ಅಂಜನಾದ್ರಿ ಬೆಟ್ಟದ ಆ ಆಂಜನೇಯನನ್ನ (Padaraya Movie Updates) ಭೇಟಿ ಆಗಲು ಅನೇಕರು ಹೋಗುತ್ತಾರೆ. ಇನ್ನು ಕೆಲವರು ಹನುಮನ ಮಾಲೆ ಧರಿಸಿ ಹೋಗೋದಿದೆ. ಆದರೆ (Padaraya Actor Nagashekar) ನಟ-ನಿರ್ದೇಶಕ ನಾಗಶೇಖರ್ ಕೂಡ ಹನುಮನ ಮಾಲೆ ಧರಿಸಿದ್ದರು. 45 ದಿನದ ಕಠಿಣ ವೃತ ಮಾಡಿದ್ದರು. ಎರಡು ಹೊತ್ತು ವರ್ಕೌಟ್ ಮಾಡಿದ್ದರು. ನಾನ್ ವೆಜ್ ಸೇವಿಸದೇ ವೃತ ಅನುಸರಿಸಿದ್ದರು. ಇದಕ್ಕೆ ಕಾರಣ (Padaraya cinema) ಪಾದರಾಯ ಅನ್ನೋ ಸಿನಿಮಾ. ಚಿತ್ರದ ನಿರ್ದೇಶಕರಾದ ಚಂದ್ರಚೂಡ್ (Chakravarthy Chandrachud) ಅವರು ಕಥೆ ಮಾಡಿಕೊಂಡಿದ್ದರು. ಬೇಕಾದ ಸಂಶೋಧನೆ ಮಾಡಿಕೊಂಡು ರೆಡಿ ಆಗಿದ್ದರು. ನಾಯಕ ನಟ ನಾಗಶೇಖರ್ ಅವರಿಗೆ ವೃತ ಮಾಡಲು ಹನುಮನ ಮಾಲೆ ಕೂಡ ಹಾಕಿದ್ದರು.
ಆದರೆ ಪಾದರಾಯ ಸಿನಿಮಾ ಟೇಕ್ ಆಫ್ ಆಯಿತೇ? ಯಾವಾಗ ಈ ಚಿತ್ರದ ಶೂಟಿಂಗ್ ಶುರು ಆಗುತ್ತದೆ? ನಾಯಕ ನಟ ನಾಗಶೇಖರ್ 45 ದಿನದ ವೃತ ಮುಗಿಯಿತೇ? ಈ ಎಲ್ಲ ಪ್ರಶ್ನೆಗಳು ಈಗ ಎದ್ದಿವೆ.
ಪಾದರಾಯ ಚಿತ್ರದ ಅಸಲಿ ಸಮಸ್ಯೆ ಏನು?
ಹೌದು, ಈ ಪ್ರಶ್ನೆಗಳು ಏಳೋದಕ್ಕೆ ಇರೋ ಕಾರಣ ಬಲವಾಗಿಯೇ ಇದೆ. ಚಿತ್ರದ ಟೈಟಲ್ ರಿವೀಲ್ ಮಾಡೋ ಸಮಯದಲ್ಲಿ ಜಾಕ್ ಮಂಜು ಈ ಚಿತ್ರವನ್ನ ನಿರ್ಮಿಸ್ತಾರೆ ಅನ್ನುವ ಸುದ್ದಿ ಇತ್ತು.
ಈ ಸುದ್ದಿ ಬಹಳ ದಿನ ಉಳಿಯಲಿಲ್ಲ. ಕೆಲವೆ ದಿನಗಳಲ್ಲಿ ಸ್ವತಃ ಜಾಕ್ ಮಂಜು ಅವರು ತಾವು ಈ ಚಿತ್ರ ಮಾಡುತ್ತಿಲ್ಲ ಅಂತ ಹೇಳಿಬಿಟ್ಟರು. ಇದಾದ್ಮೇಲೆ ಈ ಚಿತ್ರಕ್ಕೆ ನಾಗಶೇಖರ್ ನಿರ್ಮಾಪಕರು ಅನ್ನೋದು ಇತ್ತು.
ನಟ-ನಿರ್ದೇಶಕ ನಾಗಶೇಖರ್ ವೃತ ವ್ಯರ್ಥವಾಯಿತೇ?
ಚಿತ್ರದ ನಾಯಕ ನಟ ನಾಗಶೇಖರ್ ಕೂಡ ನ್ಯೂಸ್-18 ಕನ್ನಡ ಡಿಜಿಟಲ್ಗೆ ಇದನ್ನ ಹೇಳಿಕೊಂಡಿದ್ದರು. ಹಾಗಾಗಿಯೇ ಚಿತ್ರಕ್ಕಾಗಿ 45 ದಿನಗಳವರೆಗೆ ವೃತ ಮಾಡುತ್ತಿದ್ದೇನೆ. 45 ದಿನಗಳವರೆಗೂ ಅಂಜನಾದ್ರಿ ಬೆಟ್ಟಯಲ್ಲಿಯೇ ಇರುತ್ತೇನೆ ಎಂದು ಅಲ್ಲಿಂದಲೇ ವೃತದ ಅಧಿಕೃತ ಮಾಹಿತಿ ಕೊಟ್ಟಿದ್ದರು.
ಚಿತ್ರದ ನಿರ್ದೇಶಕ-ರಚನೆಕಾರ ಚಕ್ರವರ್ತಿ ಚಂದ್ರಚೂಡ್ ಕೂಡ ಎಲ್ಲ ಸಿದ್ದತೆ ಮಾಡಿಕೊಂಡಿದ್ದರು. ಈ ಮೂಲಕ ಗಾಯಕಿ ಮಂಗ್ಲಿ ಅವರನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿ ಕನ್ನಡಕ್ಕೂ ತರ್ತಾಯಿದ್ದರು.
ಪಾದರಾಯನಿಗೆ ಆರಂಭದಲ್ಲಿಯೇ ವಿಘ್ನ ಎದುರಾಯಿತೇ?
ಹಾಗೇನೆ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ತರಲು ಪ್ಲಾನ್ ಕೂಡ ಹಾಕಲಾಗಿತ್ತು. ಆದರೆ ಈಗ ಈ ಚಿತ್ರಕ್ಕೆ ಆರಂಭದಲ್ಲಿಯೇ ಹಲವು ಸಮಸ್ಯೆಗಳು ಎದುರಾಗಿವೆ.
ಚಿತ್ರದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆ ಟೀಮ್ನಿಂದ ಹೊರಗೆ ಬಂದಿದ್ದಾರೆ. ತಮ್ಮ ಚಿತ್ರವನ್ನ ಇಟ್ಟುಕೊಂಡು ವ್ಯವಹಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಚಿತ್ರದ ನಿರ್ದೇಶಕರಾದ ತಮಗೆ ಯಾವುದೇ ವಿಷಯ ತಿಳಿಸದೇ ಏನೇನೋ ಆಗಿದೆ ಅಂತಲೂ ದೂರಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ನ್ಯೂಸ್-18 ಡಿಜಿಟಲ್ಗೆ ಹೇಳಿದ್ದೇನು?
ಚಕ್ರವರ್ತಿ ಚಂದ್ರಚೂಡ್ ಈ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ತಮ್ಮ ಚಿತ್ರವನ್ನ ಇಟ್ಟುಕೊಂಡು ಒಂದಷ್ಟು ವ್ಯವಹಾರ ನಡೆಯುತ್ತಿದೆ.
ಈ ಕುರಿತು ನನಗೆ ಏನೂ ಗೊತ್ತಿಲ್ಲ. ನಮ್ಮ ಸಿನಿಮಾಕ್ಕೆ ಸಂಬಂಧಿಸಂತೆ ಯಾರಿಗೂ ಅಡ್ವಾನ್ಸ್ ದುಡ್ಡುಕೊಟ್ಟಿಲ್ಲ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೂ ಅಡ್ವಾನ್ಸ್ ಕೊಟ್ಟಿಲ್ಲ. ಇತರ ವಿಷಯದಲ್ಲೂ ಇದೇ ಆಗಿದೆ.
ನಾನು ಹೊಸ ಟೀಮ್ ಜೊತೆಗೆ ಸಿನಿಮಾ ಮಾಡುವೇ!
ಅದ್ಯಾಕೋ ಯಾವುದು ಸರಿಯಿಲ್ಲ ಅನಿಸುತ್ತಿದೆ. ಹಾಗಾಗಿಯೇ ಆ ಟೀಮ್ ಜೊತೆಗೆ ನಾನು ಸಿನಿಮಾ ಮಾಡುತ್ತಿಲ್ಲ. ಹೊಸ ಟೀಮ್ ಜೊತೆಗೆ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದೇನೆ.
ಇನ್ನೇನು ಆ ಕುರಿತು ಮಾತುಕತೆ ನಡೆಯುತ್ತಿದೆ. ಹೊಸ ನಿರ್ಮಾಪಕರು ಹೊಸ ಟೀಮ್ನೊಂದಿಗೆ ಪಾದರಾಯ ಚಿತ್ರ ಮುಂದಿನ ತಿಂಗಳು ಶುರು ಆಗುತ್ತದೆ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ.
ಪಾದರಾಯ ಚಿತ್ರದ ಡೈರೆಕ್ಟರ್ ಪತ್ರ ಬರೆದದ್ದು ಯಾಕೆ?
ಇದಕ್ಕೂ ಮೊದಲು ಚಕ್ರವರ್ತಿ ಚಂದ್ರಚೂಡ್ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರವನ್ನೂ ಬರೆದಿದ್ದಾರೆ. ಪಾದರಾಯ ಚಿತ್ರಕ್ಕೆ ಸಂಬಂಧಿಸಿದಂತೆ ಏನೆಲ್ಲ ಆಗಿದೆ
ಅಂತಲೂ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಫಿಲ್ಮಂ ಚೇಂಬರ್ಗೂ ತಿಳಿಸಿದ್ದಾರೆ.
ಇದನ್ನೂ ಓದಿ: Janumada Jodi: ಕನ್ನಡವೇ ಬರದ ಶಿಲ್ಪಾ ಜನುಮದ ಜೋಡಿಯಲ್ಲಿ ಹೀರೋಯಿನ್ ಆಗಿದ್ದೇಗೆ?
ಲೆಟರ್ ಹೆಡ್ ಮೇಲೆ ಕೂಡ ಇದೇ ಪತ್ರದಲ್ಲಿದ್ದ ವಿವರವನ್ನೂ ಬರೆದುಕೊಟ್ಟು ಬಂದಿದ್ದಾರೆ. ಬೇರೆ ನಿರ್ಮಾಪಕರ ಜೊತೆಗೆ ಪಾದರಾಯ ಕಥೆಯನ್ನ ಮಾಡೋಕೆ ಈಗ ಮುಂದಾಗಿದ್ದಾರೆ.
ಇನ್ನುಳಿದಂತೆ ಪಾದರಾಯ ಸಿನಿಮಾ ಶುರು ಆಗೋ ಮುಂಚೇನೆ ಈ ರೀತಿ ಸದ್ದು ಮಾಡುತ್ತಿದೆ. ಮುಂದೇನಾಗುತ್ತದೆ ಅನ್ನುವ ಕುತೂಹಲವು ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ