ದುನಿಯಾ ವಿಜಯ್ ಇವತ್ತು (Duniya Vijay Birthday) ವಿಶೇಷವಾಗಿ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮೂರು ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಏರ್ಪಡಿಸಿದ್ದಾರೆ. ತಮ್ಮ ಜನ್ಮ ದಿನದ ಅಂಗವಾಗಿ ಇವತ್ತು ಒಂದಷ್ಟು ಅನೌನ್ಸ್ಮೆಂಟ್ಗಳನ್ನು ಮಾಡೋ ಸಾಧ್ಯತೆ ಇದೆ. ಅಮ್ಮನ ಆಸೆಯಂತೆ ತೆಲುಗು (Tollywood Movie) ಚಿತ್ರರಂಗದಲ್ಲಿ ಅಭಿನಯಿಸಿ ಬಂದಿದ್ದಾರೆ. ಬಾಲಯ್ಯನ ಚಿತ್ರದಲ್ಲಿ ನಟಿಸಿ ಈಗಾಗಲೇ ಭೇಷ್ ಎನಿಸಿಕೊಂಡಿದ್ದಾರೆ. ದುನಿಯಾ (Duniya Vijay) ವಿಜಯ್ ಚಿತ್ರ ಜೀವನದಲ್ಲಿ ಭೀಮ (Bheema Movie Teaser) ಚಿತ್ರ ಕೂಡ ಸ್ಪೆಷಲ್ ಆಗಿದೆ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ವಿಶೇಷವಾಗಿ ಇವತ್ತು ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ರಿಲೀಸ್ ಆಗಿದೆ.
ಅಪ್ಪ-ಅಮ್ಮನ ಮಡಿಲಲ್ಲಿ ದುನಿಯಾ ವಿಜಯ್ ಜನ್ಮ ದಿನ
ದುನಿಯಾ ವಿಜಯ್ ಈ ವರ್ಷ ತಮ್ಮ ಜನ್ಮ ದಿನವನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅನೇಕಲ್ನ ತಮ್ಮೂರು ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಪ್ಪ-ಅಮ್ಮನ ಮಡಿಲಲ್ಲಿಯೇ ವಿಜಯ್ ಈ ಸಲ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿದ್ದಾರೆ.
ದುನಿಯಾ ವಿಜಯ್ ತಮ್ಮೂರು ಕುಂಬಾರನಹಳ್ಳಿಯಲ್ಲಿ ತಮ್ಮ ತಂದೆ-ತಾಯಿಯ ಸಮಾಧಿಯನ್ನೂ ಕಟ್ಟಿಸಿದ್ದಾರೆ. ಅಲ್ಲಿಯೇ ತಮ್ಮ ಜನ್ಮ ದಿನವನ್ನು ಈ ವರ್ಷ ಆಚರಿಸಿಕೊಂಡಿದ್ದಾರೆ.
ದುನಿಯಾ ವಿಜಯ್ ಭೀಮ ಸಿನಿಮಾ ಟೀಸರ್ ರಿಲೀಸ್
ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರದ ಟೀಸರ್ ರೆಡಿ ಆಗಿದೆ. ಜನ್ಮ ದಿನದ ಹಿನ್ನೆಲೆಯಲ್ಲಿ ಟೀಸರ್ ರಿಲೀಸ್ ಕೂಡ ಆಗಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ನಟಿಸೋದಲ್ಲದೇ, ಈ ಚಿತ್ರವನ್ನು ಡೈರೆಕ್ಟ್ ಕೂಡ ಮಾಡಿದ್ದಾರೆ. ವಿಜಯ್ ಸಿನಿ ಲೈಫ್ಲ್ಲಿ ಈ ಚಿತ್ರವೂ ಸ್ಪೆಷಲ್ ಆಗಿದೆ.
ವಿಜಯ್ ಖಡಕ್ ಡೈಲಾಗ್ ಮಸ್ತ್ ಲುಕ್
ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಮಸ್ತ್ ಲುಕ್ ಇದೆ. ಮಾಸ್ತಿ ಬರೆದ ಖಡಕ್ ಡೈಲಾಗ್ಗಳನ್ನು ಇಲ್ಲಿ ಕೇಳಬಹುದು. ಭೀಮನ ಗತ್ತಿನ ಝಲಕ್ ಈ ಒಂದು ಟೀಸರ್ನಲ್ಲಿ ಸಿಗುತ್ತದೆ. ದುನಿಯಾ ವಿಜಯ್ ಅಭಿನಯದ ಈ ಚಿತ್ರದಲ್ಲಿ ವಿಶೇಷವಾದ ಪಾತ್ರಗಳು ಇವೆ. ಒಂದೊಂದು ಪಾತ್ರವೂ ಒಂದೊಂದು ರೀತಿ ಇರೋದು ಈ ಚಿತ್ರದ ಸ್ಪೆಷಾಲಿಟಿ ಅಂತಲೇ ಹೇಳಬಹುದು.
ಗುರು ಶಿಷ್ಯರು ಚಿತ್ರದ ಡೈರೆಕ್ಟರ್ ಜೊತೆಗೆ ಹೊಸ ಸಿನಿಮಾ
ದುನಿಯಾ ವಿಜಯ್ ಇನ್ನೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಜನ್ಮ ದಿನದ ಸಮಯದಲ್ಲಿ ಅದರ ಬಗ್ಗೆ ಮಾಹಿತಿ ಕೊಡುವ ಸಾಧತ್ಯೆ ಇದೆ. ಗುರುಶಿಷ್ಯರು ಚಿತ್ರವನ್ನ ನಿರ್ದೇಶನ ಮಾಡಿದ್ದ ಜಡೇಶ್. ಕೆ. ಹಂಪಿ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರ ದೊಡ್ಡಮಟ್ಟದಲ್ಲಿ ತಯಾರಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಂದ್ರು ತಪ್ಪಿಲ್ಲ. ಜಗದೀಶ್ ಗೌಡ ಮತ್ತು ಕೃಷ್ಣ ಸಾರ್ಥಕ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ವಿಜಯ್ ಜನ್ಮ ದಿನದ ಹಿನ್ನೆಲೆಯಲ್ಲಿ VK-29 ಹೆಸರಿನಲ್ಲಿ ವಿಜಯ್ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಲಾಗಿದೆ.
ಅಂದಿನ ಬ್ಲ್ಯಾಕ್ ಕೋಬ್ರಾ ಇಂದಿನ ಕನ್ನಡಿಗರ ಸಲಗ
ದುನಿಯಾ ವಿಜಯ್ ಸಲಗ ಚಿತ್ರ ಮಾಡಿದ್ಮೇಲೆ ಖದರ್ ಚೇಂಜ್ ಆಗಿದೆ. ಇಲ್ಲಿವರೆಗೂ ಎಲ್ಲರಿಂದಲೂ ಬ್ಲ್ಯಾಕ್ ಕೋಬ್ರಾ ಅಂತಲೇ ಕರೆಸಿಕೊಳ್ಳುತ್ತಿದ್ದ ವಿಜಯ್, ಈಗ ಸ್ಯಾಂಡಲ್ವುಡ್ ಸಲಗ ಆಗಿದ್ದಾರೆ.
ಇದನ್ನೂ ಓದಿ: Rashmika Mandanna: ಇತ್ತೀಚೆಗೆ ಸೆಲ್ಫಿ ತಗೊಳೋದೇ ಇಲ್ವಂತೆ ರಶ್ಮಿಕಾ! ಯಾಕೆ ಗೊತ್ತಾ?
ಅಭಿಮಾನಿಗಳೂ ಇದೇ ಹೆಸರಿನಿಂದಲೇ ವಿಜಯ್ ಅವರನ್ನ ಕರೆಯುತ್ತಾರೆ. ಸಲಗ ಚಿತ್ರ ಅಷ್ಟೊಂದು ಪ್ರಭಾವ ಬೀರಿದೆ ಅಂದ್ರೆ ತಪ್ಪೇ ಇಲ್ಲ ಬಿಡಿ. ವಿಜಯ್ ಅಭಿನಯದ ಭೀಮ ಸಿನಿಮಾ ಕೂಡ ನಿರೀಕ್ಷೆ ಹುಟ್ಟುಹಾಕುತ್ತಿದೆ. ಜಡೇಶ್. ಕೆ. ಹಂಪಿ ಜೊತೆಗಿನ ಮುಂದಿನ ಚಿತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿ ಆಗುತ್ತದೆ ಅನ್ನೋ ವಿಷಯ ಈಗಾಗಲೇ ರಿವೀಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ