Dhananjaya Movie: ಪೊಲೀಸ್ ಆಫೀಸರ್ ಆಗಿ ಡಾಲಿ! ಹೊಯ್ಸಳ ಹೊಸ ಅಪ್ಡೇಟ್ ಇಲ್ಲಿದೆ

ಪೊಲೀಸ್ ಆಫೀಸರ್ ಸುತ್ತ ಹೊಯ್ಸಳ ಚಿತ್ರದ ಕಥೆ!

ಪೊಲೀಸ್ ಆಫೀಸರ್ ಸುತ್ತ ಹೊಯ್ಸಳ ಚಿತ್ರದ ಕಥೆ!

ಹೊಯ್ಸಳ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್​ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೊಯ್ಸಳ ಚಿತ್ರ ಝಲಕ್ ರಿವೀಲ್ ಆಗಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಡಾಲಿ ಧನಂಜಯ್ ಅಭಿನಯದ (Hoysala Movie) ಹೊಯ್ಸಳ ಚಿತ್ರದ ಸದ್ದು ಜೋರಾಗಿದೆ. ಮೊನ್ನೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮೊನ್ನೆ ಡಾಲಿ ಧನಂಜಯ್ (Daali Dhananjaya) ನಂಜನಗೂಡಿನಲ್ಲಿ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಚಿತ್ರದ ಪೋಸ್ಟರ್​ಗಳು ಭರವಸೆ ಮೂಡಿಸಿವೆ. ಚಿತ್ರದ ಟೀಸರ್ ಆಗಲಿ, ಟ್ರೈಲರ್ (Hoysala Trailer) ಆಗಲಿ ಇನ್ನೂ ಹೊರ ಬಿದ್ದಿಲ್ಲ. ಆದರೆ ಈಗ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಒಂದು ವಿಶೇಷ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಇದೇ ಫೆಬ್ರವರಿ-05 ರಂದು ಚಿತ್ರದ ಒಂದು ಸ್ಪೆಷಲ್ ವಿಷಯವನ್ನ ರಿವೀಲ್ ಮಾಡುತ್ತೇವೆ ಅನ್ನೋದನ್ನು ಹೇಳಿದ್ದಾರೆ. ಆದರೆ ಏನು ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ ನೋಡಿ.


ಹೊಯ್ಸಳ ಚಿತ್ರದ ಸ್ಪೆಷಲ್ ಮ್ಯಾಟರ್ ಏನು ಗೊತ್ತೇ?


ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರ ಭರವಸೆಯ ಸಿನಿಮಾ ಆಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡು ವಿಶೇಷವಾಗಿಯೇ ಗಮನ ಸೆಳೆದಿದ್ದಾರೆ.


Kannada Actor Dhananjaya Movie Hoysala Latest Updates
ಹೊಯ್ಸಳ ಚಿತ್ರದ ಸ್ಪೆಷಲ್ ಮ್ಯಾಟರ್ ಏನು ಗೊತ್ತೇ?


ಡಾಲಿ ಧನಂಜಯ್ ಇಲ್ಲಿವರೆಗೂ ಎಲ್ಲ ರೀತಿ ಪಾತ್ರ ಮಾಡಿದ್ದರು. ಪೊಲೀಸ್ ಪಾತ್ರ ಒಂದು ಈಗ ಹೆಚ್ಚು ವಿಶೇಷವಾಗಿಯೇ ಕಾಣಿಸುತ್ತಿದೆ. ಚಿತ್ರದ ಕಥೆ ಕೂಡ ಸ್ಪೆಷಲ್ ಆಗಿದೆ. ಚಿತ್ರದ ನಿರ್ದೇಶಕ ವಿಜಯ್. ಎನ್ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರನ್ನ ವಿಭಿನ್ನವಾಗಿಯೇ ತೋರಿಸಿದ್ದಾರೆ.




ಪೊಲೀಸ್ ಆಫೀಸರ್ ಸುತ್ತ ಹೊಯ್ಸಳ ಚಿತ್ರದ ಕಥೆ!
ಹೊಯ್ಸಳ ಚಿತ್ರದಲ್ಲಿ ಡಾಲಿ ಧನಂಜಯ್ ಒಬ್ಬ ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಗುರುದೇವ ಹೆಸರಿನ ಪೊಲೀಸ್ ಆಫೀಸರ್ ಆಗಿ ಡಾಲಿ ಧನಂಜಯ್ ಇಲ್ಲಿ ಅಬ್ಬರಿಸಿದ್ದಾರೆ.


ಹೊಯ್ಸಳ ಸಿನಿಮಾ ಪೊಲೀಸ್ ಆಫೀಸರ್ ಒಬ್ಬರ ಲೈಫ್​​ಲ್ಲಿ ನಡೆದ ರಿಯಲ್ ಘಟನೆಯನ್ನೆ ಆಧರಿಸಿದೆ. ಹಾಗೇನೆ ಇಡೀ ಸಿನಿಮಾದ ಕಥೆ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ಚಿತ್ರೀಕರಿಸಲಾಗಿದೆ.


ಬೆಳಗಾವಿಯಲ್ಲಿ ಹೊಯ್ಸಳ ಚಿತ್ರವನ್ನ ಚಿತ್ರೀಕರಿಸಿದ್ದೇಕೆ?
ಹೊಯ್ಸಳ ಕಥೆ ಬೆಳಗಾವಿಯಲ್ಲಿಯೇ ಯಾಕೆ ಶೂಟ್ ಆಗಿದೆ? ಈ ಒಂದು ಪ್ರಶ್ನೆ ಸಹಜವೇ ಬಿಡಿ, ಯಾಕೆಂದ್ರೆ ಚಿತ್ರದ ಬಹುತೇಕ ಕಥೆ ಬೆಳಗಾವಿ ಬ್ಯಾಗ್ರೌಂಡ್​ ಅಲ್ಲಿ ಇದೆ. ಬೆಳಗಾವಿಯ ಸುತ್ತ-ಮುತ್ತಲ ಪ್ರದೇಶದಲ್ಲಿ ಹೊಯ್ಸಳ ಚಿತ್ರವನ್ನ ತೆಗೆಯಲಾಗಿದೆ.


ಹೊಯ್ಸಳ ಚಿತ್ರದಲ್ಲಿ ಗಡಿ ವಿಷಯ ಇದೆಯೇ ಅನ್ನೋ ಪ್ರಶ್ನೆ ಕೂಡ ಇದೆ. ಆದರೆ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೂ ಮಾಹಿತಿ ಇಲ್ಲವೇ ಇಲ್ಲ. ಸಿನಿಮಾ ತಂಡವೂ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಈಗ ಸಿನಿಮಾ ರಿಲೀಸ್ ದಿನಗಳು ಸನಿಹಕೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯ ರಿವೀಲ್ ಆದ್ರು ಆಗಬಹುದೇನೋ?



ಮಾರ್ಚ್-30ಕ್ಕೆ ಹೊಯ್ಸಳ ಚಿತ್ರ ಎಲ್ಲೆಡೆ ರಿಲೀಸ್
ಹೊಯ್ಸಳ ಇದೇ ಮಾರ್ಚ್-30 ಕ್ಕೆ ರಿಲೀಸ್ ಆಗುತ್ತಿದೆ. ಈ ವಿಷಯವನ್ನ ಚಿತ್ರ ತಂಡ ಈಗಾಗಲೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಮಾರ್ಚ್​-30 ರಂದು ನಮ್ಮ ಚಿತ್ರ ರಿಲೀಸ್ ಅಂತಲೇ ಪೋಸ್ಟರ್ ಮೂಲಕವೇ ತಿಳಿಸಿದೆ.


ಹೊಯ್ಸಳ ಚಿತ್ರದಲ್ಲಿ ಡಾಲಿ ಧನಂಜಯ್ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ. ರಿಯಲ್ ಪೊಲೀಸ್ ರೀತಿಯಲ್ಲಿಯೆ ಕಾಣಿಸಿಕೊಳ್ಳುತ್ತಿದ್ದಾರೆ. ಧನಂಜಯ್ ನಟನೆಯ ಈ ಚಿತ್ರಕ್ಕೆ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ ಬಂಡವಾಳ ಹೂಡಿದ್ದಾರೆ.


Kannada Actor Dhananjaya Movie Hoysala Latest Updates
ಬೆಳಗಾವಿಯಲ್ಲಿ ಹೊಯ್ಸಳ ಚಿತ್ರವನ್ನ ಚಿತ್ರೀಕರಿಸಿದ್ದೇಕೆ?


ಫೆಬ್ರವರಿ-05 ರಂದು ಚಿತ್ರದ ಸ್ಪೆಷಲ್ ಮ್ಯಾಟರ್ ರಿವೀಲ್
ಹೊಯ್ಸಳ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೊಯ್ಸಳ ಚಿತ್ರದ ಝಲಕ್ ರಿವೀಲ್ ಆಗಿದೆ.


ಇದನ್ನೂ ಓದಿ: Kichcha Sudeepa: ಸುದೀಪ್ ನೆಕ್ಸ್ಟ್​ ಮೂವಿ ಯಾವುದು? ಕಿಚ್ಚನ ತಮಿಳು ಸಿನಿಮಾ ಸೆಟ್ಟೇರುತ್ತಾ?


ಇದರ ಜೊತೆಗೆ ಫೆಬ್ರವರಿ-05 ರಂದು ಬೆಳಗ್ಗೆ 9:27 ಕ್ಕೆ ಹೊಯ್ಸಳ Activating ಅಂತಲೇ ಬರೆದುಕೊಂಡಿದ್ದಾರೆ. ಆದರೆ ಈ ಒಂದು ವಿಶೇಷ ಟೈಮ್​​ನಲ್ಲಿ ಏನ್ ರಿವೀಲ್ ಆಗುತ್ತದೆ ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ. ಇದರ ಹೊರತಾಗಿ ಕಾರ್ತಿಕ್ ಗೌಡ ಹಂಚಿಕೊಂಡ ವಿಡಿಯೋ ಚಿತ್ರದ ಒಂದು ಮಹತ್ವದ ದೃಶ್ಯದ ಝಲಕ್ ಕೊಟ್ಟಂತೆ ಕಾಣುತ್ತಿದೆ.

First published: