ನವರಸ ನಾಯಕ ಜಗ್ಗೇಶ್ ಅವರು ಕಳೆದ (Jaggesh New Movie Updates) ನಾಲ್ಕು ದಶಕಗಳಿಂದಲೂ ಸಿನಿಪ್ರಿಯರುನ್ನ ನಗಿಸುತ್ತಲೇ ಬಂದಿದ್ದಾರೆ. 80 ರ ದಶಕದಲ್ಲಿ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟದ್ದ ಜಗ್ಗೇಶ್ (Kannada Actor Jaggesh Movie) ಅವರು ಮುಂದೆ ನವರಸ ನಾಯಕರಾಗಿ ಬೆಳೆದದ್ದು ಗೊತ್ತೇ ಇದೆ. ಸಿನಿಮಾ ಇಂಡಸ್ಟ್ರೀಯಲ್ಲಿ ಒಂದಷ್ಟು ಹಿಟ್ ಕೊಟ್ಟು ಕಳೆದು ಹೋದವ್ರೂ ಇದ್ದಾರೆ. ಆದರೆ ಜಗ್ಗೇಶ್ ಅವರು ಅಲ್ಲಿಂದ ಇಲ್ಲಿವರೆಗೂ ಜನರ ಪ್ರೀತಿಯನ್ನ ಉಳಿಸಿಕೊಂಡು ಗಳಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ (Raghavendra Stores Movie) ಕಾರಣ ಬೇರೆ ಏನೂ ಅಲ್ಲ, ಅವರಲ್ಲಿರೋ ಅಗಾಧ ಪ್ರತಿಭೆ ಅಂತ ಹೇಳಬಹುದು. ಎಂತಹ ಸನ್ನಿವೇಶದಲ್ಲೂ ನಗಿಸಬಲ್ಲ ಇವರ ಅಭಿನಯ ಈಗಲೂ ಈ (Movie Latest Updates) ಜನರೇಷನ್‌ಗೂ ಇಷ್ಟ ಆಗುತ್ತದೆ.
ಕಳೆದ 40 ವರ್ಷಗಳಿಂದ ಸಿನಿಮಾರಂಗದಲ್ಲಿ ಓಡ್ತಾನೇ ಇರೋ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಪೆಷಲ್ ಆಗಿಯೇ ಗೌರವ ಸಲ್ಲಿಸಿದೆ.
ರಾಘವೇಂದ್ರ ಸ್ಟೋರ್ಸ್ ಜಗ್ಗೇಶ್ ಅಭಿನಯದ ಮತ್ತೊಂದು ಸಿನಿಮಾ ಆಗಿದೆ. ಅಪ್ಪು ಅವರಿಗೆ ರಾಜಕುಮಾರ್ ಸಿನಿಮಾ ಮಾಡಿ ಗೆದ್ದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇದೇ ತಿಂಗಳ 28 ರಂದು ರಾಜ್ಯದೆಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ.
ಜಗ್ಗಣ್ಣನಿಗೆ ರಾಘವೇಂದ್ರ ಸ್ಟೋರ್ಸ್ ಸ್ಪೆಷಲ್ ಅರ್ಪಣೆ
ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಜಗ್ಗೇಶ್ ಅವರು ಹಯವದನ ಹೆಸರಿನ ಪಾತ್ರ ಮಾಡಿದ್ದಾರೆ. ೪೦ ದಾಟಿದರೂ ಮದುವೆ ಆಗದೇ ಇರೋ ಈ ವ್ಯಕ್ತಿಯ ಜೀವನವೇ ಇಲ್ಲಿ ವಿಶೇಷವಾಗಿ ಕಾಣಿಸುತ್ತಿದೆ. ಅಡುಗೆ ಭಟ್ಟರಾಗಿ ಜಗ್ಗೇಶ್ ಅವರು ಇಲ್ಲಿ ಪ್ರೇಕ್ಷಕರ ಹೃದಯ ಕದಿಯಲು ಬರ್ತಿದ್ದಾರೆ.
ಚಿತ್ರದ ಟ್ರೈಲರ್, ಟೀಸರ್, ಪೋಸ್ಟರ್‌ಗಳು ಈಗಾಗಲೇ ಗಮನ ಸೆಳೆಯುತ್ತಿವೆ. ಈ ಮೂಲಕ ಜಗ್ಗೇಶ್ ಅವರು ತಮ್ಮ ಅಭಿಮಾನಿಗಳನ್ನ ವಿಶೇಷವಾಗಿಯೇ ರಂಜಿಸಲು ಬರ್ತಿದ್ದಾರೆ. ಹಾಗೇ ಬರ್ತಿರೋ ಜಗ್ಗೇಶ್ ಅವರ ಈ ಚಿತ್ರದಲ್ಲಿ ಅದ್ಭುತವಾದ ಕಥೆ ಇದೆ. ಈ ಚಿತ್ರದಲ್ಲಿ ಜಗ್ಗೇಶ್ ತುಂಬಾ ಚೆನ್ನಾಗಿಯೇ ಅಭಿನಯಿಸಿದ್ದಾರೆ.
ಹೊಂಬಾಳೆ ಸಂಸ್ಥೆಯಿಂದ ಜಗ್ಗೇಶ್ ಅವರಿಗೆ ವಿಶೇಷ ಗೌರವ
ಇದರಲ್ಲಿಯ ಒಂದು ದೃಶ್ಯ ತುಂಬಾ ಚೆನ್ನಾಗಿಯೇ ಬಂದಿದೆ. ಇದನ್ನ ವಿಶೇಷವಾಗಿ ಕಟ್ ಮಾಡಿ ಈಗ ವಿಡಿಯೋ ಮಾಡಲಾಗಿದೆ. ಆ ವಿಡಿಯೊವನ್ನ ಜಗ್ಗೇಶ್ ಅವರಿಗೆ ಅರ್ಪಿಸಲಾಗಿದೆ. ಹೌದು, ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮತ್ತು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಈ ಮೂಲಕ ಇದೀಗ ಜಗ್ಗೇಶ್ ಅವರಿಗೆ ವಿಶೇಷವಾಗಿಯೇ ಗೌರವ ಸಲ್ಲಿಸಿದೆ.
4 ದಶಕ ನಮ್ಮನ್ನು ನಗಿಸಿದ, ನಗಿಸುತ್ತಿರುವ ನಿಮಗೆ ನಮ್ಮದೊಂದು ನಮನ… #4DecadesOfNavarasahttps://t.co/wnZQVIIIVQ#RaghavendraStores on April 28th ❤️@Jaggesh2 @santhoshAnand15 #VijayKiragandur @hombalefilms #HombaleMusic @HombaleGroup @ShwethaSrivatsa @AJANEESHB @DopShreesha… pic.twitter.com/gCglrkE5fw
— Raghavendra Stores (@RgvndraStores) April 26, 2023
ಒಂದೇ ದೃಶ್ಯ ಜಗ್ಗಣ್ಣನ ನವರಸಗಳ ರಸದೌತಣ
ಚಿತ್ರದ ಈ ಒಂದು ದೃಶ್ಯದಲ್ಲಿ ಜಗ್ಗೇಶ್ ಅವರು ನವರಸಗಳನ್ನ ಅದ್ಭತುವಾಗಿಯೇ ಇಲ್ಲಿ ಪ್ರದರ್ಶನ ಮಾಡಿದ್ದಾರೆ. ಇದು ನಿಜಕ್ಕೂ ಅದ್ಭುತ ಪ್ರತಿಭೆಯಗೊಂದು ಕೈಗನ್ನಡಿ ರೀತಿಯಲ್ಲೂ ಕಾಣಿಸುತ್ತದೆ. ಇದನ್ನ ನೋಡಿದರೆ ನಿಜಕ್ಕೂ ಖುಷಿ ಆಗುತ್ತದೆ. ಹೃದಯದಲ್ಲಿ ಒಂದ್ ಅರೆಕ್ಷಣ ಹೊಸ ಭಾವನೆವನ್ನೂ ಮೂಡಿಸುತ್ತದೆ.
ಇದನ್ನೂ ಓದಿ: Samantha: ನಾನು ಬಾಯ್ಬಿಟ್ಟರೆ ಸಮಂತಾ ಮಾನ ಹೋಗುತ್ತೆ! ಸ್ಯಾಮ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಟಾಲಿವುಡ್ ನಿರ್ಮಾಪಕ
ಇದೇ ರೀತಿ ಏಪ್ರಿಲ್-28 ರಂದು ರಿಲೀಸ್ ಆಗುತ್ತಿರೋ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಸಾಕಷ್ಟು ಹಾರ್ಟ್ ಟಚ್ಚಿಂಗ್ ದೃಶ್ಯಗಳೂ ಇವೆ. ಚಿತ್ರದ ಕೊನೆಯಲ್ಲಿ ನಿಮ್ಮ ಕಣ್ಣು ತೇವಗೊಳ್ಳೋದು ಗ್ಯಾರಂಟಿ ಅನ್ನುವ ಟಾಕ್ ಕೂಡ ಈಗಲೇ ಶುರು ಆಗಿದೆ. ಒಟ್ಟಾರೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಜಗ್ಗೇಶ್ ಚಿತ್ರ ಜೀವನದ ಮತ್ತೊಂದು ಸೂಪರ್ ಚಿತ್ರ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ