• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kichcha Sudeepa: ಡಾಲಿ ನಿಮ್ಮ ಪಾತ್ರಕ್ಕೆ ಮೀಸೆ ಯಾಕಿಲ್ಲ? ಕಿಚ್ಚ ಪ್ರಶ್ನೆಗೆ ಧನಂಜಯ್ ಕೊಟ್ಟ ಆನ್ಸರ್ ಇಂಟ್ರೆಸ್ಟಿಂಗ್

Kichcha Sudeepa: ಡಾಲಿ ನಿಮ್ಮ ಪಾತ್ರಕ್ಕೆ ಮೀಸೆ ಯಾಕಿಲ್ಲ? ಕಿಚ್ಚ ಪ್ರಶ್ನೆಗೆ ಧನಂಜಯ್ ಕೊಟ್ಟ ಆನ್ಸರ್ ಇಂಟ್ರೆಸ್ಟಿಂಗ್

ಖಡಕ್ ಪೊಲೀಸ್ ಆಫೀಸರ್ ಹೊಯ್ಸಳಗೆ ಮೀಸೆ ಯಾಕಿಲ್ಲ?

ಖಡಕ್ ಪೊಲೀಸ್ ಆಫೀಸರ್ ಹೊಯ್ಸಳಗೆ ಮೀಸೆ ಯಾಕಿಲ್ಲ?

ಖಡಕ್ ಪೊಲೀಸ್ ಆಫೀಸರ್ ಹೊಯ್ಸಳ ಇಲ್ಲಿ ಅಬ್ಬರಿಸಿದ್ದಾರೆ. ಮುಲಾಜಿಲ್ಲದೆ ರೌಡಿಗಳನ್ನ ಇಲ್ಲಿ ಮಟ್ಟಹಾಕಿದ್ದಾರೆ. ಜಬರ್‌ ದಸ್ತ್ ಡೈಲಾಗ್‌ ಹೊಡೆದು ಘರ್ಜಿಸಿದ್ದಾರೆ. ಆದರೆ ಈ ಒಂದು ಪಾತ್ರದಲ್ಲಿ ಒಂದು ವಿಷಯ ಮಿಸ್ಸಿಂಗ್ ಇದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:
  • published by :

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ತಮ್ಮ ಚಿತ್ರ ಜೀವನದಲ್ಲಿ ಸಾಕಷ್ಟು ಪಾತ್ರಗಳನ್ನ ಮಾಡಿದ್ದಾರೆ. ವಿಭಿನ್ನ ಕಥೆಗಳೊಂದಿಗೆ ಸ್ಪೆಷಲ್ ಆಗಿಯೇ ಬೆಳ್ಳಿ ತೆರೆ ಮೇಲೆ ಬಂದಿದ್ದಾರೆ. ಆದರೆ ಪೊಲೀಸ್ ಪಾತ್ರ ಅಂತ (Hoysala Movie Release Soon) ಬಂದ್ರೆ ಸುದೀಪ್ ಗತ್ತು ವಿಭಿನ್ನವಾಗಿಯೇ ಇದೆ. ಹಾಗಿರೋವಾಗ ಇವರ ಪೊಲೀಸ್ ಪಾತ್ರ ಹಾಗೂ ಮೀಸೆ ಲುಕ್ ಸಖತ್ ಆಗಿಯೇ ಮೂಡಿ ಬಂದಿದೆ. ಈ ಒಂದು (Hoysala Film Trailer Review) ಅನುಭವ ಕಿಚ್ಚ ಸುದೀಪ್ ಅವರಿಗೆ ತುಂಬಾನೇ ಇದೆ. ಈ ಹಿನ್ನೆಲೆಯಲ್ಲಿ ಡಾಲಿ ಧನಂಜಯ್ ಅವರ ಹೊಯ್ಸಳ ಚಿತ್ರದ ಗುರುದೇವ್ ಹೊಯ್ಸಳ ಪಾತ್ರ ನೋಡಿದ್ದೇ ತಡ, ಕಿಚ್ಚ ಸುದೀಪ್ ಒಂದು ಪ್ರಶ್ನೆ ಮಾಡಿದ್ದಾರೆ.


ನಿಮ್ಮ ಪಾತ್ರಕ್ಕೆ ಯಾಕೆ ಮೀಸೆ ಇಲ್ಲ ಅನ್ನೋದೇ ಈ ಒಂದು (Dhananjaya Movie Trailer) ಪ್ರಶ್ನೆ ಆಗಿದೆ. ಅದಕ್ಕೆ ಡಾಲಿ ಕೊಟ್ಟ ಉತ್ತರ ಏನು? ಕಿಚ್ಚ ಸುದೀಪ್ ಮುಂದೇನ್ ಮಾಡಿದರು. ಈ ಎಲ್ಲ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.


Kannada Actor Sudeepa Ask a Question to Dalli Dhananjaya
ಧನು ಕಂಡು ಕಿಚ್ಚ ಕೇಳಿದ ಆ ಪ್ರಶ್ನೆ ಏನು?


ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರದಲ್ಲಿ ಧನಂಜಯ್ ಸೂಪರ್ ಕಾಪ್ ಪಾತ್ರವನ್ನ ಮಾಡಿದ್ದಾರೆ. ಬೆಳಗಾವಿಯ ಗಡಿನಾಡಿನ ಕಥೆಯನ್ನ ಇದು ಹೇಳುವಂತೆ ಇದೆ. ಅದರಲ್ಲೂ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನಂಜಯ್ ಇಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ.




ಖಡಕ್ ಪೊಲೀಸ್ ಆಫೀಸರ್ ಹೊಯ್ಸಳಗೆ ಮೀಸೆ ಯಾಕಿಲ್ಲ?


ಖಡಕ್ ಪೊಲೀಸ್ ಆಫೀಸರ್ ಹೊಯ್ಸಳ ಇಲ್ಲಿ ಅಬ್ಬರಿಸಿದ್ದಾರೆ. ಮುಲಾಜಿಲ್ಲದೆ ರೌಡಿಗಳನ್ನ ಮಟ್ಟಹಾಕಿದ್ದಾರೆ. ಜಬರ್‌ ದಸ್ತ್ ಡೈಲಾಗ್‌ ಹೊಡೆದು ಘರ್ಜಿಸಿದ್ದಾರೆ. ಆದರೆ ಈ ಒಂದು ಪಾತ್ರದಲ್ಲಿ ಒಂದು ವಿಷಯ ಮಿಸ್ಸಿಂಗ್ ಇದೆ.


ಹೌದು, ಗುರುದೇವ್ ಹೊಯ್ಸಳ ಪಾತ್ರಕ್ಕೆ ಎಲ್ಲವೂ ಇದೆ. ಆದರೆ ಸಿನಿಮಾದಲ್ಲಿ ಪೊಲೀಸರನ್ನ ಬಿಂಬಿಸೋ ಆ ಒಂದು ಮೀಸೆ ಮಾತ್ರ ಮಿಸ್ಸಿಂಗ್ ಆಗಿದೆ. ಇದನ್ನ ಗಮನಸಿದ ಕಿಚ್ಚ ಸುದೀಪ್ ಈ ಒಂದು ಪ್ರಶ್ನೆಯನ್ನ ನೇರವಾಗಿ ಡಾಲಿ ಧನಂಜಯ್‌ ಅವರಿಗೆ ಕೇಳಿಯೇ ಬಿಟ್ಟಿದ್ದಾರೆ.


ಧನು ಕಂಡು ಕಿಚ್ಚ ಕೇಳಿದ ಆ ಪ್ರಶ್ನೆ ಏನು?


ಡಾಲಿ ಧನಂಜಯ್ ಚಿತ್ರದ ಟ್ರೈಲರ್ ರಿಲೀಸ್‌ಗೆ ಕಿಚ್ಚನ ಆಹ್ವಾನಿಸಲು ಡಾಲಿ ಧನಂಜಯ್, ಕಿಚ್ಚನ ಮನೆಗೆ ತೆರೆಳಿದ್ದರು. ಆಗ ಸುದೀಪ್ ಬರಲು ಒಪ್ಪಿಕೊಂಡರು. ಆದರೆ ಆಗಲೇ ಧನುಗೆ ಆ ಪ್ರಶ್ನೆ ಕೇಳಿಯೇ ಬಿಟ್ಟರು. ನಿಮ್ಮ ಹೊಯ್ಸಳ ಪಾತ್ರ ಮೀಸೆ ಯಾಕೆ ಇಲ್ಲ ಅಂತಲೇ ಕೇಳಿದರು.


Kannada Actor Sudeepa Ask a Question to Dalli Dhananjaya
ಕಿಚ್ಚನ ಪ್ರೀತಿಗೆ ಭಾವುಕರಾದ ಡಾಲಿ ಧನಂಜಯ್


ಕಿಚ್ಚ ಕೇಳಿದ ಪ್ರಶ್ನೆಗೆ ಧನಂಜಯ್ ಉತ್ತರ ಕೊಟ್ರು. ನನಗೆ ಮೀಸೆ ಸೆಟ್ ಆಗೋದಿಲ್ಲ. ಹಾಗಾಗಿಯೇ ಈ ಪಾತ್ರಕ್ಕೆ ಮೀಸೆ ಇಟ್ಟಿಲ್ಲ ಅಂತ ಧನಂಜಯ್ ಹೇಳಿದರು. ಅದನ್ನ ಕೇಳಿದ ಕಿಚ್ಚ ಸುದೀಪ್ ಹಾಗೇನೂ ಇಲ್ಲ. ನಿಮಗೆ ಮೀಸೆ ಸೆಟ್ ಆಗುತ್ತದೆ ಅಂತ ಹೇಳಿದರು.


ಕಿಚ್ಚನ ಪ್ರೀತಿಗೆ ಭಾವುಕರಾದ ಡಾಲಿ ಧನಂಜಯ್


ಇಷ್ಟೇ ಅಲ್ಲ, ಡಾಲಿ ಧನಂಜಯ್ ಭಾವ ಚಿತ್ರಕ್ಕೆ ಮೀಸೆ ಬಿಡಿಸಿ ತೋರಿಸಿಯೇ ಬಿಟ್ಟರು. ಆಗ ಧನು ಅದನ್ನ ಕಂಡು ತುಂಬಾ ಖುಷಿಪಟ್ಟರು. ಕಿಚ್ಚನ ಈ ಒಂದು ಪ್ರೀತಿ ಮತ್ತು ಗೌರವಕ್ಕೆ ಡಾಲಿ ಧನಂಜಯ್ ಭಾವುಕರಾಗಿದ್ದರು. ಮನೆಯಿಂದ ಹೊರಡೋವಾಗ ಕಣ್ತುಂಬಿಕೊಂಡು ಹೊರಗೆ ಬಂದರು.


ಇದನ್ನೂ ಓದಿ: Hoysala Trailer: ಥ್ರಿಲ್ಲಿಂಗ್ ಆಗಿದೆ ಪೊಲೀಸರ ಮಸ್ತ್ ಮಾತು! ಗುರುದೇವ್ ಹೊಯ್ಸಳ ಟ್ರೈಲರ್ ಹೇಗಿದೆ?

top videos


    ಹೀಗೆ ಈ ಒಂದು ಘಟನೆಯನ್ನ ಡಾಲಿ ಧನಂಜಯ್ ತಮ್ಮ ಹೊಯ್ಸಳ ಚಿತ್ರದ ಟ್ರೈಲರ್ ರಿಲೀಸ್ ಸಮಯದಲ್ಲಿ ನೆನಪಿಸಿಕೊಂಡರು. ಆಗ ಧನು ಪಕ್ಕದಲ್ಲಿ ಕಿಚ್ಚ ಸುದೀಪ್ ಕೂಡ ಇದ್ದರು. ಮಂದಹಾಸ ಬೀರುತ್ತಲೇ ಈ ಒಂದು ಕ್ಷಣವನ್ನ ಮನದುಂಬಿಗೊಳ್ಳುತ್ತಿದ್ದರು.

    First published: