ಕನ್ನಡದ ಅಭಿನಯ ಚಕ್ರವರ್ತಿ (Kichcha Sudeepa) ಕಿಚ್ಚ ಸುದೀಪ್ ವರ್ಷಕ್ಕೆ ಒಂದೇ ಚಿತ್ರ ಮಾಡುತ್ತಿದ್ದಾರೆ. ತಮ್ಮ ಟೈಮ್ ಅನ್ನ ಬೇರೆ ಪ್ರೋಜೆಕ್ಟ್ಗಳ ಮೇಲೆ ಸ್ಪೆಂಡ್ ಮಾಡುತ್ತಾರೆ. ಇದರಿಂದ ಕಿಚ್ಚನ (Sudeepa New Project) ಹುಡುಗರಲ್ಲಿ ಒಂದು ಸಣ್ಣ ಬೇಸರ ಕೂಡ ಇದೆ. ಆದರೆ 2023 ರಲ್ಲಿ ಹಾಗೆ ಆಗೋದಿಲ್ಲ ಬಿಡಿ. ಕಿಚ್ಚ ಸುದೀಪ್ (Sudeepa Film Updates) ಈ ವರ್ಷ ಬೇರೆ ರೀತಿ ಯೋಚನೆ ಮಾಡಿದ್ದಾರೆ. ಆ ಯೋಚನೆಯಿಂದ ಮೂವರು ನಿರ್ದೇಶಕರಿಗೆ ಒಳ್ಳೆ ಅವಕಾಶ ಸಿಗುತ್ತಿದೆ. ಪ್ರತಿ ವರ್ಷ ಎರಡು ಇಲ್ಲವೇ ಮೂರು ಚಿತ್ರ ಮಾಡುವಲ್ಲಿ ಕಿಚ್ಚ (Sudeepa New Movies) ಯೋಚನೆ ಮಾಡಿದ್ದಾರೆ. ಕಥೆಗಳನ್ನ ಕೂಡ ಕೇಳುತ್ತಿದ್ದಾರೆ. ಕಿಚ್ಚನ ಈ ಒಂದು ಹೊಸ ಯೋಚನೆಯ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.
ಅಭಿನಯ ಚಕ್ರವರ್ತಿ ಫ್ಯಾನ್ಸ್ಗೆ ಗುಡ್ ನ್ಯೂಸ್
ಕಿಚ್ಚ ಸುದೀಪ್ ಒಂದು ವರ್ಷಕ್ಕೆ ಒಂದು ಚಿತ್ರ ಮಾಡುತ್ತಿದ್ದರು. ಒಂದೇ ಚಿತ್ರದಲ್ಲಿಯೇ ತಲ್ಲೀನರಾಗುತ್ತಿದ್ದರು. 2023ರಲ್ಲಿ ಸುದೀಪ್ ಹೊಸ ಯೋಚನೆ ಮಾಡಿದ್ದಾರೆ. ಆ ಯೋಚನೆಯಿಂದ ಮೂವರು ನಿರ್ದೇಶಕರಿಗೆ ಒಳ್ಳೆ ಅವಕಾಶ ಸಿಗುತ್ತಿದೆ.
ಸುದೀಪ್ ಅವರ ಈ ಒಂದು ಹೊಸ ಯೋಚನೆಯಿಂದ ಅಭಿಮಾನಿಗಳು ಡಬಲ್, ಟ್ರಿಪಲ್ ಖುಷಿಪಡಬಹುದು. ಒಂದೇ ವರ್ಷಕ್ಕೆ ಮೂರು ಮೂರು ಬಾರಿ ಹಬ್ಬ ಮಾಡಬಹುದು. ಅಂತಹ ಒಂದು ಐಡಿಯಾವನ್ನು ಕಿಚ್ಚ ಸುದೀಪ್ ಪ್ಲಾನ್ ಮಾಡುತ್ತಿದ್ದಾರೆ.
ಒಂದು ವರ್ಷಕ್ಕೆ ಮೂರು ಚಿತ್ರ ಮಾಡುವ ಯೋಚನೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ವರ್ಷಕ್ಕೆ ಎರಡು ಇಲ್ಲವೆ ಮೂರು ಚಿತ್ರವನ್ನು ಮಾಡುವ ಯೋಚನೆ ಮಾಡಿದ್ದಾರೆ. ಕಥೆಗಳನ್ನ ಸಹ ಕೇಳುತ್ತಿದ್ದಾರೆ. ತಮ್ಮ ಬಳಿ ಬರುವ ಹೊಸ ಐಡಿಯಾಗಳನ್ನ, ಹೊಸ ಕಥೆಗಳನ್ನ ಕಿಚ್ಚ ಸುದೀಪ್ ಕೇಳುತ್ತಿದ್ದಾರೆ. ಅವುಗಳ ಬಗ್ಗೆ ಯೋಚನೆ ಕೂಡ ಮಾಡುತ್ತಿದ್ದಾರೆ. ಅದ್ಭುತ ಅನಿಸೋ ಐಡಿಯಾಗಳನ್ನ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ. ಕಥೆ ಮಾಡಲು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು?
ಸುದೀಪ್ ಇನ್ನೂ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಕಥೆಗಳನ್ನ ಕೇಳುತ್ತಿದ್ದಾರೆ. ಚರ್ಚೆಗಳನ್ನೂ ಮಾಡುತ್ತಿದ್ದಾರೆ. ಹಾಗೆ ಚರ್ಚೆಗೆ ಕುಳಿತ ಸಮಯದಲ್ಲಿ ರನ್ನ ಚಿತ್ರದ ನಿರ್ದೇಶಕ ನಂದ ಕಿಶೋರ್ ಒಂದು ಐಡಿಯಾ ಹೇಳಿದ್ದಾರೆ. ಅದನ್ನ ಕಿಚ್ಚ ಸುದೀಪ್ ತುಂಬಾ ಇಷ್ಟಪಟ್ಟಿದ್ದಾರೆ.
ರನ್ನ ಡೈರೆಕ್ಟರ್ ಹೇಳಿದ ಐಡಿಯಾ ಮೆಚ್ಚಿದ ಕಿಚ್ಚ ಸುದೀಪ್
ನಂದ ಕಿಶೋರ್ ತಮ್ಮ ಐಡಿಯಾ ಮೇಲೆ ಈಗ ಕಥೆ ಮಾಡಿಕೊಳ್ಳಲು ಕುಳಿತಿದ್ದಾರೆ. ಇದು ಕಿಚ್ಚನ ಚಿತ್ರ ಜೀವನದಲ್ಲಿ ಬೇರೆ ಕಥೆ ಆಗುತ್ತದೆ.
ಸಮಾಜಮುಖಿ ಕಥೆಯನ್ನ ನಂದ ಕಿಶೋರ್ ಮಾಡುತ್ತಿದ್ದಾರೆ.
ನಂದ ಕಿಶೋರ್ ಚಿತ್ರವೇ ಮೊದಲು ಆರಂಭಗೊಳ್ಳುತ್ತದೆಯೇ?
ಕಿಚ್ಚ ಸುದೀಪ್ ಮೂವರು ನಿರ್ದೇಶಕರ ಕಥೆ ಕೇಳಿದ್ದಾರೆ. ಮೂವರಿಗೂ ಕಥೆ ಮಾಡುವಂತೆ ಸೂಚಿಸಿದ್ದಾರೆ. ಇವುಗಳಲ್ಲಿ ಯಾವುದನ್ನ ಮೊದಲು ಮಾಡುತ್ತಾರೆ ಅನ್ನೋದು ಈಗೀನ ಕುತೂಹಲವೇ ಆಗಿದೆ.
ಕೆಆರ್ಜಿ ಪ್ರೋಡಕ್ಷನ್ ಹೌಸ್ಗೆ ಈ ಚಿತ್ರವನ್ನ ಸುದೀಪ್ ಮಾಡುತ್ತಾರೆಯೇ? ಇಲ್ಲವೇ ಕಿಚ್ಚನ ಮುಂದಿನ ಚಿತ್ರವನ್ನ ಕೆವಿಎನ್ ಪ್ರೋಡಕ್ಷನ್ ಹೌಸ್ ನಿರ್ಮಿಸಲಿದಿಯೇ? ಸದ್ಯಕ್ಕೆ ಈ ಕುರಿತು ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ: SS Rajamouli: ಹಾಲಿವುಡ್ನಲ್ಲಿ ಸಿನಿಮಾ ಮಾಡ್ಬೋದು, ಆದ್ರೆ ಕ್ರೆಡಿಟ್ ಸಿಗಲ್ಲ ಎಂದ ರಾಜಮೌಳಿ
ಕಿಚ್ಚ ಸುದೀಪ್ ಕಥೆಗಳನ್ನ ಕೇಳುತ್ತಿದ್ದಾರೆ. ನಿರ್ದೇಶಕರು ಹೇಳುವ ಕಥೆಗಳು ಒಪ್ಪಿಗೆ ಆದ್ಮೇಲೆ ಇತರ ಕೆಲಸಗಳು ಶುರು ಆಗುತ್ತದೆ. ಇದರ ಹೊರತಾಗಿ ಕಿಚ್ಚ ಸುದೀಪ್ ವರ್ಷಕ್ಕೆ ಎರಡೋ ಇಲ್ಲವೆ ಮೂರು ಚಿತ್ರ ಮಾಡುವ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ