ಕನ್ನಡದ ಕಾಮಿಡಿ ನಾಯಕ ನಟ ಕೋಮಲ್ ಕುಮಾರ್ (Undenaama Trailer Release) ಹೊಸ ಸಿನಿಮಾದ ಟ್ರೈಲರ್ ಬೇಜಾನ್ ಸೌಂಡ್ ಮಾಡುತ್ತಿದೆ. ಈ ಹಿಂದೇನೆ ಶುರುವಾಗಿದ್ದ ಈ ಚಿತ್ರ, ಕೊರೊನಾ ಲಾಕ್ ಡೌನ್ (Komal Film New Updates) ಮೊದಲೇ ಆರಂಭಗೊಂಡಿತ್ತು. ಆದರೆ ಈ ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದೆ. ಚಿತ್ರದ ಟ್ರೈಲರ್ ಅದ್ದೂರಿಯಾಗಿಯೇ ರಿಲೀಸ್ ಆಗಿದೆ. ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿದೆ. ನಟ ಹರೀಶ್ ರಾಜ್ (New Film Trailer Release) ಕೂಡ ಈ ಚಿತ್ರದಲ್ಲಿ ಕೋಮಲ್ ಕುಮಾರ್‌ಗೆ ಜೋಡಿಯಾಗಿದ್ದಾರೆ. ಇವರ ಈ ಚಿತ್ರದ ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್ ಆಗಿದೆ. ಈ ಬಗೆಗಿನ (Komal Cinema Latest News) ಒಂದು ಸ್ಟೋರಿ ಇಲ್ಲಿದೆ ಓದಿ.
ಕೋಮಲ್ ಕುಮಾರ್‌ಗೆ ಉಂಡೆನಾಮ ಹಾಕಿದವ್ರು ಯಾರು?
ಕೋಮಲ್ ಕುಮಾರ್ ಅಭಿನಯದ ಉಂಡೆನಾಮ ಸಿನಿಮಾದ ಟೈಟಲ್ ಮುಂಚೇ ಬೇರೆ ಇತ್ತು. ಕೊರೊನಾ ಲಾಕ್ ಡೌನ್ ಸ್ಥಿತಿ ಗತಿ ಮೇಲೆ ಇಡೀ ಸಿನಿಮಾ ತಯಾರಾಗಿತ್ತು. ಆದರೆ ಅದೇ ಟೈಟಲ್ ಈಗ ಔಟ್ ಡೇಟೆಡ್ ಅನಿಸುತ್ತದೆ ಅಲ್ವೇ? ಅದಕ್ಕೇನೆ ಸಿನಿಮಾ ಟೈಟಲ್ ಈ ಸಮಯಕ್ಕೆ ತಕ್ಕನಾಗಿಯೇ ಉಂಡೆನಾಮ ಅಂತ ಇಡಲಾಗಿದೆ.
ಉಂಡೆನಾಮ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್‌ನಲ್ಲಿ ಇಡೀ ಸಿನಿಮಾದ ಕಥೆ ರಿವೀಲ್ ಆಗಿದೆ ಅನಿಸುತ್ತದೆ. ಹಾಗಂತ ಇದನ್ನ ನಾವು ಹೇಳ್ತಿಲ್ಲ. ಚಿತ್ರದ ಡೈರೆಕ್ಟರ್ ಕೆ.ಎಲ್. ರಾಜಶೇಖರ್ ಟ್ರೈಲರ್‌ನಲ್ಲಿಯೇ ಈ ವಿಷಯವನ್ನ ಹೇಳಿಕೊಂಡಿದ್ದಾರೆ.
ಉಂಡೆನಾಮ ಸಿನಿಮಾದಲ್ಲಿ ಲಾಕ್ ಡೌನ್ ಕಥೆ-ವ್ಯಥೆ!
ಉಂಡೆನಾಮ ಸಿನಿಮಾದಲ್ಲಿ ಲಾಕ್ ಡೌನ್ ಕಥೆ ಇದೆ. ಮದುವೆ ಆಗಬೇಕು ಅಂತ ಓಡ್ತಿರೋ ಕೋಮಲ್ ಕಥೆ ಇಲ್ಲಿ ವ್ಯಥೆಯಾಗಿ ಹಾಸ್ಯ ತರುತ್ತದೆ. ಉಂಡೆನಾಮ ಅಂತ ಯಾಕೆ ಟೈಟಲ್ ಇಟ್ರೋ ಗೊತ್ತಿಲ್ಲ. ಆದರೆ ಕೊರೊನಾದಿಂದ ಎಲ್ಲರ ಲೈಫ್ ಕೂಡ ಏರು ಪೇರಾಗಿತ್ತು. ಇದರ ಏಟಿಗೆ ಜನ ಈಗಲೂ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ.
ಆ ಒಂದು ಅಸಲಿ ಸತ್ಯವನ್ನ ಈ ಒಂದು ಸಿನಿಮಾದಲ್ಲಿ ತೋರಲಾಗುತ್ತಿದೆ. ಡೈರೆಕ್ಟರ್ ರಾಜಶೇಖರ್ ತಮ್ಮ ಕಥೆಯನ್ನ ಕೊರೊನಾ ಕಾಲದ ಸ್ಥಿತಿ-ಗತಿ ಮೇಲೆನೆ ಮಾಡಿದ್ದಾರೆ. ಆದರೆ ಅದನ್ನ ಹಾಸ್ಯದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ.
ಜಗತ್ತಿನ ಜನರಿಗೆ ಉಂಡೆನಾಮ ಹಾಕಿದ ಕೊರೊನಾ!
ಉಂಡೆನಾಮ ಸಿನಿಮಾದಲ್ಲಿ ಹಾಸ್ಯ ನಾಯಕ ನಟ ಕೋಮಲ್, ಇಡೀ ಕೊರೊನಾ ಏಟಿನಿಂದ ನಲುಗುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಲಾಕಾರ್ ಚಿತ್ರ ಖ್ಯಾತಿಯ ನಟ ಹರೀಶ್ ರಾಜ್ ಕೂಡ ಈ ಚಿತ್ರದಲ್ಲಿ ಕೋಮಲ್‌ಗೆ ಸಾಥ್ ಕೊಟ್ಟಿದ್ದಾರೆ.
ಉಂಡೆನಾಮ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಕೊಟ್ಟಿದ್ದಾರೆ. ಬಹದ್ದೂರ್ ಡೈರೆಕ್ಟರ್ ಚೇತನ್ ಚಿತ್ರಕ್ಕೆ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಟಿ.ಆರ್.ಚಂದ್ರಶೇಖರ್ ಚಿತ್ರಕ್ಕೆ ದುಡ್ಡುಹಾಕಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ದೊಡ್ಡಮಟ್ಟದಲ್ಲಿಯೇ ಆಗಿದೆ.
ಉಂಡೆನಾಮ ಚಿತ್ರದ ಟ್ರೈಲರ್ ರಿಲೀಸ್‌ಗೆ ಬಂದ ಜಗ್ಗೇಶ್
ಕೋಮಲ್ ಸಹೋದರ ಜಗ್ಗೇಶ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಹೋದರ ಬಗ್ಗೆ ಮಾತನಾಡಿ ಖುಷಿನೂ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಧನ್ಯಾ ರಾಮಕಷ್ಣ ಅಭಿನಯಿಸಿದ್ದಾರೆ. ತಬಲಾ ನಾಣಿ ಕಾಮಿಡಿ ಕಿಕ್ ಕೊಡ್ತಿದ್ದಾರೆ. ಕೆಜಿಎಫ್ ಸಂಪತ್ ಕೂಡ ನಟಿಸಿದ್ದಾರೆ. ಬ್ಯಾಂಕ್ ಜನಾರ್ಧನ್ ಸಹ ಸಿನಿಮಾದಲ್ಲಿ ಬೇರೆ ಲುಕ್‌ಲ್ಲಿಯೇ ಹಾಸ್ಯದ ಹೊನಲು ಹರಿಸಿದ್ದಾರೆ.
ಇದನ್ನೂ ಓದಿ: Olavina Nildana: ಇನ್ನೆರೆಡು ದಿನದಲ್ಲಿ ತಾರಿಣಿ ಮದುವೆ, ಸಿದ್ಧಾಂತ್ ಮರೆಯಲಾಗದೆ ಒದ್ದಾಟ!
ಉಂಡೆನಾಮ ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಇದೇ ಏಪ್ರಿಲ್-14 ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಬೆನ್ನಲ್ಲಿಯೇ ಟ್ರೈಲರ್ ರಿಲೀಸ್ ಆಗಿ, ಸಿನಿಮಾದ ಕುರಿತು ಒಂದು ಕುತೂಹಲ ಕೂಡ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ