ಕನ್ನಡದ ಹಾಸ್ಯ ನಾಯಕ ನಟ ಕೋಮಲ್ ಕುಮಾರ್ (Komal Kumar) ಮತ್ತೆ ಬ್ಯುಸಿ ಆಗಿದ್ದಾರೆ. ಕಾಲಾಯ ನಮಃ ಚಿತ್ರ ಘೋಷಣೆ ಆಗಿದ್ದೇ ತಡ, ಕೋಮಲ್ ಇನ್ನೂ (Komal New Movie) ಒಂದು ಚಿತ್ರ ಒಪ್ಪಿಕೊಂಡಿದ್ದರು. ಆ ಚಿತ್ರದ ಹೆಸರು ಕೂಡ ವಿಶೇಷವಾಗಿಯೇ ಇದೆ. ಇದರ ಕೆಲಸಗಳು ಪ್ರೀ ಪ್ರೋಡಕ್ಷನ್ ಹಂತದಲ್ಲಿವೆ. ಚಿತ್ರ ತಂಡ ಇತರ ವಿಷಯಗಳು ಈಗಾಗಲೇ ಅನೌನ್ಸ್ ಆಗಿವೆ. ಆದರೆ ಅದ್ಯಾಕೋ ಈ "ರೋಲೆಕ್ಸ್ ಕೋಮಲ್" ಕುಮಾರ್ನಿಗೆ (Rolex Komal Movie) ನಾಯಕಿನೇ ಸೆಟ್ ಆಗಿರಲಿಲ್ಲ. ನಿರ್ದೇಶಕರು ತಮ್ಮ ರೋಲೆಕ್ಸ್ ಕುಮಾರನಿಗೆ ನಾಯಕಿ ಹುಡುಕಾಟ ಆರಂಭಿಸಿದ್ದರು. ಆ ಹುಡುಕಾಟಕ್ಕೆ ಈಗ ಫುಲ್ ಸ್ಟಾಪ್ ಬಿದ್ದಿದೆ. ಕೊನೆಗೂ ನಾಯಕಿಯ (Rolex Komal Cinema) ಆಯ್ಕೆ ಆಗಿ ಬಿಟ್ಟಿದೆ. ಆ ನಾಯಕಿಯ ಮಾಹಿತಿ ಇಲ್ಲಿದೆ.
"ರೋಲೆಕ್ಸ್ ಕೋಮಲ್" ಕುಮಾರನಿಗೆ ಸಿಕ್ಕ ಆ ಬೆಡಗಿ ಯಾರು?
ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಚಿತ್ರ ಜೀವನದಲ್ಲಿ ಸಾಕಷ್ಟು ಪಾತ್ರಗಳನ್ನ ಮಾಡಿದ್ದಾರೆ. ಹಾಸ್ಯ ಕಲಾವಿದನಾಗಿ ಎಲ್ಲರ ಹೃದಯ ಗೆಲ್ಲುತ್ತಲೇ, ಈಗಾಗಲೇ ಹೀರೋ ಆಗಿಯೂ ಜನರ ದಿಲ್ ಕದ್ದು ಬಿಟ್ಟಿದ್ದಾರೆ.
ಕೆಂಪೇಗೌಡ-2 ಚಿತ್ರದ ಮೂಲಕ ಖದರ್ ಆಗಿ ಬಂದಿರೋದು ಗೊತ್ತೇ ಇದೆ. ಇದೇ ನಾಯಕ ಬಹಳ ದಿನಗಳ ಬಳಿಕ ಕಾಲಾಯ ನಮಃ ಅನ್ನೋ ಚಿತ್ರದ ಮೂಲಕ ವಾಪಸ್ ಆಗಿದ್ದಾರೆ.
"ರೋಲೆಕ್ಸ್ ಕೋಮಲ್" ಚಿತ್ರದ ತಾಜಾ ಸುದ್ದಿ ಏನು?
ಹಾಸ್ಯ ನಾಯಕ ನಟ ಕೋಮಲ್ ಮತ್ತೆ ನಾಯಕರಾಗಿಯೇ ಬರ್ತಿದ್ದಾರೆ. ಹಾಗೆ ಒಪ್ಪಿರೋ ಚಿತ್ರಗಳಲ್ಲಿ ಒಂದು ಕಾಲಾಯ ನಮಃ ಚಿತ್ರವಾದ್ರೆ, ಇನ್ನೂ ಒಂದು "ರೋಲೆಕ್ಸ್ ಕೋಮಲ್" ಸಿನಿಮಾ ಆಗಿದೆ.
"ರೋಲೆಕ್ಸ್ ಕೋಮಲ್" ಚಿತ್ರದಲ್ಲಿ ಕೋಮಲ್ ಬೇರೆ ರೀತಿನೇ ಬರ್ತಿದ್ದಾರೆ. ಕಂಟೆಂಟ್ ಆಧರಿಸಿರೋ ಈ ಚಿತ್ರದ ಕಥೆ ಕೇಳಿ ಚಿತ್ರ ಒಪ್ಪಿರೋ ಕೋಮಲ್ ಕುಮಾರ್ ಈಗ ರೆಡಿ ಆಗಿದ್ದಾರೆ.
"ರೋಲೆಕ್ಸ್ ಕೋಮಲ್" ನಿಗೆ ಸೋನಲ್ ಮೊಂಟೆರೋ ನಾಯಕ
"ರೋಲೆಕ್ಸ್ ಕೋಮಲ್" ಚಿತ್ರದ ನಾಯಕಿ ಸೋನಲ್ ಮೊಂಟೆರೋ ಮೊದಲು ಚಿತ್ರದ ಕಥೆ ಕೇಳಿದ್ದಾರೆ. ಡೈರೆಕ್ಟರ್ ಶ್ರೀನಿವಾಸ್ ಮಂಡ್ಯ ಹೇಳಿದ್ದ ಕಥೆಯನ್ನ ತುಂಬಾ ಖುಷಿಯಿಂದಲೇ ಆಲಿಸಿದ್ದಾರೆ. ಕಥೆ ಕೇಳ್ತಾ ಇಂಪ್ರೆಸ್ ಕೂಡ ಆಗಿದ್ದಾರೆ. ಕೊನೆಗೆ ನಾನು ಸಿನಿಮಾ ಮಾಡುತ್ತೇನೆ ಅಂತಲೂ ಹೇಳಿದ್ದಾರೆ.
ಅಲ್ಲಿಗೆ "ರೋಲೆಕ್ಸ್ ಕೋಮಲ್" ಕುಮಾರ್ ಚಿತ್ರಕ್ಕೆ ನಾಯಕಿ ಸಿಕ್ಕಂತಾಗಿದೆ. ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳೂ ಇವೆ. ಇನ್ನು ಈ ಚಿತ್ರದಲ್ಲಿ ನಟರಾದ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಕೂಡ ಅಭಿನಯಿಸುತ್ತಿದ್ದಾರೆ.
ಜನವರಿ-26 ಕ್ಕೆ "ರೋಲೆಕ್ಸ್ ಕೋಮಲ್" ಶೂಟಿಂಗ್ ಶುರು
"ರೋಲೆಕ್ಸ್ ಕೋಮಲ್" ಸಿನಿಮಾ ತಂಡ ಈಗ ಶೂಟಿಂಗ್ ಹೋಗಲು ರೆಡಿ ಆಗಿದೆ. ಜನವರಿ-26 ರಂದು ಸಿನಿಮಾದ ಮುಹೂರ್ತ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಚಿತ್ರದ ಮುಹೂರ್ತ ಮುಗಿದ ಮರುದಿನದಿಂದಲೇ "ರೋಲೆಕ್ಸ್ ಕೋಮಲ್" ಚಿತ್ರೀಕರಣ ಶುರು ಆಗುತ್ತಿದೆ. ಅಂದ್ರೆ, ಜನವರಿ 27 ರಿಂದಲೇ ಈ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ.
ಚಿತ್ರದ ಡೈರೆಕ್ಟರ್ ಶ್ರೀನಿವಾಸ್ ಮಂಡ್ಯ ಏನ್ ಹೇಳ್ತಾರೆ?
"ರೋಲೆಕ್ಸ್ ಕೋಮಲ್" ಚಿತ್ರದ ಮುಂಚೆ ಡೈರೆಕ್ಟರ್ ಶ್ರೀನಿವಾಸ್ ಮಂಡ್ಯ ಬಿಲ್ಗೇಟ್ಸ್ ಹೆಸರಿನ ಚಿತ್ರ ಮಾಡಿದ್ದರು. ಅದಾದ್ಮೇಲೆ ಶ್ರೀನಿವಾಸ್ ಮಂಡ್ಯ ಈ ಚಿತ್ರ ಮಾಡುತ್ತಿದ್ದಾರೆ. ಒಳ್ಳೆ ಕಥೆಯನ್ನ ಈಗ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Anushka Sharma: ಅನುಷ್ಕಾ ಧರಿಸಿದ ಟಾಪ್ ಬೆಲೆ ಗೊತ್ತಾ? ಮಗಳ ಡ್ರೆಸ್ ಹಾಕ್ಕೊಂಡು ಬಂದ್ರಾ ಎಂದ ನೆಟ್ಟಿಗರು
ಇಂಟ್ರಸ್ಟಿಂಗ್ ಕಥೆಯೊಂದಿಗೆ ಬರ್ತಿರೋ ಡೈರೆಕ್ಟರ್ ಶ್ರೀನಿವಾಸ್ ಮಂಡ್ಯ, ಇದೇ 26 ರಂದು ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದಾರೆ. 27 ರಿಂದಲೇ ಶೂಟಿಂಗ್ ಹೋಗ್ತಿರೋದಾಗಿಯೂ ಹೇಳಿಕೊಂಡಿದ್ದಾರೆ.
"ರೋಲೆಕ್ಸ್ ಕೋಮಲ್" ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ
"ರೋಲೆಕ್ಸ್ ಕೋಮಲ್" ಸಿನಿಮಾಗೆ ಹಿಂದೆ ಒಳ್ಳೆ ಟೀಮ್ ರೆಡಿ ಆಗಿದೆ. ಕಂಟೆಂಟ್ ಆಧರಿಸಿರೋ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ರಂತಹ ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ರಾಕೇಶ್ ಸಿ.ತಿಲಕ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ