ಕನ್ನಡದಲ್ಲಿ ಒಂದು ಸಿನಿಮಾ (Padaraya Cinema) ರೆಡಿ ಆಗುತ್ತಿದೆ. ಇದಕ್ಕೆ ಪಾದರಾಯ ಅನ್ನೋ ವಿಶೇಷ ಹೆಸರು ಇದೆ. ಇದೇ ಚಿತ್ರದ ಮೂಲಕ ಗಾಯಕಿ ಮಂಗ್ಲಿ ನಾಯಕಿನೂ ಆಗಿದ್ದಾರೆ. ಆದರೆ ಇದೇ ಚಿತ್ರದ ನಾಯಕ ನಟ ನಾಗಶೇಖರ್ (Actor Nagashekar) ಕಳೆದ 11 ದಿನಗಳಿಂದ ಕಠಿಣ ವ್ರತ ಮಾಡುತ್ತಿದ್ದಾರೆ. ಬೆಳಗ್ಗೆ 4.30ಕ್ಕೆ ಏಳುತ್ತಾರೆ. ವ್ಯಾಯಾಮ, ಯೋಗ, ಧ್ಯಾನ ಹೀಗೆ ಬರೋಬ್ಬರಿ ದಿನಕ್ಕೆ (Workout) ಎರಡು ಬಾರಿ ಮಾಡುತ್ತಿದ್ದಾರೆ. ಹಾಗಂತ ನಾನ್ವೆಜ್ ಸೇವಿಸೋದಾಗಲಿ, ಬೇರೆ ಇತರ ಕೆಲಸ ಮಾಡೋದಾಗ್ಲಿ ಮಾಡ್ತಾ ಇಲ್ಲ. ಈ ವ್ರತದ ಮೂಲಕ ಸಂಪೂರ್ಣವಾಗಿಯೇ ತಮ್ಮನ್ನ ಅಂಜನಾದ್ರಿಯ ಆ ಪಾದರಾಯನಿಗೆ (Padaraya Film) ಅರ್ಪಿಸಿದ್ದಾರೆ. ಇದರ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ಗೆ ನಾಯಕ ನಟ ನಾಗಶೇಖರ್ ವಿಶೇಷವಾಗಿಯೇ ಮಾತನಾಡಿದ್ದಾರೆ.
ಪಾದರಾಯನಿಗೆ ತನ್ನನ್ನ ಅರ್ಪಿಸಿದ ನಾಗಶೇಖರ್!
ನಟ-ನಿರ್ದೇಶಕ ನಾಗಶೇಖರ್ ಕಠಿಣ ವ್ರತ ಮಾಡುತ್ತಿದ್ದಾರೆ. ಕಳೆದ 11 ದಿನದಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿಯೇ ಇದ್ದಾರೆ. ಬೆಳಗ್ಗೆ 4.30ಕ್ಕೆ ಏಳ್ತಾರೆ. ವ್ಯಾಯಾಮ, ಯೋಗ, ಧ್ಯಾನ ಮಾಡುತ್ತಿದ್ದಾರೆ. ದಿನವೂ ಎರಡು ಸಲ ನಾಗಶೇಖರ್ ಇದನ್ನ ಅನುಸರಿಸುತ್ತಿದ್ದಾರೆ.
ಇದಕ್ಕೆ ಕಾರಣವೂ ಇದೆ. ಅದನ್ನ ಬಲವಾದ ಕಾರಣ ಅಂದ್ರೂ ತಪ್ಪಿಲ್ಲ. ತಮ್ಮ ಪಾದರಾಯ ಚಿತ್ರಕ್ಕಾಗಿಯೇ ನಾಗಶೇಖರ್ ಈ ವ್ರತ ಮಾಡುತ್ತಿದ್ದಾರೆ. ಹನುಮ ಮಾಲೆ ಧರಿಸಿಕೊಂಡೇ ಈ ಒಂದು ವ್ರತವನ್ನ ನಾಗಶೇಖರ್ ಮಾಡುತ್ತಿದ್ದಾರೆ.
ಪಾದರಾಯನಿಗಾಗಿಯೇ ನಾಗಶೇಖರ್ ಈ ವ್ರತ
ನಾಗಶೇಖರ್ ಇದೇ ಮೊದಲ ಬಾರಿಗೆ ಈ ಒಂದು ವ್ರತ ಮಾಡುತ್ತಿದ್ದಾರೆ. ಈ ವ್ರತ ಮಾಡಲಿಕ್ಕೆ ಕಾರಣ ಏನೂ ಅನ್ನೋದ ಕೂಡ ಹೇಳ್ತಿನಿ ನೋಡಿ, ಅಂದ್ಹಾಗೆ ಈ ಒಂದು ಚಿತ್ರದಲ್ಲಿ ಅಭಿನಯಿಸೋಕೆ ನಾಗಶೇಖರ್ ಇಷ್ಟೆಲ್ಲ ಕಠಿಣ ವ್ರತ ಮಾಡುತ್ತಿದ್ದಾರೆ.
ಪಾದರಾಯನ ರೂಪದಲ್ಲೂ ಬರ್ತಾರೆ ನಾಗಶೇಖರ್!
ಪರಿಶುದ್ಧ ಮನಸ್ಸಿನಿಂದಲೇ ಚಿತ್ರದ ಈ ಒಂದು ಪಾತ್ರ ಮಾಡಬೇಕು ಅನ್ನೋ ಕಾರಣಕ್ಕೇನೆ ನಾಗಶೇಖರ್ ಈ ವ್ರತ ಮಾಡುತ್ತಿದ್ದಾರೆ. ಅದಕ್ಕೂ ಹೆಚ್ಚಾಗಿ ನಾಗಶೇಖರ್ ಈ ಒಂದು ಚಿತ್ರದಲ್ಲಿ ಒಂದು ವಿಶೇಷ ರೂಪದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಪಾದರಾಯನ ರೂಪದಲ್ಲಿ ಕಾಣಿಸಿಕೊಳ್ಳಲೆಂದೇ ಈ ಒಂದು ಕಠಿಣ ವ್ರತ ಮಾಡುತ್ತಿದ್ದಾರೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 42 ದಿನದ ಒಂದು ವ್ರತವನ್ನೇ ಈಗ ಮಾಡುತ್ತಿದ್ದಾರೆ.
ಪಾದರಾಯನಿಗಾಗಿ 42 ದಿನದ ವ್ರತ ಕೈಗೊಂಡ ನಾಗಶೇಖರ್
ನಾಗಶೇಖರ್ ಸದ್ಯ ಹನುಮಾಲೆ ಧರಿಸಿದ್ದಾರೆ. ಡೈರೆಕ್ಟರ್ ಚಂದ್ರಚೂಡ್ ಅವರಿಂದಲೇ ಈ ಒಂದು ಮಾಲೆಧರಿಸಿಕೊಂಡಿದ್ದಾರೆ. ಅವರೇ ಹೇಳಿದಂತೆ ಈ ಒಂದು ವ್ರತವನ್ನ ಕೂಡ ಆರಂಭಿಸಿದ್ದಾರೆ.
42 ದಿನದ ವ್ರತ ಮಾಡಿದ್ರೆ ಅದನ್ನ ಒಂದು ಮಂಡಲ ಅಂತಲೇ ಕರೆಯುತ್ತಾರೆ. ಆ ಹಿನ್ನೆಲೆಯಲ್ಲಿಯೆ ಪೂಜೆ, ವ್ಯಾಯಾಮ, ಯೋಗ, ಧ್ಯಾನ ಎಲ್ಲವನ್ನೂ ಅಷ್ಟೇ ಕಠಿಣವಾಗಿಯೇ ಅನುಸರಿಸುತ್ತಿದ್ದಾರೆ.
ಪಾದರಾಯ ಚಿತ್ರಕ್ಕೆ ಡೈರೆಕ್ಟರ್ ಚಂದ್ರಚೂಡ್ ಡೈರೆಕ್ಷನ್
ಇದು ನಿಜಕ್ಕೂ ವಿಶೇಷವೇ ಆಗಿದ್ದು, ಚಿತ್ರಕ್ಕಾಗಿಯೇ ಈ ಒಂದು ವ್ರತವನ್ನ ನಾಗಶೇಖರ್ ಮಾಡುತ್ತಿದ್ದಾರೆ. ಇತ್ತ ಕಡೆಗೆ ಚಿತ್ರದ ನಿರ್ದೇಶಕ ಚಂದ್ರಚೂಡ್ ತಮ್ಮ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನು ಈ ಚಿತ್ರದ ನಾಯಕಿಯ ಆಯ್ಕೆ ಕೂಡ ಆಗಿದೆ. ಟಾಲಿವುಡ್ನಲ್ಲಿ ಗಾಯಕಿ ಆಗಿಯಾಗಿ ಹೆಸರು ಮಾಡಿರುವ ಮಂಗ್ಲಿ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ.
ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಕೂಡ ಈಗಾಗಲೇ ಗಾಯಕಿ ಮಂಗ್ಲಿ ಅವರನ್ನ ಮೀಟ್ ಕೂಡ ಆಗಿದ್ದಾರೆ. ಸಿನಿಮಾ ತಂಡದಿಂದಲೂ ಈ ವಿಷಯದ ಅಧಿಕೃತ ಮಾಹಿತಿ ಸಹ ಹೊರಬಿದ್ದಿದೆ.
ಈ ಚಿತ್ರ ಸತ್ಯ ಘಟನೆಯನ್ನೆ ಆಧರಿಸಿದೆ. 2013-2014 ರಲ್ಲಿ ನಡೆದ ಘಟನೆಯನ್ನೆ ಈಗ ಸಿನಿಮಾ ಮಾಡಲಾಗುತ್ತಿದೆ. ಇದು 6 ರಾಜ್ಯಕ್ಕೆ ಸಂಬಂಧಿಸಿದ ವಿಷಯವೇ ಆಗಿದೆ. ಹಾಗೇನೆ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡಲಾಗುತ್ತದೆ.
ಇದನ್ನೂ ಓದಿ: Vishnuvardhan: ವಿಷ್ಣು ಫ್ಯಾನ್ಸ್ಗೆ ಗುಡ್ನ್ಯೂಸ್! ಈ ತಿಂಗಳೇ ಸ್ಮಾರಕ ಉದ್ಘಾಟನೆ
ಆ ಹಿನ್ನೆಲೆಯಲ್ಲಿ ಈಗಲೇ ಎಲ್ಲಾ ಸಿದ್ಧತೆ ಆಗುತ್ತಿದೆ. ಸಿನಿಮಾ ತಂಡವೂ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತಲೇ ಹೇಳಿಕೊಂಡಿದೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟು. ಮತ್ತಷ್ಟು ಇನ್ನಷ್ಟು ಮಾಹಿತಿ ಕೊಡ್ತಾ ಇರ್ತಿವಿ. ವೇಟ್ ಮಾಡ್ತಾಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ