ತಮಿಳಿನಲ್ಲಿ ಹೆಚ್ಚಾಗುತ್ತಿದೆ ಕನ್ನಡದ ಕಿಶೋರನಿಗೆ ಬೇಡಿಕೆ..!

news18
Updated:August 7, 2018, 4:26 PM IST
ತಮಿಳಿನಲ್ಲಿ ಹೆಚ್ಚಾಗುತ್ತಿದೆ ಕನ್ನಡದ ಕಿಶೋರನಿಗೆ ಬೇಡಿಕೆ..!
news18
Updated: August 7, 2018, 4:26 PM IST
ರಕ್ಷಾ ಜಾಸ್ಮೀನ್​, ನ್ಯೂ ಸ್ 18 ಕನ್ನಡ

ಇತ್ತೀಚೆಗೆ ಕನ್ನಡದ ಕಲಾವಿದರು ಎಲ್ಲ ಭಾಷೆಯ ಚಿತ್ರಗಳಲ್ಲೂ ತಮ್ಮ ಪ್ರತಿಭೆಯನ್ನ ತೋರಿಸುತ್ತಿದ್ದಾರೆ. ಅಂತೆಯೇ ಪರಭಾಷಾ ಕಲಾವಿದರು ಕೂಡ ಕನ್ನಡಕ್ಕೆ ಆಗಮಿಸಿ ತಮ್ಮ ನಟೆಯ ಮೂಲಕ ಮೋಡಿ ಮಾಡುತ್ತಿದ್ದಾರೆ. ಈಗ ನಮ್ಮ ಕನ್ನಡದ ಪ್ರಯತಿಭೆಯೊಬ್ಬರು ತಮಿಳಿನಲ್ಲಿ ಮತ್ತೆ ಕಮಾಲ್ ಮಾಡುತ್ತಿದ್ದಾರೆ.

ಕಾಲಿವುಡ್​ನಲ್ಲಿ ಸೆಟ್ಟೇರಿರೋ 'ಎಚ್ಚರಿಕೈ' ಚಿತ್ರ ಮೊದಲಿನಿಂಲೇ ಸದ್ದು ಮಾಡುತ್ತಿದೆ. ಕ್ರೈಂ ಥ್ರಿಲ್ಲರ್ ಕತೆಯನ್ನುಇಟ್ಟುಕೊಂಡು ತಯಾರಾಗುತ್ತಿರೋ ಈ ಸಿನಿಮಾದಲ್ಲಿ ಸತ್ಯರಾಜ್, ಮಾಣಿಕ್ಯ ಖ್ಯಾತಿಯ ವರಲಕ್ಷ್ಮಿ, ಹಾಗೂ ಕನ್ನಡದ ಪ್ರತಿಭಾವಂತ ನಟ ಕಿಶೋರ್ ಅಭಿನಯಿಸುತ್ತಿದ್ದಾರೆ. ಹೌದು ಕಬಾಲಿ ಸಿನಿಮಾದ ನಂತರದಲ್ಲಿ ತಮಿಳಿನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರೋ ಕಿಶೋರ್ ಈ ಸಿನಿಮಾದ ರಗಡ್ ಪಾತ್ರವೊಂದನ್ನ ಮಾಡುತ್ತಿದ್ದಾರೆ.

ಕ್ರೈಂ ಥ್ರಿಲ್ಲರ್ ಸಿನಿಮಾ ಅಂತ ಈಗಾಗಲೇ ಹೇಳಿದ್ದೀವಿ. ಅಂತೆಯೇ ಈ ಚಿತ್ರದಲ್ಲಿ ಕಿಶೋರ್ ಮಧ್ಯಮವರ್ಗದ ಕುಟುಂಬದ ಹುಡುಗ. ಹೇಗಾದರು ಮಾಡಿ ದುಡ್ಡು ಮಾಡಬೇಕು ಅಂತ ಯೋಚಿಸೋ ಕಿಶೋರ್ ಪ್ರತಿಷ್ಠಿತ ಮನೆಯ ಹೆಣ್ಣು ಮಗಳನ್ನ ಅಪಹರಣ ಮಾಡಿ ಬಿಡುತ್ತಾರೆ. ಈ ನಡುವೆ ಕಿಶೋರ್​ಗೆ ಸಿಗುವ ನಟ ಸತ್ಯರಾಜ್. ತದನಂತರದಲ್ಲಿ ಕತೆಯಲ್ಲಿ ಬರೋ ಟ್ವಿಸ್ಟ್ ಏನು? ಕಿಶೋರ್ ಅಂದುಕೊಂಡಂತೆ ದುಡ್ಡು ಸಿಗುತ್ತಾ? ಅನ್ನೋದೆ ಚಿತ್ರದ ಒನ್ ಲೈನ್ ಸ್ಟೋರಿ.

ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗೇ ಟ್ರೇಲರ್​ ನೋಡಿದ ಮಂದಿಯಲ್ಲ ಚಿತ್ರದಲ್ಲಿ ಕಿಶೋರ್ ಮತ್ತು ಸತ್ಯರಾಜ್ ಜುಗಲ್‍ಬಂದಿ ಇರಲಿದೆ ಹಾಗೂ  ಕಿಶೋರ್ ಅಭಿನಯದ ಬಗ್ಗೆಯೂ  ಮಾತನಾಡಿಕೊಳ್ಳುತ್ತಿದ್ದಾರೆ. ಹಾಗೇ ಕನ್ನಡದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದ ವರಲಕ್ಷ್ಮಿ ನಾಯಕಿಯಾಗಿದ್ದು, ನಟ ಕಿಶೋರ್, ಸತ್ಯರಾಜ್ ಮತ್ತು ವರಲಕ್ಷ್ಮಿ ನಡುವಿನ ತ್ರಿಕೋನ ಥ್ರಿಲ್ಲರ್ ಕಥೆಯೇ ಸಿನಿಮಾದ ಪ್ರಮುಖ ಹೈಲೈಟ್ಸ್ ಎನ್ನಬಹುದು.

ಇನ್ನು ಈ ಚಿತ್ರಕ್ಕೆ ಸರ್ಜುನ್ ಕೆ.ಎಂ ಆ್ಯಕ್ಷನ್ ಕಟ್ ಹೇಳಿದ್ದು, ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ. ಮುಂದಿನ ಪೊಂಗಲ್‍ಗೆ ಸಿನಿಮಾ ರಿಲೀಸ್ ಮಾಡಲು ಸಿನಿಮಾ ತಂಡ ಯೋಚಿಸಿದೆ. ಸಿನಿಮಾ ಏನಾದರೂ ನಿರೀಕ್ಷೆಗೂ ಮೀರಿ ಕಮಾಲ್ ಮಾಡಿದರೆ, ಕನ್ನಡದ ಪ್ರತಿಭೆಗೆ ತಮಿಳಿನಿಂದ ಮತ್ತಷ್ಟು ಅವಕಾಶಗಳು ಅರಸಿ ಬರಲಿವೆ.

 
First published:August 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ