• Home
  • »
  • News
  • »
  • entertainment
  • »
  • Kantara Daali Dhananjaya Review: ಧನಂಜಯ್ ಮನದಲ್ಲಿ ಸಿಂಗಾರಿಯ ಕನವರಿಕೆ! ರಿಷಬ್​ಗೆ ನಾನು ಫುಲ್ ಫ್ಯಾನು ಎಂದ ಡಾಲಿ

Kantara Daali Dhananjaya Review: ಧನಂಜಯ್ ಮನದಲ್ಲಿ ಸಿಂಗಾರಿಯ ಕನವರಿಕೆ! ರಿಷಬ್​ಗೆ ನಾನು ಫುಲ್ ಫ್ಯಾನು ಎಂದ ಡಾಲಿ

ಕಾಂತಾರ ಕಂಡು ನಮ್ಮ ಹೆಮ್ಮೆ ಎಂದು ಹೇಳಿದ್ಯಾಕೆ?

ಕಾಂತಾರ ಕಂಡು ನಮ್ಮ ಹೆಮ್ಮೆ ಎಂದು ಹೇಳಿದ್ಯಾಕೆ?

ಗೆಳತಿ ಸಪ್ತಮಿ ಮುಗ್ಧತೆ ಇಷ್ಟ ಆಯಿತು. ನಟ-ನಿರ್ದೇಶಕ ರಿಷಬ್ ಶೆಟ್ಟಿ ಒಳಗಿನ ಬರಹಗಾರ. ಈಗ ನಾನು ರಿಷಬ್ ಶೆಟ್ಟಿ ಅಭಿಮಾನಿಯಾದೆ. ಕಾಂತಾರ ಕನ್ನಡದ ಹೆಮ್ಮೆ, ಕರ್ನಾಟಕದ ಹೆಮ್ಮೆ ಎಂದಿದ್ದಾರೆ ಧನಂಜಯ್.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kannada Kantra) ಎಲ್ಲರ ಹೃದಯ ಗೆದ್ದಿದೆ. ಅತಿ ದೊಡ್ಡಮಟ್ಟದಲ್ಲಿ ಗೆಲ್ತಿವಿ ಅನ್ನೋ ಭರವಸೆಯು ಇರಲಿಲ್ಲ. ಸಿನಿಮಾ ಚೆನ್ನಾಗಿ ಆಗಿದೆ. ಇದು ಜನರನ್ನ ತಲುಪತ್ತದೆ ಎಂಬ ನಂಬಿಕೆ (Kantara) ಕಾಂತಾರ ತಂಡಕ್ಕೆ ಇತ್ತು. ಆದರೆ ಅದೃಷ್ಟ ನೋಡಿ ಹೇಗಿದೆ? ಇಡೀ ಕನ್ನಡದ ನಾಡಿನ ಜನರಲ್ಲಿ ಈಗ ಕಾಂತಾರ ಸಿನಿಮಾದ ಮಾತು ಇದೆ. ಎಲ್ಲಿ ನೋಡಿದ್ರೂ ಅಲ್ಲಿ ಕಾಂತಾರ (Kantra Talk) ಟಾಕ್ ಶುರು ಆಗಿದೆ. ಸಿನಿಮಾ ಬಗ್ಗೆ ಸುಮ್ನೆ ಮಾತನಾಡದೇ (Theater) ಥಿಯೇಟರ್​​ಗೆ ಹೋಗಿ ಚಿತ್ರವನ್ನೂ ನೋಡ್ತಾಯಿದ್ದಾರೆ. ದೀಪಾವಳಿಯ ಹಬ್ಬವನ್ನ ಲೆಕ್ಕಿಸದೇನೆ ಸಿನಿಮಾ ನೋಡ್ತಿರೋದು ಕಾಂತಾರದ ಯಶಸ್ಸಿಗೆ ಹಿಡಿದ ಕೈಗನ್ನಡಿನೇ ಆಗಿದೆ. ಕನ್ನಡದ ಯಶಸ್ವಿ ಸಿನಿಮಾವನ್ನ ಈಗ ಕನ್ನಡದ ಡಾನ್ ಜಯರಾಜ್ ನೋಡಿದ್ದಾರೆ.


ಹೆಡ್ ಬುಷ್ ಮೂಲಕ ಕಾಂತಾರ ಚಿತ್ರದ ಎದುರು ಬಂದ ಡಾನ್ ಡಾಲಿ ಜಯರಾಜ್ ಕೂಡ ಕಾಂಪಿಟೇಟರ್ ಕಾಂತಾರ ನೋಡಿ ಥ್ರಿಲ್ ಆಗಿದ್ದಾರೆ. ಮನಸಾರೆ ಕಾಂತಾರ ಸಿನಿಮಾ ನಮ್ಮ ಹೆಮ್ಮೆ ಅಂತಲೇ ಹೇಳಿಕೊಂಡಿದ್ದಾರೆ.




ಕನ್ನಡದ ಕಾಂತಾರವನ್ನ ಡಾಲಿ ಧನಂಜಯ್ ಈಗ ನೋಡಿದ್ಯಾಕೆ?
ಡಾನ್ ಜಯರಾಜ್ ಧನಂಜಯ್ ಇಷ್ಟು ದಿನ ಕಾಂತಾರ ಸಿನಿಮಾ ನೋಡಿಯೇ ಇರಲಿಲ್ಲ. ತಮ್ಮ ಹೆಡ್ ಬುಷ್ ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಸಿನಿಮಾ ಪ್ರೇಮಿ ಮತ್ತು ಸಾಹಿತ್ಯ ಪ್ರೇಮಿಯೂ ಆಗಿರೋ ಧನಂಜಯ್ ಒಳ್ಳೆ ಸಿನಿಮಾ ಬಂದ್ರೆ ಕಂಡಿತವಾಗಿಯೂ ನೋಡ್ತಾರೆ.

ಇದನ್ನೂ ಓದಿ: Priya Prakash Varrier: ದೀಪಾವಳಿ ಜೋರು! ಕಣ್ಸನ್ನೆ ಹುಡುಗಿಯ ಮೋಹಕ ಲುಕ್


ಆದರೆ ಕಾಂತಾರ ಸಿನಿಮಾ ಬಂದ್ರೂ ಅದನ್ನ ನೋಡಲು ಟೈಮ್ ಸಿಕ್ಕಿರಲೇ ಇಲ್ಲ. ಈಗ ಅದು ಸಾಧ್ಯವಾಗಿದೆ. ಗೆಳತಿ ಸಪ್ತಮಿ ಗೌಡ ಮುಗ್ಧತೆಯನ್ನ ಡಾನ್ ಡಾಲಿ ಧನಂಜಯ್ ಬಹುವಾಗಿಯೇ ಕೊಂಡಾಡಿದ್ದಾರೆ. ರಿಷಬ್ ಶೆಟ್ಟಿ ಅಭಿನಯಕ್ಕೆ ಮಂತ್ರಮುಗ್ಧಗೊಂಡಿದ್ದಾರೆ. ತಮ್ಮ ಈ ಒಂದು ಅಭಿಪ್ರಾಯವನ್ನ ಎಲ್ಲರೊಟ್ಟಿಗೆನೂ ಹಂಚಿಕೊಂಡಿದ್ದಾರೆ.


ಕಾಂತಾರ ನಮ್ಮ ಹೆಮ್ಮೆ, ಕಾಂತಾರ ಕನ್ನಡದ ಹೆಮ್ಮೆ
ಕಾಂತಾರ ಸಿನಿಮಾ ಕನ್ನಡಿಗರ ಹೆಮ್ಮೆಯ ಸಿನಿಮಾ ಆಗಿದೆ. ಕನ್ನಡಿಗರು ಎಲ್ಲೆಡೆ ಹೋಗಿ ಕಾಂತಾರ ಚಿತ್ರವನ್ನ ರೆಫರ್ ಮಾಡಬಹುದು. ಅಷ್ಟು ಅದ್ಭುತವಾಗಿಯೇ ಕನ್ನಡದ ಕಾಂತಾರ ಮೂಡಿ ಬಂದಿದೆ.


Kannada Actor Dhananjaya liked Kantara and Said its our Pride
ಕಾಂತಾರ ನಮ್ಮ ಹೆಮ್ಮೆ ಕಾಂತಾರ ಕನ್ನಡದ ಹೆಮ್ಮೆ


ಕನ್ನಡದ ಮಟ್ಟಿಗೆ ಈ ಸಿನಿಮಾ ಅತಿ ದೊಡ್ಡ ಚಿತ್ರವೇ ಆಗಿತ್ತು. ಯಾವಾಗ ಇದರ ಕ್ರೇಜ್ ದೇಶ-ವಿದೇಶಕ್ಕೆ ತಲುಪಿತೋ, ಆಗಲೇ ನೋಡಿ, ಇದು ಕರ್ನಾಟಕದ ಹೆಮ್ಮೆಯ ಸಿನಿಮಾ ಆಯಿತು.


ಕನ್ನಡದ ಕಾಂತಾರ ಸಿನಿಮಾ ನೋಡಿದ ನಟ ಡಾಲಿ ಧನಂಜಯ್ ಕೊಂಡಾಡಿದ್ದಾರೆ. ಚಿತ್ರ ವೀಕ್ಷಿಸಿ ಖುಷಿಪಟ್ಟಿದ್ದಾರೆ. "ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕ. ನಾನು ಈತನ ಅಭಿಮಾನಿಯಾದೆ. What an experience it was!! ಗೆಳತಿ ಸಪ್ತಮಿ ಮುಗ್ಧತೆ ಇಷ್ಟವಾಯಿತು" ಅಂತಲೂ ಧನಂಜಯ್ ಬರೆದುಕೊಂಡಿದ್ದಾರೆ.


ಕಾಂತಾರ ಸಿನಿಮಾವನ್ನ ತಡವಾಗಿಯೇ ನೋಡಿರೋ ಡಾಲಿ ಧನಂಜಯ್ ತುಂಬಾ ಹೆಮ್ಮೆಪಟ್ಟುಕೊಂಡಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಇಂತಹ ಸಿನಿಮಾ ನೋಡಿಯೇ ಇಲ್ಲ ಅನ್ನೋಮಟ್ಟಿಗೆ What an experience it was ಅಂತಲೇ ಮನಸ್ಸಿನ ಮಾತುಗಳನ್ನೇ ಬರೆದುಕೊಂಡಿದ್ದಾರೆ.


ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ದಿನೇ ದಿನೇ ತನ್ನ ಯಶಸ್ವಿಯಾತ್ರೆಯನ್ನ ಮುಂದುವರೆಸಿದೆ. ಹೊಸ ಹೊಸ ದಾಖಲೆಯನ್ನ ಮಾಡುವತ್ತ ಸಾಗುತ್ತಿದೆ. ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಇಡೀ ಸಿನಿಪ್ರೇಮಿಗಳನ್ನ ಸೆಳೆಯುತ್ತಿದೆ. ಸಿನಿಮಾನೇ ನೋಡದೇ ಇರೋ ಜನರನ್ನೂ ಇದು ತನ್ನತ್ತ ಆಕರ್ಷಿಸುತ್ತಿದೆ.


ಇದನ್ನೂ ಓದಿ: Gandhada Gudi: ಗಂಧದ ಗುಡಿ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಇಂದಿನಿಂದ ಓಪನ್


ಇಂತಹ ಈ ಸಿನಿಮಾವನ್ನ ಒಮ್ಮೆಯಾದ್ರೂ ಎಕ್ಸಪಿರಿಯೆನ್ಸ್ ಮಾಡಲೇ ಬೇಕು. ಹಾಗಿದೆ ಕನ್ನಡದ ಕಾಂತಾರ ಸಿನಿಮಾ. ಇಷ್ಟೊಂದು ಅದ್ಭುತ ಅಭಿಪ್ರಾಯದ ಮತ್ತು ಅಷ್ಟೊಂದು ಅದ್ಭುತ ಚಿತ್ರವನ್ನ ಜನ ಈಗ ಗೆಲ್ಲಿಸುತ್ತಲೇ ಇದ್ದಾರೆ.

First published: