• Home
  • »
  • News
  • »
  • entertainment
  • »
  • Golden Star Ganesh: ಕೀನ್ಯಾದ ಶಿಲಾ ಯುಗದ ಗುಹೆಯಲ್ಲಿ ಗೋಲ್ಡನ್ ಸ್ಟಾರ್! ಏನ್ಮಾಡ್ತಿದ್ದಾರೆ ಅಲ್ಲಿ?

Golden Star Ganesh: ಕೀನ್ಯಾದ ಶಿಲಾ ಯುಗದ ಗುಹೆಯಲ್ಲಿ ಗೋಲ್ಡನ್ ಸ್ಟಾರ್! ಏನ್ಮಾಡ್ತಿದ್ದಾರೆ ಅಲ್ಲಿ?

ಗೋಲ್ಡನ್ ಸ್ಟಾರ್ ಗಣೇಶ್ ಕೀನ್ಯಾ ಪಯಣ

ಗೋಲ್ಡನ್ ಸ್ಟಾರ್ ಗಣೇಶ್ ಕೀನ್ಯಾ ಪಯಣ

ಬಾನದಾರಿಯಲ್ಲಿ ಚಿತ್ರದಲ್ಲಿ ಮಂಗಳೂರಿನ ಸಮುದ್ರವೂ ಇರುತ್ತದೆ ಕೀನ್ಯಾದ ಅದ್ಭುತಗಳೂ ಇರುತ್ತವೆ. ಎಲ್ಲವೂ ಇರೋ ಈ ಚಿತ್ರ ಈಗಲೇ ಈ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸಿದೆ ಈಗಾಗಲೇ ಬಿಟ್ಟಿರೋ ಪೋಸ್ಟರ್​ಗಳಲ್ಲೂ ಕೀನ್ಯಾದ ಜನರ ಚಿತ್ರಣವೂ ಇದೆ.

  • Share this:

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸಖತ್ ಪ್ಲೇಸ್​ನಲ್ಲಿಯೇ ಈಗ ಚಿತ್ರೀಕರಣ (Shooting) ಮಾಡುತ್ತಿದ್ದಾರೆ. ದೂರದ ಆಫ್ರಿಕಾದ ಕೀನ್ಯಾದಲ್ಲಿ (Kenya) ಗೆಳೆಯ ಪ್ರೀತಂ ಗುಬ್ಬಿ ಹಾಗೂ ನಟ ರಂಗಾಯಣ ರಘು (Rangayana Raghu) ಸೇರಿದಂತೆ ಬಾನದಾರಿಯಲ್ಲಿ ಸಿನಿಮಾ ಟೀಮ್ ಇಲ್ಲಿಗೆ ಬಂದಿದೆ. ಕಳೆದ ಒಂದು ವಾರಕ್ಕೂ ಹೆಚ್ಚು ಟೈಮ್ ಇಲ್ಲಿಯೇ ಚಿತ್ರೀಕರಣ ಮಾಡುತ್ತಿದೆ. ಇಲ್ಲಿಯ ಪ್ರಮುಖ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವೂ ನಡೆದಿದೆ. ಅಲ್ಲಿಂದಲೇ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಈ ಸಿನಿಮಾದ ಅಪ್​​ಡೇಟ್​ ಅನ್ನೂ ಹಂಚಿಕೊಳ್ತಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಕೂಡ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ವೀಡಿಯೋಗಳನ್ನೂ ಹಂಚಿಕೊಂಡಿದ್ದಾರೆ. ಅದರಂತೆ ನಮ್ಮ ಜೊತೆಗೆ ಇಲ್ಲಿಯ ಒಂದು ಗುಹೆಯ ಅದ್ಭುತ ವೀಡಿವೊಂದನ್ನು ಶೇರ್ ಮಾಡಿದ್ದಾರೆ.


ಕೀನ್ಯಾದಲ್ಲಿರೋ ಶಿಲಾ ಯುಗದ ಗುಹೆ ಕಂಡು ಗಣಿ ಹೇಳಿದ್ದೇನು?
ಬಾನದಾರಿಯಲ್ಲಿ ಸಿನಿಮಾದ ಚಿತ್ರೀಕರಣ ಕೀನ್ಯಾದಲ್ಲಿ ನಡೆಯುತ್ತಿದೆ. ಇಲ್ಲಿಯ ಸುಂದರ ತಾಣಗಳು ಈ ಮೂಲಕ ಕನ್ನಡದ ಬೆಳ್ಳಿ ತೆರೆ ಮೇಲೂ ಮೂಡಿ ಬರಲಿವೆ. ಇದಕ್ಕಾಗಿಯೇ ಕಳೆದ ಒಂದು ವಾರಕ್ಕೂ ಹೆಚ್ಚು ಸಮಯದಿಂದಲೇ ಸಿನಿಮಾ ಟೀಮ್ ಚಿತ್ರೀಕರಣದಲ್ಲಿ ನಿರತವಾಗಿದೆ.


Kannada Actor Golden Star Ganesh in Kenya Stone age Cave
ರಂಗಾಯಣ ರಘು ಹಾಗೂ ಗಣೇಶ್ ಕೀನ್ಯಾ ಪಯಣದ ಕ್ಷಣ


ಗೋಲ್ಡನ್ ಸ್ಟಾರ್ ಗಣೇಶ್ ಆ್ಯಂಡ್ ಟೀಮ್ ಕೆಲವು ದಿನಗಳ ಹಿಂದೆ ಇಲ್ಲಿಯ ಲೋಕಲ್ ಮಾರುಕಟ್ಟೆಯಲ್ಲಿ ಚಿತ್ರೀಕರಣ ಮಾಡಿತ್ತು. ಇಲ್ಲಿಯ ಮಾರುಕಟ್ಟೆಯ ಶೂಟಿಂಗ್​ನ ಝಲಕ್ ವೀಡಿಯೋವೊಂದನ್ನ ಕೂಡ ನಿರ್ದೇಶಕ ಪ್ರೀತಂ ಗುಬ್ಬಿ ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ: Olavina Nildana: ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್! ಕಾಲೇಜಿನಲ್ಲಿ ಎಲ್ಲರ ಮುಂದೆ ಹೋಯ್ತು ಮರ್ಯಾದೆ


ಶಿಲಾ ಯುಗದ ಗುಹೆಯ ವೀಡಿಯೋ ಹಂಚಿಕೊಂಡ ಗೋಲ್ಡನ್ ಗಣಿ
ಇದಾದ ಮೇಲೆ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲೂ ಒಂದಷ್ಟು ವೀಡಿಯೋ ಶೇರ್ ಮಾಡಿಕೊಂಡಿದ್ದರು. ಆ ವೀಡಿಯೋದಲ್ಲಿ ಗಣೇಶ್ ಕೀನ್ಯಾದ ಮಕ್ಕಳ ಜೊತೆಗೆ ಡ್ಯಾನ್ಸ್ ಮಾಡಿರೋ ವೀಡಿಯೋ ಒಂದನ್ನ ಹಂಚಿಕೊಂಡು ಕೀನ್ಯಾದ ಆ ಅದ್ಭುತ ಸಮಯದ ಖುಷಿ ಹಂಚಿಕೊಂಡಿದ್ದರು.
ಈಗ ಇದೇ ಗಣೇಶ್ ಇಲ್ಲಿಯ ಶಿಲಾಯುಗದ ಗುಹೆಯೊಂದಕ್ಕೆ ಹೋಗಿದ್ದಾರೆ. ಇದು ಕೂಡ ಚಿತ್ರದಲ್ಲಿ ಬರೋ ದೃಶ್ಯವೇ ಆಗಿದೆ. ಶಿಲಾ ಯುಗದ ಈ ಗುಹೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿಯ ವ್ಯಕ್ತಿಯ ಜೊತೆಗೆ ಒಳಗೆ ಬರ್ತಾರೆ. ಗಣೇಶ್ ಬರೋ ಮುಂಚೇನೆ ಪ್ರೀತಂ ಗುಬ್ಬಿ ಹಾಗೂ ರಂಗಾಯಣ ರಘು ಕೂಡ ಗುಹೆಯೊಳಗೆ ಬಂದಿರುತ್ತಾರೆ.


ಆಗ ಹೊರಗಡೆಯಿಂದ ಶಿಲಾ ಯುಗದ ಈ ಗುಹೆ ಒಳಗೆ ಬರೋವಾಗ ಅನುಭವ ನಿಜಕ್ಕೂ ಅನ್ಯನ ಅಂತಲೇ ಗೋಲ್ಡನ್ ಸ್ಟಾರ್ ಗಣೇಶ್ ಇದೇ ವೀಡಿಯೋದ ಕೊನೆಯಲ್ಲಿ ಬಣ್ಣಿಸುತ್ತಾರೆ.


ಕನ್ನಡದ ಬಾನದಾರಿಯಲ್ಲಿ ಕೀನ್ಯಾದ ಅದ್ಭುತ ತಾಣಗಳ ಚಿತ್ರಣ
ಅಷ್ಟು ವಿಶೇಷ ಅನಿಸೋ ಈ ಶಿಲಾ ಯುಗದ ಗುಹೆಯ ಅದ್ಭುತ ದೃಶ್ಯಗಳು ಬಾನದಾರಿಯಲ್ಲಿ ಚಿತ್ರದಲ್ಲಿ ಇರುತ್ತವೆ ಅನ್ನೋದೇ ವಿಶೇಷ. ನಿರ್ದೇಶಕ ಪ್ರೀತಂ ಗುಬ್ಬಿ ಶೇಕಡ 60 ರಷ್ಟು ತಮ್ಮ ಸಿನಿಮಾದಲ್ಲಿ ಕೀನ್ಯಾ ಇರುತ್ತದೆ ಅಂತಲೇ ಹೇಳಿದ್ದರು. ಆ ಪ್ರಕಾರ ಇಲ್ಲಿಯ ಅದ್ಭುತಗಳು ಕನ್ನಡದ ತೆರೆ ಮೇಲೆ ಬರ್ತಿವೆ.


ಇದನ್ನೂ ಓದಿ: Janardhana Reddy Son: ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಮೊದಲ ಚಿತ್ರದ ಟೈಟಲ್ ನಾಳೆ ರಿವೀಲ್


ಬಾನದಾರಿಯಲ್ಲಿ ಚಿತ್ರದಲ್ಲಿ ಮಂಗಳೂರಿನ ಸಮುದ್ರವೂ ಇರುತ್ತದೆ. ಕೀನ್ಯಾದ ಅದ್ಭುತಗಳೂ ಇರುತ್ತವೆ. ಎಲ್ಲವೂ ಇರೋ ಈ ಚಿತ್ರ ಈಗಲೇ ಈ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸಿದೆ. ಈಗಾಗಲೇ ಬಿಟ್ಟಿರೋ ಪೋಸ್ಟರ್​ಗಳಲ್ಲೂ ಕೀನ್ಯಾದ ಜನರ ಚಿತ್ರಣವೂ ಇದೆ.


ಅಲ್ಲಿಗೆ ಡೈರೆಕ್ಟರ್ ಪ್ರೀತಂ ಗುಬ್ಬಿ ತಮ್ಮ ಈ ಚಿತ್ರದಲ್ಲಿ ಏನೋ ಹೊಸದನ್ನ ಟ್ರೈ ಮಾಡಿದ್ದಾರೆ. ಅದು ಅದ್ಭುತವಾಗಿಯೇ ಬರುತ್ತದೆ ಅನ್ನೋ ಭರವಸೆಯನ್ನೂ ಮೂಡಿಸಿದೆ. ಸದ್ಯಕ್ಕೆ ಇಷ್ಟು, ಬಾಕಿ ಅಪ್​ಡೇಟ್ಸ್ ಗಾಗಿ ಕಾಯ್ತಾಯಿರಿ.

First published: