ಕನ್ನಡದ ಕಾಂತಾರ (Kantara Cinema) ಎಲ್ಲರ ಕನಸನ್ನ ನನಸು ಮಾಡಿದೆ. ಕನ್ನಡದ ಹೆಮ್ಮೆಯ ಸಿನಿಮಾ ಆಗಿ ಹೊರಹೊಮ್ಮಿದೆ. ಮನೆಯಲ್ಲಿಯೇ ಕುಳಿತು ಸಿನಿಮಾ ನೋಡ್ತಿದ್ದ ಸಿನಿಮಾ ಪ್ರೇಮಿಗಳನ್ನೂ ಈ ಚಿತ್ರ ಥಿಯೇಟರ್ಗೆ ಕರೆದುಕೊಂಡು ಬಂದಿದೆ. ಥಿಯೇಟರ್ನಲ್ಲಿ ಜನ ಬರ್ತಿದ್ದ ಆ (Rishab Shetty Next Movie) ದಿನಗಳನ್ನ ಮತ್ತೆ ತೆಗೆದುಕೊಂಡು ಬಂದ ಖ್ಯಾತಿ ಕಾಂತಾರ ಚಿತ್ರಕ್ಕೇನೆ ಸಲ್ಲುತ್ತದೆ. ಕಾಂತಾರ ಮೋಡಿನೇ ಹಾಗಿದೆ. ಈ ಚಿತ್ರದ ಮೂಲಕ ದೇಶದ ಪ್ರಮುಖ ರಾಜ್ಯದಲ್ಲೂ ಸುತ್ತಾಡಿದ ತುಳುನಾಡಿನ ಕನ್ನಡದ ನಟ-ನಿರ್ದೇಶಕ (Rishab shetty) ರಿಷಬ್ ಶೆಟ್ಟಿ ಟಾಕ್ ಆಫ್ ದಿ ಟೌನ್ ಆಗಿ ಬಿಟ್ಟಿದ್ದಾರೆ. ಬಾಲಿವುಡ್ (Kantara Movie Hindi) ಮಂದಿ ಕೂಡ ರಿಷಬ್ ಶೆಟ್ಟಿ ಕೆಲಸಕ್ಕೆ ಫಿದಾ ಆಗಿದ್ದಾರೆ.
ಇಷ್ಟೆಲ್ಲ ಖ್ಯಾತಿ ತಂದುಕೊಟ್ಟ ಕಾಂತಾರ ಸಿನಿಮಾ ನಾಯಕ ನಟ ರಿಷಬ್ ಶೆಟ್ಟಿ ಅವರ ಆ ಒಂದು ಕನಸನ್ನ ಕೂಡ ಸಾಕಾರಗೊಳಿಸಿದೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.
ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಕನಸು ಸಾಕಾರ!
ಕನ್ನಡದ ರಿಷಬ್ ಶೆಟ್ರು ಒಳ್ಳೆ ಸಿನಿಮಾ ಮಾಡ್ತಾನೇ ಬಂದಿದ್ದಾರೆ. ತಮ್ಮ ಕಥೆ ಆಯ್ಕೆ ಜಾಣ್ಮೆಯಿಂದ ಅತ್ಯುತ್ತಮ ನಿರ್ದೇಶನವನ್ನೂ ಕೊಟ್ಟಿದ್ದಾರೆ. ಕಿರಿಕ್ ಪಾರ್ಟಿ ಆ ಸಾಲಿನ ಒಂದು ಸಿನಿಮಾ ಅಂದ್ರೆ ತಪ್ಪೇ ಆಗೋದಿಲ್ವೇನೋ. ಅಂತಹ ಸಿನಿಮಾ ಕೊಟ್ಟ ರಿಷಬ್ ಶೆಟ್ರು, ಕಾಂತಾರ ಸಿನಿಮಾ ಕೊಟ್ಟು ಇಡೀ ನಾಡಿನ ಜನರ ದಿಲ್ ಕದ್ದು ಬಿಟ್ಟಿದ್ದಾರೆ.
ಕಾಂತಾರ ಸಿನಿಮಾದ ಮೂಲಕ ದೇಶ-ವಿದೇಶದಲ್ಲೂ ಹೆಸರಾಗಿರೋ ನಟ ರಿಷಬ್ ಶೆಟ್ಟಿ, ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನ ಕಂಡಿದ್ದಾರೆ. ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದರೆ ಅತಿ ದೊಡ್ಡ ಮಟ್ಟದ ಸಕ್ಸಸ್ ಅಂತ ನೋಡಿರೋದು ಕಾಂತಾರ ಸಿನಿಮಾ ಮೂಲಕವೇ ಅನ್ನೋದು ಅಷ್ಟೆ ಸತ್ಯ.
ಡೈರೆಕ್ಟರ್ ರಿಷಬ್ ಶೆಟ್ಟಿ ಕಂಡ ಕನಸು ಏನು ಗೊತ್ತೆ?
ರಿಷಬ್ ಶೆಟ್ಟಿ ಒಳ್ಳೆ ಸಿನಿಮಾ ಮಾಡೋ ಕನಸು ಕಾಣ್ತಾನೇ ಇದ್ದಾರೆ. ಆ ನಿಟ್ಟಿನಲ್ಲಿಯೇ ಕಾಯಕವೇ ಕೈಲಾಸ ಅನ್ನೋ ಮನಸ್ಥಿತಿಯಲ್ಲಿಯೇ ಮುನ್ನುಗ್ಗುತ್ತಿದ್ದಾರೆ. ಇಂತಹ ಒಂದು ಮನಸ್ಸಿನ ರಿಷಬ್ ಶೆಟ್ಟಿ ತಮ್ಮ ಸಿನಿಮಾ ಕೂಡ ನೆಟ್ಫ್ಲಿಕ್ಸ್ ನಲ್ಲಿ ಬರಬೇಕು ಅಂತಲೇ ಕನಸು ಕಂಡಿದ್ದರು.
ರಿಷಬ್ ಶೆಟ್ರ ಈ ಒಂದು ಕನಸು ಈಗ ಸಾಕಾರಗೊಂಡಿದೆ. ಕಾಂತಾರ ಸಿನಿಮಾ ನೆಟ್ಫ್ಲಿಕ್ಸ್ ನಲ್ಲೂ ರಿಲೀಸ್ ಆಗಿದೆ. ನೆಟ್ಫ್ಲಿಕ್ಸ್ ನಲ್ಲಿ ಒಳ್ಳೆ ಕಂಟೆಂಟ್ ಇರೋ ಚಿತ್ರಗಳೇ ಬರುತ್ತವೆ. ಕಾಂತಾರ ಸಿನಿಮಾ ಆ ಸಾಲಿನ ಒಂದು ಚಿತ್ರವೇ ಆಗಿದೆ. ಇದರಿಂದ ರಿಷಬ್ ಶೆಟ್ರಿಗೆ ಇನ್ನಿಲ್ಲದಂತಹ ಖುಷಿ ಆಗಿದೆ.
ರಿಷಬ್ ಶೆಟ್ರಿಗೆ 200 ಕೋಟಿ ಕೊಟ್ರೆ ಏನ್ ಮಾಡ್ತಾರೆ?
ರಿಷಬ್ ಶೆಟ್ರಿಗೆ 200 ಕೋಟಿ ಕೊಟ್ಟು ಚಿತ್ರ ಮಾಡು ಅಂದ್ರೆ ಏನ್ ಮಾಡ್ತಾರೆ? ಈ ಒಂದು ಪ್ರಶ್ನೆಗೆ ಅವರ ಬಳಿ ಉತ್ತರವೇ ಇಲ್ಲ. ಅಷ್ಟೊಂದು ದುಡ್ಡು ತೆಗೆದುಕೊಂಡು ಏನು ಮಾಡೋದು? ಕಾಂತಾರ ಚಿತ್ರಕ್ಕೆ 200 ಕೋಟಿ ಕೊಟ್ಟು ಚಿತ್ರ ಮಾಡಿ ಅಂದ್ರೇ ಏನ್ ಮಾಡೋಕೆ ಆಗುತ್ತದೆ.
ಕೋಣದ ಓಟವನ್ನ ಹೆಲಿಕ್ಯಾಪ್ಟರ್ ನಿಂದ ಶೂಟ್ ಮಾಡೋಕೆ ಆಗುತ್ತದೆಯೇ? ಅದನ್ನ ನೆಲದ ಮೇಲಿನಿಂದಲೇ ಚಿತ್ರೀಕರಿಸಬೇಕಾಗುತ್ತದೆ. ಹೀಗಿರೋವಾಗ, ಒಂದು ಸಿನಿಮಾದ ಕಥೆಗೆ ಎಷ್ಟು ಬೇಕೋ ಅಷ್ಟೇ ದುಡ್ಡು ಖರ್ಚು ಮಾಡಬೇಕು ಅನ್ನೋದೇ ರಿಷಬ್ ಶೆಟ್ರ ಥಿಯೇರಿ ಆಗಿದೆ.
ರಿಷಬ್ ಶೆಟ್ರಿಗೆ ನಟನೆ ಇಷ್ಟವೇ ನಿರ್ದೇಶನ ಇಷ್ಟವೇ?
ರಿಷಬ್ ಶೆಟ್ರಿಗೆ ನಟನೆ ಒಂದು ಹಂತಕ್ಕೆ ಇಷ್ಟ ಆಗುತ್ತದೆ. ನಿರ್ದೇಶನವೇ ಅತಿ ಹೆಚ್ಚು ಇಷ್ಟ ಆಗೋದು. ನಿರ್ದೇಶನ ಬರವಣಿಗೆ ಹೀಗೆ ಎರಡನ್ನೂ ಮಾಡೋಕೇನೆ ರಿಷಬ್ ಶೆಟ್ರು ಹೆಚ್ಚು ಇಷ್ಟಪಡ್ತಾರೆ. ಈ ರೀತಿಯ ಪ್ರಶ್ನೆ ಈಗ ರಿಷಬ್ ಅವರಿಗೆ ಕಾಮನ್ ಆಗಿವೆ.
ಇದನ್ನೂ ಓದಿ: Kantara: ಕಾಮಿಡಿ ಆಗೋಯ್ತಾ ಪಂಜುರ್ಲಿ ದೈವದ ಕೂಗು? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ?
ಈ ಹಿನ್ನೆಲೆಯಲ್ಲಿ ಅನೇಕ ಸಂದರ್ಶನದಲ್ಲಿ ಇದೇ ರೀತಿಯ ರಿಯಾಕ್ಷನ್ ಕೊಟ್ಟಿರೋದೇ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ಕಾಂತಾರ-2 ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅನ್ನೋ ಪ್ರಶ್ನೆ ಕೂಡ ಎಲ್ಲಿ ಹೋದರು ಎದುರಾಗುತ್ತಲೇ ಇದೆ.
ಕಾಂತಾರ-2 ಸಿನಿಮಾ ಯಾವಾಗ ಶುರು ಆಗುತ್ತದೆ?
ರಿಷಬ್ ಶೆಟ್ರು ಕಾಂತಾರ-2 ಚಿತ್ರದ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ಇದರ ಸುತ್ತ ಕುತೂಹಲಕಾರಿ ಸುದ್ದಿಗಳೇ ಇವೆ. ನೆಟ್ವರ್ಕ್ ಸಿಗದೇ ಇರೋ ಜಾಗದಲ್ಲಿಯೇ ಕುಳಿತು ರಿಷಬ್ ಶೆಟ್ಟಿ ಕಥೆ ಬರೆಯುತ್ತಾರೆ ಅನ್ನು ಸುದ್ದಿ ಇದೆ. ಈಗಾಗಲೇ ಕಾಂತಾರ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸವೂ ಶುರು ಆಗಿದೆ ಅನ್ನೋ ಮಾತು ಹರಿದಾಡುತ್ತಿದೆ. ಆದರೆ ಯಾವುದು ಅಧಿಕೃತವಾಗಿ ಇನ್ನೂ ಹೊರ ಬಂದಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ