Nagendra Urs : ಒಲವಿನ ನಿಲ್ದಾಣದಲ್ಲಿ ಖ್ಯಾತ ಖಳನಟನ ಪುತ್ರ ವಿಲನ್ ಆಗಿ ಎಂಟ್ರಿ! ಈ ಖದರ್ ಬೇರೇನೇ

ನಟ-ನಿರ್ದೇಶಕ ನಾಗೇಂದ್ರ ಅರಸ್ ಪಾತ್ರದಲ್ಲಿ ಅವರ ತಂದೆ ಸುಂದರಕೃಷ್ಣ ಅರಸ್ ಝಲಕ್ ಕಾಣಿಸುತ್ತದೆ. ಸುಂದರಕೃಷ್ಣ ಅರಸ್ ಅವರ ಪುತ್ರ ಅಂದ್ಮೇಲೆ ಅದು ಸಹಜ ಬಿಡಿ. ತಂದೆಯ ಹಾವ-ಭಾವ ಒಂಚೂರು ಮಕ್ಕಳಿಗೆ ಬಂದಿರುತ್ತದೆ. ಅದು ನಾಗೇಂದ್ರ ಅರಸ್ ಪಾತ್ರದಲ್ಲೂ ಕಾಣಿಸುತ್ತಿದೆ.

ಒಲವಿನ ನಿಲ್ದಾಣದ ಚಕ್ರವರ್ತಿ ಪಾತ್ರಧಾರಿ ನಾಗೇಂದ್ರ ಅರಸ್

ಒಲವಿನ ನಿಲ್ದಾಣದ ಚಕ್ರವರ್ತಿ ಪಾತ್ರಧಾರಿ ನಾಗೇಂದ್ರ ಅರಸ್

  • Share this:
ಕನ್ನಡದ ಪುಟ್ಟ ಪರದೆ ಮೇಲೆ ಈಗ ಒಲವಿನ ನಿಲ್ದಾಣ (Serial) ಸೀರಿಯಲ್ ಟಾಕ್ ಹೆಚ್ಚಾಗಿದೆ. ಇತ್ತೀಚಿಗಷ್ಟೆ ಶುರು ಆಗಿರೋ ಈ ಸೀರಿಯಲ್ ಪಾತ್ರಗಳೂ ತುಂಬಾ ಚೆನ್ನಾಗಿವೆ. ಒಂದಕ್ಕಿಂತ ಒಂದು ಅನ್ನೋ ರೀತಿ ಸೂಪರ್ ಆಗಿಯೇ ಡಿಸೈನ್ ಆಗಿವೆ. ಈ ಸೀರಿಯಲ್​ನಲ್ಲಿ ಕಾಲೇಜ್​ ನಲ್ಲಿ ಎಚ್​​.ಓ.ಡಿ ಚಿಕ್ರವರ್ತಿ ಅನ್ನೋ ಪಾತ್ರವೊಂದಿದೆ. ಇದರ ಖದರ್ ಬೇರೆನೆ ಇದೆ. ಮೊನ್ನೆ ಮೊನ್ನೆಯಷ್ಟೆ ಈ ಪಾತ್ರದ (Entry) ಎಂಟ್ರಿ ಆಗಿದೆ. ಅದಕ್ಕೂ ಹೆಚ್ಚಾಗಿ ಇದನ್ನ ಕನ್ನಡದ ಹೆಸರಾಂತ ಖಳನಾಯಕ ನಟನ ಪುತ್ರ ಮಾಡಿರೋದೇ ವಿಶೇಷ. ಹೌದು, ಸುಂದರಕೃಷ್ಣ ಅರಸ್ ಪುತ್ರ ನಾಗೇಂದ್ರ ಅರಸ್ ಈ ಒಂದು ರೋಲ್ ನಿಭಾಯಿಸಿದ್ದಾರೆ. ವಿಲನ್ (Villain) ಪಾತ್ರಕ್ಕೆ ಹೆಸರಾಗಿದ್ದ ಸುಂದರಕೃಷ್ಣ ಅರಸ್ ಅವ್ರ ಪುತ್ರ ನಾಗೇಂದ್ರ ಅರಸ್, (Nagendra Urs) ತಂದೆ ಹಾಗೇನೆ ತಮ್ಮ ವಿಲನ್ ಪಾತ್ರದ ಖದರ್ ತೋರಿದ್ದಾರೆ. ಪಾತ್ರದ ಸುತ್ತ ಅದು ತಮ್ಮನ್ನ ಹುಡುಕಿಕೊಂಡು ಬಂದ ರೀತಿ, ಪಾತ್ರಕ್ಕೆ ನಡೆಸಿದ ತಯಾರಿ ಹೀಗೆ ಹಲವು ವಿಷಯಗಳ ಬಗ್ಗೆ ನಾಗೇಂದ್ರ ಅರಸ್ ನಮ್ಮ ಜೊತೆಗೆ ಮಾತನಾಡಿದ್ದಾರೆ.

ಸುಂದರ ಕೃಷ್ಣ ಅರಸ್ ಪುತ್ರ ನಾಗೇಂದ್ರ ಅರಸ್ ಅವರಿಗೂ ವಿಲನ್ ಪಾತ್ರಗಳನ್ನ ಮಾಡೋದು ಅಂದ್ರೆ ತುಂಬಾ ಇಷ್ಟ. ತಂದೆ ಹಾಗೇನೆ ಖಳನಾಯಕ ನಟನ ರೋಲ್ ಹುಡುಕಿಕೊಂಡು ಬಂದ್ರೆ, ಅವುಗಳನ್ನ ಬಿಟ್ಟುಕೊಡೋದೇ ಇಲ್ಲ. ಸೀರಿಯಲ್ ಇರಲಿ, ಸಿನಿಮಾನೇ ಆಗಿರಲಿ ಎರಡಲ್ಲೂ ವಿಲನ್ ರೋಲ್ ಮಾಡ್ತಾನೇ ಇದ್ದಾರೆ.

ಒಲವಿನ ನಿಲ್ದಾಣದಲ್ಲಿ ನಾಗೇಂದ್ರ ಅರಸ್ ವಿಲನ್
2016 ರಲ್ಲಿ ಶೃತಿ ನಾಯ್ಡು ಅವರ ನಿರ್ಮಾಣ ಮಹಾದೇವಿ ಸೀರಿಯಲ್​ ನಲ್ಲೂ ವಿಲನ್ ಶೇಡ್ ಇದ್ದ ಊರ ಗೌಡನ ಪಾತ್ರವನ್ನೇ ಮಾಡಿದ್ದರು. ಹೆಚ್ಚು ಕಡಿಮೆ ನಾಲ್ಕು ತಿಂಗಳು ಈ ಸೀರಿಯಲ್​ಗಾಗಿಯೇ ಕೆಲಸ ಮಾಡಿದರು.

ಸಿನಿಮಾ ಇದ್ದ ಕಾರಣ ಸೀರಿಯಲ್ ಪಾತ್ರವನ್ನ ತಾವೇ ಬೇಗ ಮುಗಿಸಿಕೊಂಡರು. ಆದರೆ ಇಷ್ಟು ವರ್ಷದ ಬಳಿಕ ನಾಗೇಂದ್ರ ಅರಸ್ ಅವ್ರು, ಶೃತಿ ನಾಯ್ಡು ನಿರ್ಮಾಣದ ಮತ್ತು ರಮೇಶ್ ಇಂದ್ರ ನಿರ್ದೇಶನದ ಒಲವಿನ ನಿಲ್ದಾಣ ಸೀರಿಯಲ್ ಒಪ್ಪಿಕೊಂಡಿದ್ದಾರೆ.

ಒಲವಿನ ನಿಲ್ದಾಣ ಹೀರೋ ಸಿದ್ಧಾಂತ್ ತಂದೆ ಪಾತ್ರಕ್ಕೆ ಅಪ್ರೋಚ್
ನಾಗೇಂದ್ರ ಅರಸ್ ಹುಡುಕಿಕೊಂಡು ಬಂದ ಪಾತ್ರ ಬೇರೆನೆ ಇತ್ತು. ಒಲವಿನ ನಿಲ್ದಾಣ ಸೀರಿಯಲ್​ನ ನಾಯಕ ನಟ ಸಿದ್ಧಾಂತ್ ಪಾತ್ರದ ತಂದೆ ಪಾತ್ರಕ್ಕೆ ನಾಗೇಂದ್ರ ಅರಸ್​ ಅವರನ್ನ ಅಪ್ರೋಚ್​ ಮಾಡಲಾಗಿತ್ತು.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರಕ್ಕಾಗಿ ರಣಬೀರ್ ಕಪೂರ್ ಪಡೆದ್ರು ಭರ್ಜರಿ ಸಂಭಾವನೆ! ಆಲಿಯಾ ಭಟ್​​ಗೂ ಸಿಗ್ತು ಕೋಟಿ ಕೋಟಿ!

ಆದರೆ ಅಷ್ಟು ವಯಸ್ಸಾದ ಪಾತ್ರಕ್ಕೆ ತಾವು ಸೂಟ್​ ಆಗೋದಿಲ್ಲ ಅಂತಲೇ ನಾಗೇಂದ್ರ ಅರಸ್ ಆ ರೋಲ್ ಬೇಡ ಅಂದ್ರು, ಆದರೆ ವಿಲನ್ ಶೇಡ್ ಇರೋ ಕಾಲೇಜ್ ಎಚ್​ಓಡಿ ಪಾತ್ರ ಹುಡುಕಿ ಬಂದಾಗ ಬೇಡ ಅಂತ ಹೇಳಲಿಲ್ಲ. ಅದನ್ನ ಈಗ ನಿಭಾಯಿಸುತ್ತಿದ್ದಾರೆ.

ಕಾಲೇಜ್ ಎಚ್​ಓಡಿ ಚಕ್ರವರ್ತಿ ಪಾತ್ರಕ್ಕೆ ಹೇಗಿತ್ತು ತಯಾರಿ
ಒಲಿವಿನ ನಿಲ್ದಾಣ ಸೀರಿಯಲ್​ ನ ಚಕ್ರವರ್ತಿ ಪಾತ್ರ ವಿಭಿನ್ನವಾಗಿಯೇ ಇದೆ. ಇದನ್ನ ಚೆನ್ನಾಗಿಯೇ ನಿರ್ದೇಶಕ ರಮೇಶ್ ಇಂದಿರಾ ಡಿಸೈನ್ ಮಾಡಿದ್ದಾರೆ. ಅದನ್ನ ಆಧರಿಸಿಯೇ ನಾಗೇಂದ್ರ ಅರಸ್ ಈ ಒಂದು ಚಕ್ರವರ್ತಿ ಪಾತ್ರವನ್ನ ತಮ್ಮದೇ ಆದ ರೀತಿಯಲ್ಲಿ ಬದಲಿಸಿಕೊಂಡು ಅಭಿನಯಿಸಿದ್ದಾರೆ.

Actor-Director Nagendra Urs Talk about his Villain role
ಒಲವಿನ ನಿಲ್ದಾಣ ಸೀರಿಯಲ್ ಸೆಟ್


ಅದಕ್ಕೇನೆ ನಾಗೇಂದ್ರ ಅರಸ್ ಪಾತ್ರದಲ್ಲಿ ಅವರ ತಂದೆ ಸುಂದರಕೃಷ್ಣ ಅರಸ್ ಝಲಕ್ ಕಾಣಿಸುತ್ತದೆ. ಸುಂದರಕೃಷ್ಣ ಅರಸ್ ಪುತ್ರ ಅಂದ್ಮೇಲೆ ಅದು ಸಹಜ ಬಿಡಿ. ತಂದೆಯ ಹಾವ-ಭಾವ ಒಂಚೂರು ಮಕ್ಕಳಿಗೆ ಬಂದಿರುತ್ತದೆ. ಅದು ನಾಗೇಂದ್ರ ಅರಸ್ ಪಾತ್ರದಲ್ಲೂ ಕಾಣಿಸುತ್ತಿದೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಕೊಟ್ರು ಬಿಗ್ ಅಪ್​ಡೇಟ್; ರಿಯಲ್ ಸ್ಟಾರ್ ಜೊತೆ ಕಮಾಲ್

ನಾಗೇಂದ್ರ ಅರಸ್ ನಿರ್ವಹಿಸಿರೋ ಈ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳೂ ಕೇಳಿ ಬರುತ್ತಿವೆ. ಸೋಷಿಯಲ್ ಮೀಡಿಯಾದಲ್ಲೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಒಳ್ಳೆ ವೀವ್ಸ್ ಕೂಡ ಬಂದಿವೆ. ಹೀಗೆ ಸಿನಿಮಾ ಮತ್ತು ಸೀರಿಯಲ್ ನಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಮೋದ್ ಪಂಜು ಅಭಿನಯದ ಇಂಗ್ಲೀಷ್ ಮಂಜ್ಯಾ ಚಿತ್ರದಲ್ಲೂ ವಿಲನ್ ರೋಲ್​ ಅನ್ನೇ ನಾಗೇಂದ್ರ ಅರಸ್ ಮಾಡಿದ್ದಾರೆ. ಇದು ಕೂಡ ಅತ್ಯುತ್ತಮವಾಗಿಯೇ ಬಂದಿದೆ. ಇನ್ನು ಈಗ ಚಕ್ರವರ್ತಿ ಹೆಸರಿನ ವಿಲನ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಒಲವಿನ ನಿಲ್ದಾಣದಲ್ಲಿ ವಿಲನ್​ಗಿರಿ ಅಟ್ಟಹಾಸ ಮೆರೆಯೋಕೆ ರೆಡಿ ಆಗಿ ಬಿಟ್ಟಿದ್ದಾರೆ.
First published: