• Home
  • »
  • News
  • »
  • entertainment
  • »
  • Naveen Krishna Villain: ನಾನು ಫಸ್ಟ್ ಟೈಮ್ ವಿಲನ್ ಪಾತ್ರ ಮಾಡ್ತಿದ್ದೇನೆ ಆದರೆ ಇಲ್ಲಿ ಡೈಲಾಗ್​ಗಳೇ ಇಲ್ಲ- ನಟ ನಿರ್ದೇಶಕ ನವೀನ್ ಕೃಷ್ಣ

Naveen Krishna Villain: ನಾನು ಫಸ್ಟ್ ಟೈಮ್ ವಿಲನ್ ಪಾತ್ರ ಮಾಡ್ತಿದ್ದೇನೆ ಆದರೆ ಇಲ್ಲಿ ಡೈಲಾಗ್​ಗಳೇ ಇಲ್ಲ- ನಟ ನಿರ್ದೇಶಕ ನವೀನ್ ಕೃಷ್ಣ

ಈ ಚಿತ್ರದಲ್ಲಿ ನವೀನ್ ಕೃಷ್ಣ Good Villain!

ಈ ಚಿತ್ರದಲ್ಲಿ ನವೀನ್ ಕೃಷ್ಣ Good Villain!

ನವೀನ್ ಕೃಷ್ಣ ಮೊದಲ ಬಾರಿಗೆ ಖಳನಾಯಕ ನಟರಾಗಿಯೇ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣ ಆಗಿದ್ದು, ನವೀನ್ ಕೃಷ್ಣ ಪಾತ್ರದ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ನಟ-ನಿರ್ದೇಶಕ ನವೀನ್ (Naveen Krishna) ಕೃಷ್ಣ ಬಹು ಪ್ಭವಂತ ಕಲಾವಿದ. ನಟನೆ-ನಿರ್ದೇಶನ ಜೊತೆಗೆ ಸ್ಕ್ರಿಪ್ಟ್ ರೈಟರ್ ಕೂಡ ಹೌದು. ಒಳ್ಳೆ ಗಾಯಕರೂ ಅನ್ನೋದು ಎಲ್ಲರಿಗೂ ಗೊತ್ತಿರೊ ವಿಷಯವೇ ಆಗಿದೆ. ಈಗಾಗಲೇ ನವೀನ್ ಕೃಷ್ಣ ಹಿರಿತೆರೆ ಮತ್ತು ಕಿರುತೆರೆಯಲ್ಲೂ ಇದ್ದಾರೆ. ಯಡಿಯೂರು (Yediyur Shree Siddhalingeshwara) ಶ್ರೀ ಸಿದ್ಧಲಿಂಗೇಶ್ವರ ಸೀರಿಯಲ್ (Serial) ನಿರ್ದೇಶನದ ಮೂಲಕ ಕನ್ನಡಿಗರ ಹೃದಯ ಗೆದಿದ್ದಾರೆ. ಹೀಗೆ ತಮ್ಮ ಕೆಲಸದಲ್ಲಿ ತಲ್ಲೀನರಾದ ನವೀನ್ ಕೃಷ್ಣ ಅವರಿಗೆ ಚಿತ್ರವೊಂದರ ಪಾತ್ರ ಸೆಳೆದು ಬಿಟ್ಟಿದೆ. ಚಿತ್ರದ ಕಥೆ ಮತ್ತು ಚಿತ್ರದ ನಿರ್ದೇಶಕರ ಪ್ರತಿಭೆಯನ್ನ ಕಂಡ ನವೀನ್ ಕೃಷ್ಣ, ಮೊಟ್ಟ ಮೊದಲ ಭಾರಿಗೆ ಈ ಮೂಲಕ ಫಸ್ಟ್ ಟೈಮ್ (First Time Villain) ವಿಲನ್ ಪಾತ್ರವನ್ನೂ ಮಾಡಿದ್ದಾರೆ.


ಈ ಬಗ್ಗೆ ಸ್ವತಃ ನವೀನ್ ಕೃಷ್ಣ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಒಂದಷ್ಟು ವಿಶೇಷ ವಿಷಯಗಳನ್ನ ಹಂಚಿಕೊಂಡಿದ್ದಾರೆ.


ನಟ-ನಿರ್ದೇಶಕ-ಗಾಯಕ ನವೀನ್ ಕೃಷ್ಣ ಈಗ ಖಳನಾಯಕ
ನವೀನ್ ಕೃಷ್ಣ ವಿಶೇಷ ನಾಯಕ ನಟ. ಈ ವಿಚಾರ ಕನ್ನಡ ಇಂಡಸ್ಟ್ರಿಗೆ ಗೊತ್ತಿದೆ. ತಮ್ಮ ಪ್ರತಿಭೆ ಮೂಲಕ ತಮ್ಮದೇ ಹಾದಿಯಲ್ಲಿಯೇ ನವೀನ್ ಕೃಷ್ಣ ಸಾಗುತ್ತಿದ್ದಾರೆ. ಕನ್ನಡದ ಮಟ್ಟಿಗೆ ಬಹು ಪ್ರತಿಭಾವಂತ ನಟ ಸ್ಮಾಲ್ ಸ್ಕ್ರೀನ್ ಮತ್ತು ಬಿಗ್ ಸ್ಕ್ರೀನ್ ಹೀಗೆ ಎರಡರಲ್ಲೂ ಮಿಂಚುತ್ತಲೇ ಇದ್ದಾರೆ.


Kannada Actor Director Naveen Krishna Talk About his First Villain Role
ನವೀನ್ ಕೃಷ್ಣ ನಿರ್ವಹಿಸಿದ್ದ ಪಾತ್ರಕ್ಕೆ ಡೈಲಾಗ್ ಇಲ್ಲವೇ ?


ನವೀನ್ ಕೃಷ್ಣ ಪಾತ್ರಗಳ ಆಯ್ಕೆ ಮತ್ತು ಪ್ರಯೋಗಕ್ಕೆ ಒಗ್ಗಿಕೊಳ್ಳುತ್ತಾರೆ. ಆ್ಯಕ್ಟರ್ ಅನ್ನೋ ಸಿನಿಮಾದಲ್ಲಿ ನವೀನ್ ಕೃಷ್ಣರ ಪ್ರತಿಭೆಗಳೆಲ್ಲ ಅನಾವರಣಗೊಂಡಿತ್ತು. ಅದನ್ನ ಕಂಡು ಸಿನಿ ಪ್ರೇಮಿಗಳು, ಸಿನಿಮಾರಂಗದವ್ರು ಮೆಚ್ಚಿ ಕೊಂಡಾಡಿದರು.


ಮಲ್ಟಿ ಟ್ಯಾಲೆಂಟೆಡ್ ನವೀನ್ ಕೃಷ್ಣ ವಿಲನ್ ಪಾತ್ರ ಒಪ್ಪಿದ್ಯಾಕೆ?
ನಟ-ನಿರ್ದೇಶಕ ನವೀನ್ ಕೃಷ್ಣ ವಿಲನ್ ಪಾತ್ರ ಫಸ್ಟ್ ಟೈಮ್ ಒಪ್ಪಿಕೊಂಡಿದ್ದಾರೆ. ಇದು ನವೀನ್ ಕೃಷ್ಣರ ಚಿತ್ರ ಜೀವನದ ಮೊದಲ ಪೂರ್ಣ ಪ್ರಮಾಣದ ನೆಗೆಟಿವ್ ಪಾತ್ರವೇ ಆಗಿದೆ. ಆದರೆ ಈ ಹಿಂದೆ ಧಿಮಾಕು ಚಿತ್ರ ಬರುವ ಮುಂಚೇನೆ ಗುಡ್​ ಲಕ್ ಹೆಸರಿನ ಚಿತ್ರದಲ್ಲಿ ನವೀನ್ ಕೃಷ್ಣ ನೆಗೆಟಿವ್ ಶೇಡ್ ಇರೋ ಪಾತ್ರವನ್ನ ನಿರ್ವಹಿಸಿದ್ದರು ಅಷ್ಟೆ.


ಇದನ್ನೂ ಓದಿ: Kannadathi: ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ, ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು!


ಆದರೆ ಈಗ ನೆಗೆಟಿವ್ ಪಾತ್ರ ನಿರ್ವಹಿಸಲು ಬಲವಾದ ಕಾರಣಗಳೂ ಇವೆ. ಆ ಲೆಕ್ಕದಂತೆ ಚಿತ್ರದ ನಿರ್ದೇಶಕ ಹರ್ಷಪ್ರಿಯಾ ಪ್ರತಿಭೆ ಮೊದಲಾಗಿದೆ. ಚಿತ್ರದ ಪಾತ್ರವೂ ವಿಶೇಷವಾಗಿಯೇ ಇದೆ. ಇದನ್ನ ಅಷ್ಟೇ ಚೆನ್ನಾಗಿಯೇ ತೋರುತ್ತಾರೆ ಅನ್ನುವ ನಂಬಿಕೆ ಕೂಡ ಇತ್ತು. ಇವೆಲ್ಲ ಇರೋದ್ರಿಂದಲೇ ನವೀನ್ ಕೃಷ್ಣ ಚಿತ್ರದ ವಿಲನ್ ಪಾತ್ರ ಒಪ್ಪಿಕೊಂಡಿದ್ದಾರೆ.


ಹೆಜ್ಜಾರು ಚಿತ್ರದಲ್ಲಿಯೇ ನಟ-ನಿರ್ದೇಶಕ ನವೀನ್ ಕೃಷ್ಣ ವಿಲನ್​
ನವೀನ್ ಕೃಷ್ಣ ಮೊದಲ ಬಾರಿಗೆ ಖಳನಾಯಕ ನಟರಾಗಿಯೇ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣ ಆಗಿದ್ದು, ನವೀನ್ ಕೃಷ್ಣ ಪಾತ್ರದ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿದೆ. ಅಷ್ಟೇ ಚೆನ್ನಾಗಿಯೇ ಈ ಪಾತ್ರ ಬಂದಿದೆ ಅಂತಲೇ ನಟ-ನಿರ್ದೇಶಕ ನವೀನ್ ಕೃಷ್ಣ ಹೇಳುತ್ತಾರೆ.


ನವೀನ್ ಕೃಷ್ಣ ನಿರ್ವಹಿಸಿದ್ದ ಪಾತ್ರಕ್ಕೆ ಡೈಲಾಗ್ ಇಲ್ಲವೇ ?
ಹೌದು, ಈ ಒಂದು ಸತ್ಯವನ್ನ ಸ್ವತಃ ನವೀನ್ ಕೃಷ್ಣ ರಿವೀಲ್ ಮಾಡಿದ್ದಾರೆ. ತಮ್ಮ ಪ್ರಥಮ ವಿಲನ್ ಪಾತ್ರಕ್ಕೆ ಈ ಸಿನಿಮಾದಲ್ಲಿ ಡೈಲಾಗ್ ಕಡಿಮೆ ಇವೆ. ಆದರೆ ಎಕ್ಸಪ್ರೆಷನ್​​ಗಳೇ ಇಲ್ಲಿ ಪ್ರಮುಖವಾಗಿಯೇ ಇವೆ. ಭಾವಾವೇಷಗಳ ಮೇಲೆನೆ ಇಡೀ ಪಾತ್ರ ಇರುತ್ತದೆ ಅನ್ನೋದೇ ನವೀನ್ ಕೃಷ್ಣ ಒಟ್ಟು ಮಾತಿನ ತಾತ್ಪರ್ಯವೇ ಆಗಿದೆ.


Kannada Actor Director Naveen Krishna Talk About his First Villain Role
ಹೆಜ್ಜಾರು ಚಿತ್ರದಲ್ಲಿಯೇ ನಟ-ನಿರ್ದೇಶಕ ನವೀನ್ ಕೃಷ್ಣ ವಿಲನ್​


ಈ ಚಿತ್ರದಲ್ಲಿ ನವೀನ್ ಕೃಷ್ಣ Good Villain!
ನವೀನ್ ಕೃಷ್ಣ ನಿರ್ವಹಿಸಿದ ಪಾತ್ರ ಕೆಟ್ಟ ಕೆಲಸಗಳನ್ನ ಮಾತ್ರ ಮಾಡುತ್ತದೆ. ಆದರೆ ಈ ಪಾತ್ರಕ್ಕೆ Ethics ಕೂಡ ಇರುತ್ತದೆ. ಕೊನೆಗೆ ಈ ಪಾತ್ರದ ಓಟ ಕೂಡ ಬದಲಾಗುತ್ತದೆ ಅನ್ನೋದನ್ನ ಕೂಡ ನಾವು ಈ ವಿಷಯದ ಮೇಲೆ ಅಂದಾಜು ಮಾಡಬುದು.


ಹೆಜ್ಜಾರು ಚಿತ್ರದಲ್ಲಿ ನವೀನ್ ಕೃಷ್ಣ ಸಖತ್ ಕೆಸರು ಫೈಟ್
ಚಿತ್ರದ ನಾಯಕ ಮತ್ತು ನವೀನ್ ಕೃಷ್ಣ ಫೈಟ್ ಸೀನ್ ಸಖತ್ ಆಗಿಯೇ ಇದೆ. ಕೆಸರಲ್ಲಿಯೇ ಇಡೀ ಫೈಟ್ ಸೀನ್ ಚಿತ್ರೀಕರಣ ಆಗಿದೆ. ಇದನ್ನ ನಿಭಾಯಿಸೋವಾಗ ಮೈ-ಕೈ ಗಾಯ ಕೂಡ ಆಗಿದೆ. ಆದರೂ ಅದ್ಭುತವಾದ ದೃಶ್ಯವನ್ನ ತೆಗೆದ ಖುಷಿ ಕೂಡ ಇದೆ ಅನ್ನೋದು ಕೂಡ ಅಷ್ಟೇ ಸತ್ಯ.


ಇದನ್ನೂ ಓದಿ: Puneeth Rajkumar's Gandhadagudi: ಗಂಧದಗುಡಿ ಟಿಕೆಟ್ ದರದಲ್ಲಿ ಭಾರೀ ಕಡಿತ; ಅಭಿಮಾನಿಗಳಿಗಾಗಿ 4 ದಿನ ಭರ್ಜರಿ ಆಫರ್!


ಉಳಿದಂತೆ ಹೆಜ್ಜಾರು ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಕಿರುತೆರೆಯ ನಟ-ನಿರ್ದೇಶಕ ನವೀನ್ ಕೃಷ್ಣ ಈ ಮೂಲಕ ಕನ್ನಡಿಗರಿಗೆ ತಮ್ಮ ಇನ್ನೂ ಒಂದು ಪ್ರತಿಭೆ ತೋರುತ್ತಿದ್ದಾರೆ.


ನಟ-ನಿರ್ದೇಶಕ ಹರ್ಷಪ್ರಿಯಾ ಕೂಡ ಚಿತ್ರದ ಮೂಲಕವೇ ಕನ್ನಡಕ್ಕೆ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. ಕಿರುತೆರೆಯ ನಿರ್ಮಾಪಕ ರಾಮ್​ಜಿ ಕೂಡ ಮೊದಲ ಬಾರಿಗೆ ಬಿಗ್ ಪರದೆಗಾಗಿ ಚಿತ್ರ ನಿರ್ಮಿಸಿದ್ದಾರೆ.

First published: