• Home
  • »
  • News
  • »
  • entertainment
  • »
  • Rishab Shetty Kannada Love: ತುಳುನಾಡ ಚೆಲುವನ ಕನ್ನಡ ಪ್ರೇಮ, ಬಾಲಿವುಡ್‌ನಲ್ಲೂ ರಿಷಬ್ ಶೆಟ್ಟಿ ಕರುನಾಡ ಡಿಂಡಿಮ!

Rishab Shetty Kannada Love: ತುಳುನಾಡ ಚೆಲುವನ ಕನ್ನಡ ಪ್ರೇಮ, ಬಾಲಿವುಡ್‌ನಲ್ಲೂ ರಿಷಬ್ ಶೆಟ್ಟಿ ಕರುನಾಡ ಡಿಂಡಿಮ!

ಕಾಂತಾರ ಸಿನಿಮಾದ ಪೋಸ್ಟರ್

ಕಾಂತಾರ ಸಿನಿಮಾದ ಪೋಸ್ಟರ್

"ನಾನು ಕನ್ನಡವನ್ನ ಪ್ರೀತಿಸುತ್ತೇನೆ. ಕನ್ನಡದಲ್ಲಿಯೇ ಯೋಚಿಸುತ್ತೇನೆ. ಕನ್ನಡವನ್ನೇ ಜೀವಿಸುತ್ತೇನೆ" ಅನ್ನೋ ಅರ್ಥದಲ್ಲಿಯೇ ರಿಷಬ್ ಶೆಟ್ಟಿ ಹಿಂದಿಯಲ್ಲಿಯೇ ಮಾತನಾಡಿದ್ದಾರೆ. ಹೀಗೆ ಬಾಲಿವುಡ್‌ನಲ್ಲಿ ಕನ್ನಡ ಪ್ರೇಮ ಮೆರೆದು ಬಂದ ರಿಷಬ್ ಶೆಟ್ಟಿ, ಈಗ ಮತ್ತಷ್ಟು ಖುಷಿಯಲ್ಲಿಯೇ ಇದ್ದಾರೆ. ಕಾರಣ ಕನ್ನಡದಂತೆ ಹಿಂದಿಯಲ್ಲೂ ಕಾಂತಾರ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ!

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್ ಸ್ಟಾರ್ (Sandalwood) ಕನ್ನಡ ಪ್ರೇಮ ಮೆಚ್ಚಲೇಬೇಕು. ದೂರದ ಬಾಲಿವುಡ್​ ಗೆ ಕಾಲಿಟ್ಟರೂ ಕೂಡ ಕನ್ನಡ ಪ್ರೇಮ ಮರೆಯೋದಿಲ್ಲ. ಮೊನ್ನೆ ಮೊನ್ನೆವರೆಗೂ ವಿಕ್ರಾಂತ್ ರೋಣ ಚಿತ್ರದ ಹಿಂದಿ (Hindi Promotion) ಪ್ರಮೋಷನ್​ನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಕನ್ನಡವನ್ನ ಸರಿಯಾಗಿ ಉಚ್ಛಾರ ಮಾಡದೇ ಇರೋ ಆ್ಯಂಕರ್​​ಗೆ (Sudeep) ಕಿಚ್ಚ ಸುದೀಪ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಕನ್ನಡ್ ಅಲ್ಲ ಇದು ಕನ್ನಡ ಅಂತಲೇ ಹೇಳಿ ಕನ್ನಡ ಕಲಿಸಿಕೊಟ್ಟಿದ್ದರು. ಅದರಂತೆ ಕಾಂತಾರ ಚಿತ್ರದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕನ್ನಡ ಪ್ರೀತಿಯನ್ನ ಹಿಂದಿಯಲ್ಲಿಯೆ ವ್ಯಕ್ತಪಡಿಸಿದ್ದಾರೆ. ಆ ಸಂದರ್ಶನದ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social media)  ಭಾರೀ ಗಮನ ಸೆಳೆಯುತ್ತಿದೆ.


ಬಾಲಿವುಡ್​ ನಲ್ಲೂ ರಿಷಬ್ ಶೆಟ್ಟಿ ಕನ್ನಡ ಡಿಂಡಿಮ
ಕನ್ನಡ ಪ್ರೇಮ ಎಂತಹ ಕಲಾವಿದನನ್ನೂ ಎತ್ತರಕ್ಕೆ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಅವರ ಕನ್ನಡ ಪ್ರೇಮ ಎಷ್ಟಿದೆ ಅನ್ನೋದು ಹೊರಗಡೆ ಹೋದಾಗಲೇ ಅದು ನಮಗೂ ತಿಳಿಯುತ್ತದೆ.


ರಿಷಬ್ ಶೆಟ್ಟಿ ವಿಷಯದಲ್ಲಿ ಅದು ಈಗ ತಿಳಿದಿದೆ. ಮಾತೃ ಭಾಷೆ ತುಳು ಆದರೂ ಆ ಭಾಷೆ ಮೇಲಿನ ಪ್ರೀತಿ ಕೂಡ ಅಷ್ಟೇ ಸಹಜವೇ ಆಗಿದೆ. ಅಲ್ಲಿಯ ಕಲೆ ಮತ್ತು ಸಂಸ್ಕೃತಿಯನ್ನೂ ಸಿನಿಮಾದಲ್ಲಿ ತೆಗೆದುಕೊಂಡು ಬಂದಿರೋದು ಕೂಡ ಒಂದು ರೀತಿ ಸಹಜವೇ ಆಗಿದೆ.


ತುಳುನಾಡ ದೈವ ದೇಶ-ವಿದೇಶದಲ್ಲೂ ಈಗ ಚಿರಪರಿಚಿತ
ಅದೇ ತುಳುನಾಡಿನ ದೈವ  ಈಗ ದೇಶ-ವಿದೇಶದಲ್ಲೂ ಕಾಂತಾರ ಮೂಲಕ ತಲುಪಿದೆ. ಆದರೂ ಸಹ, ರಿಷಬ್ ಶೆಟ್ಟಿ ಮನದಲ್ಲಿ ಕನ್ನಡ ಪ್ರೇಮ ಅತಿಯಾಗಿಯೇ ಇದೆ. ಇದನ್ನ ಇಲ್ಲಿವರೆಗೂ ಎಲ್ಲರೂ ಡೌಟ್ ನಿಂದಲೇ ನೋಡ್ತಾ ಇದ್ದರು.


ಆದರೆ ರಿಷಬ್ ಶೆಟ್ಟಿಯ ಕನ್ನಡ ಪ್ರೇಮ ಅಪಾರವಾಗಿಯೇ ಇದೆ. ಅದನ್ನ ಕನ್ನಡ ನಾಡಿನಲ್ಲಿಯೇ ಹೇಳಿರೋದು ಕಡಿಮೇನೆ. ಹಾಗಂತ ಹೊರಗಡೆ ಹೇಳಿರೋದು ಬಹುತೇಕ ಎಲ್ಲೂ ಕಾಣಿಸಿಲ್ಲ.


Kannada Actor Director Rishab Shetty Express his love toward Kannada Language
ನಾನು ಕನ್ನಡವನ್ನ ಪ್ರೀತಿಸುತ್ತೇನೆ. ಕನ್ನಡದಲ್ಲಿಯೇ ಯೋಚಿಸುತ್ತೇನೆ


ಹೀಗಿರುವಾಗ ರಿಷಬ್ ಶೆಟ್ಟಿ ಅವರ ಕನ್ನಡ ಪ್ರೇಮ ಎಷ್ಟು ಅನ್ನೋದು ಈಗ ತಿಳಿದು ಬಿಟ್ಟಿದೆ. ಬಾಲಿವುಡ್​ ನಲ್ಲಿ ಕಾಂತಾರ ರಿಲೀಸ್ ಆಗ್ತಿರೋ ಹಿನ್ನೆಲೆಯಲ್ಲಿಯೇ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಮುಂಬೈಯಲ್ಲಿಯೇ ಬೀಡು ಬಿಟ್ಟಿತ್ತು. ಪ್ರಚಾರವನ್ನೂ ಅಷ್ಟೇ ಅದ್ಭುತವಾಗಿಯೇ ಮಾಡಿತ್ತು.


ಕಾಂತಾರ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡ ಪ್ರೇಮ ಮೆರೆದ ರಿಷಬ್
ಇಂತಹ ಒಂದು ಪ್ರಚಾರದ ಕಾರ್ಯಕ್ರಮದಲ್ಲಿಯೆ ರಿಷಬ್ ಶೆಟ್ಟಿ ತಮ್ಮ ಕನ್ನಡ ಪ್ರೇಮವನ್ನ ಹೇಳಿಕೊಂಡಿದ್ದಾರೆ. ಸಿನಿಮಾ ಪತ್ರಕರ್ತೆ ಕೇಳಿರೋ ಪ್ರಶ್ನೆಗೆ ರಿಷಬ್ ಶೆಟ್ಟಿ ಹಿಂದಿ ಭಾಷೆಯಲ್ಲಿಯೇ ಕನ್ನಡದ ಬಗೆಗಿನ ತಮ್ಮ ಅಪಾರ ಗೌರವ ಪ್ರೀತಿ ಏನೂ ಅನ್ನೋದನ್ನ ಹೇಳಿಕೊಂಡಿದ್ದಾರೆ.


ಹೀಗೆ ಬಾಲಿವುಡ್​ ನಲ್ಲಿ ಕನ್ನಡ ಪ್ರೇಮವನ್ನ ಮೆರೆದು ಬಂದ ರಿಷಬ್ ಶೆಟ್ಟಿ, ಈಗ ಮತ್ತಷ್ಟು ಖುಷಿಯಲ್ಲಿಯೇ ಇದ್ದಾರೆ. ಕನ್ನಡದಂತೆ ಹಿಂದಿಯಲ್ಲೂ ಕಾಂತಾರ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ.


3ನೇ ವಾರವೂ ಅಮೆರಿಕದಲ್ಲೂ ಕಾಂತಾರ ಯಶಸ್ವಿ ಪ್ರದರ್ಶನ
ಇನ್ನು ಕನ್ನಡದ ಕಾಂತಾರ ಕಳೆದ ಮೂರು ವಾರಗಳ ಹಿಂದೇನೆ ಅಮೆರಿಕದಲ್ಲೂ ರಿಲೀಸ್ ಆಗಿತ್ತು. ಅಲ್ಲೂ ಕೂಡ ಕಾಂತಾರ ಸಿನಿಮಾ ಭರ್ಜರಿಯಾಗಿಯೇ ಓಡ್ತಾಯಿದೆ. ಹೊಂಬಾಳೆ ಪ್ರೋಡಕ್ಷನ್ ಹೌಸ್ ಕೂಡ ಈ ಒಂದು ಅಧಿಕೃತ ಮಾಹಿತಿಯನ್ನ ಸೋಷಿಯಲ್ ಮೀಡಿಯಾದಲ್ಲೂ ರಿವೀಲ್ ಮಾಡಿದೆ.


ಇನ್ನುಳಿದಂತೆ ಕನ್ನಡದ ಕಾಂತಾರ ಯಾವುದೇ ಅಡೆತಡೆಯಿಲ್ಲದೇ ಎಲ್ಲೆಡೆ ಅದ್ಭುತ ರೆಸ್ಪಾನ್ಸ್​ನೊಂದಿಗೆ, ಯಶಸ್ವಿ ಪ್ರದರ್ಶನವನ್ನೂ ಕಾಣುತ್ತಿದೆ. ಕನ್ನಡದ ಹೆಸರನ್ನೂ ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಹೆಮ್ಮೆಯಿಂದಲೇ ಹೇಳುವಂತೆ ಮಾಡಿದೆ.

First published: