ಕನ್ನಡದ ನಟ-ನಿರ್ದೇಶಕ (Harish Raj) ಹರೀಶ್ ರಾಜ್ ಸದ್ಯ ಕನ್ನಡದ ಹೆಸರಾಂತ ಸೀರಿಯಲ್ ಜೊತೆ ಜೊತೆಯಲಿ ಸೀರಿಯಲ್ನಲ್ಲಿ ಬ್ಯುಸಿ ಇದ್ದಾರೆ. ಆಗೊಮ್ಮೆ ಈಗೊಮ್ಮೆ ಸೋಷಿಯಲ್ (social media) ಮೀಡಿಯಾದಲ್ಲೂ ತಮ್ಮ ವಿಶೇಷ ಫೋಟೋ ಮತ್ತು ವೀಡಿಯೋಗಳನ್ನ ಹಂಚಿಕೊಳ್ತಾರೆ. ಹಾಗೇನೆ ಹರೀಶ್ ರಾಜ್ ಈಗೊಂದು (Video Share) ವೀಡಿಯೋ ಶೇರ್ ಮಾಡಿದ್ದಾರೆ. ಇದು ನಿಜಕ್ಕೂ ಸ್ಪೆಷಲ್ ಅನಿಸುತ್ತದೆ. ನಟ-ನಿರ್ದೇಶಕ (Actor-Director Harish Raj) ಹೀಗೆ ಎರಡೆರಡು ಜವಾಬ್ದಾರಿಗಳನ್ನ ಹರೀಶ್ ರಾಜ್ ನಿಭಾಯಿಸಿದ್ದಾರೆ. ಟೆಕ್ನಿಷಿಯನ್ಗಳ ಬಗ್ಗೆ ಒಂದು ವಿಶೇಷ ಗೌರವ ಕೂಡ ಇದೆ. ಆ ಹಿನ್ನೆಲೆಯಲ್ಲಿಯೇ ಈಗ ಹರೀಶ್ ರಾಜ್ ಶೇರ್ ಮಾಡಿರೋ ವೀಡಿಯೋ ಈಗ ಗಮನ ಸೆಳೆಯುತ್ತಿದೆ. ಫ್ಯಾನ್ಸ್ ಕೂಡ ತಮ್ಮದೇ ರೀತಿಯಲ್ಲಿ ರಿಯ್ಯಾಕ್ಟ್ ಮಾಡಿದ್ದಾರೆ. ಅದೇನು? ಇಲ್ಲಿದೆ ಓದಿ.
ಶೂಟಿಂಗ್ ಸ್ಪಾಟ್ ಅಲ್ಲಿ Dolly ತಳ್ಳಿದ ಆರ್ಯವರ್ಧನ್!
ಕನ್ನಡದ ನಟ-ನಿರ್ದೇಶಕ ಹರೀಶ್ ರಾಜ್ ಸ್ಪೆಷಲ್ ವ್ಯಕ್ತಿನೇ ಬಿಡಿ. ಎಲ್ಲವೂ ತಿಳಿದಿರೋ ಕಲಾಕಾರ್ ಕೂಡ ಹೌದು. ನಟನೆ-ನಿರ್ದೇಶನ, ಶೂಟಿಂಗ್ನ ಇತರ ಕೆಲಸಗಳ ಬಗ್ಗೆನೂ ತಿಳಿದುಕೊಂಡಿದ್ದಾರೆ.
ಅದೇ ರೀತಿನೇ ಕ್ಯಾಮರಾ ಹೇಗೆ ವರ್ಕ್ ಆಗುತ್ತದೆ. ಏನೆಲ್ಲ ಕೆಲಸಗಳು ಇರುತ್ತವೆ. ಹೀಗೆ ಎಲ್ಲ ವಿಷಯಗಳ ಮೇಲೂ ಒಂದು ಸಣ್ಣ ಆಸಕ್ತಿಯನ್ನ ಇಟ್ಟುಕೊಂಡಿದ್ದಾರೆ. ನಟನೆ ಜೊತೆಗೆ ನಿರ್ದೇಶನವನ್ನೂ ಮಾಡಿದವ್ರು ಅಲ್ವೇ? ಅದಕ್ಕೇನೆ ಈ ವಿಷಯವನ್ನ ಕೂಡ ತಿಳಿದುಕೊಂಡಿದ್ದಾರೆ.
ಜೊತೆ ಜೊತೆಯಲಿ Dolly ತಳ್ಳಿದ ಹರೀಶ್ ರಾಜ್
ಚಿತ್ರೀಕರಣದ ಸಮಯದಲ್ಲಿ Camera trolley ಮತ್ತು Dolly ಗಳನ್ನೆ ಬಳಸುತ್ತಾರೆ. ಇವುಗಳನ್ನ ಮೂವೀಂಗ್ ದೃಶ್ಯಗಳನ್ನ ತೆಗೆಯಲಿಕ್ಕೇನೆ ಹೆಚ್ಚು ಬಳಸುತ್ತಾರೆ. ಇದರ ಬಳಕೆ ಅಷ್ಟು ಸುಲಭ ಕೂಡ ಅಲ್ಲ ಬಿಡಿ.
ಇದಕ್ಕಾಗಿಯೇ ಇಬ್ಬರು ಇಲ್ವೇ ಮೂವರು ಕೆಲಸ ಮಾಡುತ್ತಾರೆ. ಅವಶ್ಯಕತೆ ಇದ್ರೆ, ತಳ್ಳುವ ಕೆಲಸವನ್ನೂ ಮಾಡಲಾಗುತ್ತದೆ. ಅಂತಹ ಈ ವಿಶೇಷ Dolly ಅನ್ನ ನಟ-ನಿರ್ದೇಶಕ ಹಾಗೂ ಜೊತೆ ಜೊತೆಯಲಿ ಸೀರಿಯಲ್ ನಾಯಕ ನಟ ಹರೀಶ್ ರಾಜ್ ಈಗ ತಳ್ಳಿ ಗಮನ ಸೆಳೆದಿದ್ದಾರೆ.
Dolly ತಳ್ಳಿದ ಹರೀಶ್ ರಾಜ್ ಏನಂತಾರೆ?
ಹರೀಶ್ ರಾಜ್ ತಮ್ಮ ಈ ವಿಶೇಷ ಅನುಭವದ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿದ ವೀಡಿಯೋ ಜೊತೆಗೆ ಹೀಗೆ ಇಂಗ್ಲೀಷ್ನಲ್ಲೂ ಬರೆದುಕೊಂಡಿದ್ದಾರೆ ಓದಿ.
Technicians Work Really Hard! Hats off to them for doing this day in and day out! But was fun trying to push the Dolly.
View this post on Instagram
ಸೀರಿಯಲ್ಗಳಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್ಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಗಲಿರುಳು ದುಡಿಯೋ ಈ ಶ್ರಮಿಕರ ಕೆಲಸಕ್ಕೆ ನನ್ನ ನಮನಗಳು. ಇವರು ಬಳಸುವ Dolly ಯನ್ನ ನಾನು ತಳ್ಳುವ ಕೆಲಸ ಮಾಡಿದ್ದೇನೆ. ಆದರೆ ಸೀರಿಯಸ್ ಆಗಿ ಅಲ್ವೇ ಅಲ್ಲ ಅಂತಲೂ ಹರೀಶ್ ರಾಜ್ ಬರೆದುಕೊಂಡಿದ್ದಾರೆ.
ಜೊತೆ ಜೊತೆಯಲಿ ಮೂಲಕ ಹರೀಶ್ ರಾಜ್ ಸೀರಿಯಲ್ ಪ್ರೇಮಿಗಳ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ದಿನವೂ ತಮ್ಮದೇ ರೀತಿಯಲ್ಲಿ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಆರ್ಯವರ್ಧನ್ ಪಾತ್ರ ಮಾಡೋ ಮೂಲಕ ಎಲ್ಲ ಪ್ರೇಕ್ಷಕರ ಮನದಲ್ಲೂ ವಿಶೇಷ ಜಾಗ ಮಾಡಿಕೊಡಿದ್ದಾರೆ.
ಇದನ್ನೂ ಓದಿ: SS Rajamouli: ನಾನು ದೇವರ ಕಂಡೆ ಎಂದ ರಾಜಮೌಳಿ! ಈ ಹೊಗಳಿಕೆ ಯಾರಿಗೆ?
Dolly ತಳ್ಳೋ ವೀಡಿಯೋ ಕಂಡ ಫ್ಯಾನ್ಸ್ ಏನಂತಾರೆ?
ಹರೀಶ್ ರಾಜ್ ಅವರಿಗೆ ಅಭಿಮಾನಿಗಳಿದ್ದಾರೆ. ಕಲಾತ್ಮಕ ಚಿತ್ರಗಳ ಮೂಲಕ ಜನರ ಮನದಲ್ಲಿರೋ ಹರೀಶ್ ರಾಜ್, ಈ ಸೀರಿಯಲ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ಈಗ ಇವರು ಹರೀಶ್ ರಾಜ್ ಅವರ ಈ ವೀಡಿಯೋ ನೋಡಿ ಸೂಪರ್ ಅಂತಲೂ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಮೋಜಿ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ