• Home
  • »
  • News
  • »
  • entertainment
  • »
  • Ravichandran Post Viral: ರವಿಚಂದ್ರನ್-ಹಂಸಲೇಖಾ ಮತ್ತೆ ಸಿನಿಮಾ ಮಾಡ್ತಾರಾ? ವಿ.ರವಿಚಂದ್ರನ್ ಆ ಹಳೆ ಆರ್ಟಿಕಲ್ ಶೇರ್ ಮಾಡಿದ್ಯಾಕೆ?

Ravichandran Post Viral: ರವಿಚಂದ್ರನ್-ಹಂಸಲೇಖಾ ಮತ್ತೆ ಸಿನಿಮಾ ಮಾಡ್ತಾರಾ? ವಿ.ರವಿಚಂದ್ರನ್ ಆ ಹಳೆ ಆರ್ಟಿಕಲ್ ಶೇರ್ ಮಾಡಿದ್ಯಾಕೆ?

ಪುಟ್ನಂಜ ಚಿತ್ರದ ಆ ಆರ್ಟಿಕಲ್ ಕಟ್ಟಿಂಗ್ ಹಂಚಿಕೊಂಡ್ರೇ ರವಿಚಂದ್ರನ್?

ಪುಟ್ನಂಜ ಚಿತ್ರದ ಆ ಆರ್ಟಿಕಲ್ ಕಟ್ಟಿಂಗ್ ಹಂಚಿಕೊಂಡ್ರೇ ರವಿಚಂದ್ರನ್?

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನದಂಗಳದಲ್ಲಿ ಸಾಕಷ್ಟು ನೆನಪುಗಳಿವೆ. ಅಂತಹ ನೆನಪುಗಳು, ಅಂತಹ ಕನಸುಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೇಸ್ ಬುಕ್ ಪೇಜ್​ ನಲ್ಲೂ ಸಿನಿಮಾ ವಿಷಯಗಳನ್ನ ಹಂಚಿಕೊಳ್ಳುತ್ತಲೇ ಇರುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಕ್ರೇಜಿ ಸ್ಟಾರ್ (Crazy Star Ravichandran) ರವಿಚಂದ್ರನ್ ಕನಸು ಯಾವಾಗಲು ನನಸು ಮಾಡಿಕೊಳ್ಳುತ್ತಾರೆ. ಆದರೆ ಎಲ್ಲ ಕನಸುಗಳನ್ನ ಜನ ತೆಗೆದುಕೊಳ್ತಾರೆ ಅನ್ನೋದು ಡೌಟು. ಜನರೇಷನ್ ಚೇಂಜ್ ಆಗಿದೆ. ಈಗೀನ ಹುಡುಗರ ನಿರೀಕ್ಷೆ ಬೇರೆ ಇದೆ. ಅಂದಿನ ಪ್ರೇಕ್ಷಕರಿಗೆ ರವಿಚಂದ್ರನ್ (Creator) ಮಹಾನ್ ಕ್ರಿಯೆಟರ್​ ಆಗಿದ್ದರು. ಅದಕ್ಕೂ ಹೆಚ್ಚಾಗಿ ರವಿಚಂದ್ರನ್ ಸಿನಿಮಾದಲ್ಲಿ ಅತ್ಯದ್ಭುತ ಹಾಡುಗಳು ಇರುತ್ತಿದ್ದವು. ತಮ್ಮ ಕನಸಿಗೆ ತಕ್ಕನಾಗಿಯೇ ರವಿಚಂದ್ರನ್ ತಮ್ಮ ಚಿತ್ರಕ್ಕೆ ಹಾಡುಗಳನ್ನ ಮಾಡಿಸುತ್ತಿದ್ದರು. ಅದಕ್ಕೆ ಸಾಥ್ ನೀಡಿದವ್ರು ಬೇರೆ ಯಾರೋ ಅಲ್ಲ. ಅದು ಒನ್​ ಆ್ಯಂಡ್ ಒನ್ಲಿ ಹಂಸಲೇಖ ಅವರು. ಇವರ ಜೋಡಿ ಸೂಪರ್ (Super HIt) ಹಿಟ್ ಜೋಡಿನೇ ಆಗಿತ್ತು. ಆ ಜೋಡಿ ಮತ್ತೆ ಒಂದಾಗ್ಬೇಕು ಅನ್ನೋ ಆಸೆ ಅನೇಕರಿಗೆ ಇದೆ. ಅದಕ್ಕೆ ಕಾಲ ಕೂಡಿ ಬರಬೇಕು ಅಷ್ಟೆ.


ಆದರೆ ರವಿಚಂದ್ರನ್ ತಮ್ಮ ಚಿತ್ರ ಜೀವನದ ಅಮರ ನೆನಪುಗಳನ್ನ ಆಗಾಗ (Old Memory) ಮೆಲುಕು ಹಾಕ್ತಾನೇ ಇರುತ್ತಾರೆ. ಅದಕ್ಕೊಂದು ಸಾಕ್ಷಿ ವಿ. ರವಿಚಂದ್ರನ್ ಹೆಸರಿನ ಒಂದು ಫೇಸ್ ಬುಕ್ ಖಾತೆಯಲ್ಲಿ 1994 ರ ಒಂದು ಆರ್ಟಿಕಲ್ ಶೇರ್ ಆಗಿದೆ.


ಕ್ರೇಜಿ ಸ್ಟಾರ್ ಸವಿ ಸವಿ ನೆನಪು ಸಾವಿರ ನೆನಪು
ಕ್ರೆಜಿ ಸ್ಟಾರ್ ರವಿಚಂದ್ರನ್ ಸಾವಿರ ಸಾವಿರ ಕನಸುಗಳನ್ನ ಕಾಣ್ತಾರೆ. ಆ ಕನಸಿಗೆ ರೆಕ್ಕೆ ಪುಕ್ಕಗಳನ್ನ ಕಟ್ಟಿಕೊಂಡು, ಮನಸ್ಸಿನ ಆಳದಿಂದ ಕಲರ್ ಫುಲ್ ಆಗಿಯೇ ಬೆಳ್ಳಿ ತೆರೆಗೂ ತಂದು ಕೊಡ್ತಾನೇ ಬಂದಿದ್ದಾರೆ.


Kannada Actor Director Ravichandran Shared his Old Memories
ಕ್ರೇಜಿ ಸ್ಟಾರ್ ಸವಿ ಸವಿ ನೆನಪು ಸಾವಿರ ನೆನಪು


ನಟ-ನಿರ್ದೇಶಕ ರವಿಚಂದ್ರನ್ ಸಿನಿಮಾಗಳೇ ಹಾಗೆ ಅಲ್ವೇ? ಅವರ ಸಿನಿಮಾದಲ್ಲಿ ಹೊಸತಕ್ಕೆ ಜಾಸ್ತಿ ಜಾಗ ಇರುತ್ತವೆ. ರವಿಚಂದ್ರನ್ ಸಿನಿಮಾಗಳನ್ನ ಈಗೀನ ಹುಡುಗರು ಅದ್ಯಾಕ ಮೆಚ್ಚುತ್ತಿಲ್ಲವೋ ಏನೋ. ಆದರೂ ಕನಸುಗಾರ ಕನಸು ಕಾಣೋದನ್ನ ಬಿಟ್ಟಿಲ್ಲ. ಅದು ರವಿಚಂದ್ರನ್ ಬದುಕಿನ ಸತ್ಯವೂ ಹೌದು.


ಕ್ರೇಜಿ ಸ್ಟಾರ್ ಕಂಡ ಕನಸು ಅಂದು ಇಂದು ಎಂದೆಂದು ಕಲರಫುಲ್​
ಏಕಾಂಗಿಯಾಗಿಯೇ ಕನಸು ಕಂಡು ಬೆಳ್ಳಿ ಪರದೆ ಮೇಲೆ ಹೊಸ ಹೊಸ ಕಲರ್​ಫುಲ್ "ಚಿತ್ರ"ಗಳನ್ನ ಬಿಡಿಸುತ್ತಲೇ ಬಂದಿದ್ದಾರೆ. ಇವರ ಈ ಬೆಳ್ಳಿ ತೆರೆಯ ಬಣ್ಣದ ಕನಸಿಗೆ ಹಂಸಲೇಖ ಸಂಗೀತದ ಮೂಲಕ ಸಾಥ್ ಕೊಟ್ಟಿದ್ದಾರೆ.


ಇದನ್ನೂ ಓದಿ: Kantara-Kabzaa: ಕಾಂತಾರ ನಂತರ ವಾಟ್ ನೆಕ್ಸ್ಟ್? ಬಾಲಿವುಡ್ ಕಣ್ಣು ಈಗ ಯಾವ ಚಿತ್ರದ ಮೇಲೆ?


ಅಂತಹ ಈ ಜೋಡಿ ಅತ್ಯದ್ಭುತ ಚಿತ್ರಗಳನ್ನ ಕೊಟ್ಟಿದೆ. ನಾನು ನನ್ನ ಹೆಂಡ್ತಿ, ಪ್ರೇಮ್​ಲೋಕದಂತಹ ಹಿಟ್ ಚಿತ್ರ ಕೊಟ್ಟಿದೆ. ಪುಟ್ನಂಜ ಸಿನಿಮಾ ಕೂಡ ಈ ಜೋಡಿಯ ಹಿಟ್ ಸಿನಿಮಾನೇ ಆಗಿದೆ.


ಪುಟ್ನಂಜ ಚಿತ್ರದ ಆ ಆರ್ಟಿಕಲ್ ಕಟ್ಟಿಂಗ್ ಹಂಚಿಕೊಂಡ ರವಿಚಂದ್ರನ್?
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನದಂಗಳದಲ್ಲಿ ಸಾಕಷ್ಟು ನೆನಪುಗಳಿವೆ. ಅಂತಹ ನೆನಪುಗಳು, ಅಂತಹ ಕನಸುಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್​ ನಲ್ಲೂ ಸಿನಿಮಾ ವಿಷಯಗಳನ್ನ ಹಂಚಿಕೊಳ್ಳುತ್ತಲೇ ಇರುತ್ತದೆ.


ಅದರಂತೆ 1994 ರಲ್ಲಿ ಪುಟ್ನಂಜ ಸಿನಿಮಾದ ಬಗ್ಗೆ ಒಂದು ಆರ್ಟಿಕಲ್ ಬಂದಿದೆ. ಆಗ ಬಂದ ಈ ಆರ್ಟಿಕಲ್​ನ ಒಂದು ಪುಟವನ್ನ ವಿ. ರವಿಚಂದ್ರನ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈಗ ಹಂಚಿಕೊಳ್ಳಲಾಗಿದೆ. ಈ ಪುಟದ ಅಕ್ಷರಗಳು ಮಸುಕು ಮಸುಕಾಗಿಯೇ ಇವೆ.


Kannada Actor Director Ravichandran Shared his Old Memories
ಕ್ರೇಜಿ ಸ್ಟಾರ್ ಕಂಡ ಕನಸು ಅಂದು ಇಂದು ಎಂದೆಂದು ಕಲರಫುಲ್​


ಅಮರ ನೆನಪುಗಳನ್ನ ಮತ್ತೆ ನೆನಪಿಸಿದ ವಿಶೇಷ ಆರ್ಟಿಕಲ್
ಈ ಒಂದು ಅಮರ ನೆನಪಿನ ಆರ್ಟಿಕಲ್​ನಲ್ಲಿ ರವಿಚಂದ್ರನ್ ಮತ್ತು ಹಂಸಲೇಖಾ ಅವರ ಜೋಡಿಯ ಮೋಡಿಯ ಬಗ್ಗೆ ಬರೆಯಲಾಗಿದೆ. ರವಿಚಂದ್ರನ್ ಹಾಗೂ ಹಂಸಲೇಖಾ ಅವರ ಸಿನಿ ಪಯಣದ ವಿವರಣೆ ಕೂಡ ಈ ಒಂದು ಆರ್ಟಿಕಲ್​ನಲ್ಲಿಯೇ ಇದೆ.


ಹೀಗೆ ರವಿಚಂದ್ರನ್ ಮತ್ತು ಹಂಸಲೇಖಾ ಅವರು ತಮ್ಮ ಚಿತ್ರ ಜೀವನದಲ್ಲಿ ಯಶಸ್ವಿ ಜೋಡಿಯಾಗಿಯೇ ಗುರುತಿಸಿಕೊಂಡರು. ಆದರೆ ಅದೇನ್ ಆಯ್ತೋ ಏನೋ. ಈ ಜೋಡಿಯ ನಡುವೆ ಬಿರುಕು ಮೂಡಿ ಬೇರೆಯಾದ್ರು. ಆದರೆ ಒಬ್ಬರಿಗೊಬ್ಬರು ನಡುವೆ ಈಗಲೂ ಗೌರವ ಇದೆ.




ರವಿಚಂದ್ರನ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಿದ ಈ ಆರ್ಟಿಕಲ್​ ಅನ್ನ ನೋಡಿದ ನೆಟ್ಟಿಗರು, ಒಟ್ಟಿಗೆ ಸಿನಿಮಾ ಮಾಡಿ ಅಂತಲೇ ಸಲಹೆ ಕೊಟ್ಟಿದ್ದಾರೆ. ಮನೆದೇವ್ರು-2 ಮಾಡಿ ಅಂತಲೂ ಹೇಳುತ್ತಿದ್ದಾರೆ. ನಮ್​ ಜಮಾನಾದ ಒನ್ಲಿ ರಣಧೀರ ಅಂತಲೂ ಒಬ್ಬರು ಕಾಮೆಂಟ್ ಹಾಕಿದ್ದಾರೆ.


ಉಳಿದಂತೆ ರವಿಚಂದ್ರನ್ ಹೆಸರಿನ ಈ ಫೇಸ್ ಬುಕ್ ಖಾತೆಯಲ್ಲಿ ರವಿಚಂದ್ರನ್ ಗೆ ಸಂಬಂಧಿಸಿದ ಇನ್ನು ಅನೇಕ ಫೋಟೋಗಳೂ ಇವೆ. ಆದರೆ ಈ ಬಗ್ಗೆ ರವಿಚಂದ್ರನ್ ಅವರಿಗೆ ಗೊತ್ತಿದಿಯೋ ಇಲ್ವೋ.


ಇದನ್ನೂ ಓದಿ: Rakul Preet Singh: ಫ್ಲೋರಲ್ ಉಡುಗೆಯಲ್ಲಿ ರಾಕುಲ್ ಪ್ರೀತ್ ಸಿಂಗ್! ವಾಟರ್ ಬೇಬಿ ಲುಕ್


ಆದರೆ ರವಿಚಂದ್ರನ್ ಅವರು ತಮ್ಮದೇ ಅಧಿಕೃತ ಫೇಸ್​ ಬುಕ್ ಪೇಜ್​ ನಲ್ಲಿ ತಮ್ಮ ಹೊಸ ಚಿತ್ರದ ಅಪ್​​ಡೇಟ್ಸ್ ಕೊಡ್ತಾನೇ ಇರ್ತಾರೆ.

First published: