Dileep Raj: ಹಿಟ್ಲರ್ ಕಲ್ಯಾಣದ ದಿಲೀಪ್ ರಾಜ್ ಈಗ ಮಹಾನ್ ಕಲಾವಿದ!

ಕಿರುತೆರೆಯಿಂದಲೇ ಬಂದಿದ್ದ ದಿಲೀಪ್ ರಾಜ್, ಸಿನಿಮಾ ಮಾಡ್ತಾನೇ ಮತ್ತೆ ಕಿರುತೆರೆಗೆ ಬಂದಿದ್ದರು. ಹಿಟ್ಲರ್ ಕಲ್ಯಾಣ ಮೂಲಕ ಬೇರೆ ಹವಾನೇ ಕ್ರಿಯೇಟ್ ಮಾಡಿದ್ದರು. ಅದೇ ದಿಲೀಪ್ ರಾಜ್, ಈಗೊಂದು ಸಿನಿಮಾ ಮಾಡಿದ್ದಾರೆ. ಅದುವೇ ಮಹಾನ್ ಕಲಾವಿದ.

ಹಿಟ್ಲರ್ ಕಲ್ಯಾಣ ಎ.ಜೆ.ಈಗ ಮಹಾನ್ ನಾಯಕ ಚಿತ್ರದ ಹೀರೋ

ಹಿಟ್ಲರ್ ಕಲ್ಯಾಣ ಎ.ಜೆ.ಈಗ ಮಹಾನ್ ನಾಯಕ ಚಿತ್ರದ ಹೀರೋ

  • Share this:
ಕನ್ನಡ ಕಿರುತೆರೆಯ ಹಿಟ್ಲರ್ ಕಲ್ಯಾಣ (Hitler Kalyan) ಸೀರಿಯಲ್ ಭಾರೀ ಫೇಮಸ್ ಆಗಿದೆ. ಅದರಲ್ಲೂ ಈ ಸೀರಿಯಲ್​ನ ಎ.ಜೆ.ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಇಡೀ ಸೀರಿಯಲ್​ನ ಒಟ್ಟು ಪಾತ್ರ ಒಂದು ಕಡೆಗೆ ಇದ್ರೆ, ಎ.ಜೆ.ಪಾತ್ರಧಾರಿ ದಿಲೀಪ್ ರಾಜ್ (Actor Dileep Raj) ರನ್ನ ಎಲ್ಲರೂ ಇಷ್ಟಪಡುತ್ತಿದ್ದಾರೆ. ದಿಲೀಪ್ ರಾಜ್ ಈ ಸೀರಿಯಲ್ (Serial) ಮುಖಾಂತರ ಕಿರುತೆರೆಯ ಪ್ರೇಕ್ಷಕರನ್ನ ರಂಜಿಸುತ್ತಲೇ ಇದ್ದಾರೆ. ತಮ್ಮ ಈ ಪಾತ್ರದ ಮೂಲಕವೇ ಎಲ್ಲರ ದಿಲ್ ಕದ್ದ ದಿಲೀಪ್ ರಾಜ್ ಮತ್ತೊಮ್ಮೆ ಬಿಗ್ (Silver Screen) ಪರದೆಗೆ ಬಂದಿದ್ದಾರೆ. ಕಿರುತೆರೆಯಿಂದಲೇ ಬಂದಿದ್ದ ದಿಲೀಪ್ ರಾಜ್, ಸಿನಿಮಾ ಮಾಡ್ತಾನೇ ಮತ್ತೆ ಕಿರುತೆರೆಗೆ ಬಂದಿದ್ದರು. ಹಿಟ್ಲರ್ ಕಲ್ಯಾಣ ಮೂಲಕ ಬೇರೆ ಹವಾನೇ ಕ್ರಿಯೇಟ್ ಮಾಡಿದ್ದರು. ಅದೇ ದಿಲೀಪ್ ರಾಜ್, ಈಗೊಂದು ಸಿನಿಮಾ ಮಾಡಿದ್ದಾರೆ. ಅದುವೇ ಮಹಾನ್ ಕಲಾವಿದ. ಈ ಸಿನಿಮಾದ ಒಂದಷ್ಟು ಮಾಹಿತಿ ಇಲ್ಲಿದೆ.

ದಿಲೀಪ್ ರಾಜ್ ಕಿರುತೆರೆಯಲ್ಲಿ ತಮ್ಮದೇ ರೀತಿ ಮಿಂಚಿದವ್ರು. ಸಿನಿಮಾದಲ್ಲೂ ತಮ್ಮ ವಿಶೇಷ ಶೈಲಿಯಿಂದ ಪ್ರೇಕ್ಷಕರ ಗಮನ ಸೆಳೆದರು. ಅದೇ ದಿಲೀಪ್ ರಾಜ್ ಕಿರುತೆರೆಯಲ್ಲಿ ಈಗ ಹಿಟ್ಲರ್ ಕಲ್ಯಾಣ ಮುಖಾಂತರ ಎ.ಜೆ. ಪಾತ್ರದಿಂದ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ.
ದಿಲೀಪ್ ರಾಜ್ ಅಭಿನಯದಲ್ಲಿ ಈ ಹಿಂದೆ ಅನೇಕ ಸಿನಿಮಾಗಳೂ ಬಂದಿವೆ. ಆದರೂ ದಿಲೀಪ್ ರಾಜ್ ಹಿಟ್ಲರ್ ಕಲ್ಯಾಣದ ಮೂಲಕ ತಮ್ಮದೇ ರೀತಿಯಲ್ಲಿ ಕಿರುತೆರೆಯಲ್ಲಿ ಮತ್ತೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.

Kannada Actor Dileep Raj Now Acted for Mahan Nayaka film As a Hero
ಬೆಳ್ಳಿ ಪರದೆಗೆ ಮತ್ತೆ ಬಂದ ನಟ ದಿಲೀಪ್ ರಾಜ್


ಹಿಟ್ಲರ್ ಕಲ್ಯಾಣ ಸೀರಿಯಲ್ ನ ಎ.ಜೆ.ಪಾತ್ರಧಾರಿ ದಿಲೀಪ್ ರಾಜ್ ಮತ್ತೊಮ್ಮೆ ಈಗ ಬೆಳ್ಳಿ ಪರದೆಗೆ ಬಂದಿದ್ದಾರೆ. ಮಹಾನ್ ಕಲಾವಿದ ಹೆಸರಿನ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಮಹಾನ್ ಕಲಾವಿದನಾಗಿರೋ ದಿಲೀಪ್ ರಾಜ್ ಮತ್ತೆ ಸಿನಿಮಾ ಮಾಡಿದ ಖುಷಿಯಲ್ಲೂ ಇದ್ದಾರೆ.

ಮಹಾನ್ ಕಲಾವಿದ ಚಿತ್ರದಲ್ಲಿ ದಿಲೀಪ್ ರಾಜ್ ಏನ್ ಹೇಳ್ತಾರೆ
ನಾನು ಬಹಳ ದಿನಗಳ ಬಳಿಕ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ಅಭಯ್ ಚಂದ್ರ ಒಳ್ಳೆ ಕಥೆ ಮಾಡಿದ್ದಾರೆ. ನಾನು ಚೆನ್ನಾಗಿ ಮಾಡಿದ್ದೇನೋ ಇಲ್ವೋ ಅನ್ನೋದನ್ನ ನಿರ್ದೇಶಕ ಅಭಯ್ ಚಂದ್ರ ಹೇಳಬೇಕು. ಈ ಚಿತ್ರವನ್ನ ನೋಡಲು ನಾನು ಕಾತರದಿಂದಲೇ ಕಾಯುತ್ತಿದ್ದೇನೆ ಅಂತಲೇ ದಿಲೀಪ್ ರಾಜ್ ಹೇಳಿಕೊಂಡರು.

ಇದನ್ನೂ ಓದಿ: Gichi GiliGili: ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು-ವನ್ಷಿಕಾ, ಮತ್ತೊಮ್ಮೆ ಮಾಸ್ಟರ್ ಆನಂದ್ ಮಗಳಿಗೆ ಗೆಲುವಿನ ಮಾಲೆ

ಪತ್ರಕರ್ತ ಸುರೇಶ್ ಚಂದ್ರ ಅವರ ಪುತ್ರ ಈ ಅಭಯ್ ಚಂದ್ರ, ತಮ್ಮ ಈ ಎರಡನೇ ಚಿತ್ರಕ್ಕೆ ಕಲಾವಿದ ಅಂತಲೇ ಹೆಸರು ಇಟ್ಟಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಬಳಿ ಕೂಡ ಇದರ ಬಗ್ಗೆ ಹೇಳಿಕೊಂಡರು. ಆಗ ರವಿಚಂದ್ರನ್ ಏನ್ ಹೇಳಿದ್ರು ಗೊತ್ತೇ?

Kannada Actor Dileep Raj Now Acted for Mahan Nayaka film As a Hero
ಮಹಾನ್ ನಾಯಕ ಚಿತ್ರದ ನಾಯಕಿಯರ ಜೊತೆಗೆ ದಿಲೀಪ್ ರಾಜ್


ಹೌದು, ಕಲಾವಿದ ಅನ್ನೋ ಶೀರ್ಷಿಕೆಗೆ ಮತ್ತೇನಾದರೂ ಸೇರಿಸಿ ಅಂದ್ರು, ಆಗಲೇ ಕಲಾವಿದ ಟೈಟಲ್ ಮಹಾನ್ ಕಲಾವಿದ ಆಗಿ ಫೈನಲ್ ಆಯಿತು ಎಂದು ನಿರ್ದೇಶಕ ಅಭಯ್ ಚಂದ್ರ ಹೇಳಿದರು.

ಮಹಾನ್ ಕಲಾವಿದ ಹಿಟ್ಲರ್ ದಿಲೀಪ್ ರಾಜ್​ಗೆ ಇಬ್ಬರು ನಾಯಕಿಯರು
ಮಹಾನ್ ಕಲಾವಿದ ಚಿತ್ರದ ದಿಲೀಪ್ ರಾಜ್​ ಗೆ ಇಲ್ಲಿ ಇಬ್ಬರು ನಾಯಕಿಯರು ಜೋಡಿ ಆಗಿದ್ದಾರೆ. ಜಾಹ್ನವಿ ರಾಯಲ್ ಇಲ್ಲಿ ಮಹಾನ್ ಕಲಾವಿದನ ಪತ್ನಿ ಪಾತ್ರವನ್ನ ನಿರ್ವಹಿಸಿದ್ದಾರೆ.

ಲಾಕ್ ಡೌನ್ ಟೈಮ್ ನಲ್ಲಿ ಆನ್​ ಲೈನ್​ ನಲ್ಲಿ ಸಿಕ್ಕ  ಗೆಳೆಯನೇ ಈ ಚಿತ್ರದ ಪ್ರೊಡ್ಯೂಸರ್

ನಟಿ ಪಲ್ಲವಿ ರಾಜು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಹಾನ್ ಕಲಾವಿದ ಚಿತ್ರಕ್ಕೆ ದುಡ್ಡು ಹಾಕಿದವ್ರು ವಿಶೇಷವಾಗಿಯೇ ಇದ್ದಾರೆ. ಈ ಚಿತ್ರದ ಮೂಲಕ ಪ್ರೊಡ್ಯೂಸರ್ ಕೂಡ ಆಗಿದ್ದಾರೆ.

ಇದನ್ನೂ ಓದಿ: Tamil Actress Deepa: ನಟಿ ದೀಪಾ ಮೃತದೇಹದ ಪಕ್ಕ ಇದ್ದ ಡೆತ್​ ನೋಟ್​ನಲ್ಲಿ ಏನಿತ್ತು?

ನಿಜ, ಭರತ್ ಗೌಡ ಈ ಚಿತ್ರದ ನಿರ್ಮಾಪಕರು, ಲಾಕ್ ಡೌನ್ ಸಮಯದಲ್ಲಿ ನಿರ್ದೇಶಕರ ಅಭಯ್ ಚಂದ್ರ ಅವರಿಗೆ ಆನ್​ ಲೈನ್ ಮೂಲಕವೇ ಗೆಳೆಯರಾಗಿದ್ದರು.

ಹಾಗೆ ಪರಿಚಯವಾದ ಇವರು ಮಹಾನ್ ಕಲಾವಿದ ಸಿನಿಮಾ ಮಾಡಿದ್ದಾರೆ.ಕಿರಣ್ ಗಜ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಹಿಟ್ಲರ್ ಕಲ್ಯಾಣದ ಎ.ಜೆ. ಈ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಗೆ ಬರ್ತಿದ್ದಾರೆ.
First published: