ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ (Action Prince Dhruva Sarja) ಸರ್ಜಾ ಈಗ ಮತ್ತೊಂದು ಸಾಹಸ ಮಾಡಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ KD ಚಿತ್ರಕ್ಕಾಗಿಯೇ ಈ ಒಂದು ಸಾಹಸವನ್ನ (Dhruva Sarja New Look) ಪ್ರಿನ್ಸ್ ಧ್ರುವ ಸರ್ಜಾ ಮಾಡಿದ್ದಾರೆ. ಕೇವಲ 23 ದಿನಗಳಲ್ಲಿಯೇ ಈ ಒಂದು ಸಾಧನೆ ಮಾಡಿದ್ದಾರೆ. ಆದರೆ ಇದು ಅಷ್ಟು ಸುಲಭದ ಕೆಲಸವೇ ಅಲ್ಲ. ಆದರೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Director Jogi Prem) ಇದನ್ನ ಸಾಧಿಸಿದ್ದಾರೆ. ಇದಕ್ಕಾಗಿಯೇ ಕಠಿಣ ಡಯೆಟ್ ಕೂಡ ಮಾಡಿದ್ದಾರೆ. ಎಷ್ಟು ಬೇಕೋ ಅಷ್ಟು ವರ್ಕೌಟ್ (Dhruva Sarja Workout) ಕೂಡ ಮಾಡಿದ್ದಾರೆ. ಹಾಗಾಗಿಯೇ ಧ್ರುವ ಸರ್ಜಾ ರೂಪ ಈಗ ಕಂಪ್ಲೀಟ್ ಬದಲಾಗಿದೆ. ಅದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
18 ಕೆ.ಜಿ.ತೂಕ-ಕೇವಲ 23 ದಿನ-ಧ್ರುವ ರೂಪ ಬದಲು!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದೇಹದ ತೂಕದ ಮೇಲೆ ಮತ್ತೊಮ್ಮೆ ಪ್ರಯೋಗ ಮಾಡಿದ್ದಾರೆ. ಇಲ್ಲಿವರೆಗೂ ದೈತ್ಯ ದೇಹವನ್ನೆ ಮೆಂಟೇನ್ ಮಾಡಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ದೇಹದ ತೂಕ ಇಳಿಸಿಕೊಂಡಿದ್ದಾರೆ.
ದೇಹದ ತೂಕ ಇಳಿಸಿಕೊಳ್ಳುವ ಕಠಿಣ ಡಯೆಟ್ ಫಾಲೋ ಮಾಡಿದ್ದಾರೆ. ಎಷ್ಟು ಬೇಕೋ ಅಷ್ಟು ವರ್ಕೌಟ್ ಅನ್ನೂ ಮುಂದುವರೆಸಿದ್ದಾರೆ. ಆದ್ದರಿಂದಲೇ ದೇಹದ ಒಟ್ಟು ತೂಕದಲ್ಲಿ 18 ಕೆಜಿ ತೂಕವನ್ನ ಇಳಿಸಿದ್ದಾರೆ.
ಜೋಗಿ ಪ್ರೇಮ್ KD ಚಿತ್ರಕ್ಕಾಗಿಯೇ ದೇಹದ ತೂಕ ಇಳಿಕೆ
ಜೋಗಿ ಪ್ರೇಮ್ ನಿರ್ದೇಶನದ KD ಚಿತ್ರಕ್ಕಾಗಿಯೇ ಆ್ಯಕ್ಷನ್ ಪ್ರಿನ್ಸ್ ದೇಹದ ವೇಟ್ ಲಾಸ್ ಮಾಡಿಕೊಂಡಿದ್ದಾರೆ. ಕೇವಲ 23 ದಿನಗಳಲ್ಲಿ ಈ ಒಂದು ಬದಲಾವಣೆಯನ್ನ ಧ್ರುವ ಸರ್ಜಾ ಸಾಧಿಸಿದ್ದಾರೆ.
KD ಚಿತ್ರಕ್ಕೆ ರೆಟ್ರೋ ಟಚ್ ಕೂಡ ಇದೆ. ಇದರಿಂದಲೋ ಏನೋ, ಯುವ ಧ್ರುವ ಸರ್ಜಾ ಪಾತ್ರಕ್ಕಾಗಿಯೇ ಡೈರೆಕ್ಟರ್ ಜೋಗಿ ಪ್ರೇಮ್ ಈ ಒಂದು ಪ್ಲಾನ್ ಮಾಡಿದ್ದಾರೋ ಏನೋ.
ಸದ್ಯಕ್ಕೆ ಈ ಬಗ್ಗೆ ಪ್ರೇಮ್ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ಧ್ರುವ ಸರ್ಜಾ ದೇಹದ ತೂಕವನ್ನ 18 ಕೆಜಿ ಇಳಿಸಿಕೊಂಡು ಲೀನ್ ಆಗಿಯೇ ಕಂಗೊಳಿಸುತ್ತಿದ್ದಾರೆ.
ಭಾರೀ ಬದಲಾವಣೆ ಫೋಟೋವನ್ನ ಶೇರ್ ಮಾಡಿದ ಪ್ರಿನ್ಸ್!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಟ್ವಿಟರ್ ಪೇಜ್ ನಲ್ಲಿ ದೇಹದ ತೂಕ ಇಳಿಸಿರೋ ಫೋಟೋ ಹಂಚಿಕೊಂಡಿದ್ದಾರೆ. ಡೈರೆಕ್ಟರ್ ಜೋಗಿ ಪ್ರೇಮ್ ಸಹ ಇದೇ ಫೋಟೋವನ್ನ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಧ್ರುವ ಸರ್ಜಾ ದೇಹದ ಹೆವಿ ಆಗಿಯೇ ಇತ್ತು.
ಪಕ್ಕದಲ್ಲಿ ಇರೋ ಇನ್ನೂ ಒಂದು ಫೋಟೋದಲ್ಲಿ ಧ್ರುವ ಸರ್ಜಾ ಲೀನ್ ಬಾಡಿಯಲ್ಲಿಯೇ ಹೊಳೆಯುತ್ತಿದ್ದಾರೆ. ಹೀಗೆ KD ಚಿತ್ರಕ್ಕಾಗಿಯೇ ಧ್ರುವ ಸರ್ಜಾ ಚೇಂಜ್ ಆಗಿದ್ದಾರೆ.
KD ಯುದ್ಧದ ಕುರುಕ್ಷೇತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ!
KD ಚಿತ್ರಕ್ಕಾಗಿಯೇ ಧ್ರುವ ಸರ್ಜಾ ಪಕ್ಕಾ ರೆಡಿ ಆಗಿದ್ದಾರೆ. ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ರೆಡಿ ಇದ್ದಾರೆ. ಹಾಗಾಗಿಯೇ ದೇಹದ ತೂಕ ಇಳಿಸಿಕೊಂಡಿರೊ ಫೋಟೋದ ಜೊತೆಗೆ ಜೋಗಿ ಪ್ರೇಮ್ ಶೂಟಿಂಗ್ ವಿಷಯವನ್ನ ಕೂಡ ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಇನ್ನೇನೂ KD ಚಿತ್ರದ ಬ್ಯಾಟಲ್ ಫೀಲ್ಡ್ಗೆ ಇಳಿಯಲಿದ್ದಾರೆ. ಇನ್ನೇನೂ ಎಲ್ಲವೂ ರೆಡಿ ಇದೆ. ವಾರ್ ಶುರು ಅನ್ನೋ ಅರ್ಥದಲ್ಲಿಯೆ ಜೋಗಿ ಪ್ರೇಮ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: RRR Song: ಉಕ್ರೇನ್ ರಾಷ್ಟ್ರಪತಿ ಭವನದಲ್ಲಿ ಶೂಟಿಂಗ್, 18 ಟೇಕ್, 80ಕ್ಕೂ ಹೆಚ್ಚು ಸ್ಟೆಪ್ಸ್! ಇದು ನಾಟು ನಾಟು ಹಾಡಿನ ಗುಟ್ಟು!
ಒಟ್ಟಾರೆ, KD ಸಿನಿಮಾಕ್ಕಾಗಿಯೇ ಧ್ರುವ ಸರ್ಜಾ ಕಂಪ್ಲೀಟ್ ಬದಲಾಗಿದ್ದಾರೆ. ಇದೇ KD ಚಿತ್ರಕ್ಕಾಗಿಯೇ ಜೋಗಿ ಪ್ರೇಮ್ ಕೂಡ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಬಗ್ಗೆ ಇಷ್ಟೇ ಮಾಹಿತಿ ಇದೆ. ಅಪ್ಡೇಟ್ಸ್ ಕೊಡ್ತಾಯಿರ್ತಿವಿ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ