Rishab Shetty: ರಿಷಬ್ ದಂಪತಿಯ ಕೆರಾಡಿ ಸ್ಟುಡಿಯೋಸ್! ಶೆಟ್ಟರ ಹೊಸ ಹೆಜ್ಜೆ

ರಿಷಬ್ ಶೆಟ್ರ ಕೆರಾಡಿ ಸ್ಟುಡಿಯೋಸ್ ಕೆಲಸ ಏನು ಗೊತ್ತೇ ?

ರಿಷಬ್ ಶೆಟ್ರ ಕೆರಾಡಿ ಸ್ಟುಡಿಯೋಸ್ ಕೆಲಸ ಏನು ಗೊತ್ತೇ ?

ಕೆರಾಡಿ ಊರು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ಹುಟ್ಟಿ ಬೆಳೆದ ಊರು ಇದಾಗಿದೆ. ಸಿನಿಮಾ ಕನಸು ಹುಟ್ಟಿದ್ದು ಕೂಡ ಇಲ್ಲಿಯೇ. ಹಾಗಾಗಿಯೇ ನನ್ನ ಈ ಒಂದು ಪ್ರಯತ್ನವನ್ನ ನನ್ನೂರಿಗೆ ಅರ್ಪಿಸುತ್ತೇನೆ ಅಂತೇ ರಿಷಬ್ ಶೆಟ್ಟಿ ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕಾಂತಾರ ಸಿನಿಮಾ ಮುಂಚೇನೂ ರಿಷಬ್ ಶೆಟ್ಟು (Rishab Shetty Latest Updates) ಹಲವಾರು ಸಿನಿಮಾ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್‌ನಲ್ಲೂ ಕಥೆಗಳನ್ನ ಮಾಡಿಕೊಂಡಿದ್ದಾರೆ. ಅವುಗಳನ್ನ ಸಿನಿಮಾ ಮಾಡಿ ಹೊಸ ಹೊಸ ಅನುಭವ ಕೂಡ ಪಡೆದಿದ್ದಾರೆ. ರಿಷಬ್ ಶೆಟ್ರಿಗೆ (Director Rishab Shetty Latest New) ಸಿನಿಮಾ ಪ್ರಚಾರದ ಬಗ್ಗೇನೂ ತಿಳಿದಿದೆ. ಇಲ್ಲಿವರೆಗಿನ ಸಿನಿಮಾಗಳ (Rishab Shettys Keradi Studios) ಅನುಭವದಿಂದಲೇ ಈಗೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಆ ಒಂದು ಸಾಹಸಕ್ಕೆ ತಮ್ಮೂರಿನ ಹೆಸರೆ ಇಟ್ಟಿದ್ದಾರೆ. ಅದು ಕನ್ನಡ ಚಿತ್ರರಂಗಕ್ಕೆಇದೀಗ ಪರಿಚಯ ಕೂಡ ಆಗಿದೆ. ಆ ಬಗೆಗಿನ ಇನ್ನಷ್ಟು (Rishab Shetty Movie Latest News) ಮಾಹಿತಿ ಇಲ್ಲಿದೆ ಓದಿ.


ರಿಷಬ್ ಶೆಟ್ರು ಹೊಸ ಹೊಸ ಸಾಹಸ ಮಾಡುತ್ತಲೇ ಬಂದಿದ್ದಾರೆ. ನಟನೆ-ನಿರ್ದೇಶನ-ನಿರ್ಮಾಣ ಹೀಗೆ ಎಲ್ಲದರಲ್ಲೂ ಕೈಹಾಕಿದ್ದಾರೆ. ಆದರೆ ನಿರ್ಮಾಣದಲ್ಲಿ ಕೆಲವು ಸಿನಿಮಾ ಏನೂ ಸಾಥ್ ಕೊಟ್ಟಿಲ್ಲ. ಒಳ್ಳೆ ಸಿನಿಮಾ ಮಾಡಿದ ಖುಷಿಯನ್ನ ಮಾತ್ರಾ ಕೊಟ್ಟಿವೆ.


Kannada Actor Director Rishab Shetty Latest Updates
ಕಾಂತಾರ ರಿಷಬ್ ಶೆಟ್ರು ಕನ್ನಡಕ್ಕೆ ಯಾರನ್ನ ಪರಿಚಯಿಸ್ತಿದ್ದಾರೆ ಗೊತ್ತೇ.?


ರಿಷಬ್ ಶೆಟ್ರ ಹೊಸ ಕನಸು ಹೊಸ ಹೆಜ್ಜೆ


ಪ್ರಚಾರ ಇನ್ನೂ ಜಾಸ್ತಿ ಮಾಡಬೇಕಿತ್ತು. ಜನರಿಗೆ ಇನ್ನೂ ಚೆನ್ನಾಗಿಯೇ ಮುಟ್ಟಿಸಬೇಕಿತ್ತು ಅನ್ನುವ ಅನುಭವ ಕೂಡ ಕೊಟ್ಟಿವೆ. ಅದೇ ಅನುಭವ ಈಗ ರಿಷಬ್ ಶೆಟ್ರಿಗೆ ಹೊಸ ಹೆಜ್ಜೆ ಇಡಲು ಸ್ಫೂರ್ತಿ ನೀಡಿದೆ.
ರಿಷಬ್ ಶೆಟ್ರು ಒಂದ್ ಒಳ್ಳೆ ಟೀಮ್ ಕಟ್ಟಿಕೊಂಡು ಸಿನಿಮಾ ಮಾಡಿಕೊಂಡು ಬಂದಿದ್ದಾರೆ. ತಮ್ಮದೇ ಒಂದು ನಿರ್ಮಾಣ ಸಂಸ್ಥೆಯನ್ನ ಕೂಡ ಹುಟ್ಟುಹಾಕಿದ್ದಾರೆ. ಅದಕ್ಕೆ ಹೊಸದೊಂದು ಸೇರ್ಪಡೆ ಆಗಿದೆ. ಆ ಸೇರ್ಪಡೆ ಈಗ ಕನ್ನಡ ಇಂಡಸ್ಟ್ರೀಗೆ ಪರಿಚಯ ಆಗಿದೆ.
ರಿಷಬ್ ಶೆಟ್ರ ಕೆರಾಡಿ ಸ್ಟುಡಿಯೋಸ್ ಕೆಲಸ ಏನು ಗೊತ್ತೇ ?


ರಿಷಬ್ ಶೆಟ್ರು ಈಗೊಂದು ಕೆರಾಡಿ ಸ್ಟುಡಿಯೋಸ್ ಅಂತ ಶುರು ಮಾಡಿದ್ದಾರೆ. ಈ ಕೆರಾಡಿ ಸ್ಟುಡಿಯೋಸ್ ಕೆಲಸ ಸಿಂಪಲ್ ಆಗಿದೆ. ಹೊಸ ಸಿನಿಮಾಗಳ ಪ್ರಚಾರ ಮಾಡಿಕೊಡುವುದು ಮತ್ತು ಹೊಸ ಚಿತ್ರಗಳ ಮಾರ್ಕೆಂಟಿಂಗ್ ಮಾಡಿಕೊಡುವುದೇ ಈ ಕೆರಾಡಿ ಸ್ಟುಡಿಯೋಸ್ ಕೆಲಸವಾಗಿದೆ.
ರಿಷಬ್ ಶೆಟ್ರು ತಮ್ಮ ಈ ಒಂದು ಹೊಸ ಹೆಜ್ಜೆಗೆ ತಮ್ಮ ಊರು ಕೆರಾಡಿಯ ಹೆಸರಿಟ್ಟಿದ್ದಾರೆ. ಈ ಹೆಸರನ್ನ ಇಡಲು ಕಾರಣ ಏನು ಅನ್ನೋದನ್ನ ಕೂಡ ತಿಳಿಸಿದ್ದಾರೆ.


ನಮ್ಮೂರು ಕೆರಾಡಿ ನನ್ನ ಹೃದಯಕ್ಕೆ ತುಂಬಾ ಹತ್ತಿರ-ರಿಷಬ್ ಶೆಟ್ಟಿ


ಕೆರಾಡಿ ಊರು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ಹುಟ್ಟಿ ಬೆಳೆದ ಊರು ಇದಾಗಿದೆ. ನನ್ನ ಸಿನಿಮಾ ಕನಸು ಹುಟ್ಟಿದ್ದು ಕೂಡ ಇಲ್ಲಿಯೇ. ಹಾಗಾಗಿಯೇ ನನ್ನ ಈ ಒಂದು ಪ್ರಯತ್ನವನ್ನ ನನ್ನೂರಿಗೆ ಅರ್ಪಿಸುತ್ತೇನೆ ಅಂತಲೇ ರಿಷಬ್ ಶೆಟ್ಟಿ ಹೇಳಿದ್ದಾರೆ.


Kannada Actor Director Rishab Shetty Latest Updates
ನಮ್ಮೂರು ಕೆರಾಡಿ ನನ್ನ ಹೃದಯಕ್ಕೆ ತುಂಬಾ ಹತ್ತಿರ-ರಿಷಬ್ ಶೆಟ್ಟಿ


ಕೆರಾಡಿ ಸ್ಟುಡಿಯೋಸ್ ಮೂಲಕ ರಿಷಬ್ ಶೆಟ್ರು ಹೊಸ ಹೆಜ್ಜೆ ಇಟ್ಟಿದ್ದು, ಕನ್ನಡ ಚಿತ್ರರಂಗದ ಹೊಸ ಹೊಸ ಸಿನಿಮಾಗಳಿಗೆ ತಮ್ಮ ಈ ಒಂದು ಸೇವೆ ಕೊಡಲಿದ್ದಾರೆ.


ರಿಷಬ್ ಶೆಟ್ರ ಕಾಂತಾರ ಪ್ರಿಕ್ವೆಲ್ ಹೊಸ ಮಾಹಿತಿ ಏನು ?


ರಿಷಬ್ ಶೆಟ್ರು ಈ ಒಂದು ಹೊಸ ಹೆಜ್ಜೆಗೆ ಒಳ್ಳೆ ಟೀಮ್ ಸಾಥ್ ಕೊಟ್ಟಿದೆ. ಆ ಟೀಮ್‌ಗೆ ರಿಷಬ್ ಶೆಟ್ರು ಬೆಂಬಲವಾಗಿಯೇ ನಿಂತಿದ್ದಾರೆ.


ಇದನ್ನೂ ಓದಿ: Divya Suresh: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ದಿವ್ಯಾ ಸುರೇಶ್, ಈ ಫೋಟೋ ತೆಗೆದದ್ದು ನಿಮ್ಮ ಗಂಧರ್ವ ರಾಜನಾ?


ತಮ್ಮ ಕಾಂತಾರ ಪ್ರಿಕ್ವೆಲ್ ಸಿನಿಮಾದ ಸ್ಕ್ರಿಪ್ಟಿಂಗ್ ಮತ್ತು ಇತರ ಕೆಲಸದ ಮಧ್ಯ ಈ ಒಂದು ಸುದ್ದಿಯನ್ನೂ ರಿಷಬ್ ಶೆಟ್ರು ಕೊಟ್ಟಿದ್ದಾರೆ.


ಆದರೆ ಕಾಂತಾರ ಪ್ರಿಕ್ವೆಲ್ ಚಿತ್ರದ ಹೊಸ ಮಾಹಿತಿಯನ್ನ ಇನ್ನೂ ಕೊಟ್ಟಿಲ್ಲ. ಈ ಬಗ್ಗೆ ಮೌನವಾಗಿಯೇ ಇದ್ದು, ಮತ್ತಷ್ಟು-ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

First published: