• Home
  • »
  • News
  • »
  • entertainment
  • »
  • Rishab Shetty Video Viral: ರಿಷಬ್ ಶೆಟ್ಟಿಯ ಆ ವೀಡಿಯೋ ವೈರಲ್! ಗಾಯಕ ಅಲೋಕ್ ಹಂಚಿಕೊಂಡ ವೀಡಿಯೋದಲ್ಲಿ ಏನಿದೆ ಗೊತ್ತೆ?

Rishab Shetty Video Viral: ರಿಷಬ್ ಶೆಟ್ಟಿಯ ಆ ವೀಡಿಯೋ ವೈರಲ್! ಗಾಯಕ ಅಲೋಕ್ ಹಂಚಿಕೊಂಡ ವೀಡಿಯೋದಲ್ಲಿ ಏನಿದೆ ಗೊತ್ತೆ?

ರಿಷಬ್ ಶೆಟ್ಟಿಯ ಆ ವೀಡಿಯೋ ವೈರಲ್

ರಿಷಬ್ ಶೆಟ್ಟಿಯ ಆ ವೀಡಿಯೋ ವೈರಲ್

"ನಮ್ಮ ಶಿವನಿಗೆ ಸನ್ಮಾನ. ಆದರೆ ಸನ್ಮಾನ ಸ್ವೀಕರಿಸೋವಾಗ ಚಪ್ಪಲಿ ಬಿಚ್ಚಿ ದೊಡ್ಡತನ ಮೆರೆದಿದ್ದಾರೆ " ಎಂದು ಅಲೋಕ್ ಬರೆದುಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Hero) ಸಿನಿಮಾದ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಏನ್ ಮಾಡಿದ್ರು ಸುದ್ದಿನೇ ಆಗುತ್ತಿದೆ. ಸಿನಿಮಾ ಪ್ರಚಾರಕ್ಕೆ ಮುಂಬೈಗೆ (Mumbai) ಕಾಲಿಟ್ಟರೇ ಅದು ಸುದ್ದಿ ಆಗುತ್ತದೆ. ಏರ್​ಪೋರ್ಟ್​​ಗೂ ಬಂದ್ರು ಸುದ್ದಿ ಆಗುತ್ತದೆ. ಅಷ್ಟೇ ಯಾಕೆ? ಕಾಂತಾರ (Kantara Release) ರಿಲೀಸ್ ಆದ ಥಿಯೇಟರ್​ಗೆ (Theater Visit) ಭೇಟಿ ಕೊಟ್ಟರೂ ಕೂಡ ಅದು ನ್ಯೂಸ್ ಆಗುತ್ತಿದೆ. ಅಷ್ಟು ಹೈಪ್​ ಅಲ್ಲಿಯೇ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗಿದ್ದಾರೆ. ಆದರೆ ಇದೇ ರಿಷಬ್ ಶೆಟ್ಟಿ ಒಂದು ಹಳೆ ವೀಡಿಯೋ ಕೂಡ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಕನ್ನಡದ Rapper ಅಲೋಕ್ ಈ ವೀಡಿಯೋವನ್ನ ನ್ಯೂಸ್ 18 ಕನ್ನಡ ಡಿಜಿಟಲ್ ಗೂ ಹಂಚಿಕೊಂಡಿದ್ದಾರೆ.


ಕಾಂತಾರ ಸಿನಿಮಾ ಕ್ರೇಜ್ ತುಂಬಾ ಇದೆ. ಕಾಂತಾರ ಚಿತ್ರದ ಯಶಸ್ಸು ಈ ಎಲ್ಲ ಕ್ರೇಜ್​ಗೆ ಕಾರಣ ಆಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿಗೂ ನೇಮ್ ಆ್ಯಂಡ್ ಫೇಮ್ ಈಗ ಹೆಚ್ಚಾಗಿದೆ.
ಕಾಂತಾರ ಚಿತ್ರದಿಂದಲೇ ಇಡೀ ದೇಶಕ್ಕೆ ರಿಷಬ್ ಪರಿಚಯ


Kannada Actor-Director Rishab Shetty One Week Old Video Not getting Viral
ಸನ್ಮಾನ ಸ್ವೀಕರಿಸೋವಾಗ ಚಪ್ಪಲಿ ಬಿಚ್ಚಿ ದೊಡ್ಡತನ ಮೆರೆದಿದ್ದಾರೆ


ಬೆಲ್ ಬಾಟಂ ಸಿನಿಮಾ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಮಾರ್ಕೆಟ್ ಚೇಂಜ್ ಆಯಿತು. ಅದೇ ಈ ಚಿತ್ರ ಪರ ಭಾಷೆಯಲ್ಲಿ ರಿಮೇಕ್ ಆದ್ಮೇಲೆ ಅಂತಹ ಏನೂ ಬದಲಾವಣೆ ಆಗಲಿಲ್ಲ.


ಇದನ್ನೂ ಓದಿ: BBK Season 09: ಈ ಬಾರಿ ಪಕ್ಕಾ ಇವರೇ ವಿನ್ನರ್, ದರ್ಶ್ ಚಂದ್ರಪ್ಪ ಕಿಚ್ಚ ಸುದೀಪ್ ಬಳಿ ಹೇಳಿದ ಹೆಸರು ಯಾವುದು?


ಆದರೆ ಕಾಂತಾರ ಸಿನಿಮಾ ತುಳುನಾಡಿನ ಈ ನಾಯಕ ನಟನನ್ನ ಎಲ್ಲೆಡೆ ತೆಗೆದುಕೊಂಡು ಹೋಗಿ ಬಿಟ್ಟಿದೆ. ನಿಮ್ಗೆ ಗೊತ್ತಿರಲಿ, ಈ ಸಿನಿಮಾದ ಕ್ರೇಜ್ ಇನ್ನೂ ನಿಂತಿಲ್ಲ. ಇದು ನಿರಂತರ ಅನ್ನೋ ಹಾಗೆ ಆಯಾ ಭಾಷೆಯಲ್ಲೂ ರಿಷಬ್ ಶೆಟ್ಟಿ ಹೆಸರು ವಾಸಿ ಆಗುತ್ತಿದ್ದಾರೆ.


ಕಾಂತಾರ ಚಿತ್ರದ ಯಶಸ್ಸಿನಿಂದ ರಿಷಬ್ ಶೆಟ್ಟಿ ಫುಲ್ ಖುಷ್​
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಗೆಲ್ಲೋದಲ್ಲದೇ, ನಿರ್ಮಾಪಕರ ಜೇಬನ್ನೂ ತುಂಬಿಸುತ್ತಿದೆ. ಹಾಗೇನೆ ಎಲ್ಲೆಡೆ ಯಶಸ್ವಿ ಪ್ರದರ್ಶನವನ್ನೂ ಕಾಣ್ತಾನೇ ಇದೆ.


ಕಳೆದ ತಿಂಗಳ 30 ರಂದು ಕಾಂತಾರ ರಿಲೀಸ್
ಇಂತಹ ಈ ಚಿತ್ರ ಕಳೆದ ತಿಂಗಳು 30 ರಂದು ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿದ್ದೇ ತಡ, ಮೊದಲ ದಿನವೇ ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂತು. ಪ್ರಚಾರವೂ ಅಷ್ಟೇ ಚೆನ್ನಾಗಿಯೇ ಸಿಕ್ಕಿತ್ತು.


ಕಾಂತಾರ ರಿಷಬ್ ಸನ್ಮಾನ ಸ್ವೀಕರಿಸೋ ವೀಡಿಯೋ ವೈರಲ್
ಹೌದು, ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವೀಡಿಯೋ ವೈರಲ್ ಆಗುತ್ತಿದೆ. ಕನ್ನಡದ Rapper ಅಲೋಕ್ ಈ ವೀಡಿಯೋವನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಹಂಚಿಕೊಂಡಿದ್ದಾರೆ.


ಈ ವೀಡಿಯೋದಲ್ಲಿ ವಿಶೇಷವೂ ಇದೆ. ಸಾಮಾನ್ಯ ಸನ್ಮಾನ ಸ್ವೀಕರಿಸೋ ಸಂದರ್ಭವೂ ಇದೆ. ಇನ್ನು ಇದರಲ್ಲಿರೋ ವಿಶೇಷವೇನೂ ಅಂದ್ರೆ, ವೇದಿಕೆ ಮೇಲೆ ಚಪ್ಪಲಿಯನ್ನ ಧರಿಸಿಕೊಂಡೇ ಹೋಗಿದ್ದ ರಿಷಬ್ ಶೆಟ್ಟಿ, ಸನ್ಮಾನ ಸ್ವೀಕರಿಸೋವಾಗ ಚಪ್ಪಲಿ ತೆಗೆದು ಆ ಸನ್ಮಾನ ಸ್ವೀಕರಿಸುತ್ತಾರೆ. ಅದು ಇಲ್ಲಿ ನೋಟ್ ಮಾಡಿಯೇ ಹೇಳುವ ವಿಷಯವೇ ಆಗಿದೆ.


ಕಾಂತಾರ ಶಿವನ ಬಗ್ಗೆ ಗಾಯಕ ಅಲೋಕ್ ಏನ್ ಬರೆದ್ರು ಗೊತ್ತೇ?
ಈ ಸನ್ಮಾನದ ವೇಳೆ ಗಾಯಕ ಅಲೋಕ್ ಕೂಡ ಇದ್ದರು. ಈ ವೀಡಿಯೋವನ್ನ ಅವರೇ ತಮ್ಮ ಸೋಷಿಯಲ್ ಮೀಡಿಯಾದ ಅಧಿಕೃತ ಪೇಜ್​ ನಲ್ಲೂ ಹಂಚಿಕೊಂಡಿದ್ದಾರೆ. "ನಮ್ಮ ಶಿವನಿಗೆ ಸನ್ಮಾನ. ಆದರೆ ಸನ್ಮಾನ ಸ್ವೀಕರಿಸೋವಾಗ ಚಪ್ಪಲಿ ಬಿಚ್ಚಿ ದೊಡ್ಡತನ ಮೆರೆದಿದ್ದಾರೆ " ಎಂದು ಅಲೋಕ್ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Head Bush Film: ಬೆಳ್ಳಿಪರದೆ ಮೇಲೆ ಭೂಗತ ಲೋಕ! ರಿಯಲ್ ಡಾನ್ ಕಥೆಗೆ ದುಡ್ಡು ಹಾಕಿದ ಧನಂಜಯ್


ರಿಷಬ್ ಶೆಟ್ಟಿ ಕಲೆ, ಕಲಾವಿದರು, ಕನ್ನಡ ಸಿನಿಮಾ, ಹೀಗೆ ಹಲವು ವಿಷಯಗಳ ಬಗ್ಗೆ ಗೌರವ ಮತ್ತು ಪ್ರೀತಿ ಹೊಂದಿದ್ದು, ಸನ್ಮಾನಿಸೋರಿಗೆ ಕೂಡ ಗೌರವ ತೋರಿದ್ದಾರೆ. ಮಂಗಳೂರಿನ ಕದ್ರಿ ಕ್ರಿಕೆಟರ್ಸ್ ಆಯೋಜಿಸಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ಹೀಗೆ ಎಲ್ಲರೂ ಮೆಚ್ಚಿಕೊಳ್ಳವು ಕೆಲಸವನ್ನೇ ರಿಷಬ್ ಶೆಟ್ಟಿ ಮಾಡಿದ್ದಾರೆ. ಅದೇ ಈ ವೀಡಿಯೋನೇ ಈಗ ಗಮನ ಸೆಳೆಯುತ್ತಿದೆ.

First published: