Dhananjaya: ಸೂಲಿಬೆಲೆ ವಿವಾದ: ಸುಂದರ ಕವಿತೆ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ ಡಾಲಿ ಧನಂಜಯ್

Dhananjaya: ಜನರು ಜಾತಿ, ಧರ್ಮ ಬಿಟ್ಟು ಒಂದಾಗಿ ಕೊರೋನಾ ವೈರಸ್​ನಿಂದಾಗುತ್ತಿರುವ ದುಷ್ಪರಿಣಾಮವನ್ನು  ಎದುರಿಸುತ್ತಿರುವಾಗ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಷಯವಾಗಿ ಟ್ವೀಟ್​ ಮಾಡಿದ್ದು, ಅದರಲ್ಲಿ ಧರ್ಮವನ್ನು ಮಧ್ಯೆ ತಂದಿರುವಂತಿತ್ತು. ಇದಕ್ಕೆ ಡಾಲಿ ಧನಂಜಯ್​ ಏನಾದರೂ ಆಗು ಮೊದಲು ಮಾನವನಾಗು ಎಂದು ರೀಟ್ವೀಟ್​ನಲ್ಲಿ ಉತ್ತರ ಕೊಟ್ಟಿದ್ದರು. ಇದು ಸಖತ್ ವೈರಲ್​ ಆಗಿತ್ತು.

ಹಳ್ಳಿಯಲ್ಲಿ, ತೋಟದಲ್ಲಿ, ತಂಪಾದ ಗಾಳೀಲಿ ತಿರುಗಾಡ್ಕೊಂಡು, ತೆಂಗಿನ ಮರಗಳನ್ನು ಸುತ್ತಾಡ್ಕೊಂಡು ಇದ್ರಂತೆ. ಮಾವಿನ ಹಣ್ಣು, ಹಲಸಿನ ಹಣ್ಣು ಎಲ್ಲ ಚೆನ್ನಾಗ್ ತಿಂದ್ರಂತೆ.

ಹಳ್ಳಿಯಲ್ಲಿ, ತೋಟದಲ್ಲಿ, ತಂಪಾದ ಗಾಳೀಲಿ ತಿರುಗಾಡ್ಕೊಂಡು, ತೆಂಗಿನ ಮರಗಳನ್ನು ಸುತ್ತಾಡ್ಕೊಂಡು ಇದ್ರಂತೆ. ಮಾವಿನ ಹಣ್ಣು, ಹಲಸಿನ ಹಣ್ಣು ಎಲ್ಲ ಚೆನ್ನಾಗ್ ತಿಂದ್ರಂತೆ.

  • Share this:
ಕೊರೋನಾ ವೈರಸ್​ ಭೀತಿ ಕುರಿತಂತೆ ಟ್ವೀಟ್​ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಮಾನವೀಯತೆಯ ಪಾಠ ಮಾಡಿದ್ದ ನಟ ಡಾಲಿ ಧನಂಜಯ್​ ಅವರನ್ನು ಸಾಕಷ್ಟು ಮಂದಿ ಟೀಕಿಸಿದ್ದರು. ಜೊತೆಗೆ ಅವರಿಗೆ ಪ್ರಶ್ನೆಗಳನ್ನೂ ಹಾಕಿದ್ದರು. 

ಜನರು ಜಾತಿ, ಧರ್ಮ ಬಿಟ್ಟು ಒಂದಾಗಿ ಕೊರೋನಾ ವೈರಸ್​ನಿಂದಾಗುತ್ತಿರುವ ದುಷ್ಪರಿಣಾಮವನ್ನು  ಎದುರಿಸುತ್ತಿರುವಾಗ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಷಯವಾಗಿ ಟ್ವೀಟ್​ ಮಾಡಿದ್ದು, ಅದರಲ್ಲಿ ಧರ್ಮವನ್ನು ಮಧ್ಯೆ ತಂದಿರುವಂತಿತ್ತು. ಇದಕ್ಕೆ ಡಾಲಿ ಧನಂಜಯ್​ ಏನಾದರೂ ಆಗು ಮೊದಲು ಮಾನವನಾಗು ಎಂದು ರೀಟ್ವೀಟ್​ನಲ್ಲಿ ಉತ್ತರ ಕೊಟ್ಟಿದ್ದರು. ಇದು ಸಖತ್ ವೈರಲ್​ ಆಗಿತ್ತು.

Daali DhananJaya and Chakravathi SUlibele Tweet
ಡಾಲಿ ಧನಂಜಯ್​ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್​


ಡಾಲಿ ಧನಂಜಯ್​ ಟ್ವೀಟ್ ಮಾಡಿದ ನಂತರ ತುಂಬಾ ಮಂದಿ ಟೀಕಿಸಿದ್ದರು. ಜೊತೆಗೆ ಪ್ರಶ್ನೆಗಳನ್ನೂ ಕೇಳಿದ್ದರು. ಇದೇ ವಿಷಯವಾಗಿ ಈಗ ಡಾಲಿ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.

Love you all. Take care❤️



'ಕೊರೋನಾದಿಂದಾಗಿ ಇಟಲಿಯಲ್ಲಿ ಎದುರಾಗಿರುವ ದುಸ್ಥಿತಿಯನ್ನ ವ್ಯಂಗ್ಯ ಮಾಡಿದ್ದು ತಪ್ಪು. ಇದೇ ಕಾರಣಕ್ಕೆ ನಾನು ಆ ಟ್ವೀಟ್​ ಮಾಡಿದ್ದು. ಆದರೆ ಅದಕ್ಕೆ ಬೇರೆ ಬಣ್ಣ ಕಟ್ಟಿ ಅದನ್ನು ದಾರಿ ತಪ್ಪಿಸಲಾಗುತ್ತಿದೆ. ಜೊತೆಗೆ ನನ್ನ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ನನ್ನ ಊರು, ನೆಲದ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದರೆ ಅದರ ವಿರುದ್ಧ ಹೋರಾಟ ಮಾಡುವ ಗುಣ ನನ್ನಲ್ಲಿದೆ' ಎಂದು ಟೀಕೆ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ ಡಾಲಿ.

ಇದನ್ನೂ ಓದಿ: ನಿಖಿಲ್​ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ಜೊತೆ ತೆಗೆದ​ ಸೆಲ್ಫಿಗೂ ತಟ್ಟಿದ ಕೊರೋನಾ ಬಿಸಿ​..!

ಅಲ್ಲದೆ  ಎರಡನೇ ವಿಡಿಯೋದಲ್ಲಿ ಕಡೆಗೆ ಬಹಳ ಸುಂದರವಾಗಿ ಕವಿತೆಯನ್ನೂ ಓದಿದ್ದಾರೆ. ಅದರಲ್ಲೂ ಜಗತ್ತು ಹೇಗಿರಬೇಕು ಅಂತ ಅವರ ಆಸೆಯನ್ನು ಈ ಕವಿತೆ ಮೂಲಕ ವ್ಯಕ್ತಪಡಿಸಿದ್ದಾರೆ.

'ಇಡೀ ಜಗವೇ ಒಂದ್ ಹಳ್ಳಿ
ನಗ್ತಾ ಹೋದ್ರೆ ಎನ್ ಚೆಂದ
ಅಲ್ಲಲ್ಲೇ ಸಣ್ಣ ಮುನಿಸು ಅಲ್ಲಲ್ಲೇ ಸಣ್ಣ ಜಗಳ ಅಲ್ಲೇ ಪಂಚಾಯಿತಿ
ಉರ್ ಊರ ಮಧ್ಯೆ ತಂತಿ ಬೇಲಿಯೇ ಬೇಕಿಲ್ಲ
ಮದ್ದಿಲ್ಲ ಗುಂಡಿಲ್ಲ ಯುದ್ಧದ ಸುಳಿವಿಲ್ಲ ಮದ್ದಳಿಯ ಸದ್ದೆ ಜಗವೆಲ್ಲ
ಜೀವ ಜೀವದ ಬಂಧ ತುಂಬಾ ದೊಡ್ದದು ಕಂದ
ಒಲವನ್ನು ಹಡೆದ ಮಣ್ಣ ಗುಣದಲ್ಲೆ ಬದುಕು ಚೆಂದ....'

2/2 pic.twitter.com/885x6ldkBt



Pooja Hegde: ಬಾಲಿವುಡ್​ನಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಸಿಕ್ತು ಕೋಟಿ ಕೋಟಿ ಬಂಪರ್​ ಆಫರ್​


 

 
First published: