• Home
  • »
  • News
  • »
  • entertainment
  • »
  • Gowri Shankar Hero: ಕೆರೆಬೇಟೆಗೆ ಹೊರಟು ನಿಂತ ರಾಜಹಂಸ ಹೀರೋ-ನಾಲ್ಕು ವರ್ಷದ ಬಳಿಕ ಮತ್ತೆ ಬಂದ ನಟ ಗೌರಿಶಂಕರ್

Gowri Shankar Hero: ಕೆರೆಬೇಟೆಗೆ ಹೊರಟು ನಿಂತ ರಾಜಹಂಸ ಹೀರೋ-ನಾಲ್ಕು ವರ್ಷದ ಬಳಿಕ ಮತ್ತೆ ಬಂದ ನಟ ಗೌರಿಶಂಕರ್

ನಾಲ್ಕು ವರ್ಷದ ಬಳಿಕ ಮತ್ತೆ ಬಂದ ನಟ ಗೌರಿಶಂಕರ್

ನಾಲ್ಕು ವರ್ಷದ ಬಳಿಕ ಮತ್ತೆ ಬಂದ ನಟ ಗೌರಿಶಂಕರ್

ಕೆರೆಬೇಟೆ ಅನ್ನೋದು ನಿಜಕ್ಕೂ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ಕೆರೆ ಬತ್ತಿ ಶೇಕಡ 70 ರಷ್ಟು ನೀರು ಬತ್ತಿದ ಸಮಯದಲ್ಲಿಯೇ ಮೀನು ಹಿಡಿಯೋದನ್ನೆ ಇಲ್ಲಿ ಕೆರೆಬೇಟೆ ಅಂತಲೇ ಕರೆಯುತ್ತಾರೆ. ಇದರ ಸುತ್ತವೇ ಇಡೀ ಸಿನಿಮಾ ಇರುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಕೆರೆಬೇಟೆ (Kerebete) ಮೇಲೆ ಸಿನಿಮಾ ಬರುತ್ತಿದೆ. ಈ ಚಿತ್ರದ ಕಥೆಯನ್ನ ಅಷ್ಟೇ ರೋಚಕವಾಗಿಯೇ ಬರೆಯಲಾಗಿದೆ. ಇದರ ಸುತ್ತ ಇಲ್ಲಿ ಲವ್ ಸ್ಟೋರಿ ಕೂಡ ಇದೆ. ವಿಶೇಷವಾಗಿ ಈ ಚಿತ್ರಕ್ಕೆ ಕರ್ನಾಟಕದಲ್ಲಿ ನಡೆದ ಒಂದು ಘಟನೆಯ (Inspiration) ಸ್ಪೂರ್ತಿ ಕೂಡ ಇದೆ. ಹೆಚ್ಚು ಕಡಿಮೆ ಒಂದು ವರ್ಷದ ಅವಧಿಯಲ್ಲಿಯೇ ಸಿನಿಮಾದ ಸ್ಕ್ರಿಪ್ಟ್ (Script) ರೆಡಿ ಮಾಡಲಾಗಿದೆ. ನಾಯಕ ನಟನೇ ಈ ಚಿತ್ರಕ್ಕೆ (Dialogue) ಡೈಲಾಗ್ ಬರೆದುಕೊಂಡಿದ್ದಾರೆ. ಇವರ ಸಹೋದರನೇ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ಸಂಪೂರ್ಣ ಮಲೆನಾಡ ಭಾಷೆಯನ್ನ ಆಧರಿಸಿ ಬರ್ತಿರೋ ಈ ಚಿತ್ರದ ಮೂಲಕ ರಾಜಹಂಸ ನಾಯಕ ನಟ ಗೌರಿಶಂಕರ್ ನಾಲ್ಕು ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ನ್ಯೂಸ್​-18 ಕನ್ನಡ ಡಿಜಿಟಲ್​ ಜೊತೆಗೆ ತಮ್ಮ ಈ ಸಿನಿಮಾದ ಇನ್ನಷ್ಟು ವಿಶೇಷಗಳನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.


ಕೆರೆಬೇಟೆ ಮೇಲೆ ಮಲೆನಾಡ ಭಾಷೆ ಕನ್ನಡ ಸಿನಿಮಾ
ಕನ್ನಡದಲ್ಲಿ ವಿವಿಧ ಭಾಗದ ಕನ್ನಡ ಭಾಷೆಯ ಸಿನಿಮಾ ಬಂದಿವೆ. ಅದೇ ರೀತಿ ಸಂಪೂರ್ಣ ಮಲೆನಾಡ ಭಾಷೆ ಮೇಲೆ ಸಿನಿಮಾ ಬಂದಿಲ್ಲ. ಈ ಭಾಷೆಯಲ್ಲಿಯೇ ಸಿನಿಮಾವನ್ನ ಮಾಡ್ತಾಯಿದ್ದೀವಿ. ಈ ಲೆಕ್ಕದಲ್ಲಿ ನಮ್ಮದೇ ಫಸ್ಟ್ ಸಿನಿಮಾ. ಈ ಭಾಷೆಯನ್ನ ಇಟ್ಟುಕೊಂಡೇ ಒಂದು ಅದ್ಭುತ ಕಥೆ ಹೇಳ್ತಿದ್ದೇವೆ.


ಹೀಗೆ ತುಂಬಾ ಉತ್ಸಾಹದಲ್ಲಿಯೇ ನಟ-ನಿರ್ಮಾಪಕ ಗೌರಿಶಂಕರ್ ಮಾತನಾಡಿದ್ರು. ಕಳೆದ ನಾಲ್ಕು ವರ್ಷದಿಂದ ಗೌರಿಶಂಕರ್ ಸಿನಿಮಾರಂಗದಿಂದ ದೂವರೇ ಉಳಿದ್ದರು. ಇದಕ್ಕೆ ಕಾರಣ ಒಂದು ಕೊರೊನಾ ಆದ್ರೆ, ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ಎಂದು ಗೌರಿಶಂಕರ್ ಹೇಳಿಕೊಂಡಿದ್ದಾರೆ.


Kannada Actor Gowri Shankar New Project Kerebete Film Launched
ಕೆರೆಬೇಟೆ ಮೇಲೆ ಸಿನಿಮಾ-ಸ್ಕ್ರಿಪ್ಟ್​​ಗಾಗಿ ಒಂದು ವರ್ಷ ಟೈಮ್


ಕೆರೆಬೇಟೆ ಮೇಲೆ ಸಿನಿಮಾ-ಸ್ಕ್ರಿಪ್ಟ್​​ಗಾಗಿ ಒಂದು ವರ್ಷ ಟೈಮ್
ಕೆರೆಬೇಟೆ ಅನ್ನೋದು ನಿಜಕ್ಕೂ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ಕೆರೆ ಬತ್ತಿ ಶೇಕಡ 70 ರಷ್ಟು ನೀರು ಬತ್ತಿದ ಸಮಯದಲ್ಲಿಯೇ ಮೀನು ಹಿಡಿಯೋದನ್ನೆ ಇಲ್ಲಿ ಕೆರೆಬೇಟೆ ಅಂತಲೇ ಕರೆಯುತ್ತಾರೆ. ಇದರ ಸುತ್ತವೇ ಇಡೀ ಸಿನಿಮಾ ಇರುತ್ತದೆ.


ಇದನ್ನೂ ಓದಿ: Abhishek Ambareesh: ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾ ಯಾವುದು?


ಇದನ್ನ ಸಿನಿಮಾ ರೂಪಕ್ಕೆ ತರುವ ಹೊತ್ತಿಗೆ ಹೆಚ್ಚು ಕಡಿಮೆ 8 ರಿಂದ 12 ತಿಂಗಳುಗಳೇ ಉರುಳಿ ಹೋಗಿವೆ. ಇಂತಹ ಈ ಸಿನಿಮಾವನ್ನ ಪಕ್ಕಾ ಪ್ಲಾನ್ ಮಾಡಿಯೇ ನಿರ್ಮಿಸುತ್ತಿದ್ದೇವೆ ಅಂತಲೇ ಗೌರಿಶಂಕರ್ ಚಿತ್ರದ ವಿವರಣೆ ನೀಡುತ್ತಾರೆ.


ಕೆರೆಬೇಟೆ ಚಿತ್ರಕ್ಕೆ ನೈಜ ಘಟನೆನೇ ಸ್ಪೂರ್ತಿ
ಕೆರೆಬೇಟೆ ಸಿನಿಮಾಕ್ಕೆ ಒಂದು ಸತ್ಯ ಘಟನೆಯ ಸ್ಪೂರ್ತಿ ಕೂಡ ಇದೆ. ಇದು ಕರ್ನಾಟಕದಲ್ಲಿ ನಡೆದ ಘಟನೆನೆ ಆಗಿದೆ. ಆದರೆ ಇದರಲ್ಲಿ ಒಂದು ಲವ್ ಸ್ಟೋರಿ ಕೂಡ ಇದೆ. ಈ ಪ್ರೇಮ ಕಥೆಯಲ್ಲಿ ಕೂಲಿ ಹುಡುಗನಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಅಂತಲೇ ಗೌರಿಶಂಕರ್ ತಮ್ಮ ಪಾತ್ರದ ವಿಶೇಷತೆಯನ್ನ ರಿವೀಲ್ ಮಾಡುತ್ತಾರೆ.


ಕೆರೆಬೇಟೆಗೆ ನಾಯಕ ನಟ ಗೌರಿಶಂಕರ್ ಡೈಲಾಗ್
ಕೆರೆಬೇಟೆ ಸಿನಿಮಾದ ಡೈಲಾಗ್ ಅನ್ನ ಸ್ವತಃ ಗೌರಿಶಂಕರ್ ಬರೆದಿದ್ದಾರೆ. ಆದರೆ ಗುರುಶಿವ ಹಿತೈಷಿ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ದೇಶನವನ್ನ ಕೂಡ ಮಾಡುತ್ತಿದ್ದಾರೆ. ನಾಯಕ ನಟ ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರ್​​ನಲ್ಲಿಯೇ ಈ ಚಿತ್ರ ನಿರ್ಮಿಸುತ್ತಿದ್ದಾರೆ.


ಇನ್ನು ಈ ಸಿನಿಮಾದ ಕಥೆ 2003 ಮತ್ತು 2004 ರ ಕಾಲಘಟ್ಟದಲ್ಲಿಯೇ ನಡೆಯುತ್ತದೆ. ಇಂತಹ ಈ ಸಿನಿಮಾವನ್ನ ಹೆಚ್ಚು ಕಡಿಮೆ 80 ರಿಂದ 90 ದಿನ ಚಿತ್ರೀಕರಿಸೋ ಪ್ಲಾನ್ ಹಾಕಲಾಗಿದೆ.


Kannada Actor Gowri Shankar New Project Kerebete Film Launched
ಕೆರೆಬೇಟೆ ಮೇಲೆ ಮಲೆನಾಡ ಭಾಷೆ ಕನ್ನಡ ಸಿನಿಮಾ


ಮಲೆನಾಡಿನ ದಟ್ಟ ಅರಣ್ಯ ಪ್ರದೇಶದಲ್ಲಿಯೇ ಸಿನಿಮಾವನ್ನ ಚಿತ್ರೀಕರಿಸೋ ಪ್ಲಾನ್ ಮಾಡಲಾಗಿದೆ. ಜೋಗದ ಸುತ್ತ ಮುತ್ತ ಪ್ರದೇಶದಲ್ಲಿಯೇ ಬರೋ ಕೋಗಾರ್ ಘಾಟ್ ಮತ್ತು ಬಿಳಿಗಾರ ಘಾಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ.


ಹೆಚ್ಚು ಕಡಿಮೆ 30 ದಿನಗಳವರೆಗೂ ಈ ಒಂದು ಪ್ರದೇಶದಲ್ಲಿಯೇ ಕೆರೆಬೇಟೆ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಇದಾದ್ಮೇಲೆ ಡಿಸೆಂಬರ್ ತಿಂಗಳಲ್ಲಿ 25 ದಿನ ಸೊರಬದಲ್ಲಿ ಚಿತ್ರೀಕರಿಸೋ ಪ್ಲಾನ್ ಆಗಿದೆ.


ಇದನ್ನೂ ಓದಿ: Urfi Javed: ಫ್ಯಾಷನ್ ಹೆಸರಲ್ಲಿ ಅನ್ಯರಿಂದ ಮೈಮುಚ್ಚಿಸಿಕೊಂಡ ಉರ್ಫಿ! ಇನ್ನೂ ಏನೇನ್ ನೋಡ್ಬೇಕು ಅಂತಿದ್ದಾರೆ ನೆಟ್ಟಿಗರು


ಇಷ್ಟು ಮಾಹಿತಿ ಕೊಟ್ಟ ನಾಯಕ ನಟ ಗೌರಿಶಂಕರ್, ಅವರ ಈ ಚಿತ್ರದಲ್ಲಿ ನವ ನಟಿಯ ಪರಿಚಯ ಆಗುತ್ತಿದೆ. ಗೌರಿಶಂಕರ್​ಗೆ ಜೋಡಿಯಾಗಿ ನವ ನಟಿ ಬಿಂದು ಶಿವರಾಮ್ ಅಭಿನಯಿಸುತ್ತಿದ್ದಾರೆ.


ಗಗನ್ ಬಡೇರಿಯಾ ಸಂಗೀತ ಕೊಡ್ತಿದ್ದಾರೆ. ಕೀರ್ತನ್ ಪೂಜಾರಿ ಚಿತ್ರಕ್ಕೆ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ.

First published: