ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಲ್ಲರ (Sudeepa Latest Tweet) ಮನದಲ್ಲಿ ಒಂದು ಹೊಸ ಅಲೆ ಎಬ್ಬಿಸಿದ್ದಾರೆ. ಹಾಗೆ ಸುಮ್ನೆ ನೋಡಲು ಬಂದವ್ರಿಗೆ ಮನದುಂಬಿ ಥ್ಯಾಂಕ್ಸ್ ಹೇಳಿದ್ದಾರೆ. ದೂರ ದೂರದಿಂದ ಓಡಿ ಬಂದವರಿಗೂ (Kannada Actor Kichcha Sudeepa) ಧನ್ಯತಾ ಭಾವದಲ್ಲಿಯೇ ನೋಡಿದ್ದಾರೆ. ತಮ್ಮ ರಕ್ಷಣೆಗೆ ನಿಂತ ಪೊಲೀಸ್‌ರ ಬಗ್ಗೆನೂ ಸಿನಿಮಾದ ಕೆಂಪೇಗೌಡರು ಪ್ರೀತಿಯಿಂದಲೇ ಕಂಡಿದ್ದಾರೆ. ಜೊತೆ (Latest Tweet now got viral) ಜೊತೆಗೆ ಹೆಜ್ಜೆ ಹಾಕಿರೋ ಗೆಳೆಯರಿಗೆ ಪ್ರೀತಿಯಿಂದಲೇ ಥ್ಯಾಂಕ್ಸ್ ಅಂತ ಹೇಳಿದ್ದಾರೆ. ಈ ಎಲ್ಲ ಥ್ಯಾಂಕ್ಸ್ ಯಾಕೆ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಒಂದು ಸುಂದರ (Kichcha Sudeepa Updates) ಲೆಟರ್ ಕಥೆ ಓದಿ.
ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ ಎಂದು ಕಿಚ್ಚ ಬರೆದಿದ್ದೇಕೆ?
ಕಿಚ್ಚ ಸುದೀಪ್ ಅವರಿಗೆ ಟ್ವಿಟರ್ ಒಂದು ಅದ್ಭುತ ವೇದಿಕೆ ಆಗಿದೆ. ಇಲ್ಲಿ ಕಿಚ್ಚನ ಪ್ರತಿ ಭಾವನೆಗಳು ನೇರವಾಗಿಯೇ ವ್ಯಕ್ತವಾಗುತ್ತವೆ. ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಲು ಕಿಚ್ಚನಿಗೆ ಇದೊಂದು ಕನೆಕ್ಟಿಂಗ್ ಪಾಯಿಂಟ್ ಕೂಡ ಆಗಿದೆ.
ಟ್ವಿಟರ್ ಅನ್ನ ಯಾರಾರೋ ಹೇಗೇಗೋ ಬಳಸುತ್ತಾರೆ. ಕಿಚ್ಚ ಆ ವಿಷಯದಲ್ಲಿ ತುಂಬಾ ಸ್ಪೆಷಲ್ ಅನಿಸುತ್ತದೆ. ತಮ್ಮ ಅಭಿಮಾನಿಗಳಿಗೆ ಒಂದು ವೇದಿಕೆ ಮೂಲಕವೇ ಸದಾ ಟಚ್ ಅಲ್ಲೂ ಇರ್ತಾರೆ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಸದಾ ಆ್ಯಕ್ಟೀವ್
ಇಂತಹ ಒಂದು ವೇದಿಕೆಯಲ್ಲಿಯೇ ಅನೇಕರ ಕೋರಿಕೆಗೆ ಕಿಚ್ಚ ಸುದೀಪ್ ರಿಪ್ಲೈ ಕೂಡ ಮಾಡುತ್ತಾರೆ. ಒಳ್ಳೆಯ ವಿಚಾರ ಅನಿಸಬೇಕು ಅಷ್ಟೆ. ಹಾಗೇನಾದ್ರೂ ಇದ್ರೆ, ಜನ್ಮ ದಿನಕ್ಕೋ ಅಭಿಮಾನಿಗಳ ಮದುವೆ ಸಂಭ್ರಮಕ್ಕೋ ಶುಭ ಹಾರೈಸೋದು ಇದೆ.
ಟ್ವಿಟರ್ ಪೇಜ್ ಅಲ್ಲಿ ಕಿಚ್ಚನ ಪ್ರೀತಿ ತುಂಬಿದ ಪತ್ರ
ಆದರೆ ಕಿಚ್ಚ ಸುದೀಪ್ ತಮ್ಮ ಅಧಿಕೃತ ಪೇಜ್ ಅನ್ನ ಈ ಬಾರಿ ಥ್ಯಾಂಕ್ಸ್ ಹೇಳೋಕೆ ಬಳಸಿದ್ದಾರೆ. ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡಿದಾಗ ಹಲವು ಅನುಭವ ಆಗಿವೆ. ಆ ಎಲ್ಲ ಅನುಭವದ ಸಾರದಂತೇನೆ ತಮ್ಮ ಪ್ರಚಾರದ ಪಯಣದಲ್ಲಿ ಕಂಡು ಬಂದ ಪ್ರತಿಯೊಬ್ಬರಿಗೂ ಕಿಚ್ಚ ಮನದುಂಬಿ ಥ್ಯಾಂಕ್ಸ್ ಹೇಳಿದ್ದಾರೆ.
ಪ್ರಚಾರದ ಪಯಣದಲ್ಲಿ ಸಾಥ್ ಕೊಟ್ಟವರಿಗೆ ಕಿಚ್ಚನ ಥ್ಯಾಂಕ್ಸ್
ಕಿಚ್ಚ ಸುದೀಪ್ ಬರೆದ ಸಾಲಿನಲ್ಲಿ ಪ್ರತಿ ಸಾಲಲ್ಲೂ ಧನ್ಯತಾ ಭಾವ ಇದೆ. ಪ್ರೀತಿ ತುಂಬಿದ ಭಾವನೆಗಳೇ ಇಲ್ಲಿ ಸಾಲುಗಳಾಗಿವೆ ಅನಿಸುತ್ತದೆ. ತಮ್ಮ ಪ್ರಚಾರದ ಪಯಣದಲ್ಲಿ ಪೊಲೀಸರಿದ್ದರು... ಕಮಾಂಡೋಗಳೂ ಬಂದಿದ್ದರು. ಲಕ್ಷಾಂತರ ಕಾರ್ಯಕರ್ತರಿದ್ದರು..
ಪೊಲೀಸರಿಂದ ಲಾಠಿ ಏಟು ತಿಂದ ತಮ್ಮ ಅಭಿಮಾನಿಗಳೂ ಇದ್ದರು. ಅವರ ಈ ಒಂದು ಅಪಾರ ಪ್ರೀತಿಗೆ ಕಿಚ್ಚ ಬರೆದ ಸಾಲುಗಳಿಗೆ ತುಂಬಾನೇ ಅರ್ಥ ಇದೆ. ಅದು ಇಂತಿದೆ.
ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ...
ನನ್ನ ಬದುಕಿನ ರೀತಿ...
ನಿಮ್ಮ ನಿರಂತರ ರಣಕೇಕೆ..
ಸಾಕಿಷ್ಟು ಈ ಜನುಮಕೆ...
ಅಭಿಮಾನಿಗಳಿಗಾಗಿಯೇ ಕಿಚ್ಚನ ಪ್ರೀತಿಯ ಪತ್ರ
ಹೀಗೆ ಸಾಗೋ ಸಾಲಿನಲ್ಲಿ ಕಿಚ್ಚ ಸುದೀಪ್ ತಮ್ಮ ಮನದ ಭಾವನೆಯನ್ನ ಕಟ್ಟಿಕೊಟ್ಟಿದ್ದಾರೆ. ಕಿಚ್ಚನ ಈ ಒಂದು ಪ್ರೀತಿಯ ಪತ್ರದಲ್ಲಿ ಪ್ರಚಾರದ ಪಯಣದಲ್ಲಿ ಸಾಥ್ ಕೊಟ್ಟ ಗೆಳೆಯರಿಗೂ ಥ್ಯಾಂಕ್ಸ್ ಪಾಲಿದ್ದು, ಎಲ್ಲರಿಗೂ ನಾನು ಚಿರರುಣಿ. ಪ್ರೀತಿಯಿಂದ ನಿಮ್ಮ ಕಿಚ್ಚ ಅಂತಲೇ ಪತ್ರವನ್ನ ಎಂಡ್ ಮಾಡುತ್ತಾರೆ.
ಇದನ್ನೂ ಓದಿ: Adipurush: ಆದಿಪುರುಷ ರಾಮನ ಅವತಾರ ಕಂಡು 'ಜೈ ಶ್ರೀರಾಮ್' ಎಂದ್ರು ಪ್ರಭಾಸ್ ಫ್ಯಾನ್ಸ್
ಕಿಚ್ಚ ಸುದೀಪ್ ಅವರ ಈ ಒಂದು ಪ್ರೀತಿ ಪತ್ರದ ಸಾಲಿನಲ್ಲಿ ರಿಯಲ್ ಭಾವನೆಗಳೇ ಕಂಡು ಬರುತ್ತವೆ. ಆ ಭಾವನೆಗಳನ್ನ ಸಾಲುಗಳಲ್ಲಿ ಬರೆದು ತಿಳಿಸಿದ ಕಿಚ್ಚನ ಸುದೀಪ್ ಅವರ ಈ ಲೆಟರ್ ಇದೀಗ ಹೆಚ್ಚು ಗಮನ ಸೆಳೆಯುತ್ತಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ