• Home
 • »
 • News
 • »
 • entertainment
 • »
 • Duniya Vijay: ಟಾಲಿವುಡ್​ ಬಾಲಯ್ಯನ ದಿಲ್​ ಕದ್ದ ಕನ್ನಡದ ಹೀರೋ! ತೆಲುಗು ಮಾತನಾಡಿದ ದುನಿಯಾ ವಿಜಯ್!

Duniya Vijay: ಟಾಲಿವುಡ್​ ಬಾಲಯ್ಯನ ದಿಲ್​ ಕದ್ದ ಕನ್ನಡದ ಹೀರೋ! ತೆಲುಗು ಮಾತನಾಡಿದ ದುನಿಯಾ ವಿಜಯ್!

ಟಾಲಿವುಡ್​ ಬಾಲಯ್ಯನ ದಿಲ್​ ಕದ್ದ ಕನ್ನಡದ ಹೀರೋ

ಟಾಲಿವುಡ್​ ಬಾಲಯ್ಯನ ದಿಲ್​ ಕದ್ದ ಕನ್ನಡದ ಹೀರೋ

ಸಿಂಹದ ಮುಂದೆ ಅಭಿನಯಿಸೋಕೆ ಭಯ ಆಗುತ್ತದೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ನಾನು ಅಭಿನಯಿಸಿದ್ದೇನೆ. ಬಾಲಯ್ಯರಂತಹ ಕಲಾವಿದರ ಎದುರು ಅಭಿನಯಿಸೋದು ಅಂದ್ರೆ ಸುಮ್ನೆ ಅಲ್ವೇ ಅಲ್ಲ. ಎಲ್ಲ ಪ್ರಾರ್ಥನೆ ಮಾಡಿಕೊಂಡೇ ನಟಿಸಿದ್ದೇನೆ. -ದುನಿಯಾ ವಿಜಯ್, ನಟ

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಕನ್ನಡದ ದುನಿಯಾ ವಿಜಯ್ (Duniya Vijay) ಸದ್ಯ ಭೀಮ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಅಷ್ಟರಲ್ಲಿಯೇ ವಿಜಯ್ ಅಭಿನಯದ (Veera Simha Reddy) ವೀರ ಸಿಂಹ ರೆಡ್ಡಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಚಿತ್ರದ ಈ ಒಂದು ಕಾರ್ಯಕ್ರಮಕ್ಕಾಗಿ (Tollywood) ಟಾಲಿವುಡ್​ಗೂ ವಿಜಯ್ ಹೋಗಿ ಬಂದಿದ್ದಾರೆ. ಅಲ್ಲಿ ಕನ್ನಡದ ಕಂಪನ್ನ ಹರಿಸಿ ಬಂದಿದ್ದಾರೆ. ಕರುನಾಡ ಜನತೆ ಪರವಾಗಿಯೇ (Nandamuri Balakrishna) ಬಾಲಯ್ಯನ ಅಭಿಮಾನಿಗಳಿಗೆ ಅಭಿನಂದನೆ ಹೇಳಿ ಬಂದಿದ್ದಾರೆ. ಕೊನೆಯಲ್ಲಿ ಜೈ ಕರ್ನಾಟಕ ಮಾತೆ ಅಂತ ಹೇಳೋ ಮೂಲಕ ಕನ್ನಡದ ಮೇಲಿನ ತಮ್ಮ ಅಪಾರ ಗೌರವವನ್ನ ಕೂಡ ವ್ಯಕ್ತಪಡಿಸಿ ಬಂದಿದ್ದಾರೆ. ಈ ಮೂಲಕ  ದುನಿಯಾ ವಿಜಯ್ ತಮ್ಮ ಮೊದಲ ತೆಲುಗು ಚಿತ್ರದ ಕಾರ್ಯಕ್ರಮದಲ್ಲೂ ಭಾಗಿಯಾಗಿ ಖುಷಿಪಟ್ಟಿದ್ದಾರೆ. 


ಸಿಂಹದ ಮುಂದೆ ನಟಿಸೋದು ಅಷ್ಟು ಸುಲಭ ಅಲ್ವೇ ಅಲ್ಲ
ಸಿಂಹದ ಮುಂದೆ ಅಭಿನಯಿಸೋಕೆ ಭಯ ಆಗುತ್ತದೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ನಾನು ಅಭಿನಯಿಸಿದ್ದೇನೆ. ಬಾಲಯ್ಯರಂತಹ ಕಲಾವಿದರ ಎದುರು ಅಭಿನಯಿಸೋದು ಅಂದ್ರೆ ಸುಮ್ನೆ ಅಲ್ವೇ ಅಲ್ಲ. ಎಲ್ಲ ಪ್ರಾರ್ಥನೆ ಮಾಡಿಕೊಂಡೇ ನಟಿಸಿದ್ದೇನೆ.


Kannada Actor Duniya Vijay Acted in Telugu Movie
ಸಿಂಹದ ಮುಂದೆ ನಟಿಸೋದು ಅಷ್ಟು ಸುಲಭ ಅಲ್ವೇ ಅಲ್ಲ!


ಹೀಗೆ ಕನ್ನಡದ ಕರಿ ಚಿರತೆ ದುನಿಯಾ ವಿಜಯ್ ಹೇಳಿಕೊಂಡಿದ್ದಾರೆ. ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ವಿಜಯ್, ಪ್ರತಾಪ್ ರೆಡ್ಡಿ ಪಾತ್ರವನ್ನು ಮಾಡಿದ್ದಾರೆ. ಈ ಮೂಲಕ ವಿಜಯ್ ಈಗ ಕನ್ನಡದಿಂದ ಟಾಲಿವುಡ್​ಗೂ ಕಾಲಿಟ್ಟಿದ್ದಾರೆ.


ಟಾಲಿವುಡ್​ನಲ್ಲಿ ತೆಲುಗು ಭಾಷೆಯಲ್ಲಿ ವಿಜಯ್ ಮಾತು
ಕನ್ನಡದ ದುನಿಯಾ ವಿಜಯ್ ಕನ್ನಡದಲ್ಲಿ ಕೊನೆಯಲ್ಲಿ ಮಾತನಾಡಿದರು. ಆರಂಭದಲ್ಲಿ ಆ್ಯಂಕರ್ ಕನ್ನಡದಲ್ಲಿ ಕೇಳಿದ್ರು ಅಂತಲೇ ಕನ್ನಡದಲ್ಲಿ ಒಂದಷ್ಟು ಮಾತನಾಡಿದರು. ಆದರೆ ತಮಗೆ ಬರೋ ಒಂದಷ್ಟು ತೆಲುಗು ಭಾಷೆಯಲ್ಲಿಯೇ ವಿಜಯ್ ಇಲ್ಲಿ ಮಾತನಾಡುತ್ತಲೇ ಹೋದ್ರು.
ವಿಜಯ್ ಸಿನಿಮಾ ಪ್ರೀತಿ ದೊಡ್ಡದೇ ಇದೆ. ಕನ್ನಡದಿಂದ ಟಾಲಿವುಡ್​ಗೆ ಹೋಗೋದು ಅಷ್ಟು ಸರಳವೂ ಅಲ್ಲ. ಅದರಲ್ಲೂ ಬಾಲಯ್ಯರಂತಹ ಮಹಾನ್ ನಟರ ಮುಂದೆ ನಟಿಸೋದು ಅಷ್ಟು ಸುಲಭವೂ ಅಲ್ಲ. ಆದರೆ ವಿಜಯ್ ಅದನ್ನ ಸಾಧಿಸಿ ಬಂದಿದ್ದಾರೆ. ಬಾಲಯ್ಯನ ಹೃದಯವನ್ನ ಕೂಡ ಗೆದ್ದು ಬಂದಿದ್ದಾರೆ.


ವೀರ ಸಿಂಹ ರೆಡ್ಡಿ ಚಿತ್ರದ ಟ್ರೈಲರ್ ರಿಲೀಸ್
ಬಾಲಯ್ಯ ಅಭಿನಯದ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅತಿ ಹೆಚ್ಚು ಅನ್ನೋ ಮಟ್ಟಿಗೆ ಗಮನ ಸೆಳೆದಿದೆ. ಇದೇ ಚಿತ್ರದಲ್ಲಿಯೆ ವಿಜಯ್ ಕೂಡ ಇರೋದ್ರಿಂದ ವಿಜಯ್ ಫ್ಯಾನ್ಸ್​ಗೆ ಒಂದು ಕುತೂಹಲ ಇರುತ್ತದೆ. ಕನ್ನಡ ಸಿನಿ ಪ್ರೇಮಿಗಳಿಗೂ ಒಂದು ಸೆಳೆತ ಇರುತ್ತದೆ.


ಹಾಗೇನೆ ಈಗ ವೀರ ಸಿಂಹ ರೆಡ್ಡಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವಿಜಯ್ ಪಾತ್ರದ ಬಗ್ಗೆನೂ ಒಂದು ಸಣ್ಣ ಕುತೂಹಲ ಈಗಲೇ ಮೂಡಿದೆ. ಚಿತ್ರವನ್ನ ಗೋಪಿಚಂದ್ ಮಲಿನೇನಿ ನಿರ್ದೇಶನದ ಮಾಡಿದ್ದಾರೆ. ಅಪ್ಪಟ ಕಮರ್ಷಿಯಲ್ ಚಿತ್ರವೇ ಇದಾಗಿದ್ದು, ಎಲ್ಲರ ಗಮನ ಸೆಳೆಯಲು ಈಗ ರೆಡಿ ಆಗಿದೆ.


ಇನ್ನು ದುನಿಯಾ ವಿಜಯ್ ಈ ಚಿತ್ರಕ್ಕಾಗಿಯೇ ದೇಹದ ತೂಕವನ್ನ ಹೆಚ್ಚಿಸಿಕೊಂಡಿದ್ದರು.  ಬಿಯರ್ಡ್ ಲುಕ್​ ಅನ್ನೂ ಸಖತ್ ಆಗಿಯೇ ಮೆಂಟೇನ್​​ ಮಾಡಿದ್ದರು.  ಆ ಲುಕ್​ ಅಲ್ಲಿಯೇ ದುನಿಯಾ ವಿಜಯ್ ಎಲ್ಲರಿಗೂ ವಿಭಿನ್ನವಾಗಿಯೇ ಕಾಣಿಸಿಕೊಂಡರು.


Kannada Actor Duniya Vijay Acted in Telugu Movie
ವೀರ ಸಿಂಹ ರೆಡ್ಡಿ ಚಿತ್ರದ ಟ್ರೈಲರ್ ರಿಲೀಸ್


ಹಾಗೇನೆ ದುನಿಯಾ ವಿಜಯ್ ಈಗ ತಮ್ಮ ದೇಹದ ತೂಕವನ್ನ ಇಳಿಸಿಕೊಂಡಿದ್ದಾರೆ. ತಮ್ಮ ಭೀಮ ಸಿನಿಮಾದ ಚಿತ್ರೀಕರಣದಲ್ಲೂ ಈಗ ಬ್ಯುಸಿ ಆಗಿದ್ದಾರೆ.


ಇದನ್ನೂ ಓದಿ: Rishab Shetty: ರಿಷಬ್ ಶೆಟ್ರು ಎಣ್ಣೆ ಹೊಡೆದು ತೂರಾಡ್ತಿರೋದೇಕೆ? ಆ ವಿಡಿಯೋದಲ್ಲಿ ಏನಿದೆ?


ಜನವರಿ-12 ರಂದು ಸಂಕ್ರಾಂತಿಗೆ ಸಿನಿಮಾ ಬರ್ತಿದೆ ಎಂದ ವಿಜಯ್
ಬಾಲಯ್ಯ ಮತ್ತು ದುನಿಯಾ ವಿಜಯ್ ಅಭಿನಯದ ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಚಿತ್ರ ಪ್ರೇಮಿಗಳು ಈ ಚಿತ್ರವನ್ನ ಎಲ್ಲೆಡೆ ಇದೇ 12 ರಂದು ಚಿತ್ರ ಮಂದಿರದಲ್ಲಿ ವೀಕ್ಷಿಸಬಹುದು. ಹಬ್ಬದ ಪ್ರಯುಕ್ತವೇ ಟಾಲಿವುಡ್​ನ ಈ ಬಹುಕೋಟಿ ಸಿನಿಮಾ ರಿಲೀಸ್ ಆಗುತ್ತಿದೆ.

First published: