• Home
  • »
  • News
  • »
  • entertainment
  • »
  • Ganesh In Kenya Market: ಆಫ್ರಿಕಾ ದೇಶದ ಕೀನ್ಯಾ ಮಾರ್ಕೆಟ್​ ನಲ್ಲಿ ಗೋಲ್ಡನ್ ಗಣಿ ಸಖತ್ ರೋಮಿಂಗೋ ರೋಮಿಂಗ್

Ganesh In Kenya Market: ಆಫ್ರಿಕಾ ದೇಶದ ಕೀನ್ಯಾ ಮಾರ್ಕೆಟ್​ ನಲ್ಲಿ ಗೋಲ್ಡನ್ ಗಣಿ ಸಖತ್ ರೋಮಿಂಗೋ ರೋಮಿಂಗ್

ಕೀನ್ಯಾದ ಲೋಕಲ್ ಮಾರುಕಟ್ಟೆಯಲ್ಲಿ ಸ್ಟಾರ್ ಗಣೇಶ್

ಕೀನ್ಯಾದ ಲೋಕಲ್ ಮಾರುಕಟ್ಟೆಯಲ್ಲಿ ಸ್ಟಾರ್ ಗಣೇಶ್

ಆಫ್ರಿಕಾ ದೇಶದ ಕೀನ್ಯಾದಲ್ಲಿಯೆ ಗೋಲ್ಡನ ಗಣಿ ರೋಮಿಂಗೋ ರೋಮೀಂಗ್. ಆದರೆ ಈ ರೋಮಿಂಗ್ ಯಾಕೆ? ಈ ಒಂದು ಪ್ರಶ್ನೆಗೆ ಉತ್ತರ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ.

  • Share this:

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ದೂರದ ಆಫ್ರಿಕಾ ದೇಶದಲ್ಲಿಯೇ ಈಗ ಬೀಡು ಬಿಟ್ಟಿದ್ದಾರೆ. ಆಫ್ರಿಕಾ (Africa) ದೇಶದ ಕೀನ್ಯಾದಲ್ಲಿಯೆ (Kenya) ಗೋಲ್ಡನ ಗಣಿ ರೋಮಿಂಗೋ ರೋಮೀಂಗ್. ಆದರೆ ಈ ರೋಮಿಂಗ್ ಯಾಕೆ? ಈ ಒಂದು ಪ್ರಶ್ನೆಗೆ ಉತ್ತರ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ಕೀನ್ಯಾದ ಆ ಒಂದು ಮಾರುಕಟ್ಟೆಯಲ್ಲಿ ಗಣೇಶ್ ಆ್ಯಂಡ್ ಟೀಮ್ ಸಖತ್ ಮಜಾ ಮಾಡುತ್ತಿದೆ. ಗಣೇಶ್ ಕೂಡ ಸುಮ್ನೆ ಕೂತಿಲ್ಲ. ಸಣ್ಣ ಹಾದಿಯ ದೊಡ್ಡ ಲೋಕಲ್ (Kenya Local Market) ಮಾರುಕಟ್ಟೆಯಲ್ಲಿ ಮನಸೋಯಿಚ್ಛೆ ಓಡಾಡಿ ಬಿಟ್ಟಿದ್ದಾರೆ. ಆದರೆ ಇದನ್ನ ಕಂಡ ಡೈರೆಕ್ಟರ್ ಪ್ರೀತಂ ಗುಬ್ಬಿ ಏನ್ ಮಾಡಿದ್ರು ಗೊತ್ತೆ? ಪ್ರೀತಂ ಗುಬ್ಬಿ ಜೊತೆಗೆ ಇಲ್ಲಿಗೆ ಬಂದ ತಂಡದ ಇತರ ಸದಸ್ಯರು ಏನ್ ಮಾಡುತ್ತಿದ್ರೇ ಗೊತ್ತೇ, ಹೌದು, ಈ ಎಲ್ಲ ಡಿಟೈಲ್ಸ್ ಇಲ್ಲಿದೆ ಓದಿ.


ಬಾನದಾರಿಯಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿಯೇ ಗೋಲ್ಡನ್ ಸ್ಟಾರ್ ಗಣೇಶ್ ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದಿದ್ದಾರೆ. ಹೆಚ್ಚು ಕಡಿಮೆ ಕಳೆದ ಒಂದು ವಾರದ ಹಿಂದೇನೆ ಬಾನದಾರಿಯಲ್ಲಿ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
ಆಫ್ರಿಕಾ ದೇಶದಲ್ಲಿ ಬಾನದಾರಿಯಲ್ಲಿ ಸಿನಿಮಾ ಟೀಮ್
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಾಯಕಿ ರುಕ್ಮಿಣಿ ವಸಂತ್ ಅವರ ಒಂದಷ್ಟು ಪ್ರಮುಖ ಸೀನ್​ಗಳನ ಚಿತ್ರೀಕರಣವೂ ಇಲ್ಲಿ ಆಗಿದೆ. ಸ್ವಲ್ಪ ಗ್ಯಾಪ್ ಕೊಟ್ಟು ಬಾನದಾರಿಯಲ್ಲಿ ಸಿನಿಮಾ ಟೀಮ್ ಆಫ್ರಿಕಾ ದೇಶಕ್ಕೆ ಪಯಣ ಬೆಳೆಸಿತ್ತು. ಇಲ್ಲಿಗೆ ಬಂದು ಏನ್ ಮಾಡುತ್ತಿದೆ ಗೊತ್ತೇ?


Kannada Actor Golden Star Ganesh in Kenya Local Market
ಕೀನ್ಯಾದಲ್ಲಿ "ಬಾನದಾರಿಯಲ್ಲಿ" ಸಿನಿಮಾ ಶೂಟಿಂಗ್


ಬಾನದಾರಿಯಲ್ಲಿ ಸಿನಿಮಾದಲ್ಲಿ ಆಫ್ರಿಕಾ ದೇಶದ ಬಹುತೇಕ ದೃಶ್ಯಗಳು ಇರುತ್ತವೆ. ಹೆಚ್ಚು ಕಡಿಮೆ ಇದು ಶೇಕಡ 60 ರಷ್ಟು ಅಂದ್ರೆ ತಪ್ಪೇ ಇಲ್ಲ. ಸ್ವತಃ ಪ್ರೀತಂ ಗುಬ್ಬಿ ಈ ವಿಷಯವನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ.


ಆಫ್ರಿಕಾದ ಕೀನ್ಯಾದಲ್ಲಿ ಬಾನದಾರಿಯಲ್ಲಿ ಶೂಟಿಂಗ್ ಜೋರು
ಡೈರೆಕ್ಟರ್ ಪ್ರೀತಂ ಗುಬ್ಬಿ ಆಫ್ರಿಕಾ ದೇಶದ ಕೀನ್ಯಾದಲ್ಲಿ ಚಿತ್ರೀಕರಣ ಮಾಡ್ತಾನೇ ಇದ್ದಾರೆ. ಪ್ರೀತಿ-ಪ್ರೇಮದ ಕಥೆ ಹೊಂದಿರೋ ಈ ಚಿತ್ರಕ್ಕಾಗಿಯೇ ಪ್ರೀತಂ ಕೀನ್ಯಾದ ಪ್ರಮುಖ ಸ್ಥಳದಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ. ಇತರ ದೇಶವನ್ನ ಬಿಟ್ಟು ಕೀನ್ಯಾದಲ್ಲಿಯೇ ಬಾನದಾರಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Pooja Hegde: ದೇಹದ ಆ ಭಾಗ ಬದಲಾಯಿಸೋಕೆ ಸರ್ಜರಿಗೆ ರೆಡಿಯಾದ ಪೂಜಾ ಹೆಗ್ಡೆ


ಬಾನದಾರಿಯಲ್ಲಿ ಸಿನಿಮಾದ ಚಿತ್ರೀಕರಣ ಕೀನ್ಯಾದಲ್ಲಿ ಬಲು ಜೋರಾಗಿಯೇ ನಡೆಯುತ್ತಿದೆ. ನಿರಂತರವಾಗಿಯೆ ಅನ್ನೋ ಹಾಗೇನೆ ಈ ಮೊದಲೇ ಪ್ಲಾನ್ ಮಾಡಿದಂತೇನೆ, ಪ್ರೀತಂ ಗುಬ್ಬಿ ತಮ್ಮ ಚಿತ್ರದ ಪ್ರಮುಖ ಸೀನ್​ಗಳನ್ನ ಇಲ್ಲಿ ತೆಗೆಯುತ್ತಿದ್ದಾರೆ.


ಕೀನ್ಯಾ ಲೋಕಲ್ ಮಾರ್ಕೆಟ್​ ನಲ್ಲಿ ಗೋಲ್ಡನ್ ಸ್ಟಾರ್ ಗಣಿ
ಗೋಲ್ಡನ್ ಸ್ಟಾರ್ ಗಣೇಶ್ ಕೀನ್ಯಾ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾರೆ. ಜಾಲಿ ಮೂಡ್​ನಲ್ಲಿಯೇ ಇಲ್ಲಿಯ ಸಣ್ಣ ಹಾದಿಯಲ್ಲಿ ಹಾದು ಬರ್ತಾ ಇದ್ದಾರೆ. ಈ ಒಂದು ಕ್ಷಣದ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಗೋಲ್ಡನ್ ಗಣಿಯ ಈ ವೀಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಆದರೆ ಈ ವೀಡಿಯೋ ನೋಡಿದಾಗ, ಗೋಲ್ಡನ್ ಗಣಿ ಈ ಮಾರುಕಟ್ಟೆ ಥರದ ಸೆಟ್​ನಲ್ಲಿ ಓಡಾಡ್ತಿದ್ದಾರೆ ಅಂತಲೂ ಒಮ್ಮೆ ಅನಿಸಿ ಬಿಡುತ್ತದೆ. ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಗೋಲ್ಡನ್ ಗಣಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ ಅಂತಲೂ ಅನಿಸುತ್ತದೆ.


ಲೋಕಲ್ ಮಾರುಕಟ್ಟೆಯಲ್ಲಿ ಗೋಲ್ಡನ್ ಗಣಿ ರೋಮಿಂಗ್
ಹೌದು, ಗಣಿಯ ಈ ಒಂದು ವೀಡಿಯೋ ಬಗ್ಗೆ ಒಂದು ಕುತೂಹಲ ಇದ್ದೇ ಇದೆ. ಅದನ್ನ ತಣಿಸೋ ಕೆಲಸವನ್ನ ಡೈರೆಕ್ಟರ್ ಪ್ರೀತಂ ಗುಬ್ಬಿ ಮಾಡುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್, ಹೀಗೆ ಮಾರುಕಟ್ಟೆಯಲ್ಲಿ ಓಡಾಡ್ತಿರೋದು ಸುಮ್ನೆ ಅಲ್ಲವೇ ಅಲ್ಲ. ಇದು ಶೂಟಿಂಗ್, ಬಾನದಾರಿಯಲ್ಲಿ ಚಿತ್ರದ ಒಂದು ದೃಶ್ಯ ಅನ್ನೋ ಅರ್ಥದಲ್ಲಿಯೇ ರಿಯಾಕ್ಟ್ ಮಾಡ್ತಾರೆ.


ಇದನ್ನೂ ಓದಿ: BBK Season 9: ಬಿಗ್‍ಬಾಸ್ ಮನೆಯಲ್ಲಿ ಮೊದಲ ದಿನವೇ 12 ಜನ ನಾಮಿನೇಟ್, 100 ದಿನದ ಕನಸು ಹೊತ್ತವರಿಗೆ ಶಾಕ್!


ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿಯ ಟೀಮ್ ಇಲ್ಲಿ ತಮ್ಮ ಚಿತ್ರದ ಚಿತ್ರೀಕರಣದಲ್ಲಿಯೇ ಬ್ಯುಸಿಯಾಗಿದೆ. ಮಾರುಕಟ್ಟೆಯ ದೃಶ್ಯವನ್ನೂ ಅಷ್ಟೇ ಅದ್ಭುತವಾಗಿಯೇ ತೆಗೆಯುತ್ತಿದೆ. ಅಲ್ಲದೇ ಸಿನಿಮಾದ ಪ್ರಮುಖ ದೃಶ್ಯಗಳನ್ನ ತೆಗೆದುಕೊಂಡು ಬರಲು ಪಕ್ಕಾ ಪ್ಲಾನ್ ಮಾಡಿಕೊಂಡೇ ಶೂಟಿಂಗ್ ಸ್ಪಾಟ್​​ಗೆ ಬರ್ತಾ ಇದೆ.


ಹೀಗೆ ಕನ್ನಡದ ಟೀಮ್ ಆಫ್ರಿಕಾ ದೇಶದ ಕೀನ್ಯಾದಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಅಲ್ಲಿಂದಲೇ ಒಂದಷ್ಟು ಮಾಹಿತಿಯನ್ನೂ ನಿರ್ದೇಶಕ ಪ್ರೀತಂ ಗುಬ್ಬಿ ನಮ್ಗೆ ಕೊಡ್ತಾಯಿದ್ದಾರೆ. ಅಲ್ಲಿಂದ ಬಂದ್ಮೇಲೆ ಇನ್ನಷ್ಟು ಇಂಟ್ರಸ್ಟಿಂಗ್ ಅನುಭವಗಳನ್ನೂ ಹಂಚಿಕೊಳ್ಳುತ್ತದೆ. ಅಲ್ಲಿವರೆಗೂ ವೇಟ್ ಮಾಡಿ.

First published: