ಬಾಲಿವುಡ್ ನಲ್ಲಿ ಎಲ್ಲಿ (Bollywood) ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು. ಆ ಸಾಲಿಗೆ ತುಳುನಾಡಿನ ಕನ್ನಡಿಗ (Rishab Shetty In Film Companion) ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ ಎಲ್ಲ ಸ್ಟಾರ್ಗಳು ಎಲ್ಲ ನಿರ್ದೇಶಕರು (Directors) ಇಲ್ಲಿ ಸೇರ್ತಾರೆ. ಇದನ್ನ Film Companion Film Makers Adda ಅಂತಲೇ ಕರೆಯೋದು. ಇಲ್ಲಿ ಆಯಾ ವರ್ಷದ ಸಕ್ಸಸ್ಫುಲ್ ಸ್ಟಾರ್ಗಳು ಇರುತ್ತಾರೆ. ಕಳೆದೆರಡು ವರ್ಷಗಳಲ್ಲಿ ಕನ್ನಡದಿಂದ ರಾಕಿ ಭಾಯ್ ಇದ್ದರು. ಈ ಬಾರಿ ಶೆಟ್ರಿದ್ದಾರೆ.
ಆ ಕ್ಷಣದ ಒಂದಷ್ಟು ಫೋಟೋಗಳನ್ನೂ ಈಗ ಹಂಚಿಕೊಂಡಿದ್ದಾರೆ.
ಬಾಲಿವುಡ್ ಮಂದಿಗೆ ರಿಷಬ್ ಶೆಟ್ರು ಈಗ ಫೆವರಿಟ್!
ಕನ್ನಡದ ಕಾಂತಾರ ಸಿನಿಮಾದ ಮೋಡಿನೇ ಹಾಗಿದೆ. ಎಂದೂ ನಿರೀಕ್ಷೆ ಮಾಡದೇ ಇರೊ ಹಿಟ್ ಅನ್ನ ಇದು ಮೇಕರ್ಸ್ಗೆ ಕೊಟ್ಟಿದೆ. ಇಲ್ಲಿವರೆಗೂ ಇಂತಹ ಹಿಟ್ ನೋಡದ ಬಾಲಿವುಡ್ ಮಂದಿ ಕೂಡ ಕಾಂತಾರ ಕಂಡು ಥ್ರಿಲ್ ಆಗಿದ್ದಾರೆ. ಜೊತೆಗೆ ರಿಷಬ್ ಶೆಟ್ರನ್ನ ನಮ್ಮ ಫೇವರಿಟ್ ಅಂತಲೂ ಹೇಳಿಕೊಳ್ತಿದ್ದಾರೆ.
ರಿಷಬ್ ಶೆಟ್ರ ಕಾಂತಾರ ಚಿತ್ರದ ಸೆಳೆತ ಇನ್ನು ಮುಗಿದಿಲ್ಲ. ಈ ಚಿತ್ರದ ಒಂದಿಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇವೆ. ಮೊನ್ನೆ ಮೊನ್ನೆವರೆಗೂ ಕಾಂತಾರ ತುಳು ಭಾಷೆಯಲ್ಲಿ ರಿಲೀಸ್ ಆಗಿದೆ. ಅಲ್ಲೂ ತನ್ನದೇ ಮೋಡಿ ಮಾಡಿ ಗಮನ ಸೆಳೆದಿದೆ.
ಕಾಂತಾರದಿಂದ ಎಲ್ಲೆಡೆ ತುಳುನಾಡಿನ ದೈವಾರಾಧನೆ
ಕಾಂತಾರ ಬಂದ್ಮೇಲೆ ದೈವಾರಾಧನೆ ಎಲ್ಲಡೆ ನಡೆಯುತ್ತಿದೆ. ಇದು ಸರಿ ಅಲ್ಲ ಅನ್ನೋ ಮಟ್ಟಿಗೆ ವಿರೋಧಗಳು ವ್ಯಕ್ತವಾಗುತ್ತಿವೆ. ಕಾಂತಾರ ಸಿನಿಮಾ ಬರುವ ಮುನ್ನ, ಕೇವಲ ತುಳುನಾಡಿಗೆ, ತುಳುನಾಡಿನ ಜನಕ್ಕೆ ಸೀಮಿತವಾಗಿದ್ದ ದೈವಾರಾಧನೆ ಈಗ ಎಲ್ಲರ ದೈವ ಆಗಿದೆ. ಇದಕ್ಕೆಲ್ಲ ಕಾರಣ ಕಾಂತಾರ ಸಿನಿಮಾನೇ ಆಗಿದೆ. ಎಲ್ಲ ಕ್ರೆಡಿಟ್ ಈ ಚಿತ್ರಕ್ಕೇನೆ ಹೋಗಬೇಕು.
ಕಾಂತಾರ ಮೂಲಕವೇ ಬಾಲಿವುಡ್ಗೆ ಕಾಲಿಟ್ಟ ರಿಷಬ್ ಶೆಟ್ರು, ಅಲ್ಲಿ ತಾವೊಬ್ಬ ಸೂಪರ್ ಸ್ಟಾರ್ ಅಂತ ತೋರಿಸಿಕೊಂಡೇ ಇಲ್ಲ. ತುಂಬಾ ಸರಳವಾಗಿಯೇ ಇದ್ದಾರೆ. ತಮಗೆ ಗೊತ್ತಿರೋ ಹಿಂದಿ ಮತ್ತು ಇಂಗ್ಲೀಷ್ ನಲ್ಲಿಯೇ ವಿನಯದಿಂದಲೇ ಮಾತನಾಡುತ್ತಿದ್ದಾರೆ.
ಕಾಯಕವೇ ಕೈಲಾಸ ಕನ್ನಡವೇ ನಮ್ಮಮ್ಮ ಎಂದ ರಿಷಬ್
ಕಾಯಕವೇ ಕೈಲಾಸ ಎಂದು ರಿಷಬ್ ಶೆಟ್ರು ತಮ್ಮ ಕನ್ನಡ ಅಭಿಮಾನವನ್ನ ಇಲ್ಲೂ ತೋರಿದ್ದಾರೆ. ನಿಜ, ಕಾಂತಾರದಂತಹ ಸಿನಿಮಾ ಕೊಟ್ಟ ರಿಷಬ್ ಶೆಟ್ರು ಎಲ್ಲೆಡೆ ಓಡಾಡುತ್ತಲೇ ಇದ್ದಾರೆ. ತಮ್ಮ ಈ ಒಂದು ಡಿವೈನ್ ಹಿಟ್ ಕಾಂತಾರದಿಂದಲೇ ಈಗ ಇದೆಲ್ಲ ಸಾಧ್ಯವಾಗಿದೆ.
ದೊಡ್ಡ ದೊಡ್ಡ ಚಾನೆಲ್ಗಳ ಚರ್ಚಾ ಕಾರ್ಯಕ್ರಮದಲ್ಲೂ ರಿಷಬ್ ಶೆಟ್ರನ್ನ ಆಹ್ವಾನಿಸುತ್ತಿದ್ದಾರೆ. ಹಾಗೇನೆ ಒಂದು ಕಾರ್ಯಕ್ರಮದಲ್ಲಿ ರಿಷಬ್ ಶೆಟ್ರಿಗೆ ನಿಮ್ಮ ಮುಂದಿನ ಅಜೆಂಡಾ ಏನೂ? ಅದನ್ನ ಬರೆಯಬಹುದೇ ಅಂತ ಕೇಳಿದ್ದಾರೆ. ಅದಕ್ಕೆ ರಿಷಬ್ ಶೆಟ್ರು ಏನ್ ಹೇಳಿದರು ಗೊತ್ತೇ. ಇಲ್ಲಿದೆ ಓದಿ.
ನನಗೆ ಯಾವುದೇ ಅಜೆಂಡಾ ಇಲ್ವೇ ಇಲ್ಲ. ಕೆಲಸವೇ ನನ್ನ ಅಜೆಂಡಾ ಆಗಿದೆ. ನಾನು ಕೆಲಸ ಮಾಡ್ಬೇಕು. ಕೆಲಸ ಮಾಡುತ್ತಲೇ ಇರುತ್ತೇನೆ. ಹೀಗೆ ಹೇಳಿದ ರಿಷಬ್ ಶೆಟ್ಟಿ "ಕಾಯಕವೇ ಕೈಲಾಸ" ಅಂತಲೇ ಬರೆದು ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ. ಕನ್ನಡದಲ್ಲಿಯೇ ಕಾಯಕವೇ ಕೈಲಾಸ ಎಂದು ಬರೆದು ಕನ್ನಡಿಗರೆಲ್ಲ ಹೆಮ್ಮೆ ಪಡೋ ಹಾಗೆ ಮಾಡಿದ್ದಾರೆ.
ಬಾಲಿವುಡ್ ಮಂದಿ ಜೊತೆಗೆ ರಿಷಬ್ ಶೆಟ್ಟಿ ಪೋಸ್!
ಹೌದು, ಬಾಲಿವುಡ್ನಲ್ಲಿ ಪ್ರತಿ ವರ್ಷ Film Companion Film Makers Adda ದಲ್ಲಿ ಎಲ್ಲ ಸಕ್ಸಸ್ಫುಲ್ ಮೇಕರ್ಸ್ ಮತ್ತು ಸ್ಟಾರ್ಸ್ ಬಂದಿರುತ್ತಾರೆ. ಅದೇ ರೀತಿ 2022 ರ ಲೆಕ್ಕದಲ್ಲಿ ಅನಿಲ್ ಕಪೂರ್, ವರುಣ್ ಧವನ್, ದುಲ್ಕರ್ ಸಲ್ಮಾನ್, ರಾಜಕುಮಾರ್ ರಾವ್, ಜಾಹ್ನವಿ ಕಪೂರ್ ಹೀಗೆ ಎಲ್ಲರೂ ಇಲ್ಲಿದ್ದರು.
ಇದನ್ನೂ ಓದಿ: Nora Fatehi: ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ನೋರಾ ಫತೇಹಿ
ಇವರ ಜೊತೆಗೆ ಕನ್ನಡದ ತುಳುನಾಡಿನ ಹೀರೋ ರಿಷಬ್ ಶೆಟ್ಟಿ ಕೂಡ ಭಾಗಿ ಆಗಿದ್ದರು. ಅಲ್ಲಿ ಭಾಗಿ ಆಗಿರೋ ರಿಷಬ್ ಶೆಟ್ರು, ಆ ಕ್ಷಣ ತೆಗೆದ ಒಂದು ವಿಶೇಷ ಫೋಟೋವನ್ನೂ ಈಗ ಶೇರ್ ಮಾಡಿಕೊಂಡಿದ್ದಾರೆ. Amazing People and Amazing Discussion ಅಂತಲೂ ಬರೆದುಕೊಂಡಿದ್ದಾರೆ.
ಹೀಗೆ ರಿಷಬ್ ಶೆಟ್ಟಿ ತಮ್ಮ ಬಾಲಿವುಡ್ ಅನುಭವವನ್ನ ಎಲ್ಲೆಡೆ ಶೇರ್ ಮಾಡಿಕೊಂಡಿದ್ದಾರೆ. ರಿಷಬ್ ಶೆಟ್ರ ಈ ಒಂದು ಪಯಣಕ್ಕೆ ಕಾಂತಾರ ಸಿನಿಮಾವೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ ಆಗಿದೆ. ಇದರ ಬೆನ್ನಲ್ಲಿಯೇ ಕಾಂತಾರ-2 ಸಿನಿಮಾ ಯಾವಾಗ ಅನ್ನೋ ಮಾತು ದಿನೇ ದಿನೇ ಬಲವಾಗುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ