ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa New Movie) ಅಭಿನಯದ ಮುಂದಿನ ಸಿನಿಮಾ ಯಾವುದು? ಅನೂಪ್ ಭಂಡಾರಿ (Anup Bhandari New Movie) ಮತ್ತು ಕಿಚ್ಚ ಸುದೀಪ್ ಸಿನಿಮಾ ಎಲ್ಲಿಗೆ ಬಂತು. ಇದರ ಬಗ್ಗೆ ಏನಾದರೂ ಈಗ ಅಪ್ಡೇಟ್ ಇದಿಯೇ? ವರ್ಷಕ್ಕೆ ಮೂರು ಸಿನಿಮಾ ಮಾಡಲು ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ. ಈ ಮೂರು ಸಿನಿಮಾಗಳಲ್ಲಿ ಅನೂಪ್ ಭಂಡಾರಿ ಅವರ ಚಿತ್ರವೂ ಇದೇ ಅಲ್ವೇ? ಸುದೀಪ್ ಸಿನಿಮಾಗಳಲ್ಲಿ ಮೊದಲು ಯಾವುದು ಅನೌನ್ಸ್ ಆಗುತ್ತದೆ. ವಿಕ್ರಾಂತ್ ರೋಣ (Vikrant Rona) ಚಿತ್ರದ ಡೈರೆಕ್ಟರ್ (Director Anoop Bhandari) ಅನೂಪ್ ಭಂಡಾರಿ ಏನ್ ಹೇಳುತ್ತಾರೆ? ನ್ಯೂಸ್-18 ಕನ್ನಡ ಡಿಜಿಟಲ್ಗೆ ಅನೂಪ್ ಹೇಳಿರೋ ವಿಷಯಗಳು ಏನು? ಈ ಎಲ್ಲ ಪ್ರಶ್ನೆಗಳ ಉತ್ತರದ ಒಂದು ಸ್ಟೋರಿ ಇಲ್ಲಿದೆ ಓದಿ.
ಸುದೀಪ್ ಮುಂದಿನ ಚಿತ್ರದ ಅಪ್ಡೇಟ್ಸ್ ಏನು?
ಅಭಿನಯ ಚಕ್ರವರ್ತಿ ಸುದೀಪ್ ಹೊಸ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ವಿಕ್ರಾಂತ್ ರೋಣ ಆದ್ಮೇಲೆ ಸುದೀಪ್ ಮುಂದಿನ ಚಿತ್ರದ ಬಗ್ಗೆ ಭಾರೀ ಕುತೂಹಲ ಇದೆ. ಈ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅಭಿಮಾನಿಗಳು ದಿನವೂ ಕಾತರದಿಂದಲೇ ಕಾಯುತ್ತಿದ್ದಾರೆ.
ಸುದೀಪ್ ಮುಂದಿನ ಸಿನಿಮಾಕ್ಕೆ ಸಂಬಂಧಿಸಿದಂತೆ ಕಥೆಗಳು ರೆಡಿ ಆಗುತ್ತಿವೆ. ವರ್ಷಕ್ಕೆ ಎರಡರಿಂದ ಮೂರು ಚಿತ್ರ ಮಾಡುವ ನಿರ್ಧಾರವನ್ನ ಸುದೀಪ್ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ನಿರ್ದೇಶಕರು ಕಥೆ ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಡೈರೆಕ್ಟರ್ ಅನೂಪ್ ಭಂಡಾರಿ ಚಿತ್ರದ ಕಥೆ ಬಹುತೇಕ ರೆಡಿ!
ವಿಕ್ರಾಂತ್ ರೋಣ ಚಿತ್ರ ಖ್ಯಾತಿಯ ಡೈರೆಕ್ಟರ್ ಅನೂಪ್ ಭಂಡಾರಿ ಕಥೆ ರೆಡಿ ಮಾಡಿಕೊಂಡಿದ್ದಾರೆ. ಕೊನೆಯವರೆಗೂ ಬದಲಾವಣೆಗಳು ಇರೋದೆ ಬಿಡಿ. ಅದರ ಹೊರತಾಗಿ ಡೈರೆಕ್ಟರ್ ಅನೂಪ್ ಭಂಡಾರಿ ಚಿತ್ರೀಕರಣದ ಮುಂಚಿನ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ಚಿತ್ರೀಕರಣದ ಮುಂಚಿನ ಕೆಲಸ ಈಗ ಭರದಿಂದಲೇ ಸಾಗಿದೆ. ಈ ಕೆಲಸದಲ್ಲಿ ಬ್ಯುಸಿ ಇರೋ ಡೈರೆಕ್ಟರ್ ಅನೂಪ್ ಭಂಡಾರಿ ತಮ್ಮ ಸುದೀಪ್ ಅವರ ಜೊತೆಗಿನ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ನಮ್ಮ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಶ್ರಮ ಕೂಡ ಬೇಕಿದೆ. ಇದೇ ಕೆಲಸದಲ್ಲಿ ಈಗ ಬ್ಯುಸಿ ಇದ್ದೇವೆ. ಸ್ಕ್ರೀಪ್ಟಿಂಗ್ ಒಂದು ಹಂತಕ್ಕೆ ಬಂದಿದೆ ಎಂದು ಅನೂಪ್ ಭಂಡಾರಿ ವಿವರಿಸಿದ್ದಾರೆ.
ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವಾಗ ಅನೌನ್ಸ್?
ಸುದೀಪ್ ಅವರ ಚಿತ್ರಕ್ಕಾಗಿ ನಾವು ರೆಡಿ ಆಗುತ್ತಿದ್ದೇವೆ. ಇದು ಬಿಗ್ ಸಿನಿಮಾನೇ ಆಗಲಿದೆ. ಬಿಗ್ ಬಜೆಟ್ನ ಸಿನಿಮಾ ಕೂಡ ಇದಾಗಿದೆ. ಪ್ರೋಡಕ್ಷನ್ ಯಾವುದು ಅನ್ನೋದನ್ನ ಸ್ವತಃ ಸುದೀಪ್ ಅವರೇ ಅನೌನ್ಸ್ ಮಾಡುತ್ತಾರೆ.
ಸುದೀಪ್ ಮುಂದಿನ ಸಿನಿಮಾಗಳು ಒಂದು ಕೆವಿಎನ್ ಇಲ್ಲವೆ ಕೆಆರ್ಜಿ ಸಂಸ್ಥೆ ಜೊತೆಗೆ ಆಗುತ್ತದೆ ಅನ್ನೋ ಮಾಹಿತಿ ಇದೆ. ಇದರಲ್ಲಿ ಯಾವ ಸಿನಿಮಾ ಮೊದಲು ಅನೌನ್ಸ್ ಆಗುತ್ತದೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.
ಇದನ್ನೂ ಓದಿ: Singer Mangli: ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದK ನಿಜಾನಾ? ಘಟನೆ ಬಗ್ಗೆ ಗಾಯಕಿ ಹೇಳಿದ್ದೇನು?
ಈ ಲೆಕ್ಕದಲ್ಲಿ ಒಂದು ಕಡೆಗೆ ಸುದೀಪ್ಗಾಗಿ ರನ್ನ ಚಿತ್ರದ ಡೈರೆಕ್ಟರ್ ನಂದ ಕಿಶೋರ್ ಕತೆ ಬರೆಯುತ್ತಿದ್ದಾರೆ. ಇನ್ನೊಂದು ಕಡೆಗೆ ಡೈರೆಕ್ಟರ್ ಅನೂಪ್ ಭಂಡಾರಿ ಬಿಗ್ ಸ್ಟಾರ್ ಸುದೀಪ್ ಅವರಿಗೆ ಬಿಗ್ ಕಥೆಯನ್ನೆ ಮಾಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಆದ್ಮೇಲೆ ಮತ್ತೊಂದು ಬಿಗ್ ಸಿನಿಮಾ ಮಾಡೋಕೆ ಅನೂಪ್ ಭಂಡಾರಿ ರೆಡಿ ಆಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ