ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ KD ಸಿನಿಮಾದ (Jogi Prem Tweet On Blast) ಶೂಟಿಂಗ್ ಭರ್ಜರಿಯಾಗಿಯೇ ಸೌಂಡ್ ಮಾಡಿದೆ. ಇಲ್ಲಿವರೆಗೂ ಸಿನಿಮಾದ ಸುದ್ದಿಗಳು ಪೀಕ್ ಅಲ್ಲಿಯೇ ಇದ್ದವು. ಒಂದೇ ಒಂದು (Director Jogi Prem Tweet) ನೆಗೆಟಿವ್ ನ್ಯೂಸ್ ಕೂಡ ಇರಲಿಲ್ಲ. ಸಂಜಯ್ ದತ್ ಬಂದ್ರು ಅನ್ನೋದು ಹೈಪ್ ಆಯಿತು. ಶಿಲ್ಪಾ ಶೆಟ್ಟಿ ಬರ್ತಾರೆ ಅನ್ನುವ ನ್ಯೂಸ್ ಕೂಡ ವೈರಲ್ ಆಯಿತು. ಚಿತ್ರಕ್ಕೆ (KD Actor Sanjay Dutt Safe) ಡಾಕ್ಟರ್ ರವಿ ವರ್ಮಾ ಸಾಹಸ ಮಾಡ್ತಿರೋ ಸುದ್ದಿ ಕೂಡ ಸದ್ದು ಮಾಡ್ತು. ಆದರೆ ಏಪ್ರಿಲ್-12 ರಂದು ಬ್ಲಾಸ್ಟ್ ಆದ ಸುದ್ದಿ ಬೇರೆನೆ ಇತ್ತು. KD ಸಿನಿಮಾದ (KD Movie Latest Update) ಸೆಟ್‌ನಲ್ಲಿ ಬ್ಲಾಸ್ಟ್ ಆಗಿದೆ.
ಇದರಿಂದ ಬಾಲಿವುಡ್ ನಾಯಕ ಸಂಜಯ್ ದತ್‌ಗೆ ಗಾಯಗೊಂಡಿದ್ದಾರೆ. ಮುಖ ಮತ್ತು ಮೊಣಕೈ ಗಾಯವಾಗಿದೆ. ಹೀಗೆ ಸುದ್ದಿ ಹೊರ ಬಂದೇ ಬಿತ್ತು.
KD ಸಿನಿಮಾದ ಸೆಟ್‌ನಲ್ಲಿ ಬ್ಲಾಸ್ಟ್ ಆಗಲೇ ಇಲ್ವೇ?
ಇದರ ಬೆನ್ನಲ್ಲಿಯೇ ಸಿನಿಮಾ ಡೈರೆಕ್ಟರ್ ಜೋಗಿ ಪ್ರೇಮ್ ಏನಾದ್ರೂ ಹೇಳ್ತಾರೆ ಅಂತಲೂ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ಸಾಹಸ ನಿರ್ದೇಶಕ ರವಿ ವರ್ಮಾ ಏನಾದರೂ ಹೇಳಬಹುದು ಅನ್ನೋ ಸುದ್ದಿನೂ ಇತ್ತು. ಆದರೆ ಅದು ಎಲ್ಲೂ ಕಾಣಲೂ ಇಲ್ಲ. ಕೇಳಿಸಲೂ ಇಲ್ಲ ಬಿಡಿ.
ಆದರೆ ಮಾಗಡಿ ರಸ್ತೆ ಸಮೀಪ ಹಾಕಿರೋ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಮಯದಲ್ಲಿ ಇಲ್ಲಿ ಆ್ಯಕ್ಷನ್ ದೃಶ್ಯ ತೆಗೆಯೋವಾಗ ಬ್ಲಾಸ್ಟ್ ಆಗಿದೆ. ಅದರಿಂದ ನಟ ಸಂಜಯ್ ದತ್ ಅವರಿಗೆ ಗಾಯ ಆಗಿದೆ. ಮುಖ ಮತ್ತು ಮೊಣಕೈಗೆ ಗಾಯ ಆಗಿದೆ ಅನ್ನೋದೇ ಒಟ್ಟು ಮಾಹಿತಿ ಇದೆ.
ಟ್ವಿಟರ್ ಮೂಲಕ ಬ್ಲಾಸ್ಟ್ ಬಗ್ಗೆ ಜೋಗಿ ಪ್ರೇಮ್ ಹೇಳಿದ್ದೇನು?
ಇದಾದ್ಮೇಲೆ ಇವತ್ತು ಏಪ್ರಿಲ್-13 ರಂದು ಡೈರೆಕ್ಟರ್ ಜೋಗಿ ಪ್ರೇಮ್ ಈ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ಇಂಗ್ಲೀಷ್ ನಲ್ಲಿ ಬರೆದ ಈ ಟ್ವೀಟ್‌ನಲ್ಲಿ ಆಗಿರೋ ವಿಷಯವನ್ನ ಜೋಗಿ ಪ್ರೇಮ್ ಬರೆದಿದ್ದಾರೆ.
Reports are going around stating that there was an explosion on the sets of #KD which resulted in a serious injury to @duttsanjay baba. These reports are false. Yes there was a small incident but #SanjayDutt is perfectly fine and shooting has resumed. Thank you for your concern❤️ pic.twitter.com/exZnyfXica
— PREM❣️S (@directorprems) April 13, 2023
KD ಸೆಟ್‌ನಲ್ಲಿ ಬ್ಲಾಸ್ಟ್- ಜೋಗಿ ಪ್ರೇಮ್ ಹೇಳಿದ್ದೇನು?
ನಮ್ಮ ಸೆಟ್‌ನಲ್ಲಿ ಯಾವುದೇ ಬ್ಲಾಸ್ಟ್ ಆಗಿಲ್ಲ. ಇಲ್ಲಿ ಅಂದು ದುರ್ಘಟನೆ ಏನೂ ಆಗಿಲ್ಲ. ಸಂಜಯ್ ದತ್ ಅವರು ಸೇಫ್ ಆಗಿದ್ದಾರೆ. ಅವರಿಗೇನೂ ಆಗಿಲ್ಲ. ಆದರೆ ಇಲ್ಲಿ ಒಂದು ಸಣ್ಣ ಘಟನೆ ನಡೆದಿದೆ. ಅಷ್ಟು ಬಿಟ್ಟರೆ ಇಲ್ಲಿ ಬೇರೆ ಏನೂ ಆಗಿಲ್ಲ. ಯಾರಿಗೂ ತೊಂದರೆ ಆಗಿಲ್ಲ. ಚಿತ್ರೀಕರಣ ನಡೆಯುತ್ತಿದೆ ಅಂತ ಜೋಗಿ ಪ್ರೇಮ್ ಹೇಳಿಕೊಂಡಿದ್ದಾರೆ.
ಅಲ್ಲಿಗೆ ಇಲ್ಲಿ ಏನೂ ಆಗಿಯೇ ಇಲ್ಲ ಅಂತಲೇ ಭಾವಿಸಬಹುದೇನೋ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ಘಟನೆ ಬೇರೆ ರೀತಿಯಲ್ಲಿಯೇ ಚರ್ಚೆ ಆಗುತ್ತಿದೆ. ಸಿನಿಮಾ ಪ್ರಚಾರಕ್ಕೆ ಇದನ್ನೆಲ್ಲ ಮಾಡಿದ್ದಾರೆ.
KD ಸೆಟ್ ನಲ್ಲಿ ಬ್ಲಾಸ್ಟ್-ಇದು ಪ್ರಚಾರದ ಗಿಮಿಕ್ಕಾ?
ಸಂಜಯ್ ದತ್‌ಗೆ ಏನಾದರೂ ಆಗಿದ್ದರೇ ಅವರು ಹೇಗೆ ಗೆಳೆಯನ ಬರ್ತ್‌ಡೇಗೆ ಹೋಗುತ್ತಿದ್ದರು ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇದರ ಹೊರತಾಗಿ ಕನ್ನಡ ಸಿನಿಮಾರಂಗದಲ್ಲಿ ಸಾಹಸ ದೃಶ್ಯ ತೆಗೆಯೋವಾಗ ಪೂರ್ವ ಸಿದ್ದತೆ ಹೆಚ್ಚು ಕಂಡು ಬಂದಿದೆ.
ಈ ಹಿಂದೆ ಸಾಹಸ ದೃಶ್ಯಗಳನ್ನ ತೆಗೆಯೋವಾಗ ಇಲ್ಲಿ ಏನೇನೋ ಆಗಿವೆ. ಜೀವನ ಹಾನಿ ಆಗಿರೋ ಉದಾಹರಣೆಗಳೂ ಇವೆ. ಹಾಗಾಗಿಯೇ ಕೆಡಿ ಚಿತ್ರದ ಸಣ್ಣ ಘಟನೆ ಇಲ್ಲಿ ದೊಡ್ಡದಾಗಿ ಕಾಣಿಸಿಕೊಂಡಿದ್ದರೂ ಇರಬಹುದು.
ಇದನ್ನೂ ಓದಿ: Rajkumar Classic Cinema: ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ್ರು! ರಾಜ್ ಕಸ್ತೂರಿ ನಿವಾಸ ಒಪ್ಪಿಕೊಂಡು ಗೆದ್ದರು
ಈ ಬಗ್ಗೆ ಡೈರೆಕ್ಟರ್ ಜೋಗಿ ಪ್ರೇಮ್ ಇರೋ ವಿಷಯ ತಿಳಿಸಿ ಕೂಲ್ ಆಗಿದ್ದಾರೆ. ಎಂದಿನಂತೆ ತಮ್ಮ ಚಿತ್ರದ ಚಿತ್ರೀಕರಣದಲ್ಲೂ ಬ್ಯುಸಿ ಆಗಿದ್ದಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ