• Home
  • »
  • News
  • »
  • entertainment
  • »
  • Kantara: ಅಮೆರಿಕಾದಲ್ಲಿ ಕಾಂತಾರ ವೀಕ್ಷಿಸಿ ಜಗ್ಗೇಶ್ ಹೇಳಿದ್ದು ಹೀಗೆ

Kantara: ಅಮೆರಿಕಾದಲ್ಲಿ ಕಾಂತಾರ ವೀಕ್ಷಿಸಿ ಜಗ್ಗೇಶ್ ಹೇಳಿದ್ದು ಹೀಗೆ

ಕಾಂತಾರ ಚಿತ್ರ ವೀಕ್ಷಿಸಿದ ನವರಸ ನಾಯಕ ಜಗ್ಗೇಶ್-ಹೇಳಿದ್ದೇನು ಗೊತ್ತೇ?

ಕಾಂತಾರ ಚಿತ್ರ ವೀಕ್ಷಿಸಿದ ನವರಸ ನಾಯಕ ಜಗ್ಗೇಶ್-ಹೇಳಿದ್ದೇನು ಗೊತ್ತೇ?

"ಸಿನಿಮಾ ನೋಡಿ ಬಂದ್ಮೇಲೆ ನನಗೆ ಅನಿಸಿರೋದು. ಇದು ರಿಷಬ್ ಮಾಡಿದ ಸಿನಿಮಾ ಅಲ್ಲ. ಆತನ ವಂಶಿಕರ, ಆತನ ತಂದೆ-ತಾಯಿ ಆಶೀರ್ವಾದಿಂದಲೇ ಇದು ಸಾಧ್ಯವಾಗಿದೆ. ನಶಿಸುತ್ತಿರೋ ಆಧ್ಯಾತ್ಮ ಭಾವವನ್ನ ಮತ್ತೆ ಮನುಷ್ಯರಿಗೆ ನೆನಪಿಸಲು, ದೇವರೇ ಬಂದು ರಿಷಬ್ ಕೈಯಲ್ಲಿ ಇಂತಹ ಸಿನಿಮಾ ಮಾಡಿಸಿದೆ" ಎಂದು ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara) ದೇಶ-ವಿದೇಶದಲ್ಲೂ ಹವಾ ಎಬ್ಬಿಸಿದೆ. ಕಳೆದ ತಿಂಗಳ 30 ರಂದು ಚಿತ್ರ ಎಲ್ಲೆಡೆ ರಿಲೀಸ್ ಆಗಿದೆ. ಈ ಸಿನಿಮಾದ ಕ್ರೇಜ್ ತುಂಬಾನೇ ಇದೆ. ಆದರೆ ಎಲ್ಲರಿಗೂ (Cinema) ಸಿನಿಮಾ ಇನ್ನು ನೋಡಲಾಗಲೇ ಇಲ್ಲ. ಕನ್ನಡದ ಅನೇಕ ಡೈರೆಕ್ಟರ್ಸ್ (Directors) ಕೂಡ ಕಾಂತಾರ ಸಿನಿಮಾ ನೋಡಿಲ್ಲ. ಸಿನಿಮಾ ನಾಯಕರಲ್ಲಿ (Hero) ಬಹುತೇಕರು ಸಿನಿಮಾ ನೋಡಬೇಕು ಅನಿಸುತ್ತದೆ. ಅವರವರ ಕೆಲಸದಲ್ಲಿ ಬ್ಯುಸಿ ಇರೋ ನಾಯಕ ನಟರಲ್ಲಿ ಜಗ್ಗೇಶ್ (Actor Jaggesh) ಕೂಡ ಒಬ್ಬರಾಗಿದ್ದಾರೆ. ಸದ್ಯ ಅಮೆರಿಕಾದಲ್ಲಿಯೇ ಜಗ್ಗೇಶ್ ಇದ್ದಾರೆ. ಇಲ್ಲಿಗೆ ಬಂದ ಕಾರಣ ಕನ್ನಡದ ಕಾಂತಾರ ಸಿನಿಮಾ ನೋಡಿಲ್ಲ ಅಷ್ಟೆ. ಆದರೆ ಅಮೆರಿಕಾದ ಮಾಲ್ ಒಂದರಲ್ಲಿ ಕನ್ನಡದ ಕಾಂತಾರ ಚಿತ್ರ ವೀಕ್ಷಿಸಿ ಜಗ್ಗೇಶ್ ಖುಷಿಪಟ್ಟಿದ್ದಾರೆ. 


ಅಮೆರಿಕಾದ ಡೆನ್ವರ್ ನಲ್ಲಿ ಕಾಂತಾರ ವೀಕ್ಷಿಸಿದ ಜಗ್ಗೇಶ್


ನವರಸ ನಾಯಕ ಮೊನ್ನೆ ಅಮೆರಿಕಾದತ್ತ ಪಯಣ ಬೆಳೆಸಿದ್ದಾರೆ. ಪತ್ನಿ ಪರಿಮಳ ಅವರು ಕೂಡ ಜಗ್ಗೇಶ್ ಜೊತೆಗೆ ಅಮೆರಿಕಾ ದೇಶಕ್ಕೆ ಬಂದಿದ್ದಾರೆ. ಇಲ್ಲಿಗೆ ಬಂದ ಕಾರಣ ಜಗ್ಗೇಶ್ ಅವರಿಗೆ ಕಾಂತಾರ ಸಿನಿಮಾ ನೋಡಲು ಆಗಲೇ ಇಲ್ಲ.


ಆದರೆ ಅವರ ಅಕ್ಕನ ಮಗ ನಟ ಜೀವನ್ ಅಮೆರಿಕಾದ ಡೆನ್ವರ್ ನಲ್ಲಿಯೇ ಇದ್ದಾರೆ. ಇಲ್ಲಿಯ ಓರಾಕೆಲ್ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೇಲುಕೋಟೆ ಮಂಜ, ಗುರು ಚಿತ್ರದಲ್ಲೂ ಜೀವನ್ ಖಳನಾಯಕರಾಗಿಯೇ ಅಭಿನಯಿಸಿದ್ದಾರೆ.


ಅಮೆರಿಕಾದ ಮಾಲ್ ನಲ್ಲಿ ಕಾಂತಾರ ಚಿತ್ರ ವೀಕ್ಷಿಸಿದ ಜಗ್ಗೇಶ್


ಇವರ ಮನೆ ಸಮೀಪದಲ್ಲಿಯೇ ಒಂದು ಮಾಲ್ ಕೂಡ ಇದೆ. ಅದೇ ಮಾಲ್​ ನಲ್ಲಿಯೇ ಕನ್ನಡದ ಕಾಂತಾರ ರಿಲೀಸ್ ಆಗಿದೆ. ಅಲ್ಲಿಯೇ ಜಗ್ಗೇಶ್ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ನೋಡಿದ್ದಾರೆ. ತುಂಬಾ ಖುಷಿ ಪಟ್ಟಿದ್ದಾರೆ.


Kannada Actor Jaggesh talk about Kannada Kantara Film
ಕಾಂತಾರ ವೀಕ್ಷಿಸಿದ ಜಗ್ಗೇಶ್-ಹೇಳಿದ್ದೇನು ಗೊತ್ತೇ?


ಕಾಂತಾರ ಸಿನಿಮಾ ಆಗಿದ್ದಲ್ಲ ರಿಷಬ್ ದೈವವೇ ಮಾಡಿಸಿರೋದು


ಕಾಂತಾರ ಸಿನಿಮಾದಲ್ಲಿ ರಿಷಬ್ ಮನೆ ದೇವರು ಗುಳಿಗ ದೈವ ಆರಾಧನೆ ಇದೆ. ಗುಳಿಗ ದೈವರ ರೂಪದಲ್ಲಿಯೇ ರಿಷಬ್ ಶೆಟ್ಟಿ ಅಭಿನಯಿಸಿದ್ದಾರೆ. ರಿಷಬ್ ಶೆಟ್ಟಿ ಅಭಿನಯ ಕಂಡ ಜಗ್ಗೇಶ್ ಮಂತ್ರಮುಗ್ಧರಾಗಿದ್ದಾರೆ.


ಇದನ್ನೂ ಓದಿ: Pushpa: ಪುಷ್ಪಾ 2 ಫಸ್ಟ್ ಲುಕ್ ಬಗ್ಗೆ ಬಿಗ್ ಅಪ್ಡೇಟ್, ಅಭಿಮಾನಿಗಳು ಥ್ರಿಲ್


ರಿಷಬ್ ಶೆಟ್ಟಿ ಅಭಿನಯದ ಕೊನೆಯ 20 ನಿಮಿಷ ಕಂಡ ಜಗ್ಗೇಶ್ ಮೂಕ ವಿಸ್ಮಿತರಾಗಿದ್ದಾರೆ. ಸಿನಿಮಾ ನೋಡಿ ಹೊರ ಬಂದು ಕೆಲ ಕ್ಷಣ ಮೌನವಾಗಿದ್ದಾರೆ. ಸಿನಿಮಾ ನೋಡುವಾಗ ಎಲ್ಲವನ್ನೂ ಮರೆತು ತನ್ಮಯತೆಯಿಂದಲೇ ಸಿನಿಮಾ ವೀಕ್ಷಿಸಿದ್ದಾರೆ.


ಹೀಗೂ ಹೇಳಿಕೊಂಡಿದ್ದಾರೆ


"ಸಿನಿಮಾ ನೋಡಿ ಬಂದ್ಮೇಲೆ ನನಗೆ ಅನಿಸಿರೋದು. ಇದು ರಿಷಬ್ ಮಾಡಿದ ಸಿನಿಮಾ ಅಲ್ಲ. ಆತನ ವಂಶಿಕರ, ಆತನ ತಂದೆ-ತಾಯಿ ಆಶೀರ್ವಾದಿಂದಲೇ ಇದು ಸಾಧ್ಯವಾಗಿದೆ. ನಶಿಸುತ್ತಿರೋ ಆಧ್ಯಾತ್ಮ ಭಾವವನ್ನ ಮತ್ತೆ ಮನುಷ್ಯರಿಗೆ ನೆನಪಿಸಲು, ದೇವರೆ ಬಂದು ರಿಷಬ್ ಕೈಯಲ್ಲಿ ಇಂತಹ ಸಿನಿಮಾ ಮಾಡಿಸಿದೆ" ಎಂದು ಹೇಳಿದ್ದಾರೆ.


Kannada Actor Jagesh talk about Kannada Kantara Film
ಕಾಂತಾರ


ಸಾಮಾಜಿಕ ಜಾಲ ತಾಣದ ತಮ್ಮ ಅಧಿಕೃತ ಖಾತೆಯಲ್ಲಿಯೇ ಜಗ್ಗೇಶ್ ಹೀಗೆ ಬರೆದುಕೊಂಡಿದ್ದಾರೆ. ದೇವರು ರಿಷಬ್​ ಗೆ ಆಯುಷ್ಯ, ಆರೋಗ್ಯ ಕೊಡಲಿ, ಸಿನಿಮಾರಂಗದಲ್ಲಿ ರಿಷಬ್ ಸೇವೆ ಹೀಗೆ ಮುಂದುವರೆಯಲಿ ಅಂತಲು ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: Nishvika Naidu: ಮಾದಕ ರೂಪ, ಪಾರದರ್ಶಕ ಸೀರೆ; ನಿಶ್ವಿಕಾ ನಾಯ್ಡು ಲುಕ್ ಫುಲ್ ವೈರಲ್


ಕನ್ನಡದ ಕಾಂತಾರದಲ್ಲಿ ದೈವಾರಾಧನೆ ಅದ್ಭುತವಾಗಿಯೇ ಇದೆ. ಗುಳಿಗ ದೈವ ರೂಪದಲ್ಲಿ ರಿಷಬ್ ಶೆಟ್ಟಿ ಅದ್ಧುತವಾಗಿಯೇ ಅಭಿನಯಿಸಿದ್ದಾರೆ. ಜನರ ಮನಸ್ಸನ್ನೂ ಗೆಲ್ತಾನೇ ಇದ್ದಾರೆ. ದೇಶದ ವಿದೇಶದಲ್ಲೂ ಕನ್ನಡದ ಕಾಂತಾರ ಸಿನಿಮಾ ತನ್ನ ವೈಬ್ ಕ್ರಿಯೇಟ್ ಮಾಡುತ್ತಿದೆ. ಚಿತ್ರ ವೀಕ್ಷಿಸ್ತಿರೋ ಎಲ್ಲರೂ ತಮ್ಮದೇ ರೀತಿಯಲ್ಲಿಯೇ ಪ್ರತಿಕ್ರಿಯೆ ಕೊಡ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ ತಮ್ಮ ಈ ಚಿತ್ರದ ಮೂಲಕ ದೇವರ ನಾಡು ಮಾಲಿವುಡ್​​ನಲ್ಲೂ ಹೊಸ ಹವಾ ಸೃಷ್ಟಿಸೋಕೆ ರೆಡಿ ಆಗಿದ್ದಾರೆ.

First published: