Actor Diganth: ಎಡಗೈ ಅಪಘಾತಕ್ಕೆ ಕಾರಣ ಅಂತವ್ರೆ ದೂದ್ ಪೇಡ ದಿಗಂತ್ !

Actor Diganth: ಇಡೀ ವಿಶ್ವವೇ ಬಲಗೈ ವ್ಯಕ್ತಿಗಳಿಗಾಗಿಯೇ ಡಿಸೈನ್ ಆಗಿದೆ. ಇದಕ್ಕೆ ಸಾಕ್ಷಿ ಹತ್ತು ಹಲವು. ಆದರೆ, ಎಡಗೈ ಬಳಕೆ ಮಾಡೋ ಮಂದಿಗೆ ಇದು ಒಂದು ರೀತಿ ತೊಂದರೇನೆ. ಅದನ್ನೆ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಹೊಸ ರೀತಿ ಹೇಳೋಕೆ ಈಗ ಸೆಟ್ಟೇರಿದೆ.

ದಿಗಂತ್ ಹೊಸ ಸಿನಿಮಾ ಶುರು

ದಿಗಂತ್ ಹೊಸ ಸಿನಿಮಾ ಶುರು

  • Share this:
ಕನ್ನಡದಲ್ಲಿ ಅದ್ಭುತ ಟೈಟಲ್​ನ (Title) ಸಿನಿಮಾಗಳು (Cinema) ಸೆಟ್ಟೇರುತ್ತವೆ. ಚಿತ್ರ-ವಿಚಿತ್ರ ಶೀರ್ಷಿಕೆಯ ಚಿತ್ರಗಳೂ ಮುಹೂರ್ತ ಮಾಡಿಕೊಳ್ಳುತ್ತವೆ. ಅದರಂತೆ ಗಾಳಿಪಟದ ದೂದ್ ಪೇಡ ದಿಗಂತ್ (Diganth) ಅಭಿನಯದ ಎಡಗೈ ಅಪಘಾತಕ್ಕೆ ಕಾರಣ ಹೆಸರಿನ ಸಿನಿಮಾ ಲಾಂಚ್ ಆಗಿದ್ದು, ಈ ವಿಶೇಷ ಚಿತ್ರದ ಹಿಂದೆ ಉತ್ಸಾಹಿ ತಂಡವೇ ಇದೆ.  ಯುವ ನಿರ್ದೇಶಕ ಗುರು ಗಾಣಿಗ ಮತ್ತು ಸಮರ್ಥ್ ಕಡಕೋಳ್ ಚಿತ್ರಕ್ಕೆ ದುಡ್ಡು ಕೂಡ ಹಾಕಿದ್ದಾರೆ. ಈಗಾಗಲೇ ಈ ಚಿತ್ರದ ಮುಹೂರ್ತ ಕೂಡ ಆಗಿದೆ. ಈ ಸಮಯದಲ್ಲಿ ಏನೆಲ್ಲ ಆಗಿದೆ. ಚಿತ್ರದ ಕಂಟೆಂಟ್ ಏನು ? ಸಿನಿಮಾದ ಟೆಕ್ನಿಕಲ್ ಟೀಮ್​ನಲ್ಲಿ ಯಾರೆಲ್ಲ ಇದ್ದಾರೆ. ಈ ಎಲ್ಲ ಮಾಹಿತಿ ಇಲ್ಲಿದೆ.

ಇಡೀ ವಿಶ್ವವೇ ಬಲಗೈ ವ್ಯಕ್ತಿಗಳಿಗಾಗಿಯೇ ಡಿಸೈನ್ ಆಗಿದೆ. ಏನೇ ತೆಗೆದುಕೊಂಡ್ರೂ ಅಷ್ಟೇನೆ, ಬಲಗೈ ಬಳಕೆದಾರಿಗೇನೆ ಅನುಕೂಲ ಆಗೋ ರೀತಿ ಇವೆ. ಇದಕ್ಕೆ ಸಾಕ್ಷಿ ಹತ್ತು ಹಲವು. ಆದರೆ, ಎಡಗೈ ಬಳಕೆ ಮಾಡೋ ಮಂದಿಗೆ ಇದು ಒಂದು ರೀತಿ ತೊಂದರೇನೆ ಸರಿ. ಆದರೆ, ಇದೇ ಸಮಸ್ಯೆಯನ್ನೆ ಆಧರಿಸಿದ ಸಿನಿಮಾನೇ ಎಡಗೈ ಅಪಘಾತಕ್ಕೆ ಕಾರಣ.ಇದರಲ್ಲಿ ನಟ ದಿಗಂತ್ ಅಭಿನಯಸಿದ್ದಾರೆ. ನವ ನಟಿ ಧನು ಹರ್ಷ ಇಲ್ಲಿ ದಿಗಂತ್​ಗೆ ಜೋಡಿ ಆಗಿದ್ದಾರೆ.

ಎಡಗೈ ಬಳಕೆ ಅಪರಾಧವೇ ಇಲ್ಲ ಪಾಪವೋ?
ಹೌದು. ಈ ಒಂದು ಪ್ರಶ್ನೆ ನಿಜಕ್ಕೂ ಕಾಡುತ್ತದೆ. ಎಡಗೈ ಅನ್ನೋದನ್ನ ಶುಭ ಸಂಕೇತ ಅಂತ ಭಾವಿಸೇ ಇಲ್ಲ. ಈ ಹಿನ್ನೆಲೆಯಲ್ಲಿಯೇ ಇಡೀ ವಿಶ್ವವೇ ಬಲಗೈ ಬಳಕೆಗೆ ಅನುಕೂಲವಾಗೋ ಹಾಗೇನೆ ಇದೆ. ಆದರೆ, ಕನ್ನಡದ ಈ ಒಂದು ಸಿನಿಮಾದಲ್ಲಿ ಎಡಗೈ ಬಳಕೆ ಮಾಡೋ ವ್ಯಕ್ತಿಗಳ ಆಂತರಿಕ ಸಮಸ್ಯೆಯನ್ನ ಹೇಳಲಾಗಿದೆ. ಎಡಗೈ ಬಳಕೆ ಮಾಡೋ ಹುಡುಗಿಯ ಕಥೆಯನ್ನೂ ಕಟ್ಟಿಕೊಡಲಾಗುತ್ತಿದೆ.

Diganth New Project Started
ದಿಗಂತ್ ಹೊಸ ಸಿನಿಮಾದ ಚಿತ್ರೀಕರಣ ಆರಂಭ


ಎಡಗೈ ಅಪಘಾತಕ್ಕೆ ಕಾರಣ ಚಿತ್ರದ ಚಿತ್ರೀಕರಣ ಶುರು
ಎಡಗೈ ಅಪಘಾತಕ್ಕೆ ಕಾರಣ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಇತ್ತೀಚಿಗೆ ನಾಯಕಿ ಧನು ಹರ್ಷ ಪಾತ್ರದ ಪರಿಚಯದ ಟೀಸರ್ ಕೂಡ ಹೊರ ಬಿದ್ದಿದೆ. ಆದರೆ ಸಿನಿಮಾದ ಚಿತ್ರೀಕರಣ ಕೆಲಸ ಇನ್ನೂ ಶುರು ಆಗಿರಲೇ ಇಲ್ಲ. ಆದರೆ ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಮುಹೂರ್ತ ಮುಗಿದು ಚಿತ್ರೀಕರಣವೂ ಆರಂಭಗೊಂಡಿದೆ.

ಎಡಗೈ ಅಪಘಾತಕ್ಕೆ ಕಾರಣ ಹಾಸ್ಯಭರಿತ ಚಿತ್ರವೇ
ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಹಾಸ್ಯಕ್ಕೆ ಕೊರತೆ ಇಲ್ಲ. ಆದರೆ ಇದು ಡಾರ್ಕ್ ಕಾಮಿಡಿನೇ ಆಗಿದೆ. ಇದರ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಕೂಡ ಇದೆ. ಹೀಗೆ ವಿಶೇಷ ಅನಿಸೋ ಕಂಟೆಂಟ್ ಮತ್ತು ಜಾನರ್​ನೊಂದಿಗೇನೆ ಎಡಗೈ ಅಪಘಾತಕ್ಕೆ ಕಾರಣ ಚಿತ್ರದ ಚಿತ್ರೀಕರಣ ಈಗ ಆರಂಭಿಸಿದೆ.

ಎಡಗೈ ಕಥೆಯ ಹಿಂದೆ ಯಾರೆಲ್ಲ ಇದ್ದಾರೆ ಗೊತ್ತೇ
ದಿಗಂತ್ ಅಭಿನಯದ ಈ ಚಿತ್ರಕ್ಕೆ ಒಳ್ಳೆ ಟೀಮ್ ಕೆಲಸ ಮಾಡುತ್ತಿದೆ. ಯುವ ನಿರ್ಮಾಪಕರಾದ ಡೈರೆಕ್ಟರ್ ಗುರುದತ್ ಗಾಣಿಗ ಮತ್ತು ಮತ್ತೋರ್ವ ಡೈರೆಕ್ಟರ್ ಪ್ರದೀಪ್ ಕಡಕೋಳ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಪ್ರದೀಪ್ ಕಡಕೋಳ್ ಚಿತ್ರದ ಡೈರೆಕ್ಷನ್ ಹೊಣೆಯನ್ನೂ ಹೊತ್ತಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ರಾಹುಲ್ ವಿ.ಪಾರ್ವತಿಕರ್ ಮತ್ತು ಶ್ರೀಪಾದ್ ಜೋಶಿ ಸಂಭಾಷಣೆ ಬರೆದಿದ್ದಾರೆ.

ಬೆಂಗಳೂರಿನ ಸುತ್ತ-ಮುತ್ತ ಸಿನಿಮಾ ಶೂಟಿಂಗ್ ಪ್ಲಾನ್ 
ಬೆಂಗಳೂರಿನ ಸುತ್ತ-ಮುತ್ತಲ ಪ್ರದೇಶದಲ್ಲಿಯೇ ಚಿತ್ರೀಕರಣ ಮಾಡೋ ಪ್ಲಾನ್ ಅನ್ನ ಸಿನಿಮಾ ತಂಡ ಈಗಾಗಲೇ ಮಾಡಿಕೊಂಡಿದ್ದು ಉಳಿದಂತೆ ಈಗಾಗಲೇ ಸಿನಿಮಾ ನಾಯಕ ಮತ್ತು ನಾಯಕಿಯ ಪರಿಚಯ ಮಾಡಿಸೋ ಟೀಸರ್  ಗಮನ ಸೆಳೆದಿವೆ. ಪ್ರೇಕ್ಷಕರಿಗೆ ಈಗಲೇ ಒಂದು ಹೊಸ ಭರವಸೆ ಮೂಡಿಸಿದೆ.
First published: