• Home
  • »
  • News
  • »
  • entertainment
  • »
  • Ganesh-Kantara: ಕಾಂತಾರ ಚಿತ್ರ ವೀಕ್ಷಿಸಲು ಕಾತರಿಸ್ತಿರೋ ಗೋಲ್ಡನ್ ಸ್ಟಾರ್!

Ganesh-Kantara: ಕಾಂತಾರ ಚಿತ್ರ ವೀಕ್ಷಿಸಲು ಕಾತರಿಸ್ತಿರೋ ಗೋಲ್ಡನ್ ಸ್ಟಾರ್!

ಕೀನ್ಯಾದಿಂದೇ ಕಾಂತಾರ ತಂಡಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್ ಗಣಿ

ಕೀನ್ಯಾದಿಂದೇ ಕಾಂತಾರ ತಂಡಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್ ಗಣಿ

ಕಾಂತಾರ ಸಿನಿಮಾ ವೀಕ್ಷಿಸಲು ಗೋಲ್ಡನ್ ಸ್ಟಾರ್ ಗಣೇಶ್ ಕಾಯುತ್ತಿದ್ದಾರೆ. ಚಿತ್ರೀಕರಣದ ಕೆಲಸ ಮುಗಿಯೋದೇ ತಡ, ಕೀನ್ಯಾದಿಂದ ಬೆಂಗಳೂರಿಗೆ ಬಂದು ಕಾಂತಾರ ಸಿನಿಮಾ ನೋಡಲಿದ್ದಾರೆ.

  • Share this:

ಸ್ಯಾಂಡಲ್​ವುಡ್ (Sandalwood) ನಾಯಕ ನಟ ರಿಷಬ್ ಶೆಟ್ಟಿ (Rishab Shetty) ಅಭಿನಯದ ಕಾಂತಾರ ಸಿನಿಮಾ ಭರ್ಜರಿಯಾಗಿಯೇ ಓಡ್ತಿದೆ. ಥಿಯೇಟರ್​ಗಳ ಗಲ್ಲಾ ಪೆಟ್ಟಿಗೆನೂ ಭರ್ಜರಿಯಾಗಿಯೇ ತುಂಬಿಕೊಳ್ಳುತ್ತಿದೆ. ಚಿತ್ರಕ್ಕೆ ಸಿಗುತ್ತಿರೋ ರೆಸ್ಪಾನ್ಸ್ (Good Response) ಕೂಡ ಸಖತ್ ಆಗಿಯೇ ಇದೆ. ಕಳೆದ ತಿಂಗಳ ಕೊನೆಯ ದಿನ 30 ರಂದು ಸಿನಿಮಾ ರಿಲೀಸ್ ಆಗಿತ್ತು. ಆಗಲೇ ಈ ಚಿತ್ರವನ್ನ ವೀಕ್ಷಿಸಿದ ಸ್ಟಾರ್​ ನಟರು ವಾವ್ ಅಂತಲೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಾಹುಬಲಿ ಪ್ರಭಾಸ್ ಕೂಡ ಈ ಚಿತ್ರವನ್ನ ವೀಕ್ಷಿಸಿ ಭಲೆ ರೇ ಭಲೆ ಅಂತಲೇ ಹೇಳಿದ್ದರು. ಈಗ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕಾಂತಾರ ಸಿನಿಮಾ ವೀಕ್ಷಣೆಗೆ ಕಾಯುತ್ತಿದ್ದಾರೆ. ಈ ಬಗ್ಗೆ ಸೋಷಿಯ್ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಆಫ್ರಿಕಾ ದೇಶದಲ್ಲಿಯೇ ಇದ್ದಾರೆ. ಬಾನದಾರಿಯಲ್ಲಿ ಸಿನಿಮಾಗೋಸ್ಕರವೇ ಕೀನ್ಯಾದಲ್ಲಿಯೇ ಗಣೇಶ್ ಆ್ಯಂಡ್ ಟೀಮ್ ಇದೆ.
ಕೀನ್ಯಾ ದೇಶದಲ್ಲಿಯೇ ಇಡೀ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇದರ ಸಲುವಾಗಿಯೇ ಕಳೆದ ಸುಮಾರು 15-20 ದಿನಗಳಿಂದಲೂ ಗಣೇಶ್ ಸಿನಿಮಾ ಕೆಲಸದಲ್ಲಿಯೇ ನಿರತರಾಗಿದ್ದಾರೆ.


ಆ ಕಾರಣಕ್ಕೇನೆ ಗೋಲ್ಡನ್ ಸ್ಟಾರ್ ಗಣೇಶ್ ಬಿಡುವಿನ ವೇಳೆ ಇಲ್ಲಿ ಮಕ್ಕಳ ಜೊತೆಗೆ ಟೈಮ್ ಸ್ಪೆಂಡ್ ಮಾಡುತ್ತಾರೆ. ಇಲ್ಲಿ Ostrich Ride ಕೂಡ ಮಾಡಿ ಗೋಲ್ಡನ್ ಸ್ಟಾರ್ ಗಣೇಶ್ ಖುಷಿ ಪಡುತ್ತಿದ್ದಾರೆ.


Kannada Actor Golden Star Ganesh wants to See Kantara Film
ಕೀನ್ಯಾದಲ್ಲಿ ಗೋಲ್ಡನ್ ಸ್ಟಾರ್ ಸ್ಪೆಷಲ್ ರೈಡ್


ಇದರ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಆಕ್ಟೀವ್ ಆಗಿದ್ದಾರೆ. ತಮ್ಮ ಕೀನ್ಯಾ ಪಯಣದ ವೀಡಿಯೋಸ್, ಫೋಟೋಸ್ ಹೀಗೆ ಎಲ್ಲವನ್ನೂ ಹಂಚಿಕೊಂಡು ತಮ್ಮ ದೈನಂದಿನ ಅಪ್​ಡೇಟ್ಸ್ ನ್ನೂ ಕೊಡ್ತಾನೇ ಇದ್ದಾರೆ.


ಗೋಲ್ಡನ್ ಗಣಿಗೆ ಕಾಂತಾರ ಚಿತ್ರ ನೋಡುವ ಕಾತರ
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಸೆಪ್ಟೆಂಬರ್-29 ಕ್ಕೆ ಬೆಂಗಳೂರಿನಲ್ಲಿ ಇದ್ದಿದ್ದರೇ ಪ್ರಿಮಿಯರ್ ಶೋದಲ್ಲಿಯೇ ಕಾಂತಾರ ಸಿನಿಮಾ ನೋಡಿರೋರು. ಆದರೆ ಬಾನದಾರಿಯಲ್ಲಿ ಸಿನಿಮಾ ಶೂಟಿಂಗ್ ಗಾಗಿಯೇ ಚಿತ್ರ ಬರೋ ಮುಂಚೇನೆ ಕೀನ್ಯಾ ದೇಶದಕ್ಕೆ ಪಯಣ ಬೆಳೆಸಿದ್ದರು.


ಇದನ್ನೂ ಓದಿ: Bigg Boss Season 9: ಕೊನೆ ಉಸಿರು ಇರೋ ತನ ಪ್ರೀತಿ ಮಾಡ್ತೀನಿ, ಬಿಗ್​ ಬಾಸ್ ಮನೆಯಲ್ಲಿ ಲವ್​ಸ್ಟೋರಿ!


ಹಾಗಾಗಿಯೇ ಕಾಂತಾರ ಸಿನಿಮಾ ನೋಡಲು ಗಣಿಗೆ ಆಗಿರಲಿಲ್ಲ. ಆದರೆ ಕೀನ್ಯಾದಲ್ಲಿದ್ದುಕೊಂಡೇ ಈಗ ಸೋಷಿಯಲ್ ಮೀಡಿಯಾ ಮೂಲಕ ಕಾಂತಾರ ಸಕ್ಸಸ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಶುಭ ಕೋರಿದ್ದಾರೆ.


ಕಾಂತಾರ ಸಿನಿಮಾ ತಂಡಕ್ಕೆ Congratulation ಎಂದ ಗಣಿ
ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಈಗ ಆಫ್ರೀಕಾ ದೇಶಕ್ಕೂ ತಲುಪಿ ಬಿಟ್ಟಿದೆ. ಗೋಲ್ಡನ್ ಗಣಿ ಈ ಚಿತ್ರದ ಸಕ್ಸಸ್ ಬಗ್ಗೆ ತಿಳಿದುಕೊಂಡಿದ್ದಾರೆ. ಇದರ ಓಟವನ್ನ ಗಮನಿಸಿದ್ದಾರೆ. ಜೊತೆಗೆ ಈಗ ಕಾಂತಾರ ಇಡೀ ಸಿನಿಮಾ ತಂಡಕ್ಕೆ Congratulation ಅಂತಲೇ ಸೋಷಿಯಲ್ ಮೀಡಿಯಾ ಮೂಲಕವೇ ಹೇಳಿದ್ದಾರೆ.


Kannada Actor Golden Star Ganesh wants to See Kantara Film
ಕೀನ್ಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್


ಕಾಂತಾರ ಸಿನಿಮಾ ನೋಡಲು ಕಾಯುತ್ತಿರುವೆ-ಗಣಿ
ಕಾಂತಾರ ಸಿನಿಮಾ ವೀಕ್ಷಿಸಲು ಗೋಲ್ಡನ್ ಸ್ಟಾರ್ ಗಣೇಶ್ ಕಾಯುತ್ತಿದ್ದಾರೆ. ಚಿತ್ರೀಕರಣದ ಕೆಲಸ ಮುಗಿಯೋದೇ ತಡ, ಅಲ್ಲಿಂದ ಬೆಂಗಳೂರಿಗೆ ಬಂದು ಕಾಂತಾರ ಸಿನಿಮಾ ನೋಡಲಿದ್ದಾರೆ. ಇದನ್ನ ಸ್ವತಃ ಗಣೇಶ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್​ ನಲ್ಲಿ ಹಂಚಿಕೊಂಡಿದ್ದಾರೆ.


ಕಾಂತಾರ ಸಿನಿಮಾ ಒಂದು ಡಿವೈನ್ ಬ್ಲಾಕ್ ಬಸ್ಟರ್ ಸಿನಿಮಾನೇ ಆಗಿದೆ. ಇದಕ್ಕೆ ಸಕ್ಸಸ್ ಸಿಗಲೇಬೇಕು. ಗೆಲುವಿಗೆ ಅರ್ಹವಾದ ಸಿನಿಮಾ ಈ ಕಾಂತಾರ ಅಂತಲೂ ಗೋಲ್ಡನ್ ಗಣಿ ಈ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನೂ ಬರೆದುಕೊಂಡಿದ್ದಾರೆ.


ಕಾಂತಾರ ಸಿನಿಮಾ ಕಳೆದ 30 ರಿಂದ ಇಲ್ಲಿವರೆಗೂ ಓಡ್ತಾನೇ ಇದೆ. ಚಿತ್ರದ ಕುರಿತು ಜನ ಮಾತನಾಡಿಕೊಳ್ಳುತ್ತಲೇ ಇದ್ದಾರೆ. ಈ ಕಳೆದ ಶುಕ್ರವಾರ ಕಾಂತಾರ ಸೇರಿ ಒಟ್ಟು ಮೂರು ಸಿನಿಮಾಗಳು ರಿಲೀಸ್ ಆಗಿದ್ದವು.


ಇದನ್ನೂ ಓದಿ: Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?


ಆದರೆ ಜನ ಈಗ ಕಾಂತಾರ ಸಿನಿಮಾವೊಂದನ್ನ ಮಾತ್ರ ನೋಡೋಕೆ ಹೆಚ್ಚು ಇಷ್ಟಪಡುತ್ತಿದ್ದಾರೆ. ಅವರಂತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಕಾಂತಾರ ಚಿತ್ರ ವೀಕ್ಷಣೆಗೆ ಬೆಂಗಳೂರಿಗೆ ಬರೋದಕ್ಕೆ ಕಾಯುತ್ತಿದ್ದಾರೆ.

First published: