ಕನ್ನಡ ಚಿತ್ರರಂಗದಲ್ಲಿ ಇರೋ ಸ್ಟಾರ್ಗಳ (Kichcha Sudeepa) ಅಭಿಮಾನಿಗಳು ಅಪ್ಡೇಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಪ್ರೀತಿಯಿಂದಲೇ ಹೇಳಿಕೊಳ್ತಾರೆ. ಆದರೆ ಈ ಹಿಂದೆ ಇಂತಹ (social media Pages) ಬೆಳವಣಿಗೆ ಇರಲಿಲ್ಲ. ಅಭಿಮಾನಿಗಳು ಅಂದ್ರೆ ಅಂದು ಥಿಯೇಟರ್ ಮುಂದೆ ಸ್ಟಾರ್ಗಳನ್ನ ಕಟ್ಟೋದೇ ಒಂದು ಖುಷಿ ಆಗಿರುತ್ತಿತ್ತು. ಒಂದು ಸಿನಿಮಾ (Kannada Cinema) ಬರಬೇಕು ಅಂದ್ರೆ ಹೆಚ್ಚು ಕಡಿಮೆ ಒಂದು ವರ್ಷವೇ ಬೇಕಾಗಿತ್ತು. ಆಗ ಮಾತ್ರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಪೋಸ್ಟರ್ಗಳಿಗೆ ಸ್ಟಾರ್ ಕಟ್ಟಿ ಹಬ್ಬ ಮಾಡುತ್ತಿದ್ದರು. ಈಗ ನೆಚ್ಚಿನ ನಾಯಕನ ಪ್ರತಿ ವಿಷಯವನ್ನ ಕೂಡ ಸೆಲೆಬ್ರೇಟ್ ಮಾಡಬಹುದು. ತಾವೆಲ್ಲಿ ಇರ್ತಾರೋ (Sandalwood Fans) ಅಲ್ಲಿಂದಲೇ ಆಯಾ ಅಭಿಮಾನಿಗಳು ಹಬ್ಬ ಮಾಡಬಹುದು.
ಅಷ್ಟು ಅನುಕೂಲತೆ ಇರೋ ಈ ಟೈಮ್ನಲ್ಲಿ ಕನ್ನಡದ ಬಹುತೇಕ ಸ್ಟಾರ್ಗಳ ಅಭಿಮಾನಿಗಳು ಟ್ವಿಟರ್ನಲ್ಲಿದ್ದಾರೆ. ಆದರೆ ಎಲ್ಲರ ಪೇಜ್ ವೆರಿಫೈ ಆಗೋದಿಲ್ಲ. ಈ ವಿಷಯದಲ್ಲಿ ಕಿಚ್ಚನ ಅಭಿಮಾನಿಗಳು ಒಂದು ಕೈ ಮುಂದೆ ಇದ್ದಾರೆ ನೋಡಿ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟರ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳ ಪ್ರತಿ ವಿಷಯಕ್ಕೂ ಸ್ಪಂಧಿಸುತ್ತಾರೆ. ಪ್ರತಿ ವಿಚಾರದಲ್ಲೂ ಅಳೆದು-ತೂಗಿ ರಿಯ್ಯಾಕ್ಟ್ ಮಾಡ್ತಾರೆ.
ನೆಚ್ಚಿನ ನಾಯಕನ ಪ್ರತಿ ಹಂತವನ್ನೂ ಸೆಲೆಬ್ರೇಟ್ ಮಾಡ್ತಾರೆ ಫ್ಯಾನ್ಸ್
ಹಾಗೇ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಕಿಚ್ಚನನ್ನ ಆರಾಧಿಸುತ್ತಲೇ ಇರ್ತಾರೆ. ಅಭಿನಯ ಚಕ್ರವರ್ತಿಯ ಪ್ರತಿ ಹಂತವನ್ನೂ ಸೆಲೆಬ್ರೇಟ್ ಮಾಡುತ್ತಾರೆ. ಜನ್ಮ ದಿನ ಬಂದ್ರೆ, ತಮ್ಮ ನೆಚ್ಚಿನ ನಾಯಕ ಸುದೀಪ್ ಅವರ ಡಿಪಿ ಡಿಸೈನ್ ಮಾಡುತ್ತಾರೆ. ತಮ್ಮ ಕಿಚ್ಚನ ಬಳಗಕ್ಕೆ ಶೇರ್ ಮಾಡಿ ಅದನ್ನ ಹಬ್ಬ ಮಾಡುತ್ತಾರೆ.
ಅಭಿಮಾನಿಗಳು ಆಯಾ ಸ್ಟಾರ್ ನಟರ ಪ್ರತಿಬಿಂಬ!
ಸುದೀಪ್ ಅಭಿಮಾನಿಗಳು ಸುದೀಪ್ ರೀತಿನೇ ಯೋಚನೆ ಮಾಡುತ್ತಾರೆ. ಅವರ ಹಾದಿಯಲ್ಲಿಯೇ ಸಾಗುತ್ತಾರೆ ಅಂತಲೆ ಹೇಳಬಹುದು. ಇದೇ ರೀತಿ ಇತರ ಸ್ಟಾರ್ ನಟರು ಈ ವಿಷಯದಲ್ಲಿ ಹಾಗೇ ಇರ್ತಾರೆ.
ತಮ್ಮ ಪ್ರೀತಿಯ ನಾಯಕ ನಟನ ಹಾಗೇನೆ ಯೋಚನೆ ಮಾಡುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಇರಬಹುದು, ಸಾಹಸ ಸಿಂಹ ವಿಷ್ಣು ಅಭಿಮಾನಿಗಳೇ ಆಗಿರಬಹುದು, ಇಲ್ಲವೇ ಅಪ್ಪು ಫ್ಯಾನ್ಸ್ ಇರಬಹುದು, ಎಲ್ಲರೂ ತಮ್ಮ ನೆಚ್ಚಿನ ನಾಯಕನ್ನ ಆರಾಧಿಸುತ್ತಾರೆ.
ಸ್ಟಾರ್ ನಟರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ನಾಯಕ ನಟರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆ್ಯಕ್ಟೀವ್ ಆಗಿದ್ದಾರೆ. ಕನ್ನಡದ ಪ್ರತಿಯೊಬ್ಬ ನಾಯಕ ನಟನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿಯೇ ಪೇಜ್ಗಳನ್ನ ಮಾಡಿಕೊಂಡಿದ್ದಾರೆ.
ತಮ್ಮ ವಿಶೇಷ ಪೇಜ್ಗಳ ಮೂಲಕ ತಮ್ಮ ನಾಯಕನ ಸಿನಿಮಾಗಳ ಬಗ್ಗೆ ಎಲ್ಲ ಮಾಹಿತಿಯನ್ನ ಕೊಡ್ತಾರೆ. ಇಲ್ಲವೇ, ತಮ್ಮ ಪ್ರೀತಿಯನ್ನು ಕೂಡ ಈ ಒಂದು ಪೇಜ್ಗಳಲ್ಲಿ ಹಂಚಿಕೊಳ್ತಾರೆ.
ಫ್ಯಾನ್ ಪೇಜ್ ವೆರಿಫೈ ಅಗಿರೋದೇ ವಿಶೇಷ
ಸೋಷಿಯಲ್ ಮೀಡಿಯಾದಲ್ಲಿ ಇಲ್ಲಿವರೆಗೂ ಫ್ಯಾನ್ಸ್ ಪೇಜ್ಗಳು ವೆರಿಫೈ ಆಗಿರೋದು ಕಡಿಮೆ ಅಂತಲೇ ಹೇಳಬಹುದು. ಟ್ವಿಟರ್ನಲ್ಲಿ ಅದು ಅಷ್ಟು ಸುಲಭಕ್ಕೆ ಆಗೋ ಮಾತು ಕೂಡ ಅಲ್ಲ ಅಂತಲೇ ಹೇಳಬಹುದು.
ಈ ವಿಷಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾನ್ಸ್ ಲಕ್ಕಿ ಆಗಿದ್ದಾರೆ. ಟ್ವಿಟರ್ನಲ್ಲಿ ಈಗಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳ ಸಾಕಷ್ಟು ಪೇಜ್ಗಳಿವೆ.
ಕಿಚ್ಚ ಸುದೀಪ್ ಅಭಿಮಾನಿಗಳ ಪೇಜ್ಗೆ ಬ್ಲೂ ಟಿಕ್!
ಆದರೆ ಇವುಗಳಲ್ಲಿ ಒಂದು ಪೇಜ್ ಈಗ ಟ್ವಿಟರ್ ವೆರಿಫೈ ಮಾಡಿದೆ. ಈ ವೆರಿಫಿಕೇಷನ್ ಪ್ರೋಸಸ್ ಅಷ್ಟು ಸುಲಭವೂ ಅಲ್ಲ ಬಿಡಿ. ಅದು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಅವಶ್ಯಕ ದಾಖಲೆಗಳನ್ನ ಕೊಡಬೇಕು.
ಆ ಎಲ್ಲವನ್ನು ಕೊಟ್ಟ ಮೇಲೆ ಎಲ್ಲವೂ ಸರಿ ಇದ್ರೆ, ಆಯಾ ಪೇಜ್ ವೆರಿಫೈ ಆಗುತ್ತದೆ. ಬ್ಲೂ ಟಿಕ್ ಕೂಡ ಬರುತ್ತದೆ. ಅದೇ ರೀತಿ ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಪೇಜ್ ಒಂದು ವೆರಿಫೈ ಆಗಿದೆ.
"Kiccha Universe" ಅನ್ನೋ ಟ್ವಿಟರ್ ಪೇಜ್ ವೆರಿಫೈ
"Kiccha Universe" ಅನ್ನೋ ಪೇಜ್ ಈಗ ವೆರಿಫೈ ಆಗಿದೆ. ಈ ಒಂದು ಪೇಜ್ಲ್ಲಿ ಕಿಚ್ಚನ ಸಿನಿಮಾಗಳ ಮಾಹಿತಿ ದೊರೆಯುತ್ತದೆ. ಅಭಿನಯ ಚಕ್ರವರ್ತಿಯ ಕುರಿತ ಎಲ್ಲ ಮಾಹಿತಿಗಳು ಇಲ್ಲಿ ಲಭ್ಯವಾಗುತ್ತವೆ.
ಅಂತಹ ಈ ಪೇಜ್ನ್ನ ಟ್ವಿಟರ್ ಈಗ ವೆರಿಫೈ ಮಾಡಿದೆ. ಬ್ಲೂ ಟಿಕ್ ಕೂಡ ಈ ಒಂದು ಪೇಜ್ಗೆ ಬಂದಿದೆ. ಇದೇ ಖುಷಿಯನ್ನ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Pawan Wadeyar: ಗೂಗ್ಲಿ ಡೈರೆಕ್ಟರ್ ಮೊದಲ ಹಿಂದಿ ಸಿನಿಮಾ ಎಲ್ಲಿಗೆ ಬಂತು? ಏನ್ ಹೇಳ್ತಾರೆ ಪವನ್ ಒಡೆಯರ್?
ಸುದೀಪ್ ಅಭಿಮಾನಿಗಳ ಪೇಜ್ ವೆರಿಫೈ
ಇಲ್ಲಿವರೆಗೂ ಇರೋ ಇತರ ಪೇಜ್ಗಳು ಈ ಒಂದು ಪೇಜ್ಗೆ ಶುಭಾಶಯಗಳ ಮಳೆಯನ್ನೆ ಸುರಿಸುತ್ತಿವೆ. ಮೊಟ್ಟ ಮೊದಲ ಬಾರಿಗೆ ಅಭಿಮಾನಿಗಳ ಪೇಜ್ ವೆರಿಫೈ ಆಗಿದೆ.
ಅದರಲ್ಲೂ ಕರುನಾಡ ಬಾದ ಷಾ ಸುದೀಪ್ ಅವರ ಅಭಿಮಾನಿಗಳ ಪೇಜ್ ವೇರಿಫೈ ಅಗಿದೆ ಅನ್ನೋದನ್ನ ಅಷ್ಟೇ ಖುಷಿಯಿಂದಲೇ ಹೇಳಿಕೊಳ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ