ಸ್ಯಾಂಡಲ್‌ವುಡ್ ದೂದ್ ಪೇಡ ದಿಗಂತ್ ಮಿಸ್ (Diganth New Movie Updates) ಆಗಿದ್ದಾರೆ. ಇದುವೇ ನಮ್ಮ ಕ್ಯಾಂಪೇನ್. ಹೀಗೆ ನಿರ್ದೇಶಕ-ನಿರ್ಮಾಪಕ ಗುರುದತ್ ಗಾಣಿಗ ಹೇಳಿದ್ರು. ಇವರು ಹೀಗೆ ಹೇಳಲಿಕ್ಕೆ ಕಾರಣ ಏನು ಗೊತ್ತೇ ? ಹೌದು, ದಿಗಂತ್ ಮತ್ತು ಒಂದಷ್ಟು (Actor Diganth Movie) ಕನ್ನಡದ ನಾಯಕಿಯರು ಸೇರಿ ಒಂದು ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಡಗೈಯೇ ಅಪಘಾತಕ್ಕೆ ಕಾರಣ ಅನ್ನೋ ವಿಶೇಷ ಟೈಟಲ್ ಕೂಡ ಇದೆ. ಇದರ ಡಬ್ಬಿಂಗ್ ಕೆಲಸ ಜೋರಾಗಿಯೇ ನಡೆಯುತ್ತಿದೆ. ಎಲ್ಲರೂ (Diganth Latest Updates) ಇದ್ದಾರೆ. ಎಲ್ಲರೂ ಡಬ್ಬಿಂಗ್ ಮಾಡ್ತಾನೇ ಇದ್ದಾರೆ. ಆದರೆ ದಿಗಂತ್ ಮಾತ್ರ ಇಲ್ಲಿ ಎಲ್ಲೂ ಕಾಣೋದಿಲ್ಲ. ಯಾಕೆ ? ಏನೂ ? ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಗುರುದತ್ ಗಾಣಿಗ ಹೇಳಿದ್ದೇನು ? ಇಲ್ಲಿದೆ (Diganth New Cinema) ಅದರ ಮಾಹಿತಿ.
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಇವರಲ್ಲಿ ನಾಯಕ ನಟ ದಿಗಂತ್‌ಗೆ ಯಾರೂ ಜೋಡಿ ಅನ್ನೊದು ಗೊತ್ತಿಲ್ಲ. ಚಿತ್ರದ ನಿರ್ದೇಶಕ ಸಮರ್ಥ್ ಕಡಕೋಳ್ ಕೂಡ ಈ ಕುರಿತು ಎಲ್ಲೂ ಏನೂ ಹೇಳಿಕೊಂಡಿಲ್ಲ.
ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಅಪ್‌ಡೇಟ್ಸ್ ಏನು ?
ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಅಂತೂ ಏನಂದ್ರೆ ಏನು ಈ ಬಗ್ಗೆ ಹೇಳಿಕೊಂಡಿಲ್ಲ. ಅದರ ಮಧ್ಯ ಎಲ್ಲ ಗೌಪ್ಯವಾಗಿಯೇ ಇಟ್ಟುಕೊಂಡು ಚಿತ್ರೀಕರಣದ ಕೆಲಸ ಮಾಡಿಕೊಂಡಿದ್ದಾರೆ. ಈ ಮೂಲಕ ಈಗ ಡಬ್ಬಿಂಗ್ ಹಂತಕ್ಕೂ ತಲುಪಿದ್ದಾರೆ.
ಸಿನಿಮಾದ ಡಬ್ಬಿಂಗ್ ಕೆಲಸ ಬಲು ಜೋರಾಗಿಯೇ ನಡೆದಿದೆ. ಚಿತ್ರದ ನಾಯಕಿಯರಾದ ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಹಾಗೂ ನವ ನಟಿ ಧನು ಹರೀಶ್ ಕೂಡ ತಮ್ಮ ಪಾತ್ರದ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿ ಆಗದ್ದಾರೆ.
ಗುರುದತ್ ಗಾಣಿಗ ಚಿತ್ರದ ಬಗ್ಗೆ ಈಗ ಕೊಟ್ಟ ಮಾಹಿತಿ ಏನು?
ಈ ಒಂದು ಡಬ್ಬಿಂಗ್ ಕೆಲಸದ ವಿಡಿಯೋವನ್ನ ಕೂಡ ಮಾಡಲಾಗಿದೆ. ಈ ವಿಡಿಯೋದಲ್ಲಿ ಎಲ್ಲರೂ ಇದ್ದಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರೋದು ಇಲ್ಲಿ ಕಂಡು ಬರುತ್ತದೆ.
ಆದರೆ ಚಿತ್ರದ ನಾಯಕ ದೂದ್ ಪೇಡ ದಿಗಂತ್ ಮಾತ್ರ ಎಲ್ಲೂ ಕಾಣೋದೇ ಇಲ್ಲ. ಈ ಕುತೂಹಕ್ಕೆ ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಅವರನ್ನ ಕೇಳಿದ್ರೆ ಏನ್ ಹೇಳಿದ್ರು ಗೊತ್ತೇ ? ಹೌದು, ನಮ್ಮ ಚಿತ್ರದ ನಾಯಕ ದಿಗಂತ್ ಮಿಸ್ಸಿಂಗ್ ಆಗಿದ್ದಾರೆ. ಅವರ ಪಾತ್ರಕ್ಕೆ ಅವರು ಇನ್ನೂ ಡಬ್ ಮಾಡಿಲ್ಲ.
ಇದು ನಮ್ಮ ಕ್ಯಾಂಪೇನ್ ಅಂತ ಗುರುದತ್ ಹೇಳಿದ್ಯಾಕೆ ?
ಇದುವೇ ನಮ್ಮ ಕ್ಯಾಂಪೇನ್ ಅಂತಲೇ ಗುರುದತ್ ಗಾಣಿಗ ಹೇಳಿಕೊಂಡಿದ್ದಾರೆ. ಇದು ಸಿನಿಮಾ ಪ್ರಚಾರದ ಇನ್ನೂ ಒಂದು ಪರಿ ಅಂತಲೂ ಗೆಸ್ ಮಾಡಬಹುದು.
ಇನ್ನು ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಸಿನಿಮಾದ ನಾಯಕ ಎಡಗೈ ಬಳಕೆ ಮಾಡೋ ವ್ಯಕ್ತಿ ಆಗಿರುತ್ತಾರೆ. ನವ ನಟಿ ಧನು ಹರ್ಷಾ ಕೂಡ ಇಲ್ಲಿ ಎಡಗೈ ಬಳಕೆ ಮಾಡೋ ಪಾತ್ರವಾಗಿಯೇ ಕಾಣಿಸಿಕೊಂಡಿದ್ದಾರೆ.
ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಕಥೆ ಏನು?
ಎಡಗೈ ಬಳಕೆ ಮಾಡೋ ವ್ಯಕ್ತಿಗಳಿಗೆ ಆಗೋ ತೊಂದರೆಗಳನ್ನಇಲ್ಲಿ ಸಿನಿಮಾ ಮಾಡಲಾಗಿದೆ. ಅವರಿಗೆ ಅಗೋ ಕಷ್ಟಗಳೇ ಇಲ್ಲಿ ಚಿತ್ರದ ಕತೆ ಆಗಿವೆ.
ಈ ಕಥೆಯಲ್ಲಿ ನಟಿ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಅವರು ನಟಿಸಿದ್ದಾರೆ. ಇವರ ಪಾತ್ರಗಳೇನೂ ಅನ್ನೋದು ಇನ್ನು ರಿವೀಲ್ ಆಗಿಲ್ಲ.
ಬಹಳ ದಿನಗಳ ಬಳಿಕ ನಿಧಿ-ದಿಗಂತ್ ಜೋಡಿ ಮೋಡಿ
ಆದರೆ ಈ ಚಿತ್ರದ ಮೂಲಕ ನಟಿ ನಿಧಿ ಸುಬ್ಬಯ್ಯ ಹಾಗೂ ದಿಗಂತ್ ಬಹಳ ದಿನಗಳ ಬಳಿಕ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಪಂಚರಂಗಿ ಸಿನಿಮಾ ಆದ್ಮೇಲೆ ಇವರು ಒಟ್ಟಿಗೆ ಕಾಣಿಸಿಕೊಂಡದ್ದೇ ಇಲ್ಲ ಬಿಡಿ.
ಇದನ್ನೂ ಓದಿ: Bhairathi Ranagal: ಭೈರತಿ ರಣಗಲ್ ಮುಹೂರ್ತ ಫಿಕ್ಸ್! ಶೂಟಿಂಗ್ ಯಾವಾಗಿಂದ?
ಇದು ಬಿಟ್ಟರೇ ಸಿನಿಮಾ ಟೈಟಲ್, ಸಿನಿಮಾದ ಟೀಸರ್‌ಗಳು ಈಗಾಗಲೇ ಗಮನ ಸೆಳೆದಿವೆ. ಸಿನಿಮಾ ಟ್ರೈಲರ್ ಒಂದು ಇಲ್ಲಿವರೆಗೂ ಹೊರ ಬಿದ್ದಿಲ್ಲ. ಆ ನಿರೀಕ್ಷೆಯನ್ನ ಈಗೀನ ಟೀಸರ್‌ಗಳು ಮತ್ತು ಪೋಸ್ಟರ್‌ಗಳು ಹೆಚ್ಚಿಸಿವೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟು ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ