ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಹೆಚ್ಚು ಕಡಿಮೆ 27 ವರ್ಷ (Sudeepa Completes 27 Years) ಆಗಿದೆ. ಒಬ್ಬ ನಟರಾಗಿ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟ ಕಿಚ್ಚ ಸುದೀಪ್, ಈಗ ಹಿಂದೆ ತಿರುಗಿ ನೋಡಿದ್ರೆ, 27 ವರ್ಷಗಳೇ ಕಳೆದಿವೆ. ಅವುಗಳಲ್ಲಿ ಎಲ್ಲವನ್ನೂ ಲೆಕ್ಕ ಹಾಕಿದ್ರ, ಅಲ್ಲಿ ಸುದೀಪ್ ಒಬ್ಬ ನಟರಾಗಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕರಾಗಿ (Director Sudeepa) ಹೊಳೆಯುತ್ತಾರೆ. ಸಿಂಗರ್ ಆಗಿ ನೆನಪಿಗೆ ಬರ್ತಾರೆ. ನಿರೂಪಕರಾಗಿ (Bigg Boss Supeepa) ಕಂಗೊಳಿಸುತ್ತಾರೆ. ಪರ ಭಾಷೆಯಲ್ಲೂ ಮಿಂಚಿ ಬಂದ ಕನ್ನಡದ ನಾಯಕ ನಟರಾಗಿ ಹೆಮ್ಮೆ ಪಡುವಂತೆ ಮಾಡುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 27 ವರ್ಷದಲ್ಲಿ ಇಷ್ಟೆಲ್ಲ ಆಗಿದ್ದಾರೆ. ಈ ಹಳೆ ದಿನಗಳನ್ನ ಸ್ವತಃ ಸುದೀಪ್ ಈಗ ಮೆಲುಕು ಹಾಕಿದ್ದಾರೆ.
ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಜರ್ನಿಯ ಒಂದು ಸ್ಟೋರಿ ಇಲ್ಲಿದೆ ಓದಿ.
ಅಭಿನಯ ಚಕ್ರವರ್ತಿ ಸುದೀಪ್ ಸಿನಿ ಜರ್ನಿ ಅಮರ ನೆನಪು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 1997 ರಲ್ಲಿ ತಾಯವ್ವ ಚಿತ್ರದ ಮೂಲಕ ಬಣ್ಣ ಹಚ್ಚಿದ್ದರು. ಅದಾದ ಮೇಲೆ ರಮೇಶ್ ಅರವಿಂದ್ ಅಭಿನಯ ದ ಪ್ರತ್ಯರ್ಥ ಚಿತ್ರದಲ್ಲಿ ಅಭಿನಯಿಸಿದ್ದರು. 2000 ರಲ್ಲಿ ತೆರೆಗೆ ಬಂದ ಸ್ಪರ್ಶ ಚಿತ್ರ ಕಿಚ್ಚನ ವಿಶೇಷ ಚಿತ್ರವೇ ಆಗಿತ್ತು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಸುದೀಪ್ ಕನ್ನಡಿಗರಿಗೆ ಪರಿಚಯ ಆದರು.
ಕಿಚ್ಚನ ಪ್ರತಿಭೆಯನ್ನು ಕನ್ನಡಕ್ಕೆ ಪರಿಚಯಿಸಿದ ಹುಚ್ಚ ಸಿನಿಮಾ
ಕಿಚ್ಚನ ಚಿತ್ರ ಜೀವನದಲ್ಲಿ ಸುನಿಲ್ ಕುಮಾರ್ ದೇಸಾಯಿ, ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅದರಂತೆ 2001 ರಲ್ಲಿ ತೆರೆಗೆ ಬಂದ ಹುಚ್ಚ ಚಿತ್ರ ಕಿಚ್ಚನ ಇಡೀ ಜೀವನ ಬದಲಿಸಿ ಬಿಡುತ್ತದೆ.
ಹುಚ್ಚ ಚಿತ್ರದ ಮೂಲಕ ಇಡೀ ಕನ್ನಡನಾಡಿನ ಕನ್ನಡಿಗರಿಗೆ ಕಿಚ್ಚ ಪರಿಚಯ ಆದರು.ಈ ಚಿತ್ರದ ಅಭಿನಯ ನಿಜಕ್ಕೂ ಕಿಚ್ಚನಲ್ಲಿರೋ ಅಷ್ಟೂ ಪ್ರತಿಭೆಯನ್ನ ತೋರಿಸಿತ್ತು ಅಂದ್ರೆ ತಪ್ಪಿಲ್ಲ. ಅಲ್ಲಿಂದ ಕಿಚ್ಚ ಸುದೀಪ್ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಮುನ್ನುಗ್ಗುತ್ತಲೇ ಸಾಗಿದರು.
View this post on Instagram
ಅವಕಾಶಗಳನ್ನು ಕೊಟ್ಟ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕೆ ಹಿಂದಿ, ತಮಿಳು, ತೆಲುಗು ಇಂಡಸ್ಟ್ರಿಗಳಿಗೂ ಧನ್ಯವಾದಗಳು ಎಂದಿದ್ದಾರೆ.
ಪರ ಭಾಷೆಯಲ್ಲೂ ಮಿಂಚಿದ ಕಿಚ್ಚ ಸುದೀಪ್
ಹುಚ್ಚ ಚಿತ್ರದ ಬಳಿಕ ಸುದೀಪ್ ಸಾಕಷ್ಟು ಸಿನಿಮಾ ಮಾಡಿದರು. ವಾಲಿ, ಚಂದು, ಧಮ್, ನಂದಿ, ಕಿಚ್ಚ, ರಂಗ ಎಸ್.ಎಸ್.ಎಲ್.ಸಿ, ಕೆಂಪೇಗೌಡ, ವೀರಮದಕರಿ, ಕೋಟಿಗೊಬ್ಬ, ವಿಷ್ಣುವರ್ಧನ, ಪೈಲ್ವಾನ್, ವಿಕ್ರಾಂತ್ ರೋಣ ಚಿತ್ರದಲ್ಲೂ ಅಭಿನಯಿಸಿ ಪ್ರೇಕ್ಷಕರ ದಿಲ್ ಕದ್ದೇ ಬಿಟ್ಟರು. ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾದ ಒಂದು ಸ್ಥಾನ ಮಾಡಿಕೊಂಡರು ನೋಡಿ.
ಸುದೀಪ್ ಇಲ್ಲಿವರೆಗೆ ಹೆಚ್ಚು ಕಡಿಮೆ ಎಲ್ಲ ಭಾಷೆ ಸೇರಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಈ ಲೆಕ್ಕದಲ್ಲಿ ನಟನೆನೂ ಇದೆ. ನಿರ್ದೇಶನ ಕೂಡ ಇದೆ. ಹೀಗೆ ಸಾಗಿ ಬಂದ ಕಿಚ್ಚ ಸುದೀಪ್ ಕೇವಲ ಒಬ್ಬ ನಟರಾಗಿ ಒಬ್ಬ ನಿರ್ದೇಶಕರಾಗಿ ಉಳಿಯಲಿಲ್ಲ. ಕಿಚ್ಚ ಸುದೀಪ್ ಸಿಂಗರ್ ಆಗಿ ಹೊಳೆದರು. ನಿರೂಪಕರಾಗಿ ಕಂಗೊಳಿಸಿದರು.
ಕಿಚ್ಚನ ನಿರ್ದೇಶನದಲ್ಲಿ ಎಷ್ಟು ಸಿನಿಮಾ ಬಂದಿವೆ ಗೊತ್ತೇ?
ಸುದೀಪ್ ಚಿತ್ರ ನಿರ್ದೇಶನದಲ್ಲೂ ಇಂಟ್ರಸ್ಟ್ ಇಟ್ಟುಕೊಂಡಿದ್ದಾರೆ. ಮೈ ಆಟೋಗ್ರಾಫ್, ವೀರಮದಕರಿ, ಜಸ್ಟ್ ಮಾತ್ ಮಾತಲಿ, ಕೆಂಪೇಗೌಡ ಚಿತ್ರಗಳನ್ನ ನಿರ್ದೇಶನ ಕೂಡ ಮಾಡಿ ಇದರಲ್ಲೂ ಸೈ ಎನಿಸಿಕೊಂಡರು.
ಟಾಲಿವುಡ್ನಲ್ಲಿ ಕಿಚ್ಚನ ಈಗ ಚಿತ್ರದ ದೊಡ್ಡ ಹವಾ
ಎಸ್.ಎಸ್.ರಾಜಮೌಳಿ ನಿರ್ದೇಶನದ "ಈಗ" ಚಿತ್ರ ಕನ್ನಡದ ಕಿಚ್ಚನ ಇಮೇಜ್ ಬದಲಿಸಿತ್ತು. ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ಕಿಚ್ಚ ಸುದೀಪ್ "ಈಗ" ಚಿತ್ರದ ಮೂಲಕ ಎಲ್ಲರಿಗೂ ಪರಿಚಯ ಆಗಿದ್ದರು. "ಈಗ" ಚಿತ್ರ ಆದ್ಮೇಲೆ ಕಿಚ್ಚ ಸುದೀಪ್ ಬಾಹುಬಲಿ ಚಿತ್ರದಲ್ಲಿ ಅಸ್ಲಮ್ ಖಾನ್ ಪಾತ್ರದಲ್ಲಿ ಅಭಿನಯಿಸಿದ್ದರು.
ಕಿಚ್ಚ ಸುದೀಪ್ ಚಿತ್ರ ಜೀವನದಲ್ಲಿ ಬಾಲಿವುಡ್ ಕೂಡ ಅಷ್ಟೆ ಪ್ರಮುಖ ಪಾತ್ರವಹಿಸುತ್ತದೆ. ಕಿಚ್ಚ ಸುದೀಪ್ ಡೈರೆಕ್ಟರ್ ರಾಮ್ಗೋಪಾಲ್ ವರ್ಮಾ ಅವರ "ಫೂಂಕ್" ಚಿತ್ರದ ಮೂಲಕ ಬಾಲಿವುಡ್ಗೂ ಎಂಟ್ರಿ ಕೊಟ್ಟರು. ಈ ಚಿತ್ರದ ಎರಡೂ ಸರಣಿಯ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದರು.
ಅಮಿತಾಭ್ ಬಚ್ಚನ್ ಜೊತೆಗೆ ಕಿಚ್ಚ ಸುದೀಪ್ ಅಭಿನಯ
ಅಭಿನಯ ಚಕ್ರವರ್ತಿ ಸುದೀಪ್ ಬಿಗ್ ಬಿ ಅಮಿತಾಭ್ ಅವರ ಜೊತೆಗೂ ಅಭಿನಯಿಸಿದ್ದರು. "ರಣ್" ಚಿತ್ರದ ಅಮಿತಾಭ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಕಿಚ್ಚ ಸುದೀಪ್ ಭೇಷ್ ಎನಿಸಿಕೊಂಡರು. ಇದಾದ್ಮೇಲೆ ಸಲ್ಮಾನ್ ಖಾನ್ ಅಭಿನಯದ "ದಬಾಂಗ್" ಚಿತ್ರದಲ್ಲೂ ಕಿಚ್ಚ ಸುದೀಪ್ ಅಭಿನಯಿಸಿದ್ದರು.
ಹೀಗೆ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ನಲ್ಲಿ ಮಿಂಚುತ್ತಲೇ ಇರೋ ನಟ ಸುದೀಪ್ ಬಿಗ್ ಬಾಸ್ ಮೂಲಕ ಮನೆ ಮನೆಗೂ ಕಾಲಿಟ್ಟರು. ಮನೆ ಮಂದಿಯ ಫೇವರಿಟ್ ನಿರೂಪಕ ಕೂಡ ಆದರು. ಬೇರೆ ಬೇರೆ ಸಿನಿಮಾಗಳಲ್ಲಿ ವಿಶೇಷ ಪಾತ್ರಗಳನ್ನ ಮಾಡೋ ಮೂಲಕ ಸಪೋರ್ಟ್ ಕೂಡ ಮಾಡಿದರು.
ಇದನ್ನೂ ಓದಿ: Dasara Teaser: ಉತ್ತರ ಕರ್ನಾಟಕ ಭಾಷೆ ಮಾತನಾಡಿದ ನಾನಿ! ದಸರಾ ಟೀಸರ್ ವೈರಲ್
ಇದಕ್ಕೂ ಹೆಚ್ಚಾಗಿ ಕೆಲವು ಚಿತ್ರಗಳ ಕಥೆಯನ್ನ ನಿರೂಪಿಸಿದ್ದು ಇದೆ. ಹೀಗೆ ಸುದೀಪ್ ತಮ್ಮ ಚಿತ್ರ ಜೀವನದಲ್ಲಿ ಬಂದ ಅಷ್ಟು ಅವಕಾಶಗಳನ್ನ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅವುಗಳಿಗೆ ನ್ಯಾಯ ಒದಗಿಸಿದ್ದಾರೆ. ಈ ಒಂದು 27 ವರ್ಷದ ಏರಿಳಿತದ ಸಕ್ಸಸ್ಫುಲ್ ಜರ್ನಿಯಲ್ಲಿ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಸುದೀಪ್ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ