Gaalipata 2: ಭಟ್ಟರ ಬತ್ತಳಿಕೆಯಲ್ಲಿ ಮತ್ತೊಂದು 'ಎಣ್ಣೆ ಸಾಂಗ್', ಗಾಳಿಪಟ 2 ಚಿತ್ರದ ಹೊಸ ವಿಡಿಯೋ ಸಾಂಗ್​ ರಿಲೀಸ್ ಡೇಟ್​ ಫಿಕ್ಸ್

ಗಾಳಿಪಟ 2 ಚಿತ್ರದ ‘ದೇವ್ಲೆ ದೇವ್ಲೆ‘ ಎಂಬ ಎಣ್ಣೆ ಸಾಂಗ್ ರಿಲೀಸ್ ಆಗಲಿದೆ. ಈಗಾಗಲೇ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಡೇಟ್​ ಅನ್ನೂ ಸಹ ಚಿತ್ರತಂಡ ತಿಳಿಸಿದೆ.

ಗಾಳಿಪಟ 2

ಗಾಳಿಪಟ 2

  • Share this:
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ (Director Yograj Bhat) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಗಾಳಿಪಟ-2' (Gaalipata 2) ಚಿತ್ರದ 2ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಹಿಟ್​ ಆಗಿವೆ. ಎಕ್ಸಾಂ.. ಎಕ್ಸಾಂ.. ಮತ್ತು ನೀನಾಡಿದ ಹಾಡು ರಿಲೀಸ್ ಆಗಿದ್ದು ಎಲ್ಲಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಚಿತ್ರದ 3ನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಹೌದು, ಈ ಬಾರಿ ಮತ್ತೊಮ್ಮೆ ಭಟ್ಟರು ಎಣ್ಣೆ ಸಾಂಗ್​ ತಂದಿದ್ದು, ಈ ಹಾಡು ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಡೌಟ್​ ಇಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಯೋಗರಾಜ್​ ಭಟ್​ ಮತ್ತು ಗಾಯಕ ವಿಜಯ್ ಪ್ರಕಾಶ್ (Vijay Prakash) ಕಾಂಬಿನೇಷನ್​ ನಲ್ಲಿ ಈ ಸಾಂಗ್ ಬಿಡುಗಡೆ ಆಗುತ್ತಿದ್ದು, ದಿನಾಂಕವನ್ನೂ ಸಹ ಭಟ್ಟರು ತಿಳಿಸಿದ್ದಾರೆ.

ಬರ್ತಿದೆ ‘ದೇವ್ಲೆ ದೇವ್ಲೆ‘ ಸಾಂಗ್​:

ಹೌದು, ಈಗಾಗಲೇ ಯೋಗರಾಜ್​ ಭಟ್​ ಸಾಹಿತ್ಯ ಬರೆದಿರುವ ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು, ನಾವ್ ಮನೇಗ್ ಹೋಗೋದಿಲ್ಲ ಹಾಡುಗಳು ಸೂಪರ್ ಹಿಟ್ ಆಗಿದೆ. ಇದೀಗ ಭಟ್ಟರ ಸಾಹಿತ್ಯದಲ್ಲಿ ಮತ್ತೊಂದು ಎಣ್ಣೆ ಸಾಂಗ್ ಬರುತ್ತಿದೆ. ಗಾಳಿಪಟ 2 ಚಿತ್ರದ ‘ದೇವ್ಲೆ ದೇವ್ಲೆ‘ ಎಂಬ ಎಣ್ಣೆ ಸಾಂಗ್ ರಿಲೀಸ್ ಆಗಲಿದೆ. ಈಗಾಗಲೇ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಡೇಟ್​ ಅನ್ನೂ ಸಹ ಚಿತ್ರತಂಡ ತಿಳಿಸಿದ್ದು, ಹಾಡು ಜುಲೈ 14 (ನಾಳೆ) ಸಂಜೆ 5 ಗಂಟೆ 6 ನಿಮಿಷಕ್ಕೆ ಬಿಡುಗಡೆ ಆಗಲಿದೆ.ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋ ಮತ್ತು ಪೋಸ್ಟರ್​ ಸಖತ್ ವಿಭಿನ್ನ ವಾಗಿದ್ದು, ಎಲ್ಲರ ಹೆಸರುಗಳನ್ನು ವಿಚಿತ್ರವಾಗಿ ಬರೆದಿದ್ದಾರೆ. ಹೌದು, ಎಲ್ಲರ ಹೆಸರಿನಲ್ಲಿರುವ ‘ರ‘ ಅಕ್ಷರದ ಬಲದಿಗೆ ‘ಲ‘ ಅಕ್ಷರವನ್ನು ಬಳಸುವ ಮೂಲಕ ವಿಭಿನ್ನವಾಗಿ ಪೋಸ್ಟರ್​ ಡಿಸೈನ್ ಮಾಡಲಾಗಿದೆ. ಇನ್ನು, ಈ ಎಣ್ಣೆ ಸಾಂಗಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದು, ಯೋಗರಾಜ್ ಭಟ್ ಸಾಹಿತ್ಯ ಹಾಗೂ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೂವರು ದಿಗ್ಗಜರ ಕಾಂಬಿನೇಷನ್​ನಲ್ಲಿ ಮತ್ತೊಮ್ಮೆ ಎಣ್ಣೆ ಸಾಂಗ್​ ಬರುತ್ತಿದ್ದು, ಈ ಹಾಡು ಸಖತ್ ಕಿಕ್​ ಕೊಡಲಿದೆ ಎಂದು ಚಿತ್ರತಂಡ ತಿಳಿಸಿದೆ.

ಹೊಸ ಪೋಸ್ಟರ್​


ಗಣಿ ಮತ್ತು ಭಟ್ಟರ ಮೇಲೆ ಹೆಚ್ಚಿನ ನಿರೀಕ್ಷೆ:

ಇನ್ನು, ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ. ಚಿತ್ರವು ಇದೇ ಆಗಷ್ಟ್ 12ರಂದು ರಿಲೀಸ್ ಅಗಲಿದೆ.

ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಹತ್ಯೆಗೆ ಮಾಸ್ಟರ್ ಪ್ಲಾನ್, 4 ಲಕ್ಷದ ರೈಫಲ್ ಖರೀದಿಸಿದ್ದ ಹಂತಕರು!

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
Published by:shrikrishna bhat
First published: