇದೇ ಚಿತ್ರದ ಕೊನೆಯ ಆ ಎರಡು ನಿಮಿಷದ ದೃಶ್ಯ ನಿಜಕ್ಕೂ ಮನಸ್ಸಿಗೆ ತಟ್ಟುತ್ತದೆ. ಅದನ್ನ ನೋಡ್ತಾ ಹೋದ್ರೆ ಅದುವೇ ದಿ ಬೆಸ್ಟ್ ಪಾರ್ಟ್ ಅಂತಲೂ ಅನಿಸುತ್ತದೆ ಎಂದು ಲೋಕಿ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕಾಂತಾರ (Kantara Cinema) ಸಿನಿಮಾ ಎಲ್ಲರನ್ನೂ ಕಾಡುತ್ತದೆ. ಸಿನಿಮಾದ ಪ್ರತಿ (Scene) ದೃಶ್ಯದಲ್ಲೂ ಅದೇನೋ ಶಕ್ತಿ ಇದೆ. ಅದನ್ನ ದೈವದ ಶಕ್ತಿ ಅನ್ನೋರೇ ಹೆಚ್ಚು. ಇಂತಹ ಈ ಸಿನಿಮಾವನ್ನ ನೋಡಿದ ಪ್ರತಿಯೊಬ್ಬರಿಗೂ ಒಂದು ಅಗಾಧ ಅನುಭವ ಆಗಿದೆ. ಅದನ್ನ (Experience) ಎಕ್ಸಪಿರಿಯೆನ್ಸ್ ಮಾಡಿರೋ ಸಿನಿ ಕಲಾವಿದರು ಮಂತ್ರಮುಗ್ಧಗೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದ ಶಕ್ತಿನೇ ಹಾಗಿದೆ. ಇದನ್ನ ಕಂಡ ಅನೇಕರು ತಮ್ಮದೇ ರೀತಿಯಲ್ಲಿ ಇಡೀ ಕಾಂತಾರ ಸಿನಿಮಾವನ್ನ ಬಣ್ಣಸಿದ್ದಾರೆ. ಸಿನಿಮಾ ನೋಡಿ ಹೊರ ಬಂದ ಅದೆಷ್ಟು ಜನಕ್ಕೆ, ಕಾಂತಾರದ ಆ ವರಾಹ (Varaha Roopam) ರೂಪಂ ಹಾಡು ಕಾಡುತ್ತದೆ. ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಅಂತಹ ಮ್ಯಾಗ್ನೇಟಿಕ್ ಪವರ್ ಹೊಂದಿರೋ ಈ ಚಿತ್ರವನ್ನ ಭಜರಂಗಿ ಖಳನಾಯಕ ನಟ ಲೋಕಿ ಕೂಡ ನೋಡಿದ್ದಾರೆ.


ಇವರಿಗೆ ಇಡೀ ಕಾಂತಾರ ಬೇರೆ ರೀತಿನೇ ಕಂಡಿದೆ. ಆ ವಿಶೇಷ ಅನುಭವವನ್ನ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹಂಚಿಕೊಂಡಿದ್ದಾರೆ.


ಕನ್ನಡದ ಕಾಂತಾರ ಸಿನಿಮಾ ಇಡೀ ಚಿತ್ರರಂಗವನ್ನೇ ಆವರಿಸಿಕೊಂಡಿದೆ. ಸಿನಿಮಾ ಪ್ರೇಮಿಗಳಲ್ಲಿ ಯಾರನ್ನೇ ಕೇಳಿದ್ರು ಅಷ್ಟೆ. ಎಲ್ಲರೂ ಸದ್ಯಕ್ಕೆ ಕಾಂತಾರ ಚಿತ್ರದ ಬಗ್ಗೇನೆ ಮಾತನಾಡುತ್ತಿದ್ದಾರೆ.




ಇವರ ಈ ಮಾತುಗಳಿಗೆ ಕಾಂತಾರ ಸಿನಿಮಾದ ಶಕ್ತಿಯೇ ಕಾರಣ ಅಂತಲೇ ಹೇಳಬಹುದು. ಕಾಂತಾರ ಚಿತ್ರದ ರಿಷಬ್ ಪಾತ್ರ ಅಷ್ಟೊಂದು ಮೋಡಿ ಮಾಡಿದೆ. ದೈವದ ರೂಪದಲ್ಲಿ ಕಾಣಿಸಿಕೊಂಡಾಗ ಇಡೀ ಥಿಯೇಟರ್ ಮಂತ್ರಮುಗ್ಧಗೊಳುತ್ತದೆ.


Kannada Actor Loki still in the Hangover of Kantara Film
ಸಿನಿಮಾ ನೋಡಿ ಹೊರ ಬಂದ್ಮೇಲೂ ಕಾಡುವ ರಿಷಬ್ ಶೆಟ್ಟಿ


ಇಂತಹ ಈ ಚಿತ್ರವನ್ನ ಭಜರಂಗಿ ಲೋಕಿ ಕೂಡ ನೋಡಿದ್ದಾರೆ. ಭಜರಂಗಿ ಚಿತ್ರದಲ್ಲಿ ಭಯಾನಕ ಪಾತ್ರವನ್ನ ಮಾಡಿಯೇ ಇಡೀ ಕನ್ನಡ ನಾಡಿನ ಜನರ ಹೃಯದ ಕದ್ದ ಲೋಕಿ, ಈ ಚಿತ್ರವನ್ನ ಮೆಚ್ಚಿಕೊಂಡಾಡಿದ್ದಾರೆ. ಸಿನಿಮಾದ ಅತ್ಯುತ್ತಮ ಅಂಶಗಳನ್ನೂ ಎಳೆ ಎಳೆಯಾಗಿಯೇ ಹಂಚಿಕೊಂಡಿದ್ದಾರೆ.


ಕಾಂತಾರ ಸಿನಿಮಾದ ದಿ ಬೆಸ್ಟ್ ಪಾರ್ಟ್ ಯಾವುದು?
ಕಾಂತಾರ ಸಿನಿಮಾದಲ್ಲಿ ಎಲ್ಲವೂ ದಿ ಬೆಸ್ಟ್ ಆಗಿಯೇ ಇದೆ. ಹಿನ್ನೆಲೆ ಸಂಗೀತ, ಇತರ ಕಲಾವಿದರ ಪೋಷಣೆ, ಕ್ಯಾಮೆರಾ ವರ್ಕ್ ಎಲ್ಲವೂ ಇಲ್ಲಿ ಅದ್ಭುತವಾಗಿಯೇ ಇವೆ. ಆದರೆ ಇಡೀ ಸಿನಿಮಾದಲ್ಲಿ ರಿಷಬ್ ನಮ್ಮನ್ನ ಕಾಡ್ತಾರೆ ಅಂತಲೇ ಲೋಕಿ ಹೇಳಿದ್ದಾರೆ.


ಇದನ್ನೂ ಓದಿ: Shiva Rajkumar: ನನಗಾಗಿ ತಲೆ ಬೋಳಾಗಿಸಿಕೊಂಡಿದ್ದ ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ!


ಕಾಂತಾರ ಸಿನಿಮಾದ ಕೊನೆಯ ಆ ಎರಡು ನಿಮಿಷದ ದೃಶ್ಯ ಹೇಗಿದೆ?
ಕಾಂತಾರ ಚಿತ್ರದಲ್ಲಿ ಎಲ್ಲವೂ ಅದ್ಭುತವಾಗಿಯೇ ಇದೆ. ಆದರೆ ಇದೇ ಚಿತ್ರದ ಕೊನೆಯ ಆ ಎರಡು ನಿಮಿಷದ ದೃಶ್ಯ ನಿಜಕ್ಕೂ ಮನಸ್ಸಿಗೆ ತಟ್ಟುತ್ತದೆ. ಅದನ್ನ ನೋಡ್ತಾ ಹೋದ್ರೆ ಅದುವೇ ದಿ ಬೆಸ್ಟ್ ಪಾರ್ಟ್ ಅಂತಲೂ ಅನಿಸುತ್ತದೆ ಎಂದು ಲೋಕಿ ಹೇಳಿಕೊಂಡಿದ್ದಾರೆ.


ಅಂದ್ಹಾಗೆ ಲೋಕಿ ಹೇಳಿದ ಆ ದೃಶ್ಯ ಯಾವುದು ಗೊತ್ತೇ ?
ಸಿನಿಮಾ ಎಂಡ್ ಆಗುತ್ತದೆ. ರಿಷಬ್ ಪಾತ್ರ ದೈವ ನರ್ತನಕ್ಕೆ ಸಜ್ಜಾಗುತ್ತದೆ. ಆ ನರ್ತನದಲ್ಲಿ ರಿಷಬ್ ಪಾತ್ರ ಮುರಳಿ ಪಾತ್ರಧಾರಿ, ಕಿಶೋರ್ ಅವರನ್ನ ಕರೆಯುತ್ತದೆ. ಆಗ ಊರಿನ ಇತರ ಜನ ಕೂಡ ಬರುತ್ತಾರೆ. ಎಲ್ಲರ ಕೈ ಹಿಡಿದು ಒಗ್ಗಟ್ಟಾಗಿ ಇರಿ ಅಂತಲೂ ದೈವ ರೂಪಿ ರಿಷಬ್ ಹೇಳುತ್ತಾರೆ.


Kannada Actor Loki still in the Hangover of Kantara Film
ಕಾಂತಾರ ಸಿನಿಮಾದ ದಿ ಬೆಸ್ಟ್ ಪಾರ್ಟ್ ಯಾವುದು?


ಈ ದೃಶ್ಯ ತುಂಬಾ ಭಾವನಾತ್ಮಕವಾಗಿಯೇ ಇದೆ. ಇದು ನನಗೆ ತುಂಬಾ ಇಷ್ಟವಾಗಿದೆ. ಇದು ನಿಜಕ್ಕೂ ಸೂಪರ್ ಸೀನ್ ಅನಿಸುತ್ತದೆ. ಇದನ್ನ ತುಂಬಾ ಚೆನ್ನಾಗಿಯೇ ಬರೆಯಲಾಗಿದ ಅಂತಲೇ ಭಜರಂಗಿ ಲೋಕಿ ಹೇಳುತ್ತಾರೆ.


ಸಿನಿಮಾ ನೋಡಿ ಹೊರ ಬಂದ್ಮೇಲೂ ಕಾಡುವ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಿರೋ ಪಾತ್ರ ಸುಲಭದ ಪಾತ್ರವೇ ಅಲ್ಲ ನೋಡಿ, ಎಂತಹ ಕಲಾವಿದರೂ ಈ ರೋಲ್ ಮಾಡಲು ಒಮ್ಮೆ ಬೆಚ್ಚಿ ಬೀಳುತ್ತಾರೆ. ಅಂತಹ ಈ ಒಂದು ರೋಲ್​ ಅನ್ನ ರಿಷಬ್ ಶೆಟ್ಟಿ ಇಲ್ಲಿ ಮಾಡಿ ಎಲ್ಲರ ಹೃದಯ ಗೆದ್ದು ಬಿಟ್ಟಿದ್ದಾರೆ.


ಇದನ್ನ ನೋಡಿರೋ ನಟ ಭಜರಂಗಿ ಲೋಕಿ, ಸಿನಿಮಾದ ಈ ಒಂದು ಪಾತ್ರ ಮನಸ್ಸಿನಲ್ಲಿಯೇ ಉಳಿಯುತ್ತದೆ. ಚಿತ್ರ ನೋಡಿ ಹೊರ ಬಂದ್ಮೇಲೂ ಪಾತ್ರದ ಹ್ಯಾಂಗೋವರ್ ಹೋಗೋದೇ ಇಲ್ಲ ಎಂದು ತಿಳಿಸುತ್ತಾರೆ.


ಇದನ್ನೂ ಓದಿ: Samantha: ಸರ್ಜರಿ ಮಾಡಿಸ್ಕೊಂಡ್ರಾ ಸಮಂತಾ? ಮುಖ ಹೇಗಾಗಿದೆ ನೋಡಿ


ಇನ್ನು ಸಿನಿಮಾ ನೋಡಿದ ಅನೇಕರು ಇದೇ ರೀತಿಯೇ ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚಿತ್ರ ಕಲಾವಿದರೂ ಅಷ್ಟೇ, ಕಾಂತಾರವನ್ನ ಕೊಂಡಾಡಿದ್ದಾರೆ. ಈಗ ಭಜರಂಗಿ ಲೋಕಿ ಆ ಒಂದು ಅನುಭವ ಹಂಚಿಕೊಂಡಿದ್ದಾರೆ.

First published: