ಕನ್ನಡದ ಕರಿಚಿರತೆ ಖ್ಯಾತಿಯ ನಟ ದುನಿಯಾ ವಿಜಯ್ ಸಂಬಂಧಿಸಿದ ಒಂದು ಸುದ್ದಿ ಈಗ ಭಾರೀ (Duniya Vijay Viral News) ವೈರಲ್ ಆಗುತ್ತಿದೆ. ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದ ವಿಷಯ ಇದಲ್ಲ. ಇದು ಬೇರೆನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು (Kannada Actor Duniya Vijay) ಮಾಹಿತಿ ಕೂಡ ಹೊರ ಬಿದ್ದಿದೆ. ದುನಿಯಾ ಸಿನಿ ಲೈಫ್ ನಲ್ಲಿ ಈ ಚಿತ್ರ ವಿಶೇಷವಾಗಿಯೇ ಇದೆ. ಇದರ ಬಗ್ಗೆ ಇನ್ನೊಂದು ವಿಶೇಷ ವಿಷಯ ಹೇಳೋದಾದ್ರೆ, ಇದು ಕೂಡ ಪ್ಯಾನ್ ಇಂಡಿಯಾ (Duniya Vijay Pan India Cinema) ಸಿನಿಮಾನೇ ಆಗಲಿದೆ. ಕನ್ನಡದ ಮಟ್ಟಿಗೆ ಕಾಂತಾರ, ಚಾರ್ಲಿ, ವಿಕ್ರಾಂತ್ ರೋಣ, ಕೆಜಿಎಫ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾನೇ ಆಗಿವೆ.
ಅದೇ ಸಾಲಿಗೆ ಈ ಚಿತ್ರವೂ ಸೇರಲಿದೆ ಅನ್ನೋದೇ ಈಗೀನ ವಿಶೇಷ. ಇದರ ಸುತ್ತ ಇನ್ನೂ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ದುನಿಯಾ ವಿಜಯ್ ಮುಂದಿನ ಚಿತ್ರ ಪ್ಯಾನ್ ಇಂಡಿಯಾನೇ?
ದುನಿಯಾ ವಿಜಯ್ ಇಲ್ಲಿವರೆಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಇವರ ಅಭಿನಯದ ಸಿನಿಮಾಗಳು ಬೇರೆ ಭಾಷೆಯಲ್ಲಿ ಡಬ್ ಆಗಿವೆ. ಆದರೆ ನೇರವಾಗಿ ದೊಡ್ಡಮಟ್ಟದಲ್ಲಿಯೇ ಬಂದಿರೋದು ಇಲ್ವೇ ಇಲ್ಲ ಅಂತಲೇ ಹೇಳಬಹುದೇನೋ.
ಆದರೆ ಈಗ ಒಂದು ಸುದ್ದಿ ವೈರಲ್ ಆಗಿದೆ. ದುನಿಯಾ ವಿಜಯ್ ಮುಂದಿನ ಸಿನಿಮಾ ದೊಡ್ಡಮಟ್ಟದಲ್ಲಿಯೇ ಇರುತ್ತದೆ ಅನ್ನೋದೇ ಆ ಸುದ್ದಿ ಆಗಿದೆ. ದುನಿಯಾ ವಿಜಯ್ ಅಭಿನಯದ ಈ ಚಿತ್ರದ ಇಂಟ್ರಸ್ಟಿಂಗ್ ಮ್ಯಾಟರ್ ಏನು ಗೊತ್ತೇ? ಹೇಳ್ತಿವಿ ಓದಿ.
ಪ್ಯಾನ್ ಇಂಡಿಯಾ ಸಿನಿಮಾದ ಇತರ ಮಾಹಿತಿ ಏನು?
ದುನಿಯಾ ವಿಜಯ್ ಸದ್ಯ ಭೀಮ ಚಿತ್ರದ ಚಿತ್ರೀಕರಣಕ್ಕೆ ತಯಾರಿ ನಡೆಸಿದ್ದಾರೆ. ದೇಹದ ತೂಕ ಇಳಿಸಿಕೊಂಡು ಮತ್ತೆ ಚಿತ್ರಕ್ಕಾಗಿ ಸಖತ್ ಫಿಟ್ ಕೂಡ ಆಗಿದ್ದಾರೆ. ಇದರ ಬೆನ್ನಲ್ಲಿಯೇ ಈ ಚಿತ್ರದ ನಿರ್ಮಾಪಕರ ಇನ್ನೂ ಒಂದು ಚಿತ್ರಕ್ಕೆ ವಿಜಯ್ ರೆಡಿ ಆಗುತ್ತಿದ್ದಾರೆ.
ದುನಿಯಾ ವಿಜಯ್ ಅಭಿನಯದ ಮುಂದಿನ ಚಿತ್ರಕ್ಕೆ ಭೀಮ ಚಿತ್ರದ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಅವರೇ ದುಡ್ಡು ಹಾಕುತ್ತಿದ್ದಾರೆ. ದೊಡ್ಡ ಬಜೆಟ್ನ ಈ ಚಿತ್ರಕ್ಕೆ ವಿಜಯ್ ಹೀರೋ ಅನ್ನೋದೇ ಈಗೀನ ವಿಶೇಷವೆ ಆಗಿದೆ. ಆದರೆ ಈ ಚಿತ್ರಕ್ಕೆ ಡೈರೆಕ್ಟರ್ ಬೇರೆ ಇದ್ದಾರೆ. ಈ ಬಾರಿ ವಿಜಯ್ಈ ಚಿತ್ರದಲ್ಲಿ ಹೀರೋ ಆಗಿ ಮಾತ್ರ ಇದ್ದಾರೆ ಅನ್ನೋದು ಸದ್ಯದ ಮಾಹಿತಿ.
ದುನಿಯಾ ವಿಜಯ್ ಮುಂದಿನ ಚಿತ್ರಕ್ಕೆ "ಜೆಂಟಲ್ಮ್ಯಾನ್" ಡೈರೆಕ್ಟರ್
ಈ ಚಿತ್ರದ ಡೈರೆಕ್ಷನ್ ಹೊಣೆಯನ್ನ ಜಡೇಶ್ ಕುಮಾರ್ ವಹಿಸಿಕೊಂಡಿದ್ದಾರೆ. ಈ ಹಿಂದೆ ಜಡೇಶ್ ಕುಮಾರ್ ಜಂಟಲ್ ಮ್ಯಾನ್ ಹೆಸರಿನ ಒಳ್ಳೆ ಕಥೆಯ ಚಿತ್ರ ಮಾಡಿದ್ರು. ಇತ್ತೀಚಿಗೆ ಇದೇ ಡೈರೆಕ್ಟರ್ ನಿರ್ದೇಶನದ ಗುರು ಶಿಷ್ಯರು ಚಿತ್ರವೂ ಬಂದಿತ್ತು. ಜನರ ಮನದಲ್ಲಿ ಹೊಸದೊಂದು ಅಲೆಯನ್ನೆ ಎಬ್ಬಿಸಿತ್ತು.
ಈಗ ಇದೇ ಜಡೇಶ್ ಕುಮಾರ್ ಮತ್ತೊಂದು ಪ್ರೋಜೆಕ್ಟ್ಗೆ ರೆಡಿ ಆಗುತ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ ಈ ಚಿತ್ರ ದೊಡ್ಡ ಬಜೆಟ್ನಲ್ಲಿಯೇ ನಿರ್ಮಾಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಈ ಸಿನಿಮಾ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ದುನಿಯಾ ವಿಜಯ್ ಪ್ಯಾನ್ ಇಂಡಿಯಾ ಚಿತ್ರದ ಕಥೆ ಏನು?
ದುನಿಯಾ ವಿಜಯ್ ಅಭಿನಯದ ಈ ಚಿತ್ರದಲ್ಲಿ ವಿಶೇಷ ಕಥೆ ಇದೆ. ಹಾಗೆ ಈ ಚಿತ್ರಕ್ಕಾಗಿಯೇ ಸಿನಿಮಾ ತಂಡ ಬ್ರಿಟೀಷ್ ಕಥೆಯನ್ನ ಮಾಡಿಕೊಂಡಿದೆ. ಈ ಮೂಲಕ ದುನಿಯಾ ವಿಜಯ್ ಬ್ರಿಟೀಷ್ ಕಾಲದ ಕಥೆಗೆ ಕಥಾನಾಯಕರಾಗುತ್ತಿದ್ದಾರೆ.
ಇದನ್ನೂ ಓದಿ: Lakshana: ಮನೆಗೆ ಬಂದ ಮೌರ್ಯನಿಗೆ ಅಮ್ಮನ ಬೈಗುಳ! ನೀನು ಯಾರೋ ಗೊತ್ತಿಲ್ಲ ಎಂದ ಶಕುಂತಲಾ ದೇವಿ!
ಆದರೆ ದುನಿಯಾ ವಿಜಯ್ ಬ್ರಿಟೀಷ್ ಕಾಲದ ಕಥೆಯಲ್ಲಿ ಯಾವ ಪಾತ್ರವನ್ನ ಮಾಡ್ತಿದ್ದಾರೆ ಅನ್ನೋದೇ ಈಗೀನ ಕುತೂಹಲ. ಇಲ್ಲಿವರೆಗೂ ಈ ಚಿತ್ರದ ಬಗ್ಗೆ ಸುದ್ದಿ ಇರಲಿಲ್ಲ. ಆದರೆ ಈಗ ಸಿನಿಮಾ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ವಿಜಯ್ ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಚಿತ್ರ ಅನೌನ್ಸ್!
ದುನಿಯಾ ವಿಜಯ್ ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಸಿನಿಮಾದ ಸುದ್ದಿ ಅನೌನ್ಸ್ ಆಗುತ್ತಿದೆ. ಮೂಲಗಳ ಮಾಹಿತಿ ಕೂಡ ಇದನ್ನೆ ಹೇಳುತ್ತಿವೆ. ವಿಜಯ್ ಅಭಿನಯದ ಈ ಚಿತ್ರ ಫ್ಯಾನ್ ಇಂಡಿಯಾ ಆಗಲಿದ್ದು, ಜನವರಿ 20 ರಂದು ಸಿನಿಮಾ ಅನೌನ್ಸ್ ಆಗಲಿದೆ ಅನ್ನೋ ಮಾಹಿತಿ ಈಗ ಹರಿದಾಡುತ್ತಿದೆ. ಬಲ್ಲ ಮೂಲಗಳು ಕೂಡ ಇದನ್ನೆ ಹೇಳುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ