ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa Movie) ಸದ್ಯ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದಾರೆ. ಬಿಗ್ ಬಾಸ್ ಮುಗಿದು ಸುಮಾರು ದಿನಗಳೇ ಕಳೆದಿವೆ. ಹೊಸ ಪ್ರಾಜೆಕ್ಟ್ಗಾಗಿ (New Movie Project) ಕಥೆಗಳನ್ನೂ ಕೇಳುತ್ತಿದ್ದಾರೆ. ಎರಡರಿಂದ ಮೂರು ಪ್ರಾಜೆಕ್ಟ್ಗಳನ್ನ ಪ್ರತಿ ವರ್ಷ ಮಾಡಲೇಬೇಕು ಅಂತಲೇ ಕಿಚ್ಚ ಸುದೀಪ್ (Sudeepa New Movie) ಯೋಚನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೂವರು ಡೈರೆಕ್ಟರ್ಗಳು ಕಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ತಮಿಳು ಚಿತ್ರದ ಒಂದು ಸುದ್ದಿ ಹರಿದಾಡುತ್ತಿದೆ. ಕನ್ನಡದ ಸಿನಿಮಾ (Kannada Cinema) ಅನೌನ್ಸ್ ಆಗೋ ಮೊದಲೇ ತಮಿಳಿನ ಸಿನಿಮಾ ಸೆಟ್ಟೇರುತ್ತಾ ಅನ್ನೋ ಕುತೂಹಲ ಕೂಡ ಈಗ ಮೂಡಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ಕಾಲಿವುಡ್ ಡೈರೆಕ್ಟರ್ ಜೊತೆಗೆ ಕಿಚ್ಚನ ಸಿನಿಮಾ ಸುದ್ದಿ ವೈರಲ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕನ್ನಡದ ಯಾವುದೇ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಮೂರು ಮೂರು ಡೈರೆಕ್ಟರ್ಸ್ ಕಥೆ ಬರೆಯೋಕೆ ಕುಳಿತಿದ್ದಾರೆ.
ರನ್ನ ಚಿತ್ರದ ಡೈರೆಕ್ಟರ್ ನಂದ್ ಕಿಶೋರ್, ವಿಕ್ರಾಂತ್ ರೋಣ ಚಿತ್ರದ ಅನೂಪ್ ಭಂಡಾರಿ ಕಥೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ನಂದ್ ಕಿಶೋರ್ ಇತ್ತೀಚಿಗೆ ಕಥೆ ಮಾಡೋಕೆ ಆರಂಭಿಸಿದ್ದಾರೆ.
ಮೊದಲು ಕಿಚ್ಚನ ಕನ್ನಡ ಸಿನಿಮಾ ಸೆಟ್ಟೇರುತ್ತಾ?
ಆದರೆ ಅನೂಪ್ ಭಂಡಾರಿ ಬಹುತೇಕ ರೆಡಿ ಆಗಿದ್ದಾರೆ. ಕೊನೆವರೆಗೂ ತಿದ್ದುಪಡಿ ಇದ್ದೇ ಇರುತ್ತದೆ ಅನ್ನೋದನ್ನೂ ಹೇಳೋಕೆ ಮರೆಯೋದಿಲ್ಲ.
ಆದರೆ ಕನ್ನಡದ ಈ ಡೈರಕ್ಟರ್ ಚಿತ್ರಗಳಲ್ಲಿ ಯಾವುದು ಮೊದಲು ಸೆಟ್ಟೇರುತ್ತದೆ ಅನ್ನೋ ಕುತೂಹಲ ಕೂಡ ಮೂಡಿದೆ. ಇದರ ನಡುವೇನೆ ಇನ್ನೂ ಒಂದು ಬೆಳವಣಿಗೆ ಆಗಿದೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ವೈರಲ್ ಆಗುತ್ತಲೇ ಇದೆ.
ಕಿಚ್ಚನನ್ನ ಡೈರೆಕ್ಟ್ ಮಾಡ್ತಿರೋ ಆ ತಮಿಳು ನಿರ್ದೇಶಕ ಯಾರು?
ಕಿಚ್ಚ ಸುದೀಪ್ ಅಭಿನಯದಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಇದೆ.
2023 ರ ಸಾಲಿನಲ್ಲಿ ಇನ್ನೂ ಯಾವುದೇ ಚಿತ್ರ ಅನೌನ್ಸ್ ಆಗಿಲ್ಲ. ಹಾಗಾಗಿಯೇ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಕೂಡ ಇದೆ. ಆದಷ್ಟು ಬೇಗ ಸಿನಿಮಾ ಅನೌನ್ಸ್ ಆಗಲಿ ಅನ್ನೋ ಬೇಡಿಕೆ ಕೂಡ ಅಭಿಮಾನಿಗಳಿಂದ ಕೇಳಿ ಬರುತ್ತಿದೆ.
ಇಷ್ಟರಲ್ಲಿಯೇ ಸುದೀಪ್ ತಮಿಳು ಡೈರೆಕ್ಟರ್ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಇದೇ ಮಾತು ಜೋರಾಗಿಯೇ ಹರಡುತ್ತಿದೆ.
ಕಿಚ್ಚ ಸುದೀಪ್-ವೆಂಕಟ ಪ್ರಭು ಕಾಂಬಿನೇಷನ್ ಸಿನಿಮಾ
ತಮಿಳು ಡೈರೆಕ್ಟರ್ ವೆಂಕಟ ಪ್ರಭು ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ಚಿತ್ರ ಶೀಘ್ರದಲ್ಲಿಯೇ ಸೆಟ್ಟೇರುತ್ತದೆ ಅನ್ನುವ ಸುದ್ದಿ ಇದೆ. ಮುಂದಿನ ಮೂರು ಇಲ್ಲವೇ ನಾಲ್ಕು ವಾರದಲ್ಲಿ ಚಿತ್ರ ಸೆಟ್ಟೇರುತ್ತದೆ. ಇಲ್ಲವೇ ಈ ವರ್ಷದಲ್ಲಿ ಇವರ ಚಿತ್ರ ಸೆಟ್ಟೇರೋದು ಗ್ಯಾರಂಟಿ ಅನ್ನೋ ಮಾಹಿತಿ ಹರಿದಾಡುತ್ತಿದೆ.
ತಮಿಳು ಡೈರೆಕ್ಟರ್ ವೆಂಕಟ್ ಪ್ರಭು ಕೇವಲ ಒಬ್ಬ ಡೈರೆಕ್ಟರ್ ಅಲ್ವೇ ಅಲ್ಲ. ನಿರ್ಮಾಪಕರೂ ಹೌದು, ಗಾಯಕರೂ ಹೌದು, ಹೀಗೆ ಬಹು ಪ್ರತಿಭೆಗಳ ಡೈರೆಕ್ಟರ್ ವೆಂಕಟ್ ಪ್ರಭು ಕನ್ನಡದ ಬಹು ಪ್ರತಿಭಾವಂತ ನಟ-ನಿರ್ದೇಶಕ-ಗಾಯಕ ಅಭಿನಯ ಚಕ್ರವರ್ತಿ ಸುದೀಪ್ ಅವರನ್ನ ಡೈರೆಕ್ಟ್ ಮಾಡುತ್ತಾರೆ ಅನ್ನೋದೇ ಈಗೀನ ಇಂಟ್ರಸ್ಟಿಂಗ್ ವಿಷಯ ಅಂತಲೇ ಹೇಳಬಹುದು.
ನಾಗಚೈತನ್ಯ ಚಿತ್ರದಲ್ಲಿ ಸದ್ಯ ವೆಂಕಟ ಪ್ರಭು ಫುಲ್ ಬ್ಯುಸಿ
ಡೈರೆಕ್ಟರ್ ವೆಂಕಟ ಪ್ರಭು ಸದ್ಯ ನಾಗಚೈತನ್ಯ ಅಭಿನಯದ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೋ ಏನೋ, ಕಿಚ್ಚನ ಮತ್ತು ವೆಂಕಟ ಪ್ರಭು ಕಾಂಬಿನೇಷನ್ ಚಿತ್ರ ಸೆಟ್ಟೇರೋದು ಲೇಟ್ ಆಗಬಹುದು ಅನ್ನೋ ಸುದ್ದಿನೂ ಇದೆ.
ಇದನ್ನೂ ಓದಿ: Rakshit shetty: ಸಿಂಪಲ್ ಸ್ಟಾರ್ ಕಾಂಪ್ಲೆಕ್ಸ್ ಕ್ಯಾರೆಕ್ಟರ್! ಸಪ್ತ ಸಾಗರದಾಚೆ ಎಲ್ಲೋ ರಕ್ಷಿತ್ ಪಾತ್ರ ರಿವೀಲ್!
ಇನ್ನುಳಿದಂತೆ ವೆಂಕಟ ಪ್ರಭು ಮತ್ತು ಕಿಚ್ಚ ಸುದೀಪ್ ಸಿನಿಮಾಗಳ ಬಗ್ಗೆ ಕುತೂಹಲ ಕೂಡ ಇದೆ. ಮೊದಲು ಕಿಚ್ಚನ ಕನ್ನಡ ಸಿನಿಮಾನೇ ಸೆಟ್ಟೇರಬೇಕು ಅನ್ನೋರ ಹಂಬಲವೂ ಜಾಸ್ತಿ ಆಗಿದೆ. ಒಟ್ಟಾರೆ, ಕಿಚ್ಚನ ಸಿನಿಮಾಗಳ ಸುತ್ತ ದಿನವೂ ಒಂದಿಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ