ಕನ್ನಡದ ಪುಟ್ಟ ಪರದೆಯ ಜೊತೆ ಜೊತೆಯಲಿ (Harish Raj Serial Experience) ಸೀರಿಯಲ್ ಮುಗಿದಿದೆ. ಸೀರಿಯಲ್ ಪ್ರಿಯರು ಇದನ್ನ ನೋಡಿ ಎಂಜಾಯ್ ಮಾಡಿದ್ದಾರೆ. ಕಟ್ಟಕಡೆಯ ಎಪಿಸೋಡ್ ನೋಡಿ ಇಡೀ ಕಥೆಯ ಕ್ಲೈಮ್ಯಾಕ್ಸ್ ಏನು ಅನ್ನೋದು ತಿಳಿದುಕೊಂಡಿದ್ದಾರೆ. ಸೀರಿಯಲ್ (Actor Director Harish Raj) ಕಲಾವಿದರು ಕೊನೆಯ ಸಂಚಿಕೆ ಅನ್ನುವ ಬೇಸರದಲ್ಲಿ ಅಭಿನಯಿಸಿದ್ದಾರೆ. ಲಾಸ್ಟ್ ಎಪಿಸೋಡ್ ಶೂಟಿಂಗ್ ವೇಳೆ ಒಂದು ಗ್ರೂಪ್ ಫೋಟೋ ಶೂಟ್ ಕೂಡ ಪ್ಲಾನ್ ಮಾಡಿದ್ದರು. ಆ ಒಂದು (Jothe Jotheyali Serial News) ಸಮಯದಲ್ಲಿ ಸೀರಿಯಲ್‌ನ ಮೊದಲ ನಾಯಕ ಅನಿರುದ್ಧ್ ಅವರಿಗೆ ಆಹ್ವಾನ ಇತ್ತು. ಅಲ್ಲಿಗೆ ಇಡೀ ಗ್ರೂಪ್ ಫೋಟೋ ಸೆಷನ್ ಸ್ಪೆಷಲ್ ಆಗಿಯೇ ಕಾಣಿಸಿತು.
ಅನಿರುದ್ಧ್ ಬಿಟ್ಟು ಹೋದ ಪಾತ್ರವನ್ನ ನಿರ್ವಹಿಸಿರೋ ನಟ ಹರೀಶ್ (Serial New Updates) ರಾಜ್ ತಮ್ಮ ಸೀರಿಯಲ್ ಅನುಭವವನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಸೀರಿಯಲ್ ಮುಗಿದ ಮೇಲೆ ಹರೀಶ್ ರಾಜ್ ಮಾತು-ಕತೆ
ಜೊತೆ ಜೊತೆಯಲಿ ಸೀರಿಯಲ್ ಹೀರೋ ಹರೀಶ್ ರಾಜ್ ತುಂಬಾ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇಡೀ ಸೀರಿಯಲ್‌ನಲ್ಲಿ ಇಡೀ ಟೀಮ್ ಮಿಸ್ ಮಾಡಿಕೊಳ್ತಿರೋ ಹರೀಶ್ ರಾಜ್, ಸೀರಿಯಲ್‌ನ ತಮ್ಮ ಒಟ್ಟು ಜರ್ನಿ ತುಂಬಾ ಏನೂ ಇಲ್ಲ. ಕೇವಲ 9 ತಿಂಗಳು. ಇಷ್ಟು ದಿನಗಳಲ್ಲಿ ಒಳ್ಳೆ ಕೆಲಸ ಮಾಡಿರೋ ಖುಷಿ ಇದೆ ಅಂತಲೇ ಹರೀಶ್ ರಾಜ್ ಹೇಳಿಕೊಂಡಿದ್ದಾರೆ.
ನನ್ನನ್ನು ಆರ್ಯವರ್ಧನ್ ಪಾತ್ರ ಸದಾ ಕಾಡುತ್ತದೆ: ಹರೀಶ್ ರಾಜ್
ಇಡೀ ಸೀರಿಯಲ್ ಕೆಲಸ ಈಗ ಮುಗಿದಿದೆ. ಸೀರಿಯಲ್ ಶೂಟಿಂಗ್ ಇರೋದಿಲ್ಲ. ಆದರೆ ನನಗೆ ಈಗಲೂ ಒಂದು ವಿಷಯ ಕಾಡುತ್ತದೆ. ನಾನು ನಿರ್ವಹಿಸಿದ್ದ ಆರ್ಯವರ್ಧನ್ ಪಾತ್ರ ನನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಅದನ್ನೇ ನಾನು ಅತಿ ಹೆಚ್ಚು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹರೀಶ್ ತಿಳಿಸಿದರು.
ಅನಿರುದ್ಧ ಮೀಟ್ ಆಗಿರೋದು ತುಂಬಾ ಖುಷಿ ತಂದಿದೆ. ಒಟ್ಟಿಗೆ ನಾವು ಸುಮಾರು ವಿಷಯಗಳನ್ನ ಮಾತನಾಡಿದ್ದೇವೆ. ಆದರೆ ಜೊತೆ ಜೊತೆಯಲಿ ಸೀರಿಯಲ್ ವಿಷಯ ಮಾತನಾಡಲಿಲ್ಲ ಬಿಡಿ. ನನ್ನ ಮತ್ತು ಅನಿರುದ್ಧ ಸ್ನೇಹ ತುಂಬಾನೇ ಇಂದು ನಿನ್ನೆಯದ್ದಲ್ಲ. 1999 ರಿಂದಲು ನಾವು ಪರಿಚಿತರು ಅಂತಲೇ ಹರೀಶ್ ಹೇಳಿಕೊಂಡರು.
ಅನಿರುದ್ಧ ಮತ್ತು ನಾನು ಒಳ್ಳೆ ಫ್ರೆಂಡ್ಸ್
ಅನಿರುದ್ಧ ಸಹೋದರಿ ಅರುಂಧತಿ ಜೊತೆಗೆ ನಾನು ಕಾನೂರು ಹೆಗ್ಗಡಿತಿ ಸೀರಿಯಲ್ ಮಾಡಿದ್ದೇನೆ. ಆ ದಿನಗಳಿಂದಲೂ ನನಗೆ ಅನಿರುದ್ಧ ಸೇರಿದಂತೆ ಅವರ ಫ್ಯಾಮಿಲಿ ಮೆಂಬರ್ಸ್ ಪರಿಚಯ ಇದ್ದಾರೆ.
ಸೀರಿಯಲ್ ಟೀಮ್‌ನಿಂದಲೇ ಎಲ್ಲರೂ ಒಟ್ಟಿಗೆ ಸೇರೋ ಅವಕಾಶ ಸಿಕ್ತು. ಆಗಲೇ ನಾನು ಮತ್ತು ಅನಿರುದ್ಧ ಭೇಟಿಯಾಗಲು ಸಾಧ್ಯವಾಯಿತು. ಬಹಳ ದಿನಗಳ ಬಳಿಕವೇ ನಾವು ಭೇಟಿಯಾಗಿದೇವೆ ಎಂದು ಹರೀಶ್ ರಾಜ್ ಹೇಳಿಕೊಂಡ್ರು.
ಜೊತೆ ಜೊತೆಯಲಿ ಸೀರಿಯಲ್ ಎಂಡ್-ಮುಂದೇನ್ ಮಾಡ್ತಾರೆ ಹರೀಶ್ ರಾಜ್
ಜೊತೆ ಜೊತೆಯಲಿ ಸೀರಿಯಲ್ ಮುಗಿಸಿರೋ ಹರೀಶ್ ರಾಜ್ ಮುಂದೇನ್ ಮಾಡ್ತಾರೆ ಅನ್ನುವ ಪ್ರಶ್ನೆ ಇದೆ. ಅದಕ್ಕೂ ಉತ್ತರವನ್ನ ಕೊಟ್ಟಿರೋ ಹರೀಶ್ ರಾಜ್, ತಮ್ಮ ಬ್ಯಾನರ್‌ನಲ್ಲಿಯೇ ಒಂದು ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರದ ಬಗ್ಗೆ ಅತಿ ಶೀಘ್ರದಲ್ಲಿಯೇ ಮಾಹಿತಿ ಕೊಡ್ತೀನಿ ಅಂತಲೇ ಹರೀಶ್ ರಾಜ್ ಹೇಳ್ತಾರೆ.
ಹರೀಶ್ ರಾಜ್ ಮತ್ತು ಅನಿರುದ್ಧ ಭೇಟಿ ನಿಜಕ್ಕೂ ಸ್ಪೆಷಲ್ ಆಗಿಯೇ ಇದೆ. ಸೀರಿಯಲ್ ಬಿಟ್ಟು ಅನಿರುದ್ಧ ಹೊರ ನಡೆದ ಮೇಲೆ ಹರೀಶ್ ರಾಜ್ ಆ ಪಾತ್ರವನ್ನ ನಿರ್ವಹಿಸಿದ್ದರು.
ಇದನ್ನೂ ಓದಿ: Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್
ಆ ಒಂದು ಸಮಯದಲ್ಲಿ ಹರೀಶ್ ರಾಜ್ ಎಲ್ಲೂ ಯಾವಾಗಲೂ ಅನಿರುದ್ಧ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ನ್ಯೂಸ್-೧೮ ಕನ್ನಡ ಡಿಜಿಟಲ್ ಜೊತೆಗೆ ಈಗ ಹರೀಶ್ ರಾಜ್ ಸಾಕಷ್ಟು ವಿಷಯ ತಿಳಿಸಿದ್ದಾರೆ.
ನಾನು ಮತ್ತು ಅನಿರುದ್ಧ ಒಳ್ಳೆ ಸ್ನೇಹಿತರು ಅನ್ನೋದನ್ನ ಮತ್ತೆ ಮತ್ತೆ ಹೇಳಿಕೊಡಿದ್ದಾರೆ. ಒಟ್ಟಾರೆ ಜೊತೆ ಜೊತೆಯಲಿ ಸೀರಿಯಲ್ ಮುಗಿದಿದೆ. ಸಾಕಷ್ಟು ನೆನಪುಗಳನ್ನ ಕೂಡ ಕಟ್ಟಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ