ಕನ್ನಡದ ಹಾಸ್ಯ ನಾಯಕ ನಟ (Komal New Film) ಕೋಮಲ್ ಕಮ್ ಬ್ಯಾಕ್ ಮಾಡಿ ಆಗಿದೆ. ಒಪ್ಪಿಕೊಂಡ 2020 ಹೆಸರಿನ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದು ಬಿಟ್ಟರೇ, ಯಾವುದೇ ಸಿನಿಮಾ ಅನೌನ್ಸ್ ಆಗಿರಲಿಲ್ಲ. ಆದರೆ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾ (Anounced) ಅನೌನ್ಸ್ ಆಗಿವೆ. ಮೊನ್ನೆ ಮೊನ್ನೆಯೆಷ್ಟೆ ಕೋಮಲ್ ಅಭಿನಯದ ಸಿನಿಮಾವೊಂದು ಅನೌನ್ಸ್ ಆಗಿದೆ. ಅದರ ಕೆಲಸವೂ ಶುರು ಆಗಿದೆ. ಅಷ್ಟರಲ್ಲಿಯೇ ಇನ್ನೂ ಒಂದು ಚಿತ್ರವನ್ನ ನಾಯಕ ನಟ ಕೋಮಲ್ ಓಕೆ ಹೇಳಿದ್ದಾರೆ. ಈ ಸಿನಿಮಾದ (Cinema Title) ಟೈಟಲ್ ಕೂಡ ಸ್ಪೆಷಲ್ (Sepcial) ಆಗಿಯೇ ಇದೆ. ಸಿನಿಮಾ ತಂಡ ಈಗ ಈ ಚಿತ್ರದ ಟೈಟಲ್ ಅನೌನ್ಸ್ ಮಾಡಿದೆ. ಇದರ ಹೊರತಾಗಿ ಇನ್ನೂ ಒಂದಷ್ಟು ಮಾಹಿತಿ ಕೂಡ ರಿವೀಲ್ ಆಗಿವೆ. ಇದರ ಸುತ್ತ ಇಲ್ಲೊಂದಿಷ್ಟು ಮಾಹಿತಿ ಕೂಡ ಇದೆ.
ಹಾಸ್ಯ ನಾಯಕ ನಟ ಕೋಮಲ್ ಬ್ಯಾಕ್ ಟು ಬೆಳ್ಳಿ ತೆರೆ!
ಹಾಸ್ಯ ನಾಯಕ ನಟ ಕೋಮಲ್ ಕಳೆದೆ ಹೋದ್ರಾ? ಕೆಂಪೇಗೌಡ-2 ಚಿತ್ರಕ್ಕೆ ಸಣ್ಣಗಾಗಿಯೇ ಬಂದ್ರು. ಆದರೆ ಅದು ವರ್ಕ್ ಆಗಲೇ ಇಲ್ವೇ? ದೇಹದ ತೂಕ ಇಳಿಸಿದ್ದು ಜನಕ್ಕೆ ಇಷ್ಟ ಆಗಲೇ ಇಲ್ವೇ? ಕೆಂಪೇಗೌಡ-2 ಚಿತ್ರ ಆದ್ಮೇಲೆ ಕೋಮಲ್ ಎಲ್ಲಿ ಹೋದ್ರು?
ಈ ಒಂದು ಪ್ರಶ್ನೆ ಇದ್ದೇ ಇತ್ತು. ಕೋಮಲ್ ಎಲ್ಲಿ ಹೋದ್ರು ಅನ್ನುವ ಪ್ರಶ್ನೆ ಕೂಡ ಇತ್ತು. ಅದರ ಬೆನ್ನಲ್ಲಿಯೇ ಕೋಮಲ್ ಸಿನಿಮಾರಂಗದಿಂದ ದೂರವೇ ಉಳಿದ್ರೇ ಅನ್ನೋ ಕ್ಯೂರಿಯೋಸಿಟಿ ಕೂಡ ಮನೆ ಮಾಡಿತ್ತು. ಆದರೆ ಇಲ್ಲ ನಾನು ಸಿನಿಮಾರಂಗದಲ್ಲಿದ್ದೇನೆ ಅಂತಲೇ 2020 ಹೆಸರಿನ ಸಿನಿಮಾ ಮೂಲಕ ಬರ್ತೀನಿ ಅಂತಲೇ ಹೇಳಿದರು.
ಕೋಮಲ್ ಕಮ್ ಬ್ಯಾಕ್ ಸಿನಿಮಾ ಯಾವುದು ಗೊತ್ತೇ?
ಕೋಮಲ್ 2020 ಸಿನಿಮಾ ಇನ್ನಷ್ಟೇ ಬರಬೇಕಿದೆ. ಆದರೆ ಈ ಚಿತ್ರ ಬರುವ ಮುಂಚೇನೆ ಕೋಮಲ್ ಈಗಾಗಲೇ ಒಂದು ಚಿತ್ರ ಒಪ್ಪಿಕೊಂಡಿದ್ದಾರೆ. ಇದರ ಹೆಸರು ಕಾಲಾಯ ನಮಃ ಅಂತಲೇ ಇದೆ. ಇದರ ಬಗ್ಗೆ ಕೋಮಲ್ ಈಗಾಗಲೇ ಎಲ್ಲ ಹೇಳಿಕೊಂಡಿದ್ದಾರೆ.
ಕಾಲಾಯ ನಮಃ ಕನ್ನಡ ಚಿತ್ರರಂಗದ ಕೋಮಲ್ ಕಂಬ್ಯಾಕ್ ಸಿನಿಮಾನೇ ಅನಿಸಿಕೊಂಡಿದೆ. ಆದರೆ ಇದೇ ನಾಯಕ ನಟನ ಇನ್ನೂ ಒಂದು ಸಿನಿಮಾ ಈಗ ಅನೌನ್ಸ್ ಆಗಿದೆ. ಈ ಚಿತ್ರದ ಹೆಸರು ವಿಶೇಷವಾಗಿಯೇ ಇದೆ. ಇದನ್ನ ಯಾರ್ ಡೈರೆಕ್ಟ್ ಮಾಡುತ್ತಿದ್ದಾರೆ ಅನ್ನೋದ ಇತರ ಮಾಹಿತಿ ಇಲ್ಲಿದೆ ಓದಿ.
ಹಾಸ್ಯ ನಾಯಕ ನಟ ಕೋಮಲ್ ಈಗ "ರೋಲೆಕ್ಸ್" ಮ್ಯಾನ್!
ಕೋಮಲ್ ಒಪ್ಪಿಕೊಂಡ ಸಿನಿಮಾದ ಹೆಸರು "ರೋಲೆಕ್ಸ್" ಅಂತಲೇ ಇಡಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಈಗ ಟೈಟಲ್ ರಿವೀಲ್ ಆಗಿದೆ. ಇತರ ಮಾಹಿತಿಯನ್ನ ಸಿನಿಮಾ ತಂಡ ಶೀಘ್ರದಲ್ಲಿಯೇ ರಿವೀಲ್ ಮಾಡಲಿದೆ.
ಆದರೆ ಈ ಚಿತ್ರವನ್ನ ಯಾರು ಡೈರೆಕ್ಟ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗೆ ಅಲ್ಲಿ ಶ್ರೀನಿವಾಸ್ ಮಂಡ್ಯ ಹೆಸರು ಬರುತ್ತದೆ. ನಿಜ, ಈ ಚಿತ್ರವನ್ನ ಬಿಲ್ ಗೇಟ್ಸ್ ಚಿತ್ರದ ಮೂಲಕ ಗಮನ ಸೆಳೆದ ಡೈರೆಕ್ಟರ್ ಶ್ರೀನಿವಾಸ್ ಮಂಡ್ಯ ಈ ರೋಲೆಕ್ಸ್ ಸಿನಿಮಾ ಮಾಡುತ್ತಿದ್ದಾರೆ.
ರೋಲೆಕ್ಸ್ ಸಿನಿಮಾದ ಶೂಟಿಂಗ್ ಯಾವಾಗಿನಿಂದ ಶುರು?
ಕಂಟೆಂಟ್ ಆಧರಿಸಿರೋ ಈ ಚಿತ್ರಕ್ಕೆ ರಾಕೇಶ್ ಎಸ್.ತಿಲಕ್ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಕೊಡ್ತಾ ಇದ್ದಾರೆ. ಅರವಿಂದ್ ರಾಜ್ ಚಿತ್ರವನ್ನ ಸಂಕಲನ ಮಾಡೋಕೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Prabhas-Rishab Shetty: ವಿಶ್ ಮಾಡೋಕೆ ಕಾಲ್ ಮಾಡಿದ್ರೆ ಇಂಟ್ರೆಸ್ಟ್ ತೋರಿಸ್ಲಿಲ್ಲ ಪ್ರಭಾಸ್! ರಿಷಬ್ ಏನಂದ್ರು?
ಮುಂದಿನ ವರ್ಷ ಜನವರಿ ತಿಂಗಳಿನಿಂದಲೇ ಸಿನಿಮಾದ ಶೂಟಿಂಗ್ ಶುರು ಆಗುತ್ತದೆ. ಈ ಹಿನ್ನೆಲೆಯಲ್ಲಿಯೇ ಎಲ್ಲ ತಯಾರಿ ಆಗಿದೆ. ಬಾಕಿ ಮಾಹಿತಿಯನ್ನ ಶೀಘ್ರದಲ್ಲಿ ಹಂಚಿಕೊಳ್ಳಲು ಸಿನಿಮಾ ಟೀಮ್ ಡಿಸೈಡ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ