ಕಾಲಿವುಡ್​ನತ್ತ 'ಸೂಪರ್ ಸ್ಟಾರ್ ಜೆಕೆ' ಪಯಣ..!

jayaram Karthik

jayaram Karthik

ಅಲ್ಲಿಂದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹಿಂತಿರುಗಿ ನೋಡಿರಲಿಲ್ಲ. ಅತ್ತ ಪುಷ್ಪ ಐ ಹೇಟ್ ಟಿಯರ್ಸ್ ಎನ್ನುವ ಬಾಲಿವುಡ್ ಚಿತ್ರದಲ್ಲೂ ಕಾಣಿಸಿಕೊಂಡರು. ಇತ್ತ ಸ್ಯಾಂಡಲ್​ವುಡ್​ನಲ್ಲೂ ಕೆಲ ಚಿತ್ರಗಳಲ್ಲಿ ಬಣ್ಣ ಹಚ್ಚಿದರು.

  • Share this:

ಜಯರಾಮ್ ಕಾರ್ತಿಕ್. ಕನ್ನಡ ಕಿರುತೆರೆ ಪ್ರೇಕ್ಷಕರಿಗಂತು ಈ ಹೆಸರು ಚಿರಪರಿಚಿತ. ಏಕೆಂದರೆ ಜೆಕೆ ಎಂಬುದೇ ಮಿನಿ ಸ್ಕ್ರೀನ್​ನಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿತ್ತು. ಆ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಜೆಕೆ ಕೆಂಪೇಗೌಡ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.


ಆದರೆ ಮಿನಿ ಸ್ಕ್ರೀನ್​ನಲ್ಲಿ ಜೆಕೆ ತೋರಿಸಿದ ಖದರ್ ದೊಡ್ಡ ಪರದೆಯಲ್ಲಿ ಕಾಣಿಸಲಿಲ್ಲ ಎಂದೇ ಹೇಳಬಹುದು. ಹೀಗಾಗಿಯೇ ಕಿರುತೆರೆಯಲ್ಲಿ ಮತ್ತೆ ಜಯರಾಮ್ ಕಾರ್ತಿಕ್​ಗೆ ದೊಡ್ಡ ಆಫರ್​ಗಳು ಬಂದಿದ್ದವು. ಅದರಲ್ಲೂ ಹಿಂದಿಯ ರಾಮಾಯಣ ಧಾರಾವಹಿಯಲ್ಲಿ ರಾವಣನಾಗಿ ಆರ್ಭಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.


ರಾವಣ ಅವತಾರದಲ್ಲಿ ಜೆಕೆ


ಅಲ್ಲಿಂದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹಿಂತಿರುಗಿ ನೋಡಿರಲಿಲ್ಲ. ಅತ್ತ ಪುಷ್ಪ ಐ ಹೇಟ್ ಟಿಯರ್ಸ್ ಎನ್ನುವ ಬಾಲಿವುಡ್ ಚಿತ್ರದಲ್ಲೂ ಕಾಣಿಸಿಕೊಂಡರು. ಇತ್ತ ಸ್ಯಾಂಡಲ್​ವುಡ್​ನಲ್ಲೂ ಕೆಲ ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಇದೀಗ ಜೆಕೆಯ ಪಯಣ ಕಾಲಿವುಡ್​ನತ್ತ.


ತಮಿಳಿನಲ್ಲಿ ತಯಾರಾಗುತ್ತಿರುವ ಮಾಳಿಗೈ ಎಂಬ ಸಿನಿಮಾ ಮೂಲಕ ಜೆಕೆ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿ ಕನ್ನಡ ನಟನಿಗೆ ಆಂಡ್ರಿಯಾ ಜೆರೆಮಿಯಾ ನಾಯಕಿ. ಈಗಾಗಲೇ ತಮಿಳಿನ ಟಾಪ್ ನಟಿಯರಲ್ಲಿ ಗುರುತಿಸಿಕೊಂಡಿರುವ ಆಂಡ್ರಿಯಾ ಜೊತೆ ಜೆಕೆ ಅಭಿನಯಿಸುತ್ತಿದ್ದಾರೆ. ಅಲ್ಲಿಗೆ ಸ್ಯಾಂಡಲ್​ವುಡ್​ ನಟನ ಕಾಲಿವುಡ್ ಎಂಟ್ರಿ ಕೂಡ ಕನ್ಫರ್ಮ್ ಆಗಿದೆ.

top videos
    First published: