ಕನ್ನಡದ ಡಾಲಿ ಧನಂಜಯ್ ಮತ್ತು ನಟ ಸತ್ಯ ದೇವ್ (Dhananjaya New Movie) ಅಭಿನಯದ ಪ್ಯಾನ್ ಇಂಡಿಯಾ (Pan India Movie) ಚಿತ್ರದ ಟೈಟಲ್ ರಿಲೀಸ್ (Title Released) ಆಗಿದೆ. ಗಣರಾಜ್ಯೋತ್ಸವದ ದಿನವೇ ಚಿತ್ರದ ಟೈಟಲ್ನ್ನ ಸಿನಿಮಾ ತಂಡ ರಿಲೀಸ್ ಮಾಡಿದೆ. ಧನಂಜಯ್ ಕೂಡ ಈ ಚಿತ್ರದ ಮೂಲಕ ಬೇರೆ ಲೆವಲ್ನಲ್ಲಿಯೇ ಇನ್ಮುಂದೆ ಮಿಂಚಲಿದ್ದಾರೆ. ಈಗಾಗಲೇ ತೆಲುಗು ಪ್ರೇಕ್ಷಕರಿಗೆ ಧನಂಜಯ್ ಪರಿಚಯ ಇದ್ದೇ ಇದೆ. ಆದರೆ ಈಗೀನ ಪ್ಯಾನ್ ಇಂಡಿಯಾ (Dhananjaya Pan India Movie) ಚಿತ್ರದಲ್ಲಿ ಧನಂಜಯ್ ಬೇರೆ ರೀತಿ ಬರ್ತಿದ್ದಾರೆ. ಇವರ ಈ ಚಿತ್ರದ ಟೈಟಲ್ ಕೂಡ ವಿಶೇಷವಾಗಿಯೇ ಇದೆ. ಇದರ ಡಿಸೈನ್ ಕೂಡ ಸ್ಪೆಷಲ್ ಅನಿಸುತ್ತದೆ.
ಪ್ಯಾನ್ ಇಂಡಿಯಾ ಚಿತ್ರದಲ್ಲಿ ಡಾಲಿ ಧನಂಜಯ್
ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್ ಆಗಿದೆ. ತೆಲುಗು ಭಾಷೆಯಲ್ಲಿ ರೆಡಿ ಆಗೋ ಈ ಚಿತ್ರ ಏಕಕಾಲಕ್ಕೆ ಬೇರೆ ಭಾಷೆಯಲ್ಲೂ ರಿಲೀಸ್ ಆಗುತ್ತದೆ. ಇದರೊಂದಿಗೆ ಕನ್ನಡದ ನಟ ಧನಂಜಯ್ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ರೀತಿಯಲ್ಲಿಯೇ ಮಿಂಚಲಿದ್ದಾರೆ.
ಗಣರಾಜ್ಯೋತ್ಸವದ ದಿನ ಚಿತ್ರದ ಟೈಟಲ್ ರಿಲೀಸ್
ಡಾಲಿ ಧನಂಜಯ್ ಮತ್ತು ತೆಲುಗು ನಟ ಸತ್ಯ ದೇವ್ ಅಭಿನಯದ ಈ ಚಿತ್ರಕ್ಕೆ ವಿಶೇಷ ಹೆಸರನ್ನ ಇಡಲಾಗಿದೆ. ‘ZEBRA’ ಅನ್ನೋ ಸ್ಪೆಷಲ್ ಶೀರ್ಷಿಕೆಯನ್ನ ಗಣರಾಜ್ಯೋತ್ಸವದ ದಿನ ಸಿನಿಮಾ ಟೀಮ್ ಅನೌನ್ಸ್ ಮಾಡಿದೆ.
ಡಾಲಿ ಧನಂಜಯ್-ಸತ್ಯ ದೇವ್ ಚಿತ್ರಕ್ಕೆ ‘ZEBRA’ ಟೈಟಲ್
ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇವುಗಳನ್ನ ಗಮನಿಸದ್ರೆ, ಅದು ಟೈಟಲ್ ಪೋಸ್ಟರ್ನಲ್ಲೂ ಅರ್ಥವಾಗುತ್ತದೆಯೋ ಏನೋ, ಚಿತ್ರಕ್ಕೆ ‘ZEBRA’ ಅಂತ ಹೆಸರಿಟ್ಟಿದ್ದು ಇಲ್ಲಿ ಚೆಸ್ ಕಾಯಿಗಳನ್ನ ತೋರಿಸಲಾಗಿದೆ. ಇದರ ಅರ್ಥ ಏನೂ ಅನ್ನೋದು ಕೂಡ ಈಗ ಕುತೂಹಲದ ಪ್ರಶ್ನೆ ಆಗಿದೆ.
‘ZEBRA’ ಅಂದ್ರೆ ಏನೂ ಅನ್ನೋದು ಗೊತ್ತೇ ಇದೆ. ಆದರೆ ಇಲ್ಲಿಯ ಪೋಸ್ಟರ್ ಬೇರೆ ರೀತಿಯ ಫೀಲ್ ಕೊಡುತ್ತಿದೆ. ಚಿತ್ರದಲ್ಲಿ ಯಾರು ‘ZEBRA’ ಅನ್ನೋದು ಈಗ ಹುಟ್ಟಿರೋ ಪ್ರಶ್ನೆ ಆಗಿದೆ.
‘ZEBRA’ ಚಿತ್ರದ ಕೆಲಸ ಇಲ್ಲಿವರೆಗೂ ಏನೆಲ್ಲ ಆಗಿದೆ?
ಪ್ಯಾನ್ ಇಂಡಿಯಾ ‘ZEBRA’ ಚಿತ್ರದ ಶೂಟಿಂಗ್ ಶುರು ಆಗಿದೆ. ಹೆಚ್ಚು ಕಡಿಮೆ 50 ದಿನದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಈ ಚಿತ್ರ ಶುರು ಆದಾಗಿಂದಲೂ ಒಂದು ಕುತೂಹಲ ಇತ್ತು. ಆ ಕುತೂಹಲಕ್ಕೆ ಪೂರಕ ಅನ್ನೋ ಹಾಗೆ, ಚಿತ್ರದ ಟೈಟಲ್ ಗಮನ ಸೆಳೆಯುತ್ತಿದೆ.
ಮುಂಬೈ, ಕೋಲ್ಕತ್ತಾದಲ್ಲಿ ‘ZEBRA’ ಶೂಟಿಂಗ್ ಪ್ಲಾನ್
‘ZEBRA’ ಚಿತ್ರದ 50 ದಿನದ ಚಿತ್ರೀಕರಣ ಮೊನ್ನೆಯೆಷ್ಟೆ ಮುಗಿದಿದೆ. ಮುಂದಿನ ಚಿತ್ರೀಕರಣದ ಪ್ಲಾನ್ ಕೂಡ ಆಗಿದೆ. ಮುಂಬೈ, ಕೋಲ್ಕತ್ತಾ, ಹೈದ್ರಾಬಾದ್ನಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ.
‘ZEBRA’ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ
ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದು, ಇಲ್ಲೂ ಕೂಡ ಹೊಸ ರೀತಿಯ ಸಂಗೀತವನ್ನ ಎಲ್ಲರೂ ನಿರೀಕ್ಷೆ ಮಾಡಬಹುದಾಗಿದೆ.
‘ZEBRA’ ಚಿತ್ರದ ನಿರ್ದೇಶಕ ಈಶ್ವರ್ ಕಾರ್ತಿಕ್ ಈಗಾಲೇ ಚಿತ್ರದ 50 ದಿನ ಶೂಟಿಂಗ್ ಮಾಡಿದ್ದಾರೆ. ಮುಂದಿನ ಚಿತ್ರೀಕರಣದಲ್ಲಿ ಏನೆಲ್ಲ ಶೂಟ್ ಮಾಡಬೇಕು ಅನ್ನೋದನ್ನ ಕೂಡ ಪ್ಲಾನ್ ಮಾಡಿಕೊಳ್ತಿದ್ದಾರೆ.
‘ZEBRA’ ಸಿನಿಮಾ ಕಥೆ ವಿಶೇಷ ಕಂಟೆಂಟ್ ಹೊಂದಿದೆ. ಕ್ರೈಮ್ ಮತ್ತು ಆ್ಯಕ್ಷನ್ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಡೈರೆಕ್ಟರ್ ಈಶ್ವರ್ ಕಾರ್ತಿಕ್ ಚಿತ್ರದ ಪೋಸ್ಟರ್ಗಳನ್ನ ವಿಶೇಷವಾಗಿ ಡಿಸೈನ್ ಮಾಡಿದ್ದಾರೆ.
ಇದನ್ನೂ ಓದಿ: Vinay Rajkumar: ದೊಡ್ಮನೆ ಹುಡುಗನಿಗೆ ಧಾರವಾಡದ ಹುಡುಗಿ ಜೋಡಿ
‘ZEBRA’ ಸಿನಿಮಾ ಕಳೆದ ವರ್ಷ ಶುರು ಆಗಿತ್ತು. ಸೆಪ್ಟೆಂಬರ್-30 ರಂದು ಚಿತ್ರದ ಮುಹೂರ್ತ ಕೂಡ ಆಗಿತ್ತು. ಹಾಗೇನೆ ಇದೇ ವೇಳೆ ರಿಲೀಸ್ ಮಾಡಿದ್ದ ಫೋಸ್ಟರ್ ಅನ್ನೂ ಡೈರೆಕ್ಟರ್ ಈಶ್ವರ್ ಕಾರ್ತಿಕ್ ವಿಶೇಷವಾಗಿ ಡಿಸೈನ್ ಮಾಡಿಸಿದ್ದರು. ಪೋಸ್ಟರ್ನಲ್ಲಿ 500 ನೋಟ್ ಕೂಡ ಇರೋದು ಗಮನ ಸೆಳೆಯಿತು.
ಒಟ್ಟಾರೆ ಕ್ರೈಮ್ ಮತ್ತು ಆ್ಯಕ್ಷನ್ ಇರೋ ಈ ಚಿತ್ರಕ್ಕೆ ‘ZEBRA’ ಅನ್ನೋ ವಿಶೇಷ ಟೈಟಲ್ ಇಡಲಾಗಿದೆ. ಗಣರಾಜ್ಯೋತ್ಸವದ ದಿನವೇ ಈ ಒಂದು ಸ್ಪೆಷಲ್ ಟೈಟಲ್ ಇರೋ ಪೋಸ್ಟರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ