ಕನ್ನಡ ಚಿತ್ರರಂಗದ (Kannada Film Industry) ವಿಶೇಷ ನಟ (Special Actor) ಯಾರು? ಈ ಒಂದು ಪ್ರಶ್ನೆಗೆ ಹಲವು ಉತ್ತರಗಳು ಬರುತ್ತವೆ. ಆ ಉತ್ತರಗಳಲ್ಲಿ ರಮೇಶ್ ಅರವಿಂದ್ (Ramesh Aravind) ತುಂಬಾ ಸ್ಪೆಷಲ್ ಅನಿಸುತ್ತಾರೆ. ಒಳ್ಳೆ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಲೇ, ಈಗಲೂ ಜನರ ಮನಸನ್ನ ರಂಜಿಸುತ್ತಿದ್ದಾರೆ. ಸಿನಿಮಾರಂಗದಲ್ಲಿ ಯಾವುದೇ ರೀತಿಯ ವಿವಾದವನ್ನ (Controversy) ಎಳೆದುಕೊಳ್ಳದೇ, ವಿವಾದಾತ್ಮಕ ಹೇಳಿಕೆಯನ್ನೂ ಕೊಡದೇ, ತಾವಾಯ್ತು ತಮ್ಮ ಕೆಲಸ ಆಯಿತು ಅಂತಲೇ ತಮ್ಮ ಸಿನಿಪಯಣವನ್ನ ಮುಂದುವರೆಸಿದ್ದಾರೆ. ಆಗಾಗ ಸ್ಪೆಷಲ್ ಐಡಿಯಾಗಳನ್ನ ಯೋಚನೆಗಳನ್ನ ತಮ್ಮ ವಿಶೇಷ ಶೈಲಿಯಲ್ಲಿಯೇ ಎಲ್ಲರಿಗೂ ಹೇಳ್ತಾನೇ ಇರ್ತಾರೆ. ಈಗ ಅದೇ ರಮೇಶ್ ಅರವಿಂದ್ ಸಂಕ್ರಾಂತಿ ಹಬ್ಬಕ್ಕೆ (Sankranti Festival) ಸ್ಪೆಷಲ್ ಸಾಂಗ್ (Special Song) ಅಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.
ರಮೇಶ್ ಅರವಿಂದ್ "ತಕಥೈ" ಎಂದು ಬಂದೇ ಬಿಟ್ಟರು ನೋಡಿ!
ಕನ್ನಡ ನಾಡಿನ ವಿಶೇಷ ನಾಯಕ ನಟ-ನಿರ್ದೇಶಕ ರಮೇಶ್ ಅರವಿಂದ್ ಈಗ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಸ್ಪೆಷಲ್ ಆಗಿಯೇ ಇದ್ದು ವಿಶೇಷ ಸಂದರ್ಭಕ್ಕಾಗಿಯೇ ರೆಡಿ ಆಗಿದೆ.
ಹಾಗಂತ ಇದು ಸಿನಿಮಾವೊಂದರ ಸಾಂಗ್ ಅಲ್ವೇ ಅಲ್ಲ. ಇದು ಸಂಕ್ರಾಂತಿ ಹಬ್ಬದ ಹಾಡೇ ಆಗಿದೆ. ವಿಶೇಷವಾಗಿಯೇ ಸಂಕ್ರಾಂತಿ ಹಬ್ಬಕ್ಕೇನೆ ಈ ಒಂದು ಗೀತೆಯನ್ನ ರೆಡಿ ಮಾಡಲಾಗಿದೆ.
ತಕಥೈ ಹಾಡಿನಲ್ಲಿ ರಮೇಶ್ ಅರವಿಂದ್ ಗೆಸ್ಟ್ ಅಪಿಯರೆನ್ಸ್
ತಕಥೈ ಹೆಸರಿನ ಈ ಹಾಡಿನಲ್ಲಿ ಇನ್ನೂ ಹತ್ತು ಹಲವು ಕಲಾವಿದರಿದ್ದಾರೆ. ಇವರಲ್ಲಿ ತುಂಬಾ ಸ್ಪೆಷಲ್ ಅನಿಸೋದು, ರಮೇಶ್ ಅರವಿಂದ್. ಹಾಡಿನ ಸಾಲುಗಳನ್ನ ಹೇಳುತ್ತಲೇ ಸ್ಪೆಷಲ್ ಆಗಿಯೇ ಎಂಟ್ರಿ ಕೊಡ್ತಾರೆ.
ತಕಥೈ ಹಾಡು ಎರಡು ಭಾಷೆಯಲ್ಲಿ ಈಗ ರೆಡಿ
ತಕಥೈ ಹಾಡು ಒಂದಲ್ಲ ಎರಡು ಭಾಷೆಯಲ್ಲಿ ರೆಡಿ ಆಗಿದೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಂಕ್ರಾಂತಿಯ ಈ ಗೀತೆ ರೆಡಿ ಆಗಿದೆ. ಈಗಾಗಲೇ ಇದು ರಿಲೀಸ್ ಕೂಡ ಆಗಿದೆ.
ಸಂಕ್ರಾಂತಿ ಹಾಡಲ್ಲಿ ಪೃಥ್ವಿ ಅಂಬರ್-ರಾಧಿಕಾ ನಾರಾಯಣ್
ತಕಥೈ ಹಾಡಿನಲ್ಲಿ ರಮೇಶ್ ಅರವಿಂದ್ ಗೆಸ್ಟ್ ರೋಲ್ನಲ್ಲಿ ಅಭಿನಯಿಸಿದ್ದಾರೆ. ಆದರೆ ಇಡೀ ಹಾಡಲ್ಲಿ ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬರ್ ಹಾಗೂ ನಟಿ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷತೆಗಳನ್ನೂ ಹಾಡಿ ಹೇಳುತ್ತಾರೆ.
ತಕಥೈ ಹಾಡಲ್ಲಿ ಕನ್ನಡದ ಚಿಟ್ಟೆ ಹರ್ಷಿಕಾ ಪೂಣಚ್ಚ
ಸಂಕ್ರಾಂತಿ ಹಬ್ಬದ ವಿಶೇಷತೆಯನ್ನ ಹೇಳುವ ಈ ಗೀತೆಯಲ್ಲಿ ಅನೇಕ ಕಲಾವಿದರಿದ್ದಾರೆ. ಅವರಲ್ಲಿ ಕನ್ನಡದ ಚಿಟ್ಟೆ ಖ್ಯಾತಿಯ ನಟಿ ಹರ್ಷಿಕಾ ಪೂಣಚ್ಚ ಕೂಡ ಇದ್ದಾರೆ. ಇವರ ನೃತ್ಯವೂ ಇಲ್ಲಿ ಗಮನ ಸೆಳೆಯುತ್ತಿದೆ.
ತಕಥೈ ಹಾಡಿನ ಸಂಗೀತ ನಿರ್ದೇಶಕ ಯಾರು ಗೊತ್ತೆ?
ತಕಥೈ ಹಾಡಿನ ಹಿಂದೆ ಇನ್ನೂ ಹಲವು ವಿಶೇಷತೆಗಳಿವೆ. ಮಲೆಯಾಳಂ ಸಂಗೀತ ನಿರ್ದೇಶಕ ಅನೂಪ್ ಮೆನನ್ ಸಂಗೀತ ಕೊಟ್ಟಿದ್ದಾರೆ. ಎದೆ ತುಂಬಿ ಹಾಡುವೆನು ಖ್ಯಾತಿಯ ಲಕ್ಷ್ಮಿ ಹೊಯ್ಸಳ್ ಹಾಗೂ ಶ್ರೀನಿವಾಸ್ ನಾಯಕ್ ಈ ಗೀತೆಯನ್ನ ರಚಿಸಿದ್ದಾರೆ. ತಾವೇ ಇದಕ್ಕೆ ಧ್ವನಿ ಕೂಡ ಆಗಿದ್ದಾರೆ.
ಎರಡು ಭಾಷೆಯಲ್ಲಿ ಮೂಡಿ ಬಂದಿರೋ ತಕಥೈ ವೀಡಿಯೋ ಹಾಡು ಈಗ ರಿಲೀಸ್ ಆಗಿದೆ. ವಿಶೇಷವಾಗಿಯೇ ಕನ್ನಡ ಮತ್ತು ತೆಲುಗು ಭಾಷೆಯ ಕಲಾವಿದರು ಈ ಒಂದು ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Keerthy Suresh: ಕಣ್ಣಿಗೆ ಕೂಲಿಂಗ್ ಗ್ಲಾಸು, ಮೈ ಮೇಲೆ ಅರ್ಧಂಬರ್ಧ ಬಟ್ಟೆ ಸಾಕು, ಇದು ಮಹಾನಟಿಯ ರಿಲ್ಯಾಕ್ಸ್ ಮೂಡು!
ಜಯ್ ಸಿರಿಕೊಂಡ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಇನ್ನುಳಿದಂತೆ ಈ ಗೀತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈಗಾಗಲೇ ರಿಲೀಸ್ ಆಗಿದೆ. ಜನವರಿ-14 ರಂದು ಸಂಕ್ರಾಂತಿ ಹಬ್ಬದ ಸಡಗರ-ಸಂಭ್ರಮ ಎಲ್ಲೆಡೆ ಮನೆ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ