Jothe Jotheyali: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಆಯ್ಕೆ ಆಗಿದ್ದು ಹೇಗೆ? ಜೊತೆ ಜೊತೆಯಲಿ ಗುಟ್ಟು ರಟ್ಟು!

ಅನಿರುದ್ಧ ಇಲ್ಲವೇ ಆರ್ಯನ್ ಪಾತ್ರವನ್ನ ನೀವು ರಿಪ್ಲೇಸ್ ಮಾಡುತ್ತಿದ್ದೀರಾ ? ಹೌದು, ಸೀರಿಯಲ್ ನಲ್ಲಿ ಒಂದು ಟ್ವಿಸ್ಟ್ ಇದೆ. ಆ ಟ್ವಿಸ್ಟ್ ಏನೂ ಅನ್ನೋದನ್ನ ನೀವೇ ನೋಡಿ. - ಹರೀಶ್ ರಾಜ್,ನಟ

ಕಲಾಕಾರ್ ಹರೀಶ್ ರಾಜ್ ಹೊಸ ಲುಕ್

ಕಲಾಕಾರ್ ಹರೀಶ್ ರಾಜ್ ಹೊಸ ಲುಕ್

  • Share this:
ಜೊತೆ ಜೊತೆಯಲಿ ಸೀರಿಯಲ್ಲಿಂದ (Serial) ಅನಿರುದ್ಧ ಹೊರಬಂದಿದ್ದೇ ತಡ, ಅವರ ಸ್ಥಾನಕ್ಕೆ ಯಾರು ? ಸೀರಿಯಲ್ ಕಥೆ ಏನೂ ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಹೊಸದೊಂದು ಪಾತ್ರವೇ (New Role) ಸೃಷ್ಟಿಯಾಗಿದೆ. ಆ ಪಾತ್ರಕ್ಕೆ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಟರೇ ಬಂದಿದ್ದಾರೆ. ಅವರೇ ನಟ ಹರೀಶ್ ರಾಜ್ (Harish Raj) ಇವರ ಜೊತೆಗೆ ನಮ್ಮ ಮಾತು. ಈ ಮಾತಲ್ಲಿ ಸಾಕಷ್ಟು ವಿಷಯ ಬಂದಿದೆ. ಅದು ಇಲ್ಲಿದೆ. ಓದಿ.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕ ಆರ್ಯರ್ವಧನ್ ಹೊರ ನಡೆದಿದ್ದೇ ಬಂತು. ಸೀರಿಯಲ್ ಪ್ರೇಮಿಗಳಲ್ಲಿ ಒಂದು ಹಲ್ ಚಲ್ ಕ್ರಿಯೇಟ್ ಆಗಿತ್ತು. ಆದರೆ, ಅದನ್ನ ಮರೆಸೋ ಹಾಗೇನೆ ವಿಶ್ವಾಸ್ ಅನ್ನೋ ಪಾತ್ರ ನಟ ಹರೀಶ್ ರಾಜ್ ಮೂಲಕವೇ ಸೀರಿಯಲ್​ಗೆ ಪ್ರವೇಶ ಆಗಿದ್ದು,ಈಗ ಸೀರಿಯಲ್ ಪ್ರೇಮಿಗಳಲ್ಲಿ ಹೊಸದೊಂದು ಕುತೂಹಲವನ್ನೇ ಕಟ್ಟಿಕೊಡ್ತಾ ಇದೆ.

Kannada Actor Harish Raj in Jothe jotheyali
ಕನ್ನಡದ ನಟ ಹರೀಶ್ ರಾಜ್ ಹೊಸ ರೂಪ


ಈ ಹಿನ್ನೆಲೆಯಲ್ಲಿ ಹರೀಶ್ ರಾಜ್ ಮಾತಿಗೂ ಸಿಕ್ಕರು. ಇವರ ಮಾತಿನಲ್ಲಿ ಪಾತ್ರದ ಹೆಸರಿಗೆ ತಕ್ಕನಾಗಿಯೇ ವಿಶ್ವಾಸ ಇತ್ತು. ಆ ವಿಶ್ವಾಸದ ಮಾತುಗಳ ಒಟ್ಟು ಚಿತ್ರಣ ಇಲ್ಲಿದೆ.

ಹಾಯ್, ಸೀರಿಯಲ್​ನ ಮೊದಲ ದಿನದ ಚಿತ್ರೀಕರಣ ಹೇಗಿತ್ತು..?
ಹರೀಶ್ ರಾಜ್: ಸೀರಿಯಲ್ ನಲ್ಲಿ ಮೊದಲ ದಿನದ ಚಿತ್ರೀಕರಣದಲ್ಲಿ ಅದ್ಭುತವಾಗಿಯೇ ಸ್ವಾಗತ ಸಿಕ್ಕಿತು. ಕಲಾವಿದರು, ಟೆಕ್ನಿಷನ್​​ಗಳು ತುಂಬಾ ಸಪೋರ್ಟ್​ ಮಾಡಿದರು.

ಪ್ರಶ್ನೆ: ಅನಿರುದ್ಧ ಇಲ್ಲವೇ ಆರ್ಯನ್ ಪಾತ್ರವನ್ನ ನೀವು ರಿಪ್ಲೇಸ್ ಮಾಡುತ್ತಿದ್ದೀರಾ ?
ಹರೀಶ್ ರಾಜ್: ಹೌದು. ಸೀರಿಯಲ್ ನಲ್ಲಿ ಒಂದು ಟ್ವಿಸ್ಟ್ ಇದೆ. ಆ ಟ್ವಿಸ್ಟ್ ಏನೂ ಅನ್ನೋದನ್ನ ನೀವೇ ನೋಡಿ.

ಪ್ರಶ್ನೆ:ಜೊತೆ ಜೊತೆಯಲಿ ಸೀರಿಯಲ್​ ನಲ್ಲಿ ನಿಮ್ಮ ಪಾತ್ರ ಲೀಡ್ ಅಲ್ವೇ ?
ಹರೀಶ್ ರಾಜ್: ನನ್ನ ಪಾತ್ರ ಈ ಸೀರಿಯಲ್​ಗೆ ಲೀಡ್ ಪಾತ್ರವೇ ಆಗಿದೆ.

ಪ್ರಶ್ನೆ: ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ನಿಮ್ಮ ಪಾತ್ರ ತುಂಬಾ ಚೆನ್ನಾಗಿಯೇ ಡಿಸೈನ್ ಆಗಿದೆ.
ಹರೀಶ್ ರಾಜ್:
ಹೌದು. ನನ್ನ ಪಾತ್ರ ಸೀರಿಯಲ್​ ನಲ್ಲಿ ಚೆನ್ನಾಗಿಯೇ ಕನೆಕ್ಟ್ ಮಾಡಲಾಗಿದೆ. ಈ ಪಾತ್ರವನ್ನ ಚೆನ್ನಾಗಿಯೇ ನಿಭಾಯಿಸುತ್ತೇನೆ ಅನ್ನೋ ನಂಬಿಕೆ ಮೇಲೇನೆ ನಿರ್ದೇಶಕರು ಮತ್ತು ನಿರ್ಮಾಪಕರು ಡಿಸೈಡ್ ಮಾಡಿ,ನನ್ನ ಅಪ್ರೋಚ್ ಮಾಡಿದ್ದರು.

ಪ್ರಶ್ನೆ: ಜೊತೆ ಜೊತೆಯಲಿ ನೀವೂ ಒಂದು ವಿಭಿನ್ನ ಪಾತ್ರವನ್ನೇ ಮಾಡಿದ್ದೀರಿ
ಅಲ್ವೇ ?

ಹರೀಶ್ ರಾಜ್:ಹೌದು. ನಾನು ನಿಭಾಯಿಸಿರೋ ಪಾತ್ರ ಚೆನ್ನಾಗಿಯೇ ಇದೆ. ಅಷ್ಟೇ ಇಂಟ್ರೆಸ್ಟಿಂಗ್ ಆಗಿಯೇ ಇದೆ.

ಪ್ರಶ್ನೆ:ಸೀರಿಯಲ್ ಪಾತ್ರವನ್ನ ಒಪ್ಪಿಕೊಳ್ಳುವ ಮೊದಲು,ಜೊತೆ ಜೊತೆಯಲಿ ಸೀರಿಯಲ್ ನೋಡ್ತಾ ಇದ್ರಾ ?
ಹರೀಶ್ ರಾಜ್:ಇಲ್ಲ ನಾನು ಈ ಸೀರಿಯಲ್ ನೋಡಿಲ್ಲ.ಆದರೆ, ಸೀರಿಯಲ್ ತಂಡ ನನಗೆ ಕಥೆಯನ್ನ ತುಂಬಾ ಚೆನ್ನಾಗಿಯೇ ವಿವರಿಸಿ ಹೇಳಿತ್ತು.ಆದರೆ, ಈ ಸೀರಿಯಲ್ ಬಗ್ಗೆ ನನಗೆ ಗೊತ್ತಿತ್ತು. ಯಾವುದೇ ಎಪಿಸೋಡ್​ ಅನ್ನ ವೀಕ್ಷಿಸಿರಲಿಲ್ಲ ಅಷ್ಟೇ.

ಪ್ರಶ್ನೆ: ಜೊತೆ ಜೊತೆಯಲಿ ಸೀರಿಯಲ್​ನ ವಿಶ್ವಾಸ್ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿತ್ತು.?
ಹರೀಶ್ ರಾಜ್: ನಾನು ನಿರ್ದೇಶಕರ ನಟ. ಸಿದ್ದತೆ ಅಂತ ಏನೂ ಮಾಡಿಕೊಳ್ಳಲಿಲ್ಲ. ಎಲ್ಲವೂ ಸಡನ್​ ಆಗಿ ಎರಡೇ ದಿನದಲ್ಲಿ ನಡೆದು ಹೋಯಿತು.

ಪ್ರಶ್ನೆ: ನಿಮ್ಮ ತಂದೆ-ತಾಯಿ ಪಾತ್ರಧಾರಿಗಳಾದ ಪದ್ಮಜಾ ರಾವ್ ಹಾಗೂ ಶ್ರೀನಿವಾಸ್ ಪ್ರಭು ಅವರ ಜೊತೆಗಿನ ವರ್ಕಿಂಗ್ ಎಕ್ಸಪಿರಿಯೆನ್ಸ್ ಹೇಗಿತ್ತು.?

ಹರೀಶ್ ರಾಜ್: ಪದ್ಮಜಾ ರಾವ್ ಹಾಗೂ ಶ್ರೀನಿವಾಸ್ ಪ್ರಭು ಅವ್ರು ಅದ್ಭುತ ನಟರು.ಇವರ ಜೊತೆಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿಯೇ ಇದೆ. ಕಾನೂರು ಹೆಗ್ಗಡತಿಯಿಂದಲೇ ಪ್ರಭು ಸರ್ ಪರಿಚಯ ಇದೆ.

ಪ್ರಶ್ನೆ: ನಿಮ್ಮ ಮುಂದಿನ ಸಿನಿಮಾಗಳ ಪ್ರೋಜೆಕ್ಟ್ ಬಗ್ಗೆ ಹೇಳಿ.?
ಹರೀಶ್ ರಾಜ್: ಕೋಮಲ್ ಅಭಿನಯದ 2020 ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನ್ನ ಬ್ಯಾನರ್​ನಲ್ಲಿಯೇ ಹಾರರ್ ಸಿನಿಮಾ ಪ್ಲಾನ್ ಆಗಿದೆ.

ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡದ ಕಲಾಕಾರ್ ಹರೀಶ್ ರಾಜ್ ಕನ್ನಡಿಗರ ಹೃದಯ ಗೆಲ್ಲೋಕೆ ಶುರು ಮಾಡಿದ್ದಾರೆ. ಹೋಗ್ತಾ ಹೋಗ್ತಾ ಆರ್ಯವರ್ಧನ್ ಪಾತ್ರವನ್ನ ಈ ರೋಲ್ ಮರೆಸಿದ್ರೂ ಮರೆಸಬಹುದು. ಆ ರೀತಿನೇ ಈ ಒಂದು ಪಾತ್ರ ಡಿಸೈನ್ ಆಗಿದೆ. ಯಾವುದುಕ್ಕೂ ವೇಟ್ ಮಾಡಿ.
First published: