ಸ್ಯಾಂಡಲ್ವುಡ್ ನಲ್ಲಿ ಧ್ರುವ ಸರ್ಜಾ (Dhruva Sarja Family) ಫ್ಯಾಮಿಲಿ ವಿಶೇಷವಾಗಿಯೇ ಕಾಣುತ್ತದೆ. ಇಡೀ ಫ್ಯಾಮಿಲಿಗೆ (Sarja Family) ಫ್ಯಾಮಿಲಿನೇ ಆಂಜನೇಯನ ಭಕ್ತಯಿಂದ ಎಲ್ಲರ ಹೃದಯ ಗೆಲ್ಲುತ್ತಲೇ ಇದೆ. ಆಂಜನೇಯನ ಪರ ಆರಾಧನೆ ಮಾಡೋ ಸರ್ಜಾ ಫ್ಯಾಮಿಲಿಯ ಯಾರನ್ನೇ ಮಾತನಾಡಿಸಿ ನೋಡಿ, ಎಲ್ಲರ ಮಾತು ಕೂಡ ಜೈ ಆಂಜನೇಯ ಅಂತಲೇ ಕೊನೆಗೊಳ್ಳುತ್ತದೆ. ಸರ್ಜಾ ಫ್ಯಾಮಿಲಿಯನ್ನ ತುಂಬಾ ಗೌರವದಿಂದಲೇ ಕಾಣುವ ಅಭಿಮಾನಿ (Fans) ಬಳಗವೂ ವಾಯುಪುತ್ರನನ್ನ ಆರಾಧಿಸುತ್ತಿದೆ. ಇಂತಹ ಫ್ಯಾಮಿಲಿಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ ತಿಂಗಳೇ ಆಗಿದೆ. ಇಡೀ ತಿಂಗಳು ಇವರದೇ ಅನ್ನೋ ಮಟ್ಟಿಗೆ ವಿಶೇಷ ತಿಂಗಳು ಇದಾಗಿದೆ. ಇದರ ಸುತ್ತದ ಒಂದು ಸ್ಪೆಷಲ್ (Special Story) ಸ್ಟೋರಿ ಇಲ್ಲಿದೆ. ಓದಿ
ಸರ್ಜಾ ಫ್ಯಾಮಿಲಿಗೆ ಅಕ್ಟೋಬರ್ ತಿಂಗಳು ತುಂಬಾ ಸ್ಪೆಷಲ್
ಸರ್ಜಾ ಫ್ಯಾಮಿಲಿಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ ತಿಂಗಳೇ ಆಗಿದೆ. ಈ ಫ್ಯಾಮಿಲಿಯಲ್ಲಿ ಈ ತಿಂಗಳು ಹಲವು ಖುಷಿಗಳ ಸೆಲೆಬ್ರೇಷನ್ ಕೂಡ ವಿಶೇಷವಾಗಿಯೇ ಇರುತ್ತದೆ. ಇದಕ್ಕೆ ಒಂದು ತಾಜಾ ಉದಾಹರಣೆ ಏನೂ? ಅಂತ ನೀವು ಕೇಳಿದ್ರೆ ಅದನ್ನ ಒಂದೊಂದಾಗಿಯೆ ಹೇಳ್ತಿವಿ ನೋಡಿ.
ಅಕ್ಟೋಬರ್-2 ಸರ್ಜಾ ಫ್ಯಾಮಿಲಿಗೆ ಸೇರ್ಪಡೆಯಾದ ವಿಶೇಷ ದಿನ
ಅಕ್ಟೋಬರ್-02 ರಂದು ಈ ಫ್ಯಾಮಿಲಿಗೆ ಹ್ಯಾಪಿ ದಿನ. ಈ ದಿನ ಯಾಕೆ ಅಂತ ಹೇಳೋದು ಬೇಡ. ಈ ದಿನ ಧ್ರುವ ಸರ್ಜಾ ಮಗಳು ಹುಟ್ಟಿದ್ದಾಳೆ. ಪ್ರೇರಣಾ ಮತ್ತು ಧ್ರುವ ಸರ್ಜಾ ಪುತ್ರಿ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋದೇ ಈಗ ವಿಶೇಷ.
ಅಕ್ಟೋಬರ್ 6 ಯಾರ ಜನ್ಮ ದಿನ ಹೇಳಿ ನೋಡೋಣ
ಅಕ್ಟೋಬರ್ ತಿಂಗಳಲ್ಲಿ ಬರೋ 6 ನೇ ತಾರೀಖು ಕೂಡ ಸರ್ಜಾ ಫ್ಯಾಮಿಲಿಯ ಮತ್ತೊಂದು ವಿಶೇಷ ದಿನವೇ ಆಗಿದೆ. ಈ ದಿನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಅಲ್ಲಿಗೆ ಸರ್ಜಾ ಫ್ಯಾಮಿಲಿಗೂ ಈ ದಿನ ಮತ್ತೊಂದು ಸ್ಪೆಷಲ್ ಡೇ ಅಂತಲೇ ಹೇಳಬಹುದು ಅಲ್ವೇ?
ಇದನ್ನೂ ಓದಿ: Vedha Film Poster: ಇದು ಶಿವಣ್ಣನ ವೇದರೂಪ! ರಿವೀಲ್ ಆಯಿತು ಅಸಲಿ ಸತ್ಯ
ಅಕ್ಟೋಬರ್ ತಿಂಗಳ 17 ನೇ ತಾರೀಖು ಯಾಕ್ ಸ್ಪೆಷಲ್ ಹೇಳಿ?
ಹೌದು, ಈ ದಿನ ಧ್ರುವ ಸರ್ಜಾ ಬ್ರದರ್ ಚಿರಂಜೀವಿ ಸರ್ಜಾ ಹುಟ್ಟಿದ ದಿನ ಆಗಿದೆ. ಈ ದಿನವೇ ಈ ವರ್ಷ ಮೇಘನಾ ರಾಜ್ ಅಭಿನಯದ ಚಿತ್ರದ ಟೈಟಲ್ ರಿವೀಲ್ ಕೂಡ ಆಗುತ್ತಿದೆ.
ಪನ್ನಗ ಭರಣ ನಿರ್ಮಾಣದ ಮೊದಲ ಸಿನಿಮಾ ಇದಾಗಿದ್ದು, ಗೆಳೆಯ ಚಿರುಗಾಗಿಯೇ ಪನ್ನಗ ಭರಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಯಾರಿ ನಡೆದಿದೆ.
ಅಕ್ಟೋಬರ್-22 ರಂದು ಯಾರು ಹುಟ್ಟಿರೋದು ಗೊತ್ತೇ?
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಕೂಡ ಇದೇ ಅಕ್ಟೋಬರ್ ತಿಂಗಳಲ್ಲಿಯೇ ಹುಟ್ಟಿರೋದು.ಈ ತಿಂಗಳ 22 ರಂದು ರಾಯನ್ ರಾಜ್ ಜನ್ಮ ದಿನವನ್ನೂ ಆಚರಿಸಲಾಗುತ್ತದೆ. ಆದರೆ ಈ ಸಲ ಆ ಜನ್ಮ ದಿನ ಆಚರಣೆ ಇರೋದಿಲ್ಲ ಅನಿಸುತ್ತದೆ.
ಧ್ರುವ ಸರ್ಜಾ ಈ ಸಲ ತಮ್ಮ ಜನ್ಮ ದಿನ ಆಚರಿಸಿಕೊಳ್ಳೋದಿಲ್ಲ
ಹೌದು, ಧ್ರುವ ಸರ್ಜಾ ಈ ವರ್ಷ ಜನ್ಮ ದಿನ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಇತ್ತೀಚಿಗೆ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀ ಅವರು ನಿಧನರಾದರು.
ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾವುದೇ ರೀತಿ ಸಂಭ್ರಮ ಮಾಡೋದು ಬೇಡ್ವೆ ಬೇಡ ಅಂತಲೇ ಧ್ರುವ ಸರ್ಜಾ ನಿರ್ಧರಿಸಿದ್ದಾರೆ. ಪುನಿತ್ ಅಗಲಿಕೆನೂ ಇಡೀ ಇಂಡಸ್ಟ್ರೀಯನ್ನ ಬಾದಿಸುತ್ತಲೇ ಇದೆ.
ಇದನ್ನೂ ಓದಿ: Adipurush Teaser ಕಾರ್ಟೂನ್ ಥರ ಇದ್ಯಂತೆ, ಗ್ರಾಫಿಕ್ಸ್ ಕಂಡು ಗೇಲಿ ಮಾಡಿದ ನೆಟ್ಟಿಗರು!
ಇದರಿಂದ ಅನೇಕರು ತಮ್ಮ ಜನ್ಮ ದಿನ ಆಚರಿಸಿಕೊಂಡೇ ಇಲ್ಲ. ಅದರಂತೆ ಈ ಒಂದು ಕಾರಣಕ್ಕೂ ಧ್ರುವ ಸರ್ಜಾ ತಮ್ಮ ಜನ್ಮ ದಿನವನ್ನ ಈ ವರ್ಷ ಆಚರಿಕೊಳ್ತಾ ಇಲ್ಲ.
ಇದರ ಹೊರತಾಗಿ ಅಕ್ಟೋಬರ್ ತಿಂಗಳು ಒಂದು ರೀತಿ ಇಡೀ ಸರ್ಜಾ ಫ್ಯಾಮಿಲಿಯ ತಿಂಗಳೇ ಆಗಿದೆ ಅಂದ್ರೆ ತಪ್ಪಿಲ್ಲ ಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ