ಕನ್ನಡದ ರಾಘವೇಂದ್ರ ಸ್ಟೋರ್ಸ್ ಸಿನಿಮಾ (Raghavendra Stores Cinema) ಹೊಸ ಭರವಸೆ ಮೂಡಿಸಿದೆ. ಚಿತ್ರದ ಸಿಂಗಲ್ ಸುಂದರ ಡಬಲ್ ಟ್ರಿಪಲ್ ಮೀನಿಂಗ್ ಬರೋ ಹಾಗೇನೆ ಇದೆ. ಆದರೆ ಸಿನಿಮಾ ಟ್ರೈಲರ್ ಇಡೀ ಚಿತ್ರದ (Jaggesh New Movie) ಅಸಲಿ ಸತ್ಯಗಳ ಮೇಲೆ ಬೆಳಕು ಚೆಲ್ಲಿದೆ. ಸಿನಿಮಾದ ಕಂಟೆಂಟ್ ಏನೂ ಅನ್ನೋದು ಇಲ್ಲಿ ತಿಳಿಯುತ್ತದೆ. ಮದುವೇನೆ (Cinema Trailer Release) ಆಗದೇ ಇರೋ ವ್ಯಕ್ತಿಯ ಜೀವನದ ಚಿತ್ರಣ ಈ ಚಿತ್ರದಲ್ಲಿದೆ. ಆದರೆ ಅದನ್ನ ನಿರ್ದೇಶಕ ಸಂತೋಷ್ ಆನಂದರಾಮ್ ಹಾಸ್ಯದ ಚೌಕಟ್ಟಿನಲ್ಲಿ ಹೇಳಿರೋದೇ ಇಲ್ಲಿ (Raghavendra Stores Film) ವಿಶೇಷವಾಗಿ ಇದೆ. ಇದರ ಸುತ್ತ ಮಾತನಾಡೋದಾದ್ರೆ, ಹೆಣ್ಣು ಸಿಗದ ಪರದಾಡೋ ಬ್ಯಾಚ್ಯೂಲರ್ ಕಥೆ ಇದಾಗಿದೆ.
ಇದನ್ನ ನವರಸ ನಾಯಕ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.
ಆಂಟಿ ಆದ್ರೂ ಓಕೆ, ಹುಡುಗಿ ಆದರೂ ಓಕೆ ಅಂತವ್ರೆ ಜಗ್ಗಣ್ಣ!
ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಬ್ಯಾಚ್ಯುಲರ್ ಗೋಳನ್ನ ಹಾಸ್ಯದ ಚೌಕಟ್ಟಿನಲ್ಲಿ ಹೇಳಲಾಗಿದೆ. ನವರಸ ನಾಯಕ ಜಗ್ಗೇಶ್ ಇಲ್ಲಿ ಹಯವದನ ಹೆಸರಿನ ಪಾತ್ರವನ್ನ ನಿರ್ವಹಿಸಿದ್ದು, ಕ್ಯಾಟರಿನ್ ಕೆಲಸವನ್ನ ಮಾಡುತ್ತಾನೇ ಈ ಹಯವದನ ಅನ್ನೋದು ಈಗ ರಿವೀಲ್ ಆಗಿದೆ.
ಆದರೆ ಮದುವೆ ಆಗಿಲ್ಲ ಅನ್ನೋ ನೋವು ಈ ಹಯವದನನ ಅತಿ ದೊಡ್ಡ ಬೇಸರವೂ ಆಗಿದೆ. ಇದಕ್ಕಾಗಿ ಹುಡುಗಿ ಹುಡುಕುತ್ತಲೇ ಇರೋ ಈ ನಾಯಕ, ಹುಡುಗಿಯಾದರರೂ ಸರಿಯೇ, ಆಂಟಿಯಾದರು ಸರಿನೇ, ಅನ್ನೋಮಟ್ಟಿಗೆ ಬಂದು ತಲುಪಿದ್ದಾರೆ.
ಬ್ಯಾಚ್ಯುಲರ್ ಹಯವದನನ ಅಮೋಘ ಗೋಳು!
ಹೌದು, ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೊದಲ ಟ್ರೈಲರ್ ನೋಡಿದಾಗ, ಈ ಒಂದು ಕಥೆ ನಿಮ್ಮ ಕಣ್ಮುಂದೆ ಬಂದೇ ಬಿಡುತ್ತದೆ. ಅಷ್ಟು ಅದ್ಭುತವಾಗಿಯೇ ಚಿತ್ರದ ಟ್ರೈಲರ್ ಕಟ್ ಮಾಡಲಾಗಿದೆ. ಸಿನಿಮಾದಲ್ಲಿ ದತ್ತಣ್ಣ ಈ ಹಯವದನನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಂತೆ ಕಾಣುತ್ತದೆ.
ಮಗನ ಮದುವೆಗಾಗಿಯೇ ಹುಡುಗಿ ಹುಡುಕುವುದಕ್ಕೆ ಬೇಕಾಗೋ ಎಲ್ಲ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ, ಎಲ್ಲೂ ಹೆಣ್ಣು ಸಿಗದೇ ಇದ್ದಾಗ, ಮಗು ಇರೋ ಆಂಟಿಯನ್ನೆ ಮದುವೆ ಆಗೋಕೆ ರೆಡಿ ಆಗೋದು ಒಟ್ಟು ಕಥೆ ಅನಿಸುತ್ತದೆ.
ಆಂಟಿ ಪಾತ್ರದಲ್ಲಿ ಸಿಂಪಲ್ ಸಿನಿಮಾ ನಟಿ ಶ್ವೇತಾ ಶ್ರೀವಾತ್ಸವ್!
ಮದುವೆಯಾಗಿರೋ ಆಂಟಿ ರೋಲ್‌ನಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಪಾತ್ರಕ್ಕೆ ವಿಶೇಷವಾಗಿಯೇ ಜೀವ ತುಂಬೋ ಕೆಲಸ ಮಾಡಿದ್ದಾರೆ. ಟ್ರೈಲರ್‌ನಲ್ಲಿ ಶ್ವೇತಾ ಶ್ರೀವಾತ್ಸವ್ ನಿರ್ವಹಿಸಿರೋ ರೋಲ್‌ನ ಝಲಕ್ ಕೂಡ ಸಿಗುತ್ತದೆ.
ರಾಜಕುಮಾರ್‌ದಂತಹ ಸಿನಿಮಾ ಕೊಟ್ಟ ಡೈರೆಕ್ಟರ್ ಸಂತೋಷ್ ಆನಂದರಾಮ್ ಇಲ್ಲಿ ಬೇರೆ ಕಥೆ ಹೇಳುತ್ತಿದ್ದಾರೆ. ಮದುವೆ ಆಗದೇ ಇರೋ 40 ವರ್ಷದ ವ್ಯಕ್ತಿಯ ಕಥೆಯನ್ನ ಇಲ್ಲಿ ಅಷ್ಟೇ ಭಾವನಾತ್ಮಕವಾಗಿಯೇ ಹೇಳಿದ್ದಾರೆ.
ಹಾಸ್ಯದ ಚೌಕಟ್ಟಿನಲ್ಲಿ ಅದ್ಭುತ ಕಥೆಯ ಚಿತ್ರಣ
ಚಿತ್ರದಲ್ಲಿ ನಟಿಸಿರೋ ನಟ ರವಿಶಂಕರ್ ಗೌಡ ಈ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳು ಸಾಕಷ್ಟಿವೆ ಅಂತ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಆ ಒಂದು ಫೀಲ್ ಟ್ರೈಲರ್ ನೋಡಿದಾಗ ನಿಮಗೂ ಆಗುತ್ತದೆ.
ಅಷ್ಟು ಸ್ಪೆಷಲ್ ಆಗಿಯೇ ಟ್ರೈಲರ್ ಬಂದಿದ್ದು, ಚಿತ್ರದ ಕಥೆ ಕೂಡ ಸ್ಪೆಷಲ್ ಆಗಿಯೇ ಇದೆ. ಅದನ್ನ ಇಡೀಯಾಗಿ ನೋಡಿದಾಗ ಪ್ರೇಕ್ಷಕರಲ್ಲಿ ಒಂದು ಬೇರೆ ಕಥೆ ನೋಡಿದ ಅನುಭವ ಆಗೋದು ಗ್ಯಾರಂಟಿ ಅಂತ ಹೇಳಬಹುದು.
ರಾಘವೇಂದ್ರ ಸ್ಟೋರ್ಸ್ ಎಂಬ ಭಾವನಾತ್ಮಕ ಕಥೆಯ ಸಿನಿಮಾ
ನಿಜ, ರಾಜಕುಮಾರ ಸಿನಿಮಾ ಆಗೋ ಮೊದಲೇ, ನವರಸ ನಾಯಕ ಜಗ್ಗೇಶ್ ಅವರು ರಾಜಕುಮಾರ ಕಥೆ ಕೇಳಿದ್ದರು. ನನಗೂ ಇಂತಹ ಒಂದು ಕಥೆ ಮಾಡೋ ಅಂತಲೂ ಸಂತೋಷ್ ಆನಂದರಾಮ್ ಅವರಿಗೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕಥೆ ಬರೆದ್ರಾ ಅನ್ನೋ ಕುತೂಹಲ ಕೂಡ ಈಗಲೇ ಮೂಡಿದೆ.
ಇದನ್ನೂ ಓದಿ: Scam-1770 Movie: ಸರ್ಕಾರಿ ಶಾಲೆಯ ದಡ್ಡ ಪ್ರವೀಣನ ಬುದ್ದಿವಂತಿಕೆ ಸಿನಿಮಾ; ಸ್ಕ್ಯಾಮ್-1770 ಟೀಸರ್ ಔಟ್
ಇದರ ಹೊರತಾಗಿ ಈ ಚಿತ್ರಕ್ಕೆ ಕಾಂತಾರ ಚಿತ್ರ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಹೊಂಬಾಳೆ ಸಂಸ್ಥೆಯ ಈ ಒಂದು ಸಿನಿಮಾ ಇದೇ ತಿಂಗಳ 28 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಇನ್ನುಳಿದಂತೆ ಸಿನಿಮಾದ ಟ್ರೈಲರ್ ಇದೀಗ ಭಾರೀ ಗಮನ ಸೆಳೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ